14 ಮಹಡಿಯಿಂದ ಬಿದ್ದು ಬಾಲಕ ಆತ್ಮಹತ್ಯೆ.. ತಪ್ಪು ಪೋಷಕರದ್ದೋ..? ಶಾಲೆಯದ್ದೋ..?

ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. 10ನೇ ತರಗತಿ ಓದುತ್ತಿದ್ದ ಬಾಲಕನೊಬ್ಬ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. SSLC ಓದುತ್ತಿದ್ದ ವಿದ್ಯಾರ್ಥಿ ಮೋಯಿನ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗವಾರ ಬಳಿಯ RR ಸಿಗ್ನೇಚರ್ ಅಪಾರ್ಟ್‌ಮೆಂಟ್‌ನ ಮೇಲಿಂದ ಕೆಳಕ್ಕೆ ಬಿದ್ದಿದ್ದಾನೆ. ಖಾಸಗಿ ಶಾಲೆಯಲ್ಲಿ SSLC ಓದುತ್ತಿದ್ದ ವಿದ್ಯಾರ್ಥಿ ಮೋಯಿನ್, ಪರೀಕ್ಷೆ ವೇಳೆ ಕಾಪಿ ಹೊಡೆದಿದ್ದ ಅನ್ನೋ ಕಾರಣಕ್ಕೆ ಶಾಲೆಯಿಂದ ಹೊರಕ್ಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿ ಮೋಯಿನ್​ ನೇರವಾಗಿ ಅಪಾರ್ಟ್​ಮೆಂಟ್​ ಮೇಲಕ್ಕೆ ಹೋಗಿ ಅಲ್ಲಿಂದ ಜಿಗಿದಿದ್ದಾನೆ. […]

ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲು ತಡ ಆಗ್ತಿದೆ..!! ಕಾರಣ ಏನು..?

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ನಾಗರಿಕರು ತಮ್ಮ ಪ್ರಾಣ ಕಳೆದುಕೊಳ್ತಿದ್ದಾರೆ. ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಯುದ್ಧ ಭೀಕರತೆಯನ್ನು ಎದುರಿಸಬೇಕಾಗಿದೆ. ಭಾರತ ಸರ್ಕಾರ ಎಲ್ಲರನ್ನೂ ವಾಪಸ್ ಕರೆತರಲಾಗುವುದು ಯಾವುದೇ ಭಯ ಬೇಡ ಎಂದು ವಿಶ್ವಾಸದ ಆಶ್ವಾಸನೆ ನೀಡುತ್ತಿದೆ. ಆದರೆ ದಿನವೊಂದಕ್ಕೆ ಕರೆತರಲು ಸಾಧ್ಯವಾಗುತ್ತಿರೋದು ಕೇವಲ ಒಂದು ಸಾವಿರ ಭಾರತೀಯರನ್ನು ಮಾತ್ರ. ಅದೂ ಕೂಡ ಯುದ್ಧ ನಡೆಯದೇ ಇರುವ ಪ್ರಾಂತ್ಯಗಳಿಂದ ಮಾತ್ರ. ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಸಿಲುಕಿದವರನ್ನು ಸರ್ಕಾರ ಅಥವಾ ಸರ್ಕಾರದ ಭಾಗವಾಗಿರುವ ರಾಯಭಾರಿ […]

ಪೋಷಕರು ಮಾಡಿದ ಚಿಕ್ಕ ತಪ್ಪು ಮಕ್ಕಳ ಪ್ರಾಣವನ್ನೇ ಕಸಿದುಕೊಳ್ತು..!

ಪುಟ್ಟ ಪುಟ್ಟ ಮಕ್ಕಳು ಏನು ಕೇಳಿದರೂ ಇಲ್ಲ ಎನ್ನಲು ಮನಸ್ಸಾಗುವುದಿಲ್ಲ. ಇದಕ್ಕೆ ಕಾರಣ ಆರತಿಗೆ ಒಂದು ಕೀರ್ತಿಗೆ ಒಂದು ಎನ್ನುವಂತೆ ಮಕ್ಕಳನ್ನು ಸಾಕಿಕೊಂಡಿರುತ್ತಾರೆ. ಮಕ್ಕಳು ತನ್ನ ಆಸೆಗೆ ತಕ್ಕಂತೆ ಕೇಳಬಾರದ್ದನ್ನೂ ಕೇಳುತ್ತಾರೆ. ಅವರ ಆಸೆಗೆ ಬೇಡ ಎನ್ನಲಾಗದ ಪೋಷಕರು ಪೂರೈಸುತ್ತಾರೆ. ಆದರೆ ಅದರ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಮರೆತುಬಿಡುತ್ತಾರೆ. ಇಷ್ಟು ಸಣ್ಣ ಜವಾಬ್ದಾರಿ ತನ್ನ ಕರುಳ ಬಳ್ಳಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಸಣ್ಣ ಆಲೋಚನೆಯೂ ಅವರಲ್ಲಿ ಇರುವುದಿಲ್ಲ. ಆದರೆ ಮಕ್ಕಳನ್ನು ಕಳೆದುಕೊಂಡ ಮೇಲೆ ಗೋಳಾಡುವುದು ಸಾಮಾನ್ಯವಾಗಿರುತ್ತದೆ. 5 ರೂಪಾಯಿ […]