The Public Spot
ರಾಜಕೀಯ

ಮಹಾರಾಷ್ಟ್ರದಲ್ಲಿ ವಿಮಾನ ಅಪಘಾತವೋ.. ಉದ್ದೇಶ ಪೂರ್ವಕ ದುರಂತವೋ..?

ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿ, ನ್ಯಾಷನಲಿಸ್ಟ್‌ ಕಾಂಗ್ರೆಸ್‌‌ ಪಕ್ಷದ ನಾಯಕ ಅಜಿತ್‌ ಪವಾರ್‌ ವಿಮಾನ ದುರಂತದಲ್ಲಿ ಅಸುನೀಗಿದ್ದಾರೆ. ಅಜಿತ್‌ ದಾದಾ ಅಂತಾನೇ ಖ್ಯಾತರಾಗಿದ್ದ ಅಜಿತ್‌ ಪವಾರ್‌, ಇನ್ನು ನೆನಪು ಮಾತ್ರ. ಮಹಾರಾಷ್ಟ್ರದ ಪುಣೆ ಬಳಿಯ ಬಾರಾಮತಿ ಬಳಿ ಅಜಿತ್‌ ಪವಾರ್‌ ಪ್ರಯಾಣಿಸ್ತಿದ್ದ ಲಘು ವಿಮಾನ ನೆಲಕ್ಕಪ್ಪಳಿಸಿದೆ. ಮಹಾರಾಷ್ಟ್ರ ಡಿಸಿಎಂ ಆಗಿದ್ದ ಅಜಿತ್‌ ಪವಾರ್‌‌ ಜೊತೆ ಸಿಬ್ಬಂದಿಯೂ ಸಜೀವ ದಹನವಾಗಿದ್ದಾರೆ.. 66 ವರ್ಷದ ಅಜಿತ್‌ ಪವಾರ್‌ ಜೊತೆ ವಿಮಾನದಲ್ಲಿದ್ದ ವೈಯಕ್ತಿಕ ಭದ್ರತಾ ಅಧಿಕಾರಿ ವಿಧಿತ್ ಜಾಧವ್ ಆಪ್ತ ಸಹಾಯಕ ಪಿಂಕಿ ಮಾಲಿ, ಕಮಾಂಡ್‌ ಪೈಲಟ್‌ ಶಾಂಭವಿ, ಕ್ಯಾಪ್ಟನ್ ಸುಮಿತ್ ಕಪೂರ್ ಸೇರಿ ಐವರು ಸಾವನ್ನಪ್ಪಿದ್ದಾರೆ.

ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ರನ್‌ ವೇನಲ್ಲೇ ಈ ದುರಂತ ನಡೆದಿದ್ದು, ಮುಂಬೈನಿಂದ ಬಾರಾಮತಿ ಬರಲು ಅಜಿತ್‌ಪವಾರ್‌ ಖಾಸಗಿ ಚಾರ್ಟರ್ ವಿಮಾನ ಹತ್ತಿದ್ರು. ಬೆಳಗ್ಗೆ 8.45ರ ಸಮಯಕ್ಕೆ ಬಾರಾಮತಿ ಏರ್‌ಪೋರ್ಟ್‌ನಲ್ಲಿ ವಿಮಾನ ಕೆಳಗಿಳಿಯುವಾಗ ಪೈಲಟ್ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ವಿಮಾನ ಕ್ರ್ಯಾಶ್​ ಲ್ಯಾಂಡಿಂಗ್ ಆಗಿದ್ದು, ನೆಲಕಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ವಿಮಾನ ಸ್ಫೋಟವಾಗಿ ಐವರು ಸಜೀವ ದಹನವಾಗಿದ್ದಾರೆ.. ವಿಮಾನ ನೆಲಕ್ಕಪಳಿಸುವ ದೃಶ್ಯ ಏರ್‌ಪೋರ್ಟ್‌ ಸುತ್ತಲಿನ ಸಿಸಿಟಿವಿಯಲ್ಲೂ ಸೆರೆಯಾಗಿದೆ..

1991ರಿಂದಲೂ ಅಜಿತ್‌ ಪವಾರ್‌‌ಗೆ ಬಾರಾಮತಿ ಕ್ಷೇತ್ರ ಕರ್ಮಭೂಮಿ ಆಗಿತ್ತು. 1991ರಿಂದ ಇಲ್ಲಿವರೆಗೂ ಅಜಿತ್‌ ಪವಾರ್‌‌ ಸೋಲಿಲ್ಲದ ಸರದಾರನಾಗಿ ಬಾರಾಮತಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿತಿದ್ರು.. ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ಱಲಿಗಳಲ್ಲಿ ಭಾಗವಹಿಸಲು, ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸಿದ್ರು. ಬಾರಾಮತಿಯಲ್ಲಿ ಅಜಿತ್‌ ಪವಾರ್‌‌‌ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದ್ರೆ ವಿಮಾನ ಲ್ಯಾಂಡಿಂಗ್‌ ವೇಳೆ ದುರ್ಘಟನೆ ನಡೆದು ಅಜಿತ್‌ ಪವಾರ್‌ 8 ಬಾರಿ ಗೆದ್ದಿದ್ದ ಬಾರಾಮತಿಯಲ್ಲೇ ಅಗ್ನಿಗೆ ಆಹುತಿಯಾಗಿದ್ದಾರೆ.

ದುರಂತ ನಡೆದ ಜಾಗದಲ್ಲೇ ಅಜಿತ್‌ ಪವಾರ್‌ ಕಟ್ಟಿದ್ದ ವಾಚ್‌ ಸಿಕ್ಕಿದ್ದು, ಆ ಮೂಲಕ ಮೃತದೇಹವನ್ನ ಸುಲಭವಾಗಿ ಪತ್ತೆ ಮಾಡಲಾಗಿದೆ.. ಆದರೂ ಅಜಿತ್ ಪವಾರ್ ಸೇರಿ ಐವರ ಪಾರ್ಥಿವ ಶರೀರವನ್ನು ಬಾರಾಮತಿ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಣ್ಣನ ಮಗನ ಮೃತದೇಹ ನೋಡಲು ಚಿಕ್ಕಪ್ಪ ಶರದ್‌ಪವಾರ್‌ ಆಸ್ಪತ್ರೆಗೆ ಭೇಟಿ ನೀಡಿದ್ರು.. ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಸೋದರ ಸಂಬಂಧಿ ಸುಪ್ರಿಯಾ ಸುಳೆ ಕಣ್ಣೀರು ಹಾಕಿದ್ರು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌, ಉಪಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅಜಿತ್‌ ಪವಾರ್‌ ಪತ್ನಿಗೆ ಧೈರ್ಯ ತುಂಬಿದ್ರು. ಆದರೆ ಇದೊಂದು ವ್ಯವಸ್ಥಿತ ಅಪಘಾತ ಎನ್ನಲಾಗ್ತಿದೆ.

ಬಾರಾಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನ ಮೈದಾನಕ್ಕೆ ಶಿಫ್ಟ್‌ ಮಾಡಿ ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಆದರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೊಂದು ವ್ಯವಸ್ಥಿತಿ ದುರಂತ ಎಂದು ಕಿಡಿಕಾರಿದ್ದು, ಸುಪ್ರೀಂಕೋರ್ಟ್‌ ಕಣ್ಗಾವಲಿನಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹ ಮಾಡಿದ್ದಾರೆ. ಅಜಿತ್‌ ಪವಾರ್‌ ಬಿಜೆಪಿ ಮೈತ್ರಿಯನ್ನು ತೊರೆಯುವುದಕ್ಕೆ ಸಿದ್ಧತೆ ನಡೆಸಿದ್ದರು ಅನ್ನೋದು 2 ದಿನಗಳ ಹಿಂದಷ್ಟೇ ಓರ್ವ ನಾಯಕರು ನನಗೆ ತಿಳಿಸಿದ್ದರು. ಇದೀಗ ಈ ದುರ್ಘಟನೆ ನಡೆದಿದೆ.. ಇದೊಂದು ಕುತಂತ್ರದಿಂದ ಹೆಣೆದಿರುವ ಅಪಘಾತ ಅನ್ನೋದು ನನಗೆ ತಿಳಿದಿದೆ. ಈ ದೇಶದಲ್ಲಿ ರಾಜಕಾರಣಿಗಳಿಗೇ ರಕ್ಷಣೆ ಇಲ್ಲ, ಸಾಮಾನ್ಯ ಜನರ ಗತಿಯೇನು..? ಎಂದು ಪ್ರಶ್ನಿಸಿದ್ದಾರೆ.

Related posts

ಬಳ್ಳಾರಿಯಲ್ಲಿ ಆಯ್ತು.. ಈಗ ಬೀದರ್ ಸರದಿ.. ರಾಜ್ಯದಲ್ಲಿ ಎತ್ತ ಸಾಗುತ್ತಿದೆ ರಾಜಕಾರಣ..?​

Publicspot

ಚುನಾವಣೆಯಲ್ಲಿ ಮುಸ್ಲಿಮರಿಗೇ ಟಿಕೆಟ್‌ ಕೊಡ್ಬೇಕು ಎಂದು ಆಗ್ರಹ..

Publicspot

Cabinet Fight; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ ವಿರೋಧ ಮಾತು..!

Publicspot

DCM DKS Apologize: ಡಿಕೆ ಶಿವಕುಮಾರ್​​ ಕ್ಷಮಾಪಣೆ ಕೇಳುತ್ತಲೇ ಮೂರ್ಖರು ಎಂದಿದ್ಯಾಕೆ..?

Publicspot

ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?

Publicspot

ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಗುರುಗಳು ಎಲ್ಲ ಭಕ್ತರು ಒಂದಾಗಬೇಕು ಆಗ ನಮ್ಮನ್ನು ಯಾರು

admin