ಜಾತಿಗೆಟ್ಟ ಶ್ರೀನಿವಾಸಗೌಡ, ಶಿವಲಿಂಗೇಗೌಡ ಜಾಣನಡೆ.. ಅತಂತ್ರ ಸ್ಥಿತಿಯಲ್ಲಿ ಗುಬ್ಬಿ ವಾಸು..!

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಯಾವುದೇ ಕಾರಣಕ್ಕೂ ಗೆಲುವು ಸಾಧಿಸುವುದು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಆದರೆ ಅಂತಿಮವಾಗಿ ಬಿಜೆಪಿ ಗೆದ್ದರೂ ಪರವಾಗಿಲ್ಲ, ಜೆಡಿಎಸ್​ ಗೆಲ್ಲಬಾರದು ಎನ್ನುವ ಏಕೈಕ ಉದ್ದೇಶದಿಂದ ಕಾಂಗ್ರೆಸ್​​ ಪಕ್ಷ ಮನ್ಸೂರ್​ ಅಲಿಖಾನ್​​ ಅವರನ್ನು ಹೆಚ್ಚುವರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಜೆಡಿಎಸ್​ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್​ ನಾಯಕರ ಬೆಂಬಲ ಕೋರುತ್ತಿರುವಾಗಲೇ ಕಾಂಗ್ರೆಸ್​ ಏಕಾಏಕಿ ಮನ್ಸೂರ್​ ಅಲಿಖಾನ್​ ಅವರನ್ನು ಅಖಾಡಕ್ಕೆ ಇಳಿಸಿತ್ತು. ಕಾಂಗ್ರೆಸ್​ ಹಾಗು ಜೆಡಿಎಸ್​​ ನಡುವಿನ ಕಚ್ಚಾಟ […]