September 14, 2026
The Public Spot
ರಾಜಕೀಯ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತ ಆಗುತ್ತಾ..? ಸರ್ಕಾರದ ಉದ್ದೇಶ ಏನು..?

ರಾಜ್ತಯಲ್ಲಿ ಗ್ಯಾರಂಟಿ ಯೋಜನೆಗಳು ರದ್ದು ಆಗುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ ಮಾತಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದು, ಗ್ಯಾರಂಟಿಗಳಿಗಾಗಿ ನಾವೇನು ಕೇಂದ್ರ ಸರ್ಕಾರದ ಬಳಿ ಕೈ ಚಾಚಿದ್ದೀವಾ..? ಗ್ಯಾರಂಟಿಗಳನ್ನು ನಡೆಸಲು ಸಿದ್ದರಾಮಯ್ಯ ಆಗಲೀ ಡಿ.ಕೆ ಶಿವಕುಮಾರ್ ಆಗಲಿ ನಿರ್ಮಲಾ ಸೀತಾರಾಮನ್ ಬಳಿ ಕೇಳಿಕೊಂಡಿದ್ದಾರಾ..? ಕೇಂದ್ರ ಸರ್ಕಾರದ ಪುರಸ್ಕಾರ ಯೋಜನೆಗಳಿಗೆ ಬರಬೇಕಾದ ನಮ್ಮ ಪಾಲನ್ನು ನಾವು ಕೇಳ್ತಿರೋದು. ನಾವು ತೆರಿಗೆ ಕಟ್ತಿದ್ದೀವಿ, ಅದಕ್ಕೆ ತಕ್ಕಂತೆ ಫಲ ಕೊಡಿ ಅಂತಿದೀವಿ. ನಾವು ಗ್ಯಾರಂಟಿಗಳಿಗೆ ದುಡ್ಡು ಕೇಳ್ತಿಲ್ಲ. ಅಷ್ಟೆಲ್ಲ ಮಾತಾಡೋರು ಆಂಧ್ರಪ್ರದೇಶದ ಬಗ್ಗೆ ಯಾಕೆ ಮಾತಾಡ್ತಿಲ್ಲ..? ಎಂದು ಪ್ರಶ್ನೆ ಮಾಡಿದ್ದಾರೆ.

ಆಂಧ್ರಪ್ರದೇಶ 10-15 ಲಕ್ಷ ಕೋಟಿ ಬಾಕಿ ಕೊಡಬೇಕು, ಮಹಾರಾಷ್ಟ್ರದಲ್ಲಿ ಲಾಡ್ಲಿ ಬೆಹೆನ್ ಯೋಜನೆ ನಿಲ್ಲಿಸಲಿ. ಗುಜರಾತ್, ಮಧ್ಯಪ್ರದೇಶ, ಯುಪಿ ರಾಜ್ಯಗಳಲ್ಲಿ ಗ್ಯಾರಂಟಿ ಕೊಡ್ತಿದ್ದೀರಲ್ಲ ಅದನ್ನು ನಿಲ್ಲಿಸಲಿ. ನೀವು ಕೊಟ್ರೆ ಮಾಸ್ಟರ್ ಸ್ಟ್ರೋಕ್, ನಾವು ಕೊಟ್ರೆ ತೊಂದರೆನಾ..? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ನಾವು ಗ್ಯಾರಂಟಿಗಳಿಗಾಗಿ ಕೈ ಚಾಚಿಲ್ಲ. ನಮಗೆ ಬರೋ ಅನುದಾನ ನ್ಯಾಯಯುತವಾಗಿ ಕೊಡಲಿ. ಉತ್ತರ ಪ್ರದೇಶಕ್ಕೆ ಜಾಸ್ತಿ ಕೊಡ್ತಾರೆ, ತೆರಿಗೆ ಜಾಸ್ತಿ ಕೊಡೋ ನಮಗೆ ಕೊಡ್ತಿಲ್ಲ. ಗ್ಯಾರಂಟಿಗಳಿಗೆ ಮರು ಅರ್ಜಿ ಕರೆದ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ಕೊಟ್ಟಿದ್ದು, ಗ್ಯಾರಂಟಿಗಳನ್ನು ನಿಲ್ಲಿಸ್ತಿಲ್ಲ. ಗ್ಯಾರಂಟಿಗಳು ಅರ್ಹರಿಗೆ ಹೋಗಬೇಕು. ಹೀಗಾಗಿ ಪರಿಷ್ಕರಣೆ ಮಾಡಲಾಗ್ತಿದೆ ಎಂದಿದ್ದಾರೆ.

ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯವರಿಗೆ ಯಾಕೆ ಆತಂಕ..? ಅವರಿಗ್ಯಾಕೆ ಸಮಸ್ಯೆ..? ಮತ್ತೆ ಎಲ್ಲರೂ ಅರ್ಜಿ ಹಾಕಿದಾಗ ಪರಿಶೀಲನೆ ಮಾಡಲು ಸುಲಭ ಆಗುತ್ತದೆ. ಬಿಜೆಪಿಯವರು ಅವರ ಕಾರ್ಯಕರ್ತರಿಗೆ ಗ್ಯಾರಂಟಿಗಳು ಬೇಡ ಅಂತ ಬಿಟ್ಟು ಬಿಡಲು ಹೇಳಲಿ. ಗ್ಯಾರಂಟಿಗಳು ಬೇಡ ಅಂತ ಬಿಜೆಪಿಯವ್ರು ಅಭಿಯಾನ ಮಾಡಲಿ. ಅವರಿಗೆ ಗ್ಯಾರಂಟಿ ಬೇಡ ಅಂದ್ರೆ ತಗೊಳ್ಳೋದು ಬೇಡ, ಬೇರೆಯವ್ರು ತಗೋತಾರೆ ಎಂದು ಬಿಜೆಪಿ ಟೀಕೆಗೆ ಚಾಟಿ ಬೀಸಿದ್ದಾರೆ. ಗ್ಯಾರಂಟಿ ನಿಲ್ಲಿಸ್ತಾರೆ ಎಂಬ ವಿರೋಧ ಪಕ್ಷಗಳ ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ವಿರೋಧಪಕ್ಷ ಇರೋದೆ ಟೀಕೆ ಮಾಡೋಕೆ. ಏನೇ ಒಳ್ಳೆಯದು ಮಾಡಿದ್ರು ಅದನ್ನು ತಡೆಯೋಕೆ ಅವರು ಇರೋದು. ಒಳ್ಳೆಯದಕ್ಕೇನು ಅವರು ಸಪೋರ್ಟ್ ಮಾಡಲ್ಲ ಎಂದಿದ್ದಾರೆ.

ಅವರ ಕೈಯಲ್ಲಿ ಅಧಿಕಾರ ಇದ್ದಾ್ ಮಾಡಲು ಆಗದೇ ಇರುವ ಕೆಲಸಗಳನ್ನೆಲ್ಲ ನಾವು ಮಾಡುತ್ತಿದ್ದೇವೆ. ಗ್ಯಾರಂಟಿಯನ್ನ ಪಡೆಯುತ್ತಿರುವವರು ಯಾರು..? ಅವರ ಪೋಟೋ, ಐಡೆಂಟಿಫಿಕೇಷನ್ ಬೇಕು. ಆಗ ಏನೋ ತರಾತುರಿಯಲ್ಲಿ ಯಾರದ್ದೋ ಪೋನ್ ನಂಬರ್ ಕೊಟ್ಟಿದ್ದಾರೆ. ಯಾರದ್ದೋ ಅಕೌಂಟ್ಗೆ ದುಡ್ಡು ಹೋಗ್ತಿದೆ. ನಮಗೆ ನೇರವಾಗಿ ಅವರ ಅಕೌಂಟ್ಗೆ ದುಡ್ಡು ಹೋಗಬೇಕು. ಯಾರೋ ದುಡ್ಡು ಡ್ರಾ ಮಾಡುತ್ತಿದ್ದಾರೆ. ಅದೆಲ್ಲ ದಾಖಲೆ ನಮ್ಮ ಬಳಿ ಇದೆ. ಕರ್ನಾಟಕದವರಿಗೆ ನಾವು ಈ ಗ್ಯಾರಂಟಿ ಕೊಡ್ತೀರೋದು. ಹೊರಗಡೆ ರಾಜ್ಯದವರಿಗೆ ಗ್ಯಾರಂಟಿ ಕೊಡುತ್ತಿಲ್ಲ. ಬಸ್ನಲ್ಲಿ ಉಚಿತ ಪ್ರಯಾಣಕ್ಕೂ ಕರ್ನಾಟಕ ರಾಜ್ಯದಲ್ಲಿ ಯಾರಿಗೆ ವೋಟು ಇದೆ ಅವರಿಗೆ ಕೊಡಬೇಕು. ವೋಟು ಇಲ್ಲದವರಿಗೆ ಯಾಕೆ ಕೊಡಬೇಕು..? ಎಂದು ಪ್ರಶ್ನಿಸಿದ್ದಾರೆ.

ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಒಂದು ಐಡೆಂಟಿಟಿ ಕಾರ್ಡ್ ಕೊಡಬೇಕು ಅಂತ ಕ್ಯಾಬಿನೆಟ್ನಲ್ಲಿ ತೀರ್ಮಾನಿಸಿದ್ದೇವೆ. ಇದು ಈ ಹಿಂದೆಯೇ ತೀರ್ಮಾನ ಆಗಿತ್ತು. ಅದನ್ನು ಸ್ಟ್ರೀಮ್ ಲೈನ್ ಮಾಡ್ತೀವಿ ಅಷ್ಟೇ. ಯಾರಿಗೂ ಯಾವ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ. ಗ್ಯಾರಂಟಿ ನಿಲ್ಲಿಸೋದು ನಮ್ಮ ಕಾರ್ಯಕ್ರಮ ಅಲ್ಲ. ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ ಆಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಎಲೆಕ್ಷನ್ ಮಾಡಿದ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ತೆಗೆದುಕೊಂಡಿದ್ದಾರೆ. ಬೆಲೆ ಎಲ್ಲಾ ಗಗನಕ್ಕೆ ಹೋಗಿ ಆದಾಯ ಪಾತಾಳಕ್ಕೆ ಹೋಯ್ತು. ಈ ಸಂದರ್ಭದಲ್ಲಿ ಗ್ಯಾರಂಟಿ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಗ್ಯಾರಂಟಿ ಬಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಯಾರು ಕರೆಕ್ಟ್ ಆಗಿ ಇದ್ದಾರೆ ಅವರಿಗೆ ಯೋಜನೆ ತಲುಪಬೇಕು. ಕೆಲವು ಸ್ಕಿಮ್ಗಳಿಗೆ ಈ ದುಡ್ಡು ಹೋಗುತ್ತಿದೆ. ನಾವು ಬದುಕಲಿ ಅಂತ ಕೊಟ್ಟಿದ್ದೇವೆ. ಶೇಕಡ 30-40 ರಷ್ಟು ಬಡ್ಡಿ ಹಣ ಕೊಡುತ್ತೇನೆ ಅಂತ ಹೇಳಿ ಪ್ರತಿ ತಿಂಗಳು ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಬೆಳಗಾವಿ, ದಾವಣಗೆರೆಯಲ್ಲಿ ನೋಡಿದ್ದೀರಾ ಅಲ್ವ..? ಅದಕ್ಕೆ ಗ್ರಾಮ ಪಂಚಾಯತಿಯಿಂದ ಹಿಡಿದು ತಾಲೂಕು ಪಂಚಾಯತಿ ಈ ರೀತಿಯ ಸ್ಕೀಮ್ಗಳಿವೆ ಕಡಿವಾಣ ಹಾಕಬೇಕು. ಆ ದೃಷ್ಟಿಯಿಂದ ಅವರಿಗೆ ಮಾರ್ಗದರ್ಶನ ಕೊಟ್ಟಿದ್ದೇನೆ. ಇದು ನಮ್ಮ ಪ್ರೀತಿ ಮತ್ತು ಹೃದಯದಿಂದ ಕೊಟ್ಟಿರುವ ಪಂಚ ಗ್ಯಾರಂಟಿ. ಹೆಣ್ಣು ಕುಟುಂಬದ ಕಣ್ಣು ಅವರಿಗೆ ಶಕ್ತಿ ಜಾಸ್ತಿ ಸಿಗಬೇಕು ಎಂದಿದ್ದಾರೆ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಆಗುವುದು ಸತ್ಯ. ಆದರೆ ಅನರ್ಹರು ಎನ್ನುವ ಕಾರಣಕ್ಕೆ ಕೆಲವರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ.

Related posts

INTERNAL CASTE RESERVATION: ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡೆಲೆ ಆದ ಒಳಮೀಸಲಾತಿ..

Publicspot

ಇಂಧನ ಉಳಿಸುವ ಬಗ್ಗೆ ಬಿಜೆಪಿ ನಾಟಕ.. ಕಾಂಗ್ರೆಸ್ ಕಟು ಟೀಕೆ..

Publicspot

DCM DKS Apologize: ಡಿಕೆ ಶಿವಕುಮಾರ್​​ ಕ್ಷಮಾಪಣೆ ಕೇಳುತ್ತಲೇ ಮೂರ್ಖರು ಎಂದಿದ್ಯಾಕೆ..?

Publicspot

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಹೆಕಮಾಂಡ್‌ಗೆ ಡೈನಾಮೇಟ್‌..

Publicspot

Ballari Galate; ಕಾಂಗ್ರೆಸ್‌ ಕೊಟ್ಟ ಕಾರಣ ಏನು..? ಬಿಜೆಪಿ ಪ್ರತ್ಯುತ್ತರ ಏನು..?

Publicspot

ಅಬಕಾರಿ ಇಲಾಖೆಯಲ್ಲಿ ಗೋಲ್ಮಾಲ್‌.. ಅಹೋರಾತ್ರಿ BJP – JDS ಧರಣಿ..

Publicspot