The Public Spot
ಅಪರಾಧ

Hassan Ganesha Tragedy: ಹಾಸನದಲ್ಲಿ ಗಣೇಶ ಮೆರವಣಿಗೆ ದುರಂತ.. 9 ಸಾವು.. 20ಕ್ಕೂ ಹೆಚ್ಚು ಗಾಯ..

ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಘನಘೋರ ಘಟನೆಯೊಂದು ನಡೆದಿದೆ. ನಿನ್ನೆ ಸಂಜೆ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಮೊಸಳೆ ಹೊಸಹಳ್ಳಿ ಗ್ರಾಮಸ್ಥರು ಬೃಹತ್​ ಮೆರವಣಿಗೆ ಮೂಲಕ ಸಾಗುತ್ತಿದ್ದಾಗ ಟ್ರಕ್​ ಒಂದು ಏಕಾಏಕಿ ನುಗ್ಗಿದ್ದು, ಸಾವಿನ ಸಂಖ್ಯೆ ಒಂಭತ್ತಕ್ಕೆ ಏರಿಕೆ ಆಗಿದೆ. ಸ್ಥಳದಲ್ಲಿ ಐವರು ಸಾವನ್ನಪ್ಪಿದ್ರೆ, ಇನ್ನುಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 20ಕ್ಕೂ ಹೆ್ಚಚು ಜನರು ಗಾಯಗೊಂಡಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಭಾಕರ್ ಕೂಡ ಸಾವನ್ನಪ್ಪಿದ್ದಾರೆ.

ಟ್ರಕ್​ ಡ್ರೈವರ್​ ಯಾರು..? ಊರು ಯಾವುದು..?

ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಬಳಿ ಘೋರ ದುರಂತಕ್ಕೆ ಕಾರಣವಾಗಿದ್ದು, ಟ್ರಕ್ ಚಾಲಕ ಭುವನೇಶ್​ ಅನ್ನೋದು ಗೊತ್ತಾಗಿದೆ. ಹಾಸನದಿಂದ ಹೊಳೆನರಸೀಪುರದ ಕಡೆಗೆ ಹೋಗುತ್ತಿದ್ದ‌ ಕಂಟೇನರ್ ವಾಹನ ಮೊದಲಿಗೆ ಬೈಕ್​ಗೆ ಡಿಕ್ಕಿ ಹೊಡೆದು ಆ ನಂತರ ಜನರ ಮೇಲೆ ನುಗ್ಗಿದೆ. ಅಲ್ಲೇ ಇದ್ದ ಜನರು ಟ್ರಕ್​ ಚಾಲಕ ಭುವನೇಶ್​ಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಚಾಲಕ ಭುವನೇಶ್ ಕೂಡ ಹೊಳೆನರಸೀಪುರ ತಾಲೂಕಿನ ಕಟ್ಟೆ ಬೆಳಗುಲಿಯವನು ಎನ್ನಲಾಗಿದೆ. ಜನರ ಹಲ್ಲೆಯಿಂದ ಗಾಯಗೊಂಡ ಚಾಲಕನಿಗೆ ಹಾಸನದ ಜಿಲ್ಲಾ‌ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಸ್ಥಳಕ್ಕೆ ಬಂದ IGP, DC ಭೇಟಿ, ಪರಿಶೀಲನೆ..

ಮೊಸಳೆ ಹೊಸಹಳ್ಳಿಯಲ್ಲಿ ಕ್ಯಾಂಟರ್ ಹರಿದು 9 ಮಂದಿ ಸಾವನ್ನಪ್ಪಿದ ಬಳಿಕ ಹಿಮ್ಸ್​ಗೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಾಗಾರಕ್ಕೆ ಭೇಟಿ ನೀಡಿ, ಮೃತದೇಹಗಳನ್ನು ವೀಕ್ಷಣೆ ಮಾಡಿದ ಐಜಿಪಿ ಬೋರಲಿಂಗಯ್ಯ ಅವರು ಎಲ್ಲರ ಗುರುತು ಪತ್ತೆಯಾಗಿದ್ಯಾ ಅನ್ನೋ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮೃತರಾದವರ ಪಟ್ಟಿಯಲ್ಲಿ ಬಹುತೇಕ ವಿದ್ಯಾರ್ಥಿಗಳೇ ಇದ್ದಾರೆ ಅನ್ನೋದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಸನ ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ಭೇಟಿ ನೀಡಿ, ಘಟನೆ ಬಗ್ಗೆ ಸಂಪೂರ್ಣ ವರದಿ ಕೇಳಿದ್ದಾರೆ.

ಗಣೇಶ ದುರಂತದಲ್ಲಿ ಸತ್ತವರು ಯಾಱರು..?

ಹಾಸನದ ಮೊಸಳೆ ಹೊಸಹಳ್ಳಿ ಗ್ರಾಮದ ಗಣೇಶ ದುರಂತದಲ್ಲಿ ಸತ್ತವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು, ಬಳ್ಳಾರಿ ಮೂಲದ ಪ್ರವೀಣ್​ ಕುಮಾರ್​ ಎಂಬಾತ ಸಾವನ್ನಪ್ಪಿದ್ದಾನೆ. ಹಾಸನದಲ್ಲಿ ಬಿಇ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಹೊಳೇನರಸೀಪುರ ತಾಲೂಕು ಹಳೇಕೋಟೆ ಹೋಬಳಿಯ ಕೆ.ಬಿ ಪಾಳ್ಯದ 17 ವರ್ಷದ ರಾಜೇಶ್​ ಎಂಬಾತ ದುರ್ಘಟನೆಯಲ್ಲಿ ಅಸುನೀಗಿದ್ದಾನೆ. ಕಣಾಮಿಕನಹಳ್ಳಿಯ 17 ವರ್ಷದ ಈಶ್ವರ್​ ಕೂಡ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನುಳಿದಂತೆ ಗೋಕುಲ, ಕುಮಾರ್​, ಮಿಥುನ್​, ಪ್ರವೀಣ್​, ಸುರೇಶ್​, ಪ್ರಭಾಕರ್​ ಎಂಬುವರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Related posts

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot

Girl Sale Like a Sex Toy; ಋತುಮತಿಯಾದ ಹೆಣ್ಣು.. ಪುರುಷತ್ವ ಹೆಚ್ಚಳ ಶಕ್ತಿ.. 20 ಲಕ್ಷಕ್ಕೆ ಬಾಲಕಿ ಮಾರಾಟ..!!

Publicspot

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot

Darshan File a Case; ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನಟ ದರ್ಶನ್..

Publicspot

ಬಡ್ಡಿ ಕೊಡೋಕೆ ಆಗದೆ ಕೊಲೆ ಮಾಡೋಕೆ ಸ್ಕೆಚ್​.. ಆರೋಪಿಗಳು ಸಿಕ್ಕಿ ಬಿದ್ದಿದ್ಹೇಗೆ..?

Publicspot

ನಾಳೆ ಮದುವೆ ಆಗಬೇಕಿದ್ದು ಮನೆ ಮಗಳು, ಕುಟುಂಬದ ಜೊತೆಗೆ ಹೆಣವಾದ ಕಥೆ..

Publicspot