The Public Spot
ಅಪರಾಧ

7 ಕೋಟಿ ಲೂಟಿ ಮಾಡಿದವರು ಸಿಕ್ಕಿ ಬೀಳೋದು ಪಕ್ಕಾನಾ..?

ಬೆಂಗಳೂರಲ್ಲಿ 7.11 ಕೋಟಿ ರೂಪಾಯಿ ಹಣ ದರೋಡೆ ಮಾಡಿದ ಪ್ರಕರಣದಲ್ಲಿ ಇನ್ನೋವಾ ಕಾರು ಕೊಟ್ಟಿದ್ದ ಇಬ್ಬರು ಆರೋಪಿಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋವಾ ಕಾರು ನೀಡಿದ್ದ ಇಬ್ಬರು ಗೋವಿಂದಪುರ ನಿವಾಸಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚಿತ್ತೂರಿನ ಗುಡಿಪಾಲ ಬಳಿ ಕಾರು ಪತ್ತೆಯಾಗಿತ್ತು. ಕಾರಿನ ಎಂಜಿನ್ ಚಾರ್ಸಿ ನಂಬರ್ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಚಾರ್ಸಿ ನಂಬರ್ ಆಧಾರದ ಮೇಲೆ ಮೂಲ ಮಾಲೀಕನ ಪತ್ತೆ ಮಾಡಲಾಗಿತ್ತು. ಮೂಲ ಮಾಲೀಕನ ವಿಚಾರಣೆ ವೇಳೆ ಕಾರನ್ನು ಮಾರಾಟ ಮಾಡಿರೋದು ಪತ್ತೆ ಆಗಿದೆ. ಇದೀಗ ಕಾರನ್ನು ಖರೀದಿಸಿದ್ದ ಇಬ್ಬರು ಹುಡುಗರನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು.

ATM ವಾಹನ ರಾಬರಿ ಮಾಡುವ ಉದ್ದೇಶದಿಂದಲೇ ಕಾರನ್ನು ಮಾರಾಟ ಮಾಡಿದ್ದಾರಾ..? ಅನ್ನೋ ಬಗ್ಗೆ ವಿಚಾರಣೆ ಮಾಡಿದ್ದಾರೆ. ರಾಬರಿ ಕೃತ್ಯದ ಬಗ್ಗೆ ಮೊದಲೇ ಮಾಹಿತಿ ಇತ್ತ..? ಅನ್ನೊ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಜೊತೆಗೆ 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ರಾಬರಿ ಕೇಸ್​ನಲ್ಲಿ ಪೊಲೀಸ್​ ಪೇದೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ರಾಬರಿ ಮಾಡಿರುವ ಶಂಕೆಯ ಮೇಲೆ ಪೊಲೀಸ್ ಪೇದೆಯ ವಿಚಾರಣೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನದಿಂದ ವಿಚಾರಣೆ ಮಾಡಿರೋ ಪೊಲೀಸರು, ಗೋವಿಂದಪುರ ಪೊಲೀಸ್ ಠಾಣೆ ಪೊಲೀಸ್​​ ಕಾನ್​ಸ್ಟೇಬಲ್​ ಅಣ್ಣಪ್ಪ ನಾಯಕನನ್ನು ತೀವ್ರವಾಗಿ ವಿಚಾರಣೆ ಮಾಡಿದ್ದಾರೆ.

ಎಟಿಎಂ ವಾಹನ ದರೋಡೆ ಮಾಡಿರುವ ಆರೋಪಿಗಳ ಜೊತೆಗೆ ಸಂಪರ್ಕ ಇದ್ದ ಆರೋಪ ಹಾಗೂ ಪ್ರಕರಣದಲ್ಲಿ ಭಾಗಿ ಆಗಿರೋ ಅನುಮಾನದ ಮೇಲೆ ವಿಚಾರಣೆ ಮಾಡಲಾಗ್ತಿದೆ. ಸದ್ಯ ಪೊಲೀಸ್​ ಪೇದೆ ಅಣ್ಣಪ್ಪ ನಾಯಕನ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ. ರಾಬರಿ ನಮಾಡುವ ಬಗ್ಗೆ ಆರೋಪಿಗಳಿಗೆ ತರಬೇತಿ ನೀಡಿರುವ ಶಂಕೆಯೂ ಇದ್ದೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಕ್ಷಿಣ ವಿಭಾಗದ ಪೊಲೀಸರಿಂದ ಪೊಲೀಸ್ ಪೇದೆಯ ವಿಚಾರಣೆ ಮಾಡಿದ್ದಾರೆ. CMS ಏಜೆನ್ಸಿ ಮಾಜಿ ಉದ್ಯೋಗಿಯನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನದ ಜಿಪಿಎಸ್ ಆಫ್​ ಮಾಡಲು ಸಹಕರಿಸಿದ್ದ ಆರೋಪವೂ ಕೇಳಿ ಬಂದಿದೆ.

7 ಕೋಟಿ ಹಣ ರಾಬರಿಗೂ ಮುನ್ನ ಸುಮಾರು 18 ನಿಮಿಷಗಳ ಕಾಲ ಜಿಪಿಎಸ್ ಆಫ್​ ಮಾಡಿಸಿದ್ದ ಆರೋಪದ ಮೇಲೆ ಮಾಜಿ CMS ಮಾಜಿ ಉದ್ಯೋಗಿಯನ್ನು ವಶಕ್ಕೆ ಪಡೆಯಲಾಗಿದೆ. ಈ‌ ಹಿಂದೆ CMS ಏಜೆನ್ಸಿಯಲ್ಲಿ ಕೆಲಸ ಮಾಡಿದ್ದ ವ್ಯಕ್ತಿ, ರಾಬರಿ ವೇಳೆ ಜಿಪಿಎಸ್ ಆಫ್​ ಮಾಡಿಸಲು ಸಹಕಾರಿ ಮಾಡಿದ್ದನು. ಹೀಗಾಗಿ ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಲಾಗಿದೆ. ಕಂಟ್ರೋಲ್ ರೂಂನಲ್ಲಿ ಯಾರ ಜೊತೆ ಸಂಪರ್ಕ ಮಾಡಿ GPS ಆಫ್​ ಮಾಡಿಸಿದ್ದ ಅನ್ನೋ ಬಗ್ಗೆ ವಿಚಾರಣೆ ಮಾಡಲಾಗ್ತಿದೆ. GPS ಆಫ್​ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅಂದರೆ CMS ಕಂಪನಿ ರಾಬರಿಯಲ್ಲಿ ಭಾಗಿಧಾರ ಆಗಿರುವುದು ಖಚಿತವಾಗಿದೆ. ತಡವಾದರೂ ಆರೋಪಿಗಳು ಪೊಲೀಸರ ಬಲೆಗೆ ಬೀಳುವುದು ಖಚಿತ ಎನ್ನುತ್ತಿದೆ ಪೊಲೀಸ್​ ಮೂಲಗಳು.

Related posts

ATM Vehicle Looted : ಹಾಡಹಗಲೇ ATM ವಾಹನದಲ್ಲಿ 7 ಕೋಟಿ ರಾಬರಿ

Publicspot

ಸ್ಕ್ಯಾನಿಂಗ್​ಗೆ ಹೋದಾಗ ಬೆರಳಿಟ್ಟು ವಿಕೃತಿ.. ಲೈಂಗಿಕ ಕಿರುಕುಳ ಬಾಯ್ಬಿಡದಂತೆ ಧಮ್ಕಿ..

Publicspot

Dharmasthala SIT: ಶೀಘ್ರವೇ ಮಹೇಶ್​ ಶೆಟ್ಟಿ ತಿಮರೋಡಿ ಬಂಧನ ಆಗುತ್ತಾ..?

Publicspot

DARSHAN JAIL SHIFT: ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗೋದು ಪಕ್ಕಾನಾ..?

Publicspot

Foreign Love ಇಳಕಲ್ ಆಂಟಿಗೂ ನೈಜೀರಿಯಾ ಅಂಕಲ್​ಗೂ ಲವ್‌‌!

Publicspot

SBI Bank Looted ; ಭೀಮಾ ತೀರದಲ್ಲಿ ರಕ್ತಪಾತವಿಲ್ಲದೆ ಬ್ಯಾಂಕ್‌ ದರೋಡೆ..

Publicspot