The Public Spot
ರಾಜ್ಯ

ಸೂರು ಇಲ್ಲದವರಿಗೆ ಸೂರು ಸರ್ಕಾರದ ಘೋಷಣೆ.. ಆದರೆ ಇಲ್ಲಿ ಅಂಧ ದರ್ಬಾರ್..

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಬಡವರಿಗೆ ಮನೆ ನಿರ್ಮಾಣ ಯೋಜನೆಯನ್ನು ಘೋಷಿಸುತ್ತವೆ. ಅದೇ ರೀತಿ ರಾಜ್ಯ ಸರ್ಕಾರ ಮನೆಯಿಲ್ಲದ ನಿರ್ಗತಿಗಳು, ಬಡವರಿಗೆ ಮನೆ ಕೊಡುವ ಯೋಜನೆಯನ್ನೇ ಮಾಡುತ್ತಿದೆ. ಆದರೆ ಈ ಮನೆ ಕೊಡುವ ಯೋಜನೆ ಬರೀ ಘೋಷಣೆ ಆಗಿದ್ಯಾ..? ಅಥವಾ ಕೋಟಿ ಕೋಟಿ ಅನುದಾನವನ್ನು ಲೂಟಿ ಮಾಡುವ ಮಾರ್ಗ ಆಗಿದ್ಯಾ ಅನ್ನೋ ಬಗ್ಗೆ ಜನಸಾಮಾನ್ಯರಲ್ಲಿ ಪ್ರಶ್ನೆಗಳು ಮೂಡುವಂತಾಗಿದೆ. ಈ ಅನುಮಾನಕ್ಕೆ ಕಾರಣವೂ ಇದೆ. ಬಡವರಿಗೆ ಮನೆಗಳನ್ನು ಕೊಡಬೇಕಿದ್ದ ಸರ್ಕಾರ, ಅಕ್ರಮ ಕಟ್ಟಡದ ಹೆಸರಲ್ಲಿ ಕಳೆದ 30 ವರ್ಷಗಳಿಂದ ವಾಸ ಮಾಡ್ತಿದ್ದ ಮನೆಗಳನ್ನೇ ಧ್ವಂಸ ಮಾಡಿದೆ. ಹಿರಿಯರು, ಕಿರಿಯರು ಎನ್ನದೆ ಜನರು ಕೊರೆವ ಚಳಿಯಲ್ಲಿ ಮಮ್ಮಲ ಮರುಗುವಂತಾಗಿದೆ.

ಬೆಂಗಳೂರಿನ ಯಲಹಂಕದಲ್ಲಿ ಅನಧಿಕೃತ ಮನೆಗಳನ್ನು ಡೆಮಾಲಿಷನ್ ಮಾಡಲಾಗಿದೆ. GBA ಅಧಿಕಾರಿಗಳ ಈ ಕ್ರಮಕ್ಕೆ ಸೂರು ಕಳೆದುಕೊಂಡು ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಕೊರೆವ ಚಳಿಯ ಮಧ್ಯೆ ಮಕ್ಕಳೊಂದಿಗಿರೋ ಕುಟುಂಬಗಳು, ಇರಲು ಸ್ಥಳ ಇಲ್ಲದೇ, ಹೋಗಲು ಜಾಗ ಇಲ್ಲದೇ ಪರದಾಡುವಂತಾಗಿದೆ. ನೆಲಸಮ ಆಗಿರುವ ಶೆಡ್​ಗಳ ಸಮೀಪದಲ್ಲೇ ಮಲಗಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಎಂದು ನಿಷ್ಕರುಣಿಗಳಿಗೂ ಅಯ್ಯೋ ಪಾಪ ಎನ್ನುವಂತಿದೆ. ಜಿಬಿಎ ಅಧಿಕಾರಿಗಳು ಬುಲ್ಡೋಜರ್ ಸಮೆತ ಬಡವರ ಮೇಲೆ ಪ್ರಹಾರ ನಡೆಸಿದ್ರಿಂದ ನೂರಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಕೋಗಿಲು ಕ್ರಾಸ್ ಬಳಿಯ ಫಕೀರ್ ಲೇಔಟ್​ನಲ್ಲಿ ನೂರಾರು ಮನೆಗಳು ನೆಲಸಮ ಆಗಿದ್ದು, ಕೊರೆವ ಚಳಿಯಲ್ಲಿ ಬೀದಿಯಲ್ಲಿ, ಶಾಲೆ ಆವರಣದಲ್ಲಿ ಜೀವನ ಮಾಡುತ್ತಿದ್ದಾರೆ.

ಶನಿವಾರ ಬೆಳಗ್ಗೆ ಮನೆಗಳನ್ನು ಡೆಮಾಲಿಷ್​ ಮಾಡಿದ್ದು, ಮಕ್ಕಳು,‌ ಮಹಿಳೆಯರು, ವೃದ್ಧರು ಕೊರೆವ ಚಳಿಯಲ್ಲಿ ಮನೆಯಿಲ್ಲದೆ ಪರದಾಡುತ್ತಿದ್ದಾರೆ. ಮನೆ ಧ್ವಂಸ ಮಾಡಿ ಹೋದ ಅಧಿಕಾರಿಗಳು ಇದುವರೆಗೂ ಸ್ಥಳಕ್ಕೆ ಬಂದು ಜನರ ಕಷ್ಟದ ಬಗ್ಗೆ ತಿರುಗಿ ನೋಡಿಲ್ಲ. ಕಳೆದ ಎರಡು ದಿನಗಳಿಂದ ಶೌಚಾಲಯದ ವ್ಯವಸ್ಥೆ ಇಲ್ಲದೆ ನಿವಾಸಿಗಳು ಒದ್ದಾಡುತ್ತಿದಗ್ದಾರೆ. ಒಟ್ಟು 125 ಮನೆಗಳನ್ನು ನೆಲಸಮ ಮಾಡಲಾಗಿದೆ. ಅಲ್ಲಿನ ಜನರು ಹೇಳುತ್ತಿರುವ ಪ್ರಕಾರ ಮನೆ ನೆಲಸಮಕ್ಕೂ ಮುನ್ನ ನಮಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಏಕಾಏಕಿ ಬುಲ್ಡೋಜರ್ ತಂದು ನೆಲಸಮ‌ ಮಾಡಿದ್ದಾರೆ. ಕಳೆದ 30-40 ವರ್ಷಗಳಿಂದ ಇಲ್ಲಿ ಮನೆ ಕಟ್ಟಿಕೊಂಡು ಜೀವನ ಮಾಡ್ತಿದ್ದೆವು. ಈಗ ಬಂದು ಈ ಜಾಗ ನಿಮ್ದಲ್ಲ, ನಮ್ದು ಅಂದ್ರೆ ಹೇಗೆ ಸರ್..? ಎಂದು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದಾರೆ.

ಅಂಗವಿಕಲರು, ಅನಾರೋಗ್ಯ ಪೀಡಿತರು, ಮಕ್ಕಳು, ವೃದ್ದರು ಇದ್ದಾರೆ. ಇವರನ್ನೆಲ್ಲಾ ಕರೆದುಕೊಂಡು ಎಲ್ಲಿಗೆ ಹೋಗಬೇಕು..? ನಮಗೆ ನಮ್ಮ ಮನೆ ವಾಪಸ್ ಕೊಡಬೇಕು ಅಂತ ಜನರ ಪಟ್ಟು ಹಿಡಿದಿದ್ದಾರೆ. ಕಳೆದ ಎರಡು ದಿನಗಳಿಂದ ಸರಿಯಾದ ಆಹಾರ, ಶೌಚಾಲಯದ ವ್ಯವಸ್ಥೆ ಇಲ್ಲದೆ ಪರದಾಟ ಮಾಡ್ತಿದ್ದು, ಇಂದು ಸ್ಥಳಕ್ಕೆ ಸ್ಥಳೀಯ ಶಾಸಕ ಕೃಷ್ಣಬೈರೇಗೌಡ ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಮನೆ ಕಳೆದುಕೊಂಡ ಜನರ ಮಕ್ಕಳು ಶಾಲೆಗಳಿಗೂಬ ಹೋಗದೆ ಅದೇ ಸ್ಥಳದಲ್ಲಿ ರೋಧಿಸುತ್ತಿದ್ದಾರೆ. ಕನಿಷ್ಠಪಕ್ಷ ಕುಡಿಯುವ ನೀರಿಗೂ ಅಲ್ಲಿನ ಜನರು ಪರದಾಡ್ತಿದ್ದಾರೆ. ಕಾಲೋನಿ ಅನಧಿಕೃತವಾಗಿದ್ದರೂ ಇಡೀ ಕಾಲೋನಿಗೆ ಬೆಸ್ಕಾಂ ಕನೆಕ್ಷನ್ ಕೊಟ್ಟಿತ್ತು. ಬೆಸ್ಕಾಂ ಕನೆಕ್ಷನ್ ಸಿಕ್ಕ ಬಳಿಕ ಇಡೀ ಕಾಲೋನಿ ಲೀಗಲ್ ಎಂದು ಜನರು ನಂಬಿದ್ದರು. ಆಂಧ್ರಪ್ರದೇಶ, ತೆಲಂಗಾಣ ಭಾಗದಿಂದ ಬಂದು ನೆಲೆಸಿರುವ ಜನರು ಗೋಳಾಡುತ್ತಿದ್ದಾರೆ.

ಅಕ್ರಮ ಮಾಡಿದ್ದು ಸರಿಯಾದ ಕ್ರಮವಲ್ಲ ಅನ್ನೋದನ್ನು ನಾವೂ ನೀವು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಆದರೆ ಅಕ್ರಮ ಅನ್ನೋ ಕಾರಣಕ್ಕೆ ವಾರಾಂತ್ಯದಲ್ಲಿ ಬಂದು ಮನೆಗಳನ್ನು ಕೆಡವಿ ಮಕ್ಕಳ ಸಹಿತ ಇಡೀ ಸಂಸಾರವನ್ನೇ ಬೀದಿಗೆ ತಂದು ಕೂರಿಸುವುದು ನ್ಯಾಯವೇ ಎಂದರೆ ಖಂಡಿತ ಇಲ್ಲ. ಎಲ್ಲೋ ಒಂದು ಮನೆ ಕುಸಿದು ಇಡೀ ಕುಟುಂಬ ಸಂಕಷ್ಟಕ್ಕೆ ಒಳಗಾದ ವೇಳೆ ಅವರನ್ನು ಸಂತ್ರಸ್ಥರು ಎಂದು ಗುರುತಿಸುವ ಸರ್ಕಾರ, ಅವರಿಗೆ ಸೂಕ್ತ ನೆರವು ನೀಡುತ್ತದೆ. ಪ್ರತಿಭಟನೆ ಮಾಡುವ ವೇಳೆ ಮಹಿಳೆಯರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದಿದ್ದರೆ ಮಹಿಳಾ ಆಯೋಗ ಪ್ರತ್ರ ಬರೆಯುತ್ತದೆ. ಮನುಷ್ಯರನ್ನು ಅಮಾನವೀಯವಾಗಿ ನಡೆಸಿಕೊಂಡರೆ ಮಾನವಹಕ್ಕುಗಳ ಆಯೋಗ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಸೂಚನೆ ಕೊಡುತ್ತದೆ. ಆದರೆ ಸರ್ಕಾರವೇ ಇಷ್ಟೆಲ್ಲಾ ಅಕ್ರಮ ಮಾಡಿದಾಗ ಯಾರೊಬ್ಬರೂ ದನಿ ಎತ್ತುವುದಿಲ್ಲ. 125 ಕುಟುಂಬಗಳನ್ನು ಸಂತ್ರಸ್ಥರು ಎಂದು ಪರಿಗಣಿಸಿ ಜೀವನೋಪಾಯಕ್ಕಾದರೂ ವ್ಯವಸ್ಥೆ ಮಾಡಬೇಕಿದೆ.

Related posts

CM ಕೆಲಸ ವರ್ಗಾವಣೆ ಮಾಡೋದಲ್ಲ.. ಹೈಕೋರ್ಟ್​ ಗರಂ ಆಗಿದ್ಯಾಕೆ..?

Publicspot

HEAVY RAIN ALERT: ರಾಜ್ಯದಲ್ಲಿ ಮಳೆ ಆರ್ಭಟ.. 5 ಜಿಲ್ಲೆಗೆ ರೆಡ್ ಅಲರ್ಟ್‌

Publicspot

Thimmakka; ಸಾಲು ಮರದ ತಿಮ್ಮಕ್ಕ ಇನ್ನಿಲ್ಲ.. ಬದುಕಿನ ಯಾನ ಮುಗಿಸಿದ ವೃಕ್ಷಮಾತೆ..

Publicspot

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

Mysore Dassara Supreme Court direction; ದಸರಾ ಸಿದ್ದತೆ ನಡುವೆ ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ.. ಬಾನು ಬರ್ತಾರಾ..? ಇಲ್ವಾ..?

Publicspot

RSS ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಾ..? ಬಿಜೆಪಿ ಕೆಂಡಾಮಂಡಲ ಆಗ್ತಿರೋದ್ಯಾಕೆ..?

Publicspot