The Public Spot
ಅಪರಾಧ

Darshan Court; ಇವತ್ತು ದರ್ಶನ್‌ಗೆ ಸಿಗುತ್ತಾ ಜೈಲು ರಿಲೀಫ್‌.. ಪತ್ನಿ ವಿಜಯಲಕ್ಷ್ಮೀ ಸೈಲೆಂಟ್‌ ಆಗಿದ್ಯಾಕೆ..?


ನಟ ದರ್ಶನ್‌ಗೆ ಜೈಲಿನಲ್ಲಿ ದಿಂಬು ಹಾಸಿಗೆ ನೀಡದ ವಿಚಾರವಾಗಿ ಸಲ್ಲಿಕೆ ಆಗಿರುವ ನ್ಯಾಯಾಂಗ ನಿಂದನೆ ಅರ್ಜಿ ಬಗ್ಗೆ ಕೋರ್ಟ್‌ ಇಂದು ನಿರ್ಧಾರ ಮಾಡಲಿದೆ. ದರ್ಶನ್ ಪರವಾಗಿ ವಕೀಲ‌ ಸುನಿಲ್ ಕುಮಾರ್ ವಾದ ಮಂಡಿಸಿದ್ದಾರೆ. ಜೈಲು ಅಧಿಕಾರಿಗಳ ಪರ ವಕೀಲ ಸಚಿನ್ ವಾದ ಮಂಡಿಸಿದ್ದಾರೆ. ಎರಡೂ ಕಡೆಯ ವಾದ ಪ್ರತಿವಾದ ಆಲಿಸಿರುವ ಸೆಷನ್ಸ್‌ ಕೋರ್ಟ್‌ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇವತ್ತು 64 ನೇ ಸಿಸಿಹೆಚ್ ಕೋರ್ಟ್ ಆದೇಶದತ್ತ ಎಲ್ಲರ ಚಿತ್ತ ಮೂಡಿದೆ. ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ಕನಿಷ್ಟ ಸೌಲಭ್ಯ ಕೊಡ್ತಿರೋದಾಗಿ ಜೈಲು ಅಧಿಕಾರಿಗಳ ಪರ ವಕೀಲರು ಹೇಳಿದ್ದಾರೆ. ಕಾರ್ಪೆಟ್, ಮಗ್ಗು, ಕಂಬಳಿ ಕೊಟ್ಟಿದ್ದೇವೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಮತ್ತೊಂದ್ಕಡೆ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆ ಅವಧಿಯಂತೆ ವಾಕಿಂಗ್‌ಗೂ ಅವಕಾಶ ಕೊಟ್ಟಿರೋ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅದಾಗ್ಯೂ ಕೋರ್ಟ್‌ ನಿರ್ಧಾರ ಏನಿರುತ್ತೆ..? ಅಂತಾ ಸಾಕಷ್ಟು ಜನರು ಕಾಯುತ್ತಿದ್ದಾರೆ.

ದರ್ಶನ್‌ನನ್ನು ಜೈಲಿನ ಕ್ವಾರಂಟೈನ್ ಸೆಲ್‌ನಲ್ಲಿಟ್ಟು ಹಿಂಸೆ ಕೊಡ್ತಿದ್ದಾರೆ. ಮೇಲ್ ಸೆಲ್‌ಗೆ ಶಿಫ್ಟ್‌ ಮಾಡದೆ ದರ್ಶನ್‌‌ನನ್ನ ಅಲ್ಲೇ ಇರಿಸಿರೋದ್ಯಾಕೆ..? ಅಂತ ಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರು ಪ್ರಶ್ನೆ ಮಾಡಿದ್ದಾರೆ. ಮಗ್ಗು, ತಟ್ಟೆ, ಕಾರ್ಪೆಟ್, ಕಂಬಳಿ ಕೊಟ್ಟಿದ್ದಾರೆ‌. ಅದು ಕೋರ್ಟ್ ಆದೇಶಕ್ಕೂ ಮೊದಲೇ ಕೊಡ್ತಿದ್ರು. ಇದೀಗ ಕೋರ್ಟ್ ಆದೇಶ ಪಾಲನೆ ಮಾಡ್ತಿಲ್ಲ. ಜೈಲಾಧಿಕಾರಿಗಳು ಪ್ರತಿಕ್ರಿಯೆ ಕೊಡ್ತಿಲ್ಲ ಎಂದು ವಾದ. ಪಕ್ಕದಲ್ಲಿ ಬೇರೆ ಕೈದಿಗಳಿಗೆ ಚೆಸ್ ಆಡಲು ಅವಕಾಶ ಕೊಡ್ತಿದ್ದಾರೆ ಎಂದು ಕೋರ್ಟ್‌ ಗಮನ ಸೆಳೆಯಲಾಗಿದೆ. ಇವತ್ತು ದರ್ಶನ್‌ನನ್ನು ಪುರುಷರ ಜೈಲಿಗೆ ಶಿಫ್ಟ್‌ ಮಾಡುವ ಬಗ್ಗೆ ಹಾಗೂ ಸೌಲಭ್ಯದ ಬಗ್ಗೆ ಕೋರ್ಟ್ ನಿರ್ಧಾರ ಪ್ರಕಟ ಮಾಡಲಿದೆ.

ಇತ್ತ ದರ್ಶನ್‌ ಜೈಲಿಗೆ ಹೋದ ಬಳಿಕ ಪತ್ನಿ ವಿಜಯಲಕ್ಷ್ಮಿ ಮೌನಕ್ಕೆ ಶರಣಾಗಿದ್ದಾರೆ. ಪೊಲೀಸರು ಹೇಳಿಕೆ ಪಡೆದುಕೊಳ್ಳಲು ಕರೆ ಮಾಡಿದರೂ ಫೋನ್‌ ರಿಸೀವ್ ಮಾಡ್ತಿಲ್ಲ ಎನ್ನಲಾಗಿದೆ. ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ ಪ್ರಕರಣದಲ್ಲೂ ಹೇಳಿಕೆ ದಾಖಲಿಸಲು ರೆಸ್ಪಾನ್ಸ್ ಸಿಗ್ತಿಲ್ಲ. ಮೂರು ಬಾರಿ ನೋಟಿಸ್ ನೀಡಿದರೂ ಉತ್ತರ ಕೊಡ್ತಿಲ್ಲ. ಅಶ್ಲೀಲ ಸಂದೇಶದ ಕಳುಹಿಸಿದವರ ಬಗ್ಗೆ ಮಾಹಿತಿ ಪಡೆಯಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸರು 3 ನೋಟಿಸ್ ನೀಡಿದ್ರೂ ಹೇಳಿಕೆ ನೀಡಿಲ್ಲ ಎನ್ನಲಾಗ್ತಿದೆ. ನೀವು ಇರುವ ಕಡೆಯೆ ಬಂದು ಹೇಳಿಕೆ‌ ದಾಖಲಿಸುತ್ತೇವೆ ಎಂದರೂ ವಿಜಯಲಕ್ಷ್ಮೀ ನೋ ರೆಸ್ಪಾನ್ಸ್. ಹೀಗಾಗಿ ಪೊಲೀಸರು C ರಿಪೋರ್ಟ್ ಹಾಕಲು ಚಿಂತನೆ ಮಾಡಿದ್ದಾರಂತೆ..

ಇನ್ನು ದರ್ಶನ್‌ ಮನೆಯಲ್ಲಿ ಕಳ್ಳತನ ಆಗಿತ್ತು ಅಂತಾ ಕೇಸ್‌ ದಾಖಲು ಮಾಡಲಾಗಿತ್ತು. ಆದರೆ ಈ ವರೆಗೂ ಪೊಲೀಸರು ಮನೆಗೆಲಸದವರು ಸೇರಿದಂತೆ ಸಾಕಷ್ಟು ಜನರನ್ನು ವಿಚಾರಣೆ ಮಾಡಲಾಗಿದೆ. ಆದರೆ ಯಾರು ಹಣವನ್ನು ಕಳವು ಮಾಡಿದ್ದಾರೆ ಅನ್ನೋ ಸುಳಿವು ಸಿಕ್ಕಿಲ್ಲ. ಕಳ್ಳತನದ ಪ್ರಕರಣದಲ್ಲೂ ವಿಜಯಲಕ್ಷ್ಮಿ ಮೌನಕ್ಕೆ ಶರಣಾಗಿದ್ದು, ಪೊಲೀಸರ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ. ಕಳ್ಳತನ ಆಗಿದೆ ತನಿಖೆ ನಡೆಸಿ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರಂತೆ ವಿಜಯಲಕ್ಷ್ಮಿ ದರ್ಶನ್. ನನಗೆ ಕೆಲಸ ಇದೆ ಮೈಸೂರಿನಲ್ಲಿ ಇರುತ್ತೇನೆ. ನಿಮ್ ಕೆಲಸ ನೀವು ಮಾಡಿ ಎಂದು ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ನಡೆ ಪೊಲೀಸರಿಗೆ ತಲೆನೋವು ತರಿಸಿದೆ. ಮನೆ ಕೆಲಸದವರು ಹಾಗೂ ಮ್ಯಾನೇಜರ್ ನಾಗರಾಜು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಪ್ರಗತಿ ಕಾಣದೆ ಪೊಲೀಸರು ಕೂಡ ಸುಮ್ಮನಾಗಿದ್ದಾರೆ.

ಗಂಡನಿಗೆ ಜಾಮೀನು ಕೊಡಿಸಿ ಜೈಲಿನಿಂದ ಹೊರಕ್ಕೆ ಕರೆದು ತಂದರೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದಾದ ಬಳಿಕ ಸಹಜವಾಗಿಯೇ ವಿಜಯಲಕ್ಷ್ಮೀ ದರ್ಶನ್‌ಗೆ ಬೇಸರ ಇರುವುದು ಸಹಜವೇ ಆಗಿದೆ. ಆದರೂ ಪೊಲೀಸರು ತಮ್ಮ ಕೆಲಸ ಮಾಡಲು ಸಹಕಾರ ನೀಡಬೇಕಾದ ಕರ್ತವ್ಯ ಕೂಡ ವಿಜಯಲಕ್ಷ್ಮೀ ಅವರ ಮೇಲೆ ಇರುತ್ತದೆ. ಆದಷ್ಟು ಬೇಗ ಬಂದು ಪೊಲೀಸರಿಗೆ ಎರಡೂ ಪ್ರಕರಣಗಳಲ್ಲೂ ಉತ್ತರ ನೀಡಿದರೆ ಮುಂದಿನ ಕಾನೂನು ಕ್ರಮಕ್ಕೆ ಸಹಕಾರಿ ಆಗಬಹುದು. ಇಲ್ಲದಿದ್ದರೆ ಕೇಸ್‌ ಕೊಟ್ಟು ವಿಚಾರಣೆಗೆ ಸಹಕಾರ ಕೊಡ್ತಿಲ್ಲ ಎನ್ನುವ ಕಾರಣಕ್ಕೆ ಪೊಲೀಸ್ರು ಮತ್ತೊಂದು ಕೇಸ್‌ ದಾಖಲಿಸಿದ್ರೂ ಅಚ್ಚರಿಯೇನಿಲ್ಲ.

Related posts

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

Publicspot

ಓರಗಿತ್ತಿರ ವಾರ್​.. ಇದು ಸೀರಿಯಲ್​ ಕಥೆ.. ನಟಿ ಮಣಿಯ ವ್ಯಥೆ..

Publicspot

7 ಕೋಟಿ ಲೂಟಿ ಮಾಡಿದವರು ಸಿಕ್ಕಿ ಬೀಳೋದು ಪಕ್ಕಾನಾ..?

Publicspot

Teacher Cruality; ಮೇಡಂ ಸೂಸು ಅಂದ್ರೂ ಬಿಡದೆ ಬಾಸುಂಡೆ ಬರುವಂತೆ ಬಡಿದ್ರಂತೆ..!

Publicspot

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

Publicspot

Darshan Request to Poisoning: ವಿಷ ಕೊಡಲು ಆದೇಶ ಮಾಡಿ.. ನಟ ದರ್ಶನ್ ಮನವಿ

Publicspot