The Public Spot
ಅಪರಾಧ

ಸಾವಿತ್ರಿ ಗಂಡನ ಸಹವಾಸ ಬಿಟ್ಟು ಹೋದಳಾ..? ಕೊಲೆ ಆದಳಾ..? ಏನೀ ಅನುಮಾನ..?

ಚಿತ್ರದುರ್ಗ ಜಿಲ್ಲೆ ಜೋಡಿ ಚಿಕ್ಕೇನಹಳ್ಳಿ ಗ್ರಾಮದ ಸಾವಿತ್ರಿ 15 ವರ್ಷದ ಹಿಂದೆ ಮಾವನ ಮಗನಾದ ರಂಗಸ್ವಾಮಿಯನ್ನ ಪ್ರೀತಿ ಮಾಡಿ, ಮನೆಯವರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ದರು. ಮಾವನ ಮಗನ ಜೊತೆಗೆ ನಡೆದ ಸುಖ ಸಂಸಾರಕ್ಕೆ ಸಾಕ್ಷಿ ಎನ್ನುವಂತೆ ಮೂವರು ಮಕ್ಕಳನ್ನೂ ಅಡೆದಿದ್ದ ಸಾವಿತ್ರಿಗೆ ಬೇರೊಂದು ಪ್ರೀತಿ ಹುಟ್ಟಿದೆ.

ಕಳೆದ 15 ವರ್ಷ ಸಂಸಾರ ಮಾಡಿದ್ದ ಸಾವಿತ್ರಿ ಗಂಡ ಮಕ್ಕಳನ್ನು ಬಿಟ್ಟು ಕೈಕೊಟ್ಟು ಹೋಗ್ತಾಳೆ ಅನ್ನೋ ಸಣ್ಣ ಸುಳಿವೂ ಕೂಡ ಇರಲಿಲ್ಲ. ಈಕೆಯನ್ನು ಮೊಬೈಲ್‌‌ ಅನ್ನೋ ಅಸ್ತ್ರ ಪ್ರೀತಿಗೆ ದಾರಿ ದೀಪ ಆಯ್ತಾ..? ಕಾಮದ ಹುಚ್ಚಿಗೆ ಬಿದ್ದವಳು ಕಾಮ ಕೇಳಿ ನಡೆಸಲು ಹೊರಟವಳೂ ಅನ್ನೋದ ಗೊತ್ತಾಗ್ತಿಲ್ಲ. ಯಾಕಂದರೆ ಆಳೆತ್ತರಕ್ಕೆ ಬೆಳೆದು ನಿಂತ ಮಗಳಿದ್ದರೂ ತಾಯಿ ಎನಿಸಿಕೊಂಡವಳು ಮನೆಬಿಟ್ಟು ಪರಾರಿಯಾಗಿದ್ದಾಳೆ.

ಮೊಬೈಲ್‌ನಲ್ಲಿದ್ದ ಚಾಟ್‌‌ ಹಾಗೂ ಫೋಟೋಗಳನ್ನೆಲ್ಲ ಡಿಲೀಟ್‌‌ ಮಾಡಿದ್ದ ಸಾವಿತ್ರಿ ರಾತ್ರೋ ರಾತ್ರಿ ಎಸ್ಕೇಪ್‌ ಆಗಿದ್ದಾಳೆ. ಎಲ್ಲೋದಳು ಅನ್ನೋದು ಗೊತ್ತಿಲ್ಲ. ದಿಕ್ಕು ಕಾಣದಂತಾದ ಮಕ್ಕಳು ಅಮ್ಮಾ ಬೇಕು ಅಂತಾ ಕಣ್ಣೀರಿಡ್ತಿದ್ರೆ, ಗಂಡ ಎನಿಸಿಕೊಂಡ ರಂಗಸ್ವಾಮಿ ಹೆಂಡತಿ ಪತ್ತೆಗಾಗಿ ದೇವರ ಮೊರೆ ಹೋಗಿದ್ದಾರೆ.

ಮೊದಲನೇ ಮಗಳು ಹೆಗಲೆತ್ತರಕ್ಕೆ ಬೆಳೆದು ನಿಂತಿದ್ದರೂ ಗಂಡ ಹೆಂಡ್ತಿ, ಮಕ್ಕಳ ಯಾರ ನಡುವೆಯೂ ಜಂಜಾಟವೂ ಇರಲಿಲ್ಲ. ಗಂಡ ಹೆಂಡತಿ ಅನ್ಯೂನ್ಯವಾಗಿ ಜೀವನ ನಡೆಸುತ್ತಿದ್ರು. ಅದೇನಾಯ್ತು, ಯಾರು ಸೋಷಿಯಲ್​ ಮೀಡಿಯಾದಲ್ಲಿ ತಲೆಗೆ ಪ್ರೀತಿ ಅನ್ನೋದು ಕುಟುಂಬಸ್ಥರಿಗೂ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಸಾವಿತ್ರಿ ಕಣ್ಮರೆಯಾಗಿದ್ದಾಳೆ. ಮನೆ ಬಿಟ್ಟು ಹೋಗುವಾಗ ತನ್ನ ಮೊಬೈಲ್‌ನಲ್ಲಿದ್ದ ಫೋಟೋ ಹಾಗೂ ವಾಟ್ಸಪ್‌‌ ಚಾಟಿಂಗ್‌‌ ಎಲ್ಲವನ್ನೂ ಡಿಲೀಟ್‌ ಮಾಡಿಟ್ಟು ಹೋಗಿದ್ದಾಳೆ ಅನ್ನೋದು ಅನುಮಾನ ಮೂಡಿಸಿದೆ.

ಸೊಸೆ ಸಾವಿತ್ರಿ ಮನೆ ಬಿಟ್ಟು ಹೋಗಿ ಮೂರ್ನಾಲ್ಕು ದಿನವೇ ಕಳೆದು ಹೋಗಿದೆ. ಸೊಸೆ ಎಲ್ಲಿಗೆ ಹೋಗಿದ್ದಾಳೆ, ಯಾರ ಜೊತೆ ಹೋಗಿದ್ದಾಳೆ ಅನ್ನೋ ಬಗ್ಗೆ ಸಣ್ಣ ಕುರುಹು ಕೂಡ ಇಲ್ಲ. ಹೀಗಾಗಿ ಅಕ್ಕಪಕ್ಕದ ಊರನ್ನೆಲ್ಲಾ ಹುಡುಕಾಡಿದ್ದಾರೆ.. ಕೆರೆ, ಕಟ್ಟೆ ಬಳಿಯೂ ಹುಡುಕಿ ಬಂದಿದ್ದಾರೆ. ಆದರೆ ಎಲ್ಲಿಯೂ ಸಾವಿತ್ರಿಯ ಸುಳಿವು ಸಿಕ್ಕಿಲ್ಲ. ಇದರಿಂದ ನೊಂದು ಹೋದ ರಂಗಸ್ವಾಮಿ ಪೊಲೀಸ್‌ ಠಾಣೆಯಲ್ಲಿ ಕಂಪ್ಲೇಂಟ್‌ ಕೊಟ್ಟು ದೇವರ ಮೊರೆ ಹೋಗಿದ್ದಾರೆ.

ನಾಪತ್ತೆ ಆಗಿರುವ ಸಾವಿತ್ರಿ ಎಲ್ಲಿ ಹೋಗಿದ್ದಾಳೆ ಅನ್ನೋ ಅನುಮಾನ ದಟ್ಟವಾಗಿದೆ. ಹತ್ತಾರು ಅನುಮಾಗಳು ಕಾಡ್ತಿವೆ. ಪರ ಪುರುಷನ ಜೊತೆ ಹೋಗಿರುವ ಬಗ್ಗೆ ಅತ್ತೆ ಮಾವ ಅನುಮಾನ ಪಡ್ತಿದ್ದಾರೆ. ಆದರೆ ಯಾರ ಜೊತೆ ಹೋಗಿದ್ದಾಳೆ ಅನ್ನೋದರ ಬಗ್ಗೆ ಸಣ್ಣ ಸುಳಿವೂ ಇಲ್ಲ. ಹೀಗಾಗಿ ಗಂಡನ ಮೇಲೂ ಪೊಲೀಸ್ರು ಕಣ್ಣಿಟ್ಟಿದ್ದಾರೆ. ಕೊಲೆ ಆಗಿದ್ಯಾ..? ಓಡಿ ಹೋಗಿದ್ದಾಳಾ..? ಆತ್ಮಹತ್ಯೆ ಆಗಿರಬಹುದ..? ಈ ಎಲ್ಲಾ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸಬೇಕಿದೆ.

Related posts

Dharmasthala Twist; ಬುರುಡೆ ಹಿಂದೆ ಹೊರಟ SIT ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​..

Publicspot

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot

Actress Ranya Rao: ನಟಿ ರನ್ಯಾ ರಾವ್​ ಗೆ ಕೋರ್ಟ್ ನಿಂದ ಭಾರೀ ದಂಡ..

Publicspot

ಜಾರ್ಖಂಡ್​ ಮೂಲದ ಯುವತಿಯ ಬೆತ್ತಲೆ ದೇಹ ಪತ್ತೆ..! ಕೊಲೆ ಶಂಕೆ..

Publicspot

Darshan Bail Cancel, What Next: ಜಾಮೀನು ರದ್ದಾದ ಬಳಿಕ ಮುಂದೇನು..? ಅರೆಸ್ಟ್​ ಆಗ್ತಾರಾ ದರ್ಶನ್​..?

ಯಶವಂತಿ

ಮದುವೆಗೆ ಹೆಣ್ಣುಗಳು ಸಿಗದೆ ಬಳಲುತ್ತಿರುವಾಗ ವಂಚಕರ ಮಾಸ್ಟರ್​ ಪ್ಲ್ಯಾನ್​..!

Publicspot