The Public Spot
ರಾಜ್ಯ

ನಮ್ಮ ಮೆಟ್ರೋ ಉದ್ಘಾಟನೆಗೆ ಬರ್ತಾರೆ ಮೋದಿ.. ಏನು ಕೊಡ್ತಾರೆ..?

ಬೆಂಗಳೂರು ಪಿಂಕ್ ಲೈನ್ ನಮ್ಮ ಮೆಟ್ರೋ ಸಂಚಾರಕ್ಕೆ ಕೇಂದ್ರದ ರೈಲ್ವೆ ಸುರಕ್ಷಥಾ ಆಯುಕ್ತರ ಅನುಮೋದನೆ ಸಿಕ್ಕಿದೆ. ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತಾ ಇಲಾಖೆಯಿಂದ ಅನುಮೋದನೆ ಸಿಕ್ಕ ಬಳಿಕ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್​ ಮೆಟ್ರೋ ಓಡಿಸಲು ಎಲ್ಲಾ ತಯಾರಿಗಳು ನಡೆದಿವೆ. ಕಾಳೇನ ಅಗ್ರಹಾರದಿಂದ ತಾವರಕೆರೆವರೆಗೆ 6 ನಿಲ್ದಾಣಗಳು ಬರಲಿದ್ದು, ಒಟ್ಟು ಅಂತರ 7.5 ಕಿ.ಮೀ ಉದ್ದದ ಮಾರ್ಗ ಇದಾಗಿದೆ.

ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿಯಿಂದ ಪಿಂಕ್ ಲೈನ್ ಉದ್ಘಾಟನೆ ಮಾಡಲಿದ್ದಾರೆ. ಇದೇ ಮಾರ್ಗದಲ್ಲಿ ನಾಗವಾರದ ತನಕ ಕಾಮಗಾರಿ ಬಹುತೇಕ ಮುಕ್ತಾಯ ಆಗಿದ್ದು, ನವೆಂಬರ್​ನಲ್ಲಿ‌ ಪಿಂಕ್‌ ಲೈನ್ ವಿಸ್ತರಿತ ಮಾರ್ಗದ ಟ್ರಯಲ್ ರನ್ ಶುರುವಾಗುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮೊದಲೇ ನವೆಂಬರ್ 15ಕ್ಕೆ‌ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಮೆಟ್ರೋ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್​ ಖಚಿತಪಡಿಸಿದ್ದಾರೆ.

ರಾಜ್ಯ ಸರ್ಕಾರ ಬರ ಪರಿಹಾರ ಕೇಳಲು ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ತೆರಳಲು ಸಮಯಾವಕಾಶಕ್ಕಾಗಿ ಸರ್ಕಸ್​ ಮಾಡುತ್ತಿದೆ. ಮೆಟ್ರೋ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇಲ್ಲೇ ಮೋದಿ ಅವರ ಸಮಯಾವಕಾಶ ಕೇಳುತ್ತೇನೆ. ಮೆಟ್ರೋ ವಿಚಾರವಾಗಿ ಬೆಂಗಳೂರಿಗೆ ಮೋದಿ ಬರ್ತಿದ್ದಾರೆ. ಇಲ್ಲೇ ಸರ್ವ ಪಕ್ಷ ನಿಯೋಗ ಭೇಟಿಯಾಗಲು ಪ್ರಧಾನಿಗೆ ಸಮಯ ಕೇಳುತ್ತೇನೆ. ಬರಪರಿಹಾರ ಕೊಡಿ ಅಂತ ಮನವಿ ಮಾಡುತ್ತೇವೆ ಎಂದಿದ್ದಾರೆ.

ರಾಜ್ಯ ಸರ್ಕಾರ ಕೇಳುವ ತನಕ ಕೇಂದ್ರ ಸರ್ಕಾರ ಸುಮ್ಮನೆ ಇರುತ್ತಾ ಅಥವಾ ರಾಜ್ಯ ಕೇಳುವ ಮೊದಲೇ ಬರ ಪರಿಹಾರ ಬಿಡುಗಡೆ ಮಾಡಿ ರಾಜಕೀಯ ಜಾಣ್ಮೆ ಪ್ರದರ್ಶನ ಮಾಡುತ್ತಾ ಅನ್ನೋ ಕುತೂಹಲವಿದೆ. ಈಗಾಗಲೇ ರಾಜ್ಯದಲ್ಲಿ S I R ಮುಕ್ತಾಯವಾಗಿದ್ದು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಬೆಂಗಳೂರು ಪಾಲಿಕೆ ಚುನಾವಣೆ ಹಾಗೂ ರಾಜ್ಯಾದ್ಯಂತ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಎದುರಾಗಲಿದ್ದು, ಬಿಜೆಪಿ – ಜೆಡಿಎಸ್​ ಮೈತ್ರಿಕೂಟ ಕಾಂಗ್ರೆಸ್​​ ಬಗ್ಗುಬಡಿಯಲು ಹವಣಿಸುತ್ತಿದೆ. ಇದೀಗ ಕೇಂದ್ರ ಸರ್ಕಾರದ ನಡೆ ಮೈತ್ರಿ ಪಕ್ಷಕ್ಕೆ ಲಾಭ ತರುವ ಸಾಧ್ಯತೆಯಿದೆ.

Related posts

ಹೈಕೋರ್ಟ್‌ ಆದೇಶಕ್ಕೆ ಮಣಿದ ಸರ್ಕಾರ.. ನಾಳೆಯೇ SSLC ರಿಸಲ್ಟ್‌

Publicspot

PUC ಫಲಿತಾಂಶ ನಾಳೆ ಪ್ರಕಟ.. ಶಿಕ್ಷಣ ಸಚಿವರ ಪ್ರಚಾರಕ್ಕೆ ತಡವಾಯ್ತು..

Publicspot

ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆ

admin

ಬಡ್ಡಿ ಕೊಡೋಕೆ ಆಗದೆ ಕೊಲೆ ಮಾಡೋಕೆ ಸ್ಕೆಚ್​.. ಆರೋಪಿಗಳು ಸಿಕ್ಕಿ ಬಿದ್ದಿದ್ಹೇಗೆ..?

Publicspot

ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವ

admin

SC ಕ್ಯಾಸ್ಟ್ ಸೆನ್ಸ್; ದಲಿತರನ್ನು ಕ್ರಿಶ್ಚಿಯನ್ ಮಾಡಲು ಹೊರಟಿದೆ ರಾಜ್ಯ ಸರ್ಕಾರ.. ಬಿಜೆಪಿ ನಿಯೋಗ ಕಿಡಿ..

ಯಶವಂತಿ