ನಟ ದರ್ಶನ್ ಮನೆಯನ್ನು ತೆರವು ಮಾಡ್ತಾರಾ..? ಮುನಿರತ್ನ ಶಪಥ ಕೈಗೂಡುತ್ತಾ..!?

ಬೆಂಗಳೂರಿನಲ್ಲಿ ಮಳೆ ಅವಾಂತರ ಸರ್ಕಾರದ ನಿದ್ರೆ ಕೆಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ 3 ದಿನಗಳಿಂದ ಎಡೆಬಿಡದೆ ಸಿಟಿರೌಂಡ್ ಮಾಡ್ತಿದ್ದಾರೆ. ಇವತ್ತೂ ಕೂಡ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತಿದ್ದು, ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಕಷ್ಟ ಆಲಿಸಲಿದ್ದಾರೆ. ಆದರೆ ನಿನ್ನೆ ಗುರುವಾರ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ಸಿಎಂ, ರಾಜಕಾಲುವೆ ಒತ್ತುವರಿ ಆಗಿರುವುದನ್ನು ಒಪ್ಪಿಕೊಂಡಿದ್ದರು. ಆ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜಕಾಲುವೆ ಒತ್ತುವರಿ ಹಾಗೂ ಹೂಳು ತೆಗೆದಿಲ್ಲ ಎನ್ನುವ ಕಾರಣಕ್ಕೆ […]