The Public Spot
Uncategorized

Devil Release; ರಾಜ್ಯಾದ್ಯಂತ ನಟ ದರ್ಶನ್​ ಫ್ಯಾನ್ಸ್​​ ಆರ್ಭಟ..

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಬೆಳಗ್ಗೆ 6:30ಕ್ಕೆ ರಾಜ್ಯಾದ್ಯಂತ ಪ್ರದರ್ಶನ ಆರಂಭ ಆಗಿದೆ. 550ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ನಟ ದರ್ಶನ್​ ಅಬ್ಬರ ಶುರುವಾಗಿದೆ. ಡೆವಿಲ್ ಕ್ರೇಜ್ ಹೇಗಿದೆ ಅಂದ್ರೆ ಬಾಕ್ಸ್ ಆಫೀಸ್ ಲೂಟಿ ಆಗುತ್ತಾ ಅನ್ನೋ ಬಗ್ಗೆಯೂ ಚರ್ಚೆಗಳು ಶುರುವಾಗಿದೆ. ನಿನ್ನೆ ರಾತ್ರಿಯೇ ಟಿಕೆಟ್​ಗಳು ಸೋಲ್ಡ್​ ಔಟ್ ಆಗಿದ್ದವು. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಜೈಲು ಸೇರಿದ್ದು, ಸಿನಿಮಾ ಪ್ರಚಾರಕ್ಕಾಗಲಿ, ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಹೀಗಾಗಿ ದರ್ಶನ್​ ಅಭಿಮಾನಿಗಳೇ ಪ್ರಚಾರ ಮಾಡಿ ಡೆವಿಲ್ ಚಿತ್ರವನ್ನು ಗೆಲ್ಲಿಸುವ ಪಣತೊಟ್ಟಿದ್ದಾರೆ.

ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಡೆವಿಲ್ ಜಾತ್ರೆ ಮಾಡೋಕೆ ಅಭಿಮಾನಿಗಳು ಸಿದ್ಧತೆ ಮಾಡ್ಕೊಂಡಿದ್ದು, ಡೆವಿಲ್ ಕಟೌಟ್, ಬ್ಯಾನರ್ ಬಂಟಿಂಗ್ಸ್​ ಕಟ್ಟಿ ಸೆಲಬ್ರೆಟೀಸ್​ ಡೆವಿಲ್ ಸ್ವಾಗತ ಮಾಡಿದ್ದಾರೆ. ಡೆವಿಲ್ ಚಿತ್ರಕ್ಕಾಗಿ ಚಾಮುಂಡೇಶ್ವರಿ ಮೊರೆ ಹೋಗಿರೋ ದರ್ಶನ್ ಫ್ಯಾನ್ಸ್, ಜೆಪಿ ನಗರ ಸಿದ್ದೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ನಟ ದರ್ಶನ್ ಜೈಲಿನಲ್ಲಿ ಇರುವ ಕಾರಣ ವಿಜಯಲಕ್ಷ್ಮಿ ದರ್ಶನ್ ಫ್ಯಾನ್ಸ್ ಜೊತೆ ನಿಂತಿದ್ದು, ಇವತ್ತು ಬೆಳಗ್ಗೆ ಬೆಳಗ್ಗೆ 6:30 ಪ್ರದರ್ಶನಕ್ಕೆ ವಿಜಯಲಕ್ಷ್ಮಿ ದರ್ಶನ್ ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಮುಂದಾಗಿದ್ದಾರೆ.

ನಟ ದರ್ಶನ್‌ ಜೈಲಿನಲ್ಲಿ ಇರುವಾಗ ಡೆವಿಲ್​ ಸಿನಿಮಾ ರಿಲೀಸ್​ ಆಗ್ತಿದ್ದು, ಸ್ಯಾಂಡಲ್‌ವುಡ್‌ ನಟ-ನಟಿಯರು ಸಾಥ್‌ ಕೊಟ್ಟಿದ್ದಾರೆ. ಹಿರಿಯ ನಟ ಶಿವರಾಜ್‌ಕುಮಾರ್‌ ಸೇರಿದಂತೆ ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ, ನಟಿ ರಚಿತಾ ರಾಮ್‌‌‌ ಜನಮೆಚ್ಚುಗೆ ಗಳಿಸುವಂತೆ ಶುಭ ಕೋರಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಡೆವಿಲ್ ಬಾಕ್ಸ್ ಆಫೀಸ್ ಹಣೆಬರಹ ಏನು ಅನ್ನೋದು ರಿವಿಲ್ ಆಗಲಿದೆ. ಆದರೆ ಇವತ್ತು, ನಾಳೆ ನಾಡಿದ್ದೂ ಹಾಗೂ ಭಾನುವಾರವೂ ಕೂಡ ದರ್ಶನ್​ ಅಭಿಮಾನಿಗಳೇ ಚಿತ್ರ ವೀಕ್ಷಣೆಗೆ ಸಾಲುಗಟ್ಟಿ ನಿಲ್ತಾರೆ ಎಂದೇ ಹೇಳಲಾಗ್ತಿದೆ. ವೀಕೆಂಡ್ ಕಳೆದ ಬಳಿಕ ನಿಜವಾದ ಸಿನಿಪ್ರೇಕ್ಷಕರು ಬರುತ್ತಾರೆ ಎನ್ನುವುದು ಸಿನಿಮಾ ತಂಡದ ನಿರೀಕ್ಷೆ.

ದರ್ಶನ್​ ಜೈಲಿಗೆ ಹೋಗಿರುವ ಕಾರಣಕ್ಕೆ ಈ ಬಾರಿ ಅಭಿಮಾನಿಗಳೂ ಸಿನಿಮಾ ನೋಡಲ್ಲ ಅನ್ನೋ ನಿರ್ಧಾರಕ್ಕೆ ಬಂದರೆ ಚಿತ್ರತಂಡಕ್ಕೆ ಕಷ್ಟ ಆಗಲಿದೆ. ದರ್ಶನ್​ ಸಿನಿಮಾಗಳು ಸೋಲುವ ಸಾಧ್ಯತೆಯೇ ಇಲ್ಲ ಎನ್ನುವುದು ಸತ್ಯ. ಆದರೆ ದರ್ಶನ್​ ಈ ಬಾರಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ದರ್ಶನ್​ ಸಿನಿಮಾದಲ್ಲಿ ಬೇರೇನು ಹೇಳುತ್ತಾರೆ..? ದರ್ಶನ್​ ಸಿನಿಮಾದಿಂದ ನಾವು ಕಲಿಯಬೇಕಿರುವುದು ಏನು..? ಓರ್ವ ಕೊಲೆ ಆರೋಪ ಹೊತ್ತ ವ್ಯಕ್ತಿಯ ಸಿನಿಮಾ ನೋಡುವುದು ಎಷ್ಟು ಸರಿ ಅನ್ನೋ ನಿರ್ಧಾರಕ್ಕೆ ಬಂದು ಬಿಡುವ ಆತಂಕಲ ಸಿನಿಮಾ ತಂಡದಲ್ಲಿದೆ ಎನ್ನಲಾಗ್ತಿದೆ. ಆದರೆ ಸಿನಿಮಾವನ್ನು ಸಿನಿಮಾ ರೀತಿಯಲ್ಲೇ ನೋಡಿ, ಸಿನಿಮಾ ಚೆನ್ನಾಗಿದ್ದರೆ ಬೇರೊಬ್ಬರಿಗೆ ಹೇಳುವ ಮೂಲಕ ಬೆಂಬಲಿಸಿ ಅನ್ನೋದು ನಮ್ಮ ಆಶಯ.

Related posts

VISHNU TRIBUTE-KICCHA SUDEEP: ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ

Publicspot

Bihara Laddus; ಗೆದ್ದೇ ಗೆಲ್ಲುವ ವಿಶ್ವಾಸ.. ಸಮೀಕ್ಷೆಗಳೇ ಉಲ್ಟಾ ಆಗುತ್ತಾ..?

Publicspot

Duniya Vijay Slams SIMA; ದುಬೈನಲ್ಲಿ ಕನ್ನಡಿಗರಿಗೆ ಅವಮಾನ.. ಯಾಕೆ ಬೇಕು ಆ ಪ್ರಶಸ್ತಿ..?

Publicspot

ಲ್ಯಾಂಡ್‌ ಲಾರ್ಡ್‌ ಸಿನಿಮಾಗೆ ತೆರಿಗೆ ವಿನಾಯ್ತಿ ಕೊಟ್ಟ ರಾಜ್ಯ ಸರ್ಕಾರ!

Publicspot

New Law In Loksabha: ಪ್ರಧಾನಿ, ಸಿಎಂ, ಮಂತ್ರಿಗಳಿಗೂ ಬರ್ತಿದೆ ಹೊಸ ಕಾನೂನು..!

Publicspot

Bollywood; ಗೆಳೆಯನ ಮರಣದ ದಿನವೇ ಉಸಿರು ನಿಲ್ಲಿಸಿದ ಬಾಲಿವುಡ್‌ ನಟ ಧರ್ಮೇಂದ್ರ!!

Publicspot