The Public Spot
ರಾಜಕೀಯ

ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶದ ಗುಟ್ಟೇನು..? ಮೂರು ಆಯಾಮ..

ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಉಲ್ಲೇಖ ಮಾಡಿರುವ ವಿಡಿಯೋ ವೈರಲ್​ ಆದ ಬಳಿಕ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಕ್ಸಮರ ಸಾರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಯಾವುದೇ ಮಾನಹಾನಿಕರ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್​ನಿಂದ ನಿರ್ಬಂಧಕಾಜ್ಞೆ ತಂದಿದ್ದು, ಪೊಲೀಸ್​ ಆಯುಕ್ತರಿಗೂ ದೂರು ನೀಡಲಾಗಿದೆ. ದೂರು ಪಡೆದುಕೊಂಡು ಬೆಂಗಳೂರು ಪೊಲೀಸ್​ ಕಮಿಷನರ್​ ಸೀಮಂತ್​ರ ಕುಮಾರ್ ಸಿಸಿಬಿ ತನಿಖೆ ಮಾಡುವಂತೆಯೂ​ ಸೂಚನೆ ಕೊಟ್ಟಿದ್ದಾರೆ. ಈ ನಡುವೆ ಕುಮಾರಸ್ವಾಮಿ ಮಾತ್ರ ರಾಜ್ಯ ಸರ್ಕಾರದ ತನಿಖೆಯ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ ಕಾರ್ಯಕರ್ತರಿಗಾಗಿ ಅಖಾಡಕ್ಕೆ ಕುಮಾರಸ್ವಾಮಿ..!?

ಸಿಸಿಬಿ ಟೀಂ ತನಿಖೆ ಕೈಗೊಳ್ತಿದ್ದ ಹಾಗೆ ಸಾಕಷ್ಟು ಜನರನ್ನು ಕರೆದು ವಿಚಾರಣೆ ಮಾಡುತ್ತಿದ್ದು, ಅದರಲ್ಲಿ ಇಬ್ಬರು ಜೆಡಿಎಸ್​ ಕಾರ್ಯಕರ್ತರೂ ಸೇರಿಕೊಂಡಿದ್ದಾರೆ. ಜೆಡಿಎಸ್​ ಸೋಷಿಯಲ್​ ಮೀಡಿಯಾ ವಿಭಾಗದ ಮೋಹನ್​ ಗೌಡ ಅವರ ಮನೆಗೆ ಹೋಗಿ ತಲಾಶ್ ಮಾಡಿದ್ದಾರೆ. ಮತ್ತೋರ್ವ ಜೆಡಿಎಸ್​ ಐಟಿ ಸೆಲ್​ನ ಶಂಕರ್​ ಎಂಬುವರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಕಾನೂನು ಬಾಹೀರ ವಶ ಅಂತ ಡಿಜಿ ಅವರಿಗೆ ಜೆಡಿಎಸ್​ ದೂರು ದಾಖಲಿಸಿದ ನಂತರ ಬಿಡುಗಡೆ ಮಾಡಿಲಾಗಿತ್ತು. ತನ್ನ ಕಾರ್ಯಕರ್ತರ ರಕ್ಷಣೆಗಾಗಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದು ಅನ್ನೋದು ಕಾಂಗ್ರೆಸ್​ ಪಕ್ಷದ ಆರೋಪ. ಆದರೆ ಕುಮಾರಸ್ವಾಮಿ ಹೇಳುತ್ತಿರುವುದೇ ಬೇರೆ..

ರಾಕೇಶ್​ ಶೆಟ್ಟಿ ಬಂಧಿಸಿ, 2 ದಿನಗಳ ಗಡುವು..!

ಆದರೆ, ವಿಷಯ ಅದಲ್ಲ, ತನಿಖೆಯು ದಾರಿ ತಪ್ಪುತ್ತಿದೆ ಅನ್ನೋದು ಕುಮಾರಸ್ವಾಮಿ ವಾದ. ಸಿದ್ದರಾಮಯ್ಯ ಅವರ ವಿಡಿಯೋ ರಿಲೀಸ್​ ಆಗಿದೆ. ಅದು ಭಾರತ ದೇಶದಿಂದ ರಿಲೀಸ್​ ಆಗಿಲ್ಲ ಅನ್ನೋದು ಪೊಲೀಸರ ಬಳಿ ಇರುವ ಮಾಹಿತಿ. ಆದರೆ ಇಲ್ಲಿರುವ ಜೆಡಿಎಸ್​ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಯಾವ ನ್ಯಾಯ..!?. ಆ ವಿಡಿಯೋದಲ್ಲಿ ಮಾತನಾಡಿರುವುದು ಖಾಸಗಿ ಮಾಧ್ಯಮ ಸಂಸ್ಥೆ ಮಾಲೀಕ ಆಗಿರುವ ರಾಕೇಶ್​ ಶೆಟ್ಟಿ ಅವರದ್ದು. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ಎಲ್ಲವೂ ಬಹಿರಂಗ ಆಗುತ್ತದೆ. ಸಿದ್ದರಾಮಯ್ಯ ಅವರಿಗೆ ನ್ಯಾಯವೂ ಸಿಗುತ್ತದೆ ಎನ್ನುವುದು ಕುಮಾರಸ್ವಾಮಿ ಮಾತಿನ ಸಾರಾಂಶ. ಇನ್ನು ವಿಡಿಯೋ ರಿಲೀಸ್​ ಮಾಡಿಸಿದ್ದು ಮಾತ್ರ ಡಿ.ಕೆ ಶಿವಕುಮಾರ್ ಅನ್ನೋದನ್ನು ಕುಮಾರಸ್ವಾಮಿ ಮಾತು ಮಾತಿನಲ್ಲೂ ಹೇಳಿದ್ದಾರೆ.
​
ರಾಕೇಶ್​ ಶೆಟ್ಟಿಯನ್ನು ಮುಂದಿನ ಎರಡು ದಿನಗಳಲ್ಲಿ ಬಂಧನ ಮಾಡಬೇಕು ಎಂದು ಆಗ್ರಹ ಮಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಬೆಂಗಳೂರು ಕಮಿಷನರ್​ ಕಚೇರಿಗೂ ತೆರಳಿ ಧರಣಿ ಕುಳಿತುಕೊಳ್ಳುವ ಮಾತನಾಡಿದ್ರು. ಈ ವೇಳೆ ಮಾತನಾಡಿರುವ ಕೇಂದ್ರ ಸಚಿವರು, ಶಾಂಗ್ರಿಲಾ ಹೋಟೆಲ್​ನಲ್ಲಿ ಸಿಎಂ ಯಾರನ್ನು ಭೇಟಿ ಮಾಡಿದ್ರು..? ವಿಡಿಯೋ ರಿಲೀಸ್​ ಆಗುವ ಮೊದಲ 2 ದಿನಗಳಲ್ಲಿ ಆ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡಿದ್ದು ಯಾಕೆ..? ಸಿಎಂ ಮೊಬೈಲ್​ ಪಡೆದು ತನಿಖೆ ಮಾಡಿದ್ರೆ ಎಲ್ಲವೂ ಬಹಿರಂಗ ಆಗುತ್ತದೆ ಎನ್ನುವ ಮೂಲಕ ನೇರವಾಗಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ವಿರುದ್ಧವೇ ಆರೋಪದ ಸುರಿಮಳೆ ಸುರಿಸಿದ್ರು.

ನೈಸ್​ ಅಕ್ರಮ ಮುಚ್ಚಿಹಾಕಲು ವಿಡಿಯೋ ರಿಲೀಸ್!

ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಾನು ನೈಸ್​ ಅಕ್ರಮಗಳ ವಿರುದ್ಧ ಸಾಕ್ಷ್ಯ ಸಮೇತ ಆರೋಪ ಮಾಡುತ್ತಿದ್ದೆ. ಆದರೆ ನನ್ನ ಪ್ರೆಸ್​ಮೀಟ್​ ನಡೆಯುವ ಸಮಯದಲ್ಲೇ ಈ ಸ್ಟಿಂಗ್​ ವಿಡಿಯೋ ರಿಲೀಸ್​ ಆಯ್ತು. ನೈಸ್​ ಅಕ್ರಮಗಳ ಬಗ್ಗೆ ರಾಜ್ಯದ ಜನರಿಗೆ ನನ್ನ ಮಾತು ತಲುಪಬಾರದು ಅನ್ನೋ ಕಾರಣಕ್ಕೆ ಅದೇ ಸಮಯಕ್ಕೆ ವಿಡಿಯೋ ರಿಲೀಸ್​ ಮಾಡಲಾಯ್ತಾ..? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈ ಸ್ಟಿಂಗ್​ ಹಿಂದೆ ಇರೋ ಸಾಮ್ರಾಟ್​ ಯಾರು ಅನ್ನೋದು ಬಹಿರಂಗ ಆಗಬೇಕು. ಅದಕ್ಕಾಗಿ ಸೂಕ್ತ ತನಿಖೆ ಅತ್ಯಗತ್ಯ ಅನ್ನೋದನ್ನು ಒತ್ತಾಯಪೂರ್ವಕವಾಗಿ ಹೇಳಿದ್ರು. ನನ್ನ ಕಾರ್ಯಕರ್ತರನ್ನು ವಿಚಾರಣೆಗೆ ಕರೆದರೆ ಬರೋದಕ್ಕೆ ಸಮಸ್ಯೆ ಇಲ್ಲ. ನನ್ನನ್ನು ಕರೆದರೂ ಬರ್ತೇನೆ. ಆದರೆ ಆ ಪ್ರಮುಖ ವ್ಯಕ್ತಿ, ಸಿಎಂಗೆ ಆಪ್ತನಾಗಿರುವ ವ್ಯಕ್ತಿಯನ್ನು ಮೊದಲು ಅರೆಸ್ಟ್​ ಮಾಡಬೇಕು ಅಲ್ವಾ..? ಅಂತಾ ಪ್ರಶ್ನಿಸಿದ್ರು.

ನೈಸ್​ ಅಕ್ರಮ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಹೆಸರು ತೇಲಿ ಬಿಟ್ಟಿದ್ದಾರೋ..? ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಮುಗಿಸಲು ವಿಡಿಯೋ ಬಿಟ್ಟಿದ್ದಾರೋ ಅನ್ನೋದು ತನಿಖೆಯಿಂದಲೇ ಗೊತ್ತಾಗಬೇಕಿದೆ. ಆದರೆ ಅದೆಲ್ಲಾ ಸತ್ಯಾಸತ್ಯತೆ ಗೊತ್ತಾಗಬೇಕು ಅಂದ್ರೆ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು. ಇಲ್ಲವೇ ರಾಜಕಾರಣಿಗಳು ಸಮಯಕ್ಕೆ ತಕ್ಕಂತೆ ಬದಲಾಗ್ತಾರೆ. ಪೊಲೀಸರ ತನಿಖೆ ತೇಪೆ ಸಾರಿಸಿದ ಗುಂಡಿ ಎನ್ನುವಂತಾಗುತ್ತದೆ ಅಷ್ಟೆ.

Related posts

Okkaliga and Lingayath united; ಜಾತಿ ಗಣತಿ ಆರಂಭಕ್ಕೂ ಮುನ್ನವೆ ಬಲಾಢ್ಯರ ವಿರೋಧ.. ಸಣ್ಣ ಬಿರುಕು..

Publicspot

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಹೆಕಮಾಂಡ್‌ಗೆ ಡೈನಾಮೇಟ್‌..

Publicspot

DCM DKS Apologize: ಡಿಕೆ ಶಿವಕುಮಾರ್​​ ಕ್ಷಮಾಪಣೆ ಕೇಳುತ್ತಲೇ ಮೂರ್ಖರು ಎಂದಿದ್ಯಾಕೆ..?

Publicspot

Vachana VV ‘ಪುರೋಹಿತ ಶಾಹಿಗಳು ಶರಣರನ್ನು ಕೊಂದರು.. ಬಲಿದಾನಕ್ಕೆ ವಚನ ವಿವಿ ಸ್ಥಾಪಿಸಿ’

Publicspot

ಅಪ್ಪನ ಕ್ಷೇತ್ರದಲ್ಲಿ ಮಗನ ಅಬ್ಬರ.. ಕುರುಬರು ಕಾಂಗ್ರೆಸ್‌ಗೆ ಮೀಸಲಲ್ಲ – HDK

Publicspot

ಸಿಎಂ ಡಿನ್ನರ್‌ ಮೀಟ್‌.. ಸಚಿವರ ಸಭೆ.. ಡಿಕೆಶಿ ಸಿಎಂ ಆಗ್ತಾರೆ.. ಆಗ್ಬೇಕು..!!

Publicspot