The Public Spot
ಅಪರಾಧ

ಪ್ರೀತಿಯನ್ನು ಪೀತಿಯಿಂದಲೇ ಗೆಲ್ಲಬೇಕು.. ರಸ್ತೆಯಲ್ಲಿ ಹಿಡಿದು ಎಳೆದಾಡಿ ಅಲ್ಲ..

ಬೆಂಗಳೂರಿನ ಜನರು ಬೆಚ್ಚಿ ಬೀಳಿಸುವ ಸಂಗತಿಯೊಂದು ನಡೆದಿದೆ. ಹಾಡಹಗಲೇ ಯುವತಿಯನ್ನು ಹಿಡಿದು ಎಳೆದಾಡಿ ದೌರ್ಜನ್ಯ ಎಸಗಿದ್ದಾನೆ ಯುವಕ. ಉಲ್ಲಾಳ ಮುಖ್ಯರಸ್ತೆ ಜ್ಞಾನಜ್ಯೋತಿನಗದಲ್ಲಿ ಈ ಘಟನೆ ನಡೆದಿದೆ. ಮಹಿಳೆಯರ ಪಿಜಿ ಮುಂದೆಯೇ ಯುವತಿಯನ್ನು ಹಿಡಿದು ಎಳೆದಾಡಿ, ಮೈಮುಟ್ಟಿ ಹಲ್ಲೆ ಮಾಡಿದ್ದಾರೆ. ಡಿಸೆಂಬರ್​ 22 ರಂದು ಮಧ್ಯಾಹ್ನ 3.20 ರ ಸಮಯದಲ್ಲಿ ಕಾರಿನಲ್ಲಿ ಬಂದ ಯುವಕನಿಂದ ದೌರ್ಜನ್ಯ ನಡೆದಿದೆ. ಸಂತ್ರಸ್ಥ ಯುವತಿ ಕಿರುಚಿಕೊಂಡರೂ ಬಿಡದೇ ಕಿರುಕುಳ ನೀಡಿದ್ದಾನೆ. ಮೈ ಮುಟ್ಟಿ ಬಟ್ಟೆ ಹರಿದು ಕಿರುಚಾಡಿದ್ರೂ ಬಿಡದೇ ಕಿರುಕುಳ ಕೊಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದ ಯುವಕ ನವೀನ್​, ಲವ್ ಮಾಡದಿದ್ದಕ್ಕೆ ಹಿಂದೆ ಬಂದು ಫಾಲೋ ಮಾಡಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇನ್​ಸ್ಟಾಗ್ರಾಂನಲ್ಲಿ ಯುವತಿಯ ಪರಿಚಯವಾಗಿತ್ತು. 2024ರ ಸೆಪ್ಟಂಬರ್ 30 ರಂದು ಇನ್​ ಸ್ಟಾಗ್ರಾಂನಲ್ಲಿ ಯುವತಿಗೆ ಪರಿಚಯ ಆಗಿದ್ದ ನವೀನ್ ಜೊತೆಗೆ ಸ್ನೇಹ ಬೆಳೆದಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದು ಆಗಾಗ ನಾಗರಭಾವಿಯಲ್ಲಿ ಭೇಟಿ ಮಾಡುತ್ತಿದ್ದರು. ಕಳೆದ ತಿಂಗಳಿನಿಂದ ಪ್ರೀತಿ ಮಾಡುವಂತೆ ನವೀನ್ ಪೀಡಿಸುತ್ತಿದ್ದ. ಲವ್ ಮಾಡಲಿಲ್ಲ ಅಂತ ರಸ್ತೆಯಲ್ಲಿ ಯುವತಿ ಬಟ್ಟೆ ಹಿಡಿದು ಎಳೆದಾಡಿ ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ. ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಬಳಿಕ ಆರೋಪಿ ನವೀನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ನವೀನ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನವೀನ್ ಲೈಂಗಿಕ ಕಿರುಕುಳ ನಂತರ ಯುವತಿ ಪಿಜಿ ಖಾಲಿ ಮಾಡಿದ್ದಾಳೆ. ಡಿಸೆಂಬರ್​ 22 ರಂದು ಮಧ್ಯಾಹ್ನ ಪಿಜಿ ಖಾಲಿ ಮಾಡಿದ್ದಾಳೆ. ಇದೇ ರೀತಿ ಕಳೆದ 6 ತಿಂಗಳಲ್ಲಿ ನಾಲ್ಕೈದು ಪಿಜಿ ಬದಲಿಸಿದ್ದಾಳೆ ಎನ್ನುವುದು ಗೊತ್ತಾಗಿದೆ. ಕಳೆದ ಎರಡು ತಿಂಗಳಿಂದ ಉಲ್ಲಾಳದ ಪಿಜಿಯಲ್ಲಿದ್ದ ಯುವತಿ. ಒಂದು ವಾರದ ಹಿಂದೆ ಸಹ ಪಿಜಿ ರಸ್ತೆಯಲ್ಲಿ ಗಲಾಟೆ ಮಾಡಿದ್ದ ಯುವಕ. ಆ ಬಳಿಕ ಯುವತಿಗೆ ಪಿಜಿ‌ ಖಾಲಿ ಮಾಡುವಂತೆ ಹೇಳಿದ್ದ ಪಿಜಿ ಮಾಲೀಕರು. ನವೀನ್ ಕುಮಾರ್ ಕಿರುಕುಳಕ್ಕೆ ಟೆಲಿಕಾಲರ್ ಕೆಲಸ‌ವನ್ನೂ ಬಿಟ್ಟಿದ್ದ ಯುವತಿ.

ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಸಿಗುವ ಸಂವಹನವನ್ನು ಪ್ರೀತಿ ಪ್ರೇಮಕ್ಕೆ ಬಳಸಿಕೊಳ್ಳುವ ಯುವ ಜನಾಂಗ, ಅದನ್ನು ಪಡೆಯಲು ವ್ಯಾಘ್ರ ರೂಪ ತಾಳುತ್ತಿರುವುದು ಅಚ್ಚರಿಯ ಸಂಗತಿ. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಬೇಕೇ ವಿನಃ, ಪ್ರೀತಿಯನ್ನು ರೋಷದಿಂದ ಕೋಪದಿಂದ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಕೆಲವೊಮ್ಮೆ ಪ್ರೀತಿಯಲ್ಲೂ ಕೋಪತಾಪ ಬರುವುದು ಸಹಜ. ಆದರೆ ಕೆಟ್ಟ ಕಾಲ ಮುಗಿದ ಬಳಿಕ ಮತ್ತೆ ಪ್ರೀತಿ ಪಡೆಯಬೇಕಿದ್ದರೆ ಪ್ರೀತಿಯಿಂದ ಮಾತ್ರ ಸಾಧ್ಯ. ಈ ಸತ್ಯವನ್ನು ಅರಿತುಕೊಂಡರೆ ಪ್ರೀತಿಯಲ್ಲಿ ಇಷ್ಟೆಲ್ಲಾ ರಗಳೆ ಆಗುವುದು ತಪ್ಪುತ್ತದೆ. ಹುಡುಗ ನೀಡುವ ಹೇಳಿಕೆ ಮೇಲೆ ಈ ಪ್ರಕರಣ ನಿರ್ಧಾರ ಆಗಬೇಕಿದೆ. ಸದ್ಯಕ್ಕೆ ಯುವತಿ ಕೊಟ್ಟ ದೂರು ಮಾತ್ರ ನಮ್ಮ ಗಮನದಲ್ಲಿದೆ.

Related posts

Byrathi Basavaraj; ನಿರೀಕ್ಷಣಾ ಜಾಮೀನು ಅರ್ಜಿ ವಜಾ.. ಮುಂದಿರುವ ಮಾರ್ಗ ಏನು..?

Publicspot

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

Publicspot

ಪ್ರೀತಿಯಲ್ಲಿ ಮುಳುಗಿದ್ದವಳು ಮದುವೆ ಆಗಿ ಮಾಡಿದ ಎಡವಟ್ಟು.. ಎರಡು ಸಾವು

Publicspot

Hassan Tragedy most of the Students Deaths: ಹಾಸನ‌ ದುರಂತದಲ್ಲಿ ಸತ್ತವರೆಲ್ಲಾ ಸ್ಟೂಡೆಂಟ್ಸ್​.. ಯಾಕೆ..?

Publicspot

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot