The Public Spot
ರಾಜಕೀಯ

CM ಕುರ್ಚಿ ಬಿಟ್ಟು ಇಳಿಯುವಾಗಲೂ ಜಾತಿ ಪ್ರೇಮ ಮೆರೆದ್ರಾ ಸಿದ್ದರಾಮಯ್ಯ..!?

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಸಿದ್ದರಾಮಯ್ಯ ಪದತ್ಯಾಗಕ್ಕೆ ಸೂಚನೆ ಕೊಟ್ಟಿದ್ದರು. ಅದರಂತೆ ರಾಜೀನಾಮೆಯನ್ನೂ ಸಲ್ಲಿಕೆ ಮಾಡಿದ್ದರು. ಆದರೆ ಕುರ್ಚಿಯಿಂದ ಇಳಿಯುವ ಮುನ್ನ ಕುರುಬ ಸಮುದಾಯಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡುವ ಮೂಲಕ ಸಿದ್ದರಾಮಯ್ಯ ಜಾತಿ ಪ್ರೇಮ ಮೆರೆದಿದ್ದಾರೆ. ಒಂದೇ ಸಮುದಾಯಕ್ಕೆ ಸಿಮೀತ ಆಯ್ತಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ..? ಎನ್ನುವ ಪ್ರಶ್ನೆ ಎದುರಾಗಿದೆ. 155 ವಿವಿಧ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುದಾನ ಮಂಜೂರು ಮಾಡಲಾಗಿದೆ.

ನೂತನ ಸಿಎಂ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರದ ಒಂದು ದಿನ ಮೊದಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಬಂದಿದ್ದು, 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ರುಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಬಜೆಟ್‌ನಲ್ಲಿ ಸಮುದಾಯ ಭವನ, ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಶೇಕಡ 52ರಷ್ಟು ಅನುದಾನವನ್ನು ಕೆಲವೇ ತಮ್ಮ ಸಮುದಾಯದ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ಸಮುದಾಯಗಳ ಸಮುದಾಯ ಭವನಕ್ಕೆ 136 ಕೋಟಿ ಮೀಸಲಿಡಲಾಗಿತ್ತು.

ರಾಜ್ಯ ಸರ್ಕಾರ ಮೀಸಲಿಟ್ಟಿದ್ದ 136 ಕೋಟಿ ಹಣದಲ್ಲಿ ಶೇಕಡ 52ರಷ್ಟು ಅನುದಾನವನ್ನು ಕೇವಲ 3 ರಿಂದ 4 ಸಮುದಾಯಗಳಿಗೆ ಮಾತ್ರ ಮಂಜೂರು ಮಾಡಲಾಗಿದೆ. ಟಿ. ನರಸೀಪುರ ಒಂದೇ ತಾಲೂಕಿಗೆ 13 ಸಮುದಾಯ ಭವನಗಳಿಗೆ ಹಣ ಮಂಜೂರು ಮಾಡಲಾಗಿದೆ. ಕುರುಬ ಸಮುದಾಯದ 89 ಸಂಘ ಸಂಸ್ಥೆಗಳಿಗೆ ಅನುದಾನ ಕೊಡಲಾಗಿದೆ. ಇದರಲ್ಲಿ ಗದಗದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್‌ಗೂ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಮಂಜೂರು ಮಾಡಿದ ಅನುದಾನದ ಪೈಕಿ‌ 89 ಸಂಸ್ಥೆಗಳು ಒಂದೇ ಸಮುದಾಯಕ್ಕೆ ಸೇರಿವೆ. ಕುರುಬ ಸಮುದಾಯಕ್ಕೆ ಸಿಂಹಪಾಲ ಸಿಕ್ಕಿದ್ದು, ಮಡಿವಾಳ‌ ಸಮುದಾಯ 8 ಸಂಘಗಳು, ಯಾದವ ಸಮುದಾಯ 2 ಸಂಘಗಳು, ಹೆಳವ ಸಮುದಾಯದ 1 ಸಂಘ, ಸವಿತಾ ಸಮಾಜದ 1 ಸಂಘಕ್ಕೆ ಅನುದಾನ ಕೊಡಲಾಗಿದೆ. ಹಿಂದುಳಿದ ವರ್ಗಗಳಲ್ಲಿ ಬೇರೆ ಸಮುದಾಯಗಳು ಇಲ್ವಾ ಎಂಬ ಪ್ರಶ್ನೆ..? ಎದುರಾಗಿದ್ದು, ಹಿಂದುಳಿದ ವರ್ಗಗಳ ಸಮುದಾಯಗಳ ಪಟ್ಟಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜಾತಿಗಳು ಇವೆ. ಪ್ರವರ್ಗ 1ರಲ್ಲೇ 147 ಜಾತಿಗಳಿವೆ. ಎಲ್ಲರನ್ನೂ ಕಡೆಗಣಿಸಿ ತರಾತುರಿಯಲ್ಲಿ ಅನುದಾನ ಮಂಜೂರು ಮಾಡಿದ್ದೇಕೆ..? ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರ ಕೊಡಬೇಕಿದೆ.

ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯಕ್ಕೇ ಮಾತ್ರ ಅನುದಾನವನ್ನು ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವ ವೇಳೆ ತರಾತುರಿಯಲ್ಲಿ ಬಿಡುಗಡೆ ಮಾಡಿರುವ ಬಗ್ಗೆ ಬೆಂಗಳೂರಲ್ಲಿ ಪರಿಷತ್ ಸದಸ್ಯ ಸಿಟಿ ರವಿ ಆಕ್ಷೇಪಿಸಿದ್ದಾರೆ. ಕುರುಬ ಸಮಾಜಕ್ಕೆ ಕೊಟ್ರೆ ನಂದೇನು ಸಮಸ್ಯೆ ಇಲ್ಲ. ಆದರೆ ಉಳಿದ ಸಮಾಜಕ್ಕೆ ಯಾಕೆ ಕೊಟ್ಟಿಲ್ಲ ಎಂಬುದು ನನ್ನ ಪ್ರಶ್ನೆ. ಇದೇನಾ ನಿಮ್ಮ ಜಾತ್ಯತೀತ, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ..? ಈ ನೀತಿ ಅನುಸರಿಸೋದು ಜಾತ್ಯತೀತ ಆಗ್ತಾನಾ..? ಇದಕ್ಕೆ ಸಿದ್ದರಾಮಯ್ಯನವರೇ ಉತ್ತರಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

Related posts

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot

ರಾತ್ರೋರಾತ್ರಿ ಸ್ಟ್ರಾಂಗ್‌ ರೂಮ್‌ ಓಪನ್‌ ಮಾಡಿದ್ದು ತಪ್ಪಲ್ಲವೇ..?

Publicspot

ನಾನೊಬ್ಬನೇ ಸಿಎಂ ಆಗ್ಬೇಕು ಅಂತ ದೇವರು ಬರೆದಿದ್ದಾನಾ..? ತಪ್ಪಲ್ವಾ..? ಸಿಎಂ ಪ್ರಶ್ನೆ..

Publicspot

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾಷಣ ಹಗ್ಗಾಜಗ್ಗಾಟ..!

Publicspot

ಅಬಕಾರಿ ಇಲಾಖೆಯಲ್ಲಿ ಗೋಲ್ಮಾಲ್‌.. ಅಹೋರಾತ್ರಿ BJP – JDS ಧರಣಿ..

Publicspot

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ..? ಬೆಳಗ್ಗೆ 11.30ಕ್ಕೆ ಏನಾಗುತ್ತದೆ..?

Publicspot