ಮಾಡೆಲ್ ಮದುವೆಯಾದ ಕಾಂಗ್ರೆಸ್​ ಶಾಸಕ.. 2ನೇ ಮದುವೆಗೆ ವೀಡಿಯೋ ಸಾಕ್ಷಿ..

ಬಾಗಲಕೋಟೆ ಜಿಲ್ಲೆ ಹುನಗುಂದ ಕಾಂಗ್ರೆಸ್​ ಶಾಸಕ ವಿಜಯಾನಂದ ಕಾಶಪ್ಪನವರ್​ 2 ಮದುವೆ ಆಗಿದ್ದಾರೆ ಎನ್ನುವ ವಿವಾರ ಜಗಜ್ಜಾಹೀರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳ ಜೊತೆಗೆ ಮಗುವಿನ ಬರ್ತ್​ ಸರ್ಟಿಫಿಕೇಟ್​​ ಕೂಡ ಬಂದು ಬಿಟ್ಟಿದೆ. ಈ ಬಗ್ಗೆ ಕೊಪ್ಪಳದಲ್ಲಿ ಮಾಧ್ಯಮ ಮಂದಿ ಕಾಶಪ್ಪನವರ್​ ಅವರನ್ನು ಪ್ರಶ್ನಿಸಿದಾಗ, ಮಾಧ್ಯಮಗಳೇ ಅವರ ಸಂಸಾರವನ್ನು ಬೀದಿಗೆ ಎಳೆದು ವೈರಲ್​ ಮಾಡಿವೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ನೀವು ಮಾಧ್ಯಮಗಳು ಇರುವುದೇ ವೈರಲ್​ ಮಾಡುವುದಕ್ಕೆ. ಸಾಕ್ಷಿ ಕೊಡಿ ಆಮೇಲೆ ಪ್ರತಿಕ್ರಿಯೆ ಕೊಡ್ತೇನೆ ಎಂದಿದ್ದಾರೆ. ಅಲ್ಲೀತನಕ ಯಾವುದೇ ಉತ್ತರ […]