ಕರುನಾಡಿನ ಮುಕುಟ ಅಪ್ಪು ಚಿತ್ರ ‘ಜೇಮ್ಸ್’​ ಎತ್ತಂಗಡಿ ಶಿಕ್ಷೆ.. ಯಾಕೀ ಅವಮಾನ..!?

ಕನ್ನಡಿಗರ ಮೆಚ್ಚಿನ ನಟ ದಿವಂಗತ ಪುನೀತ್​ ರಾಜ್​ಕುಮಾರ್​ ಕೊನೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಜೇಮ್ಸ್​ ಚಿತ್ರವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಥಿಯೇಟರ್​ ಎದುರು ಸಾಲುಗಟ್ಟಿ ನಿಂತಿದೆ. ಆದರೆ ಜೇಮ್ಸ್​ ಚಿತ್ರವನ್ನು ಥಿಯೇಟರ್​ನಿಂದ ಖಾಲಿ ಮಾಡಿಸಿ ದಿ ಕಾಶ್ಮೀರಿ ಫೈಲ್ಸ್​ ಚಿತ್ರವನ್ನು ಹಾಕುವಂತೆ ಒತ್ತಡ ಶುರುವಾಗಿದೆ ಎನ್ನಲಾಗಿದೆ. ಬಿಜೆಪಿ ಶಾಸಕರು ಥಿಯೇಟರ್​ ಮಾಲೀಕರ ಮೇಲೆ ಒತ್ತಡ ತಂದಿದ್ದು, ದಿನಕ್ಕೆ ಒಂದು ಶೋ ಮಾತ್ರ ನೀಡ್ತೇವೆ. ನಾವು ದಿ ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ಹಾಕಬೇಕಿದೆ ಎಂದು ನಿರ್ಮಾಪಕರಿಗೆ ಥಿಯೇಟರ್​ ಮಾಲಿಕರು ತಿಳಿಸಿದ್ದಾರೆ. […]