The Public Spot
Uncategorizedರಾಜ್ಯ

ಪ್ರಶಾಂತನಿಗೆ ಅಂಬಾರಿ ಹಸ್ತಾಂತರ ಮಾಡಲಿರುವ ಅಭಿಮನ್ಯು..!

ಇವತ್ತು ನಾಡಿನಾದ್ಯಂತ ದಸರಾ ವಿಜಯದಶಮಿ ಸಂಭ್ರಮ ಕಳೆಗಟ್ಟಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ವಿಶೇಷ ಪೂಜೆ ಬಳಿಕ ಮೈಸೂರು ಅರಮನೆ ಪ್ರಾಂಗಣಕ್ಕೆ ತಾಯಿ ಚಾಮುಂಡಿ ವಿಗ್ರಹ ತರಲಾಗ್ತಿದೆ. ಮಹಿಷ ಮರ್ದಿನಿ ಅವತಾರದಲ್ಲಿರುವ ಚಾಮುಂಡೇಶ್ವರಿ ಮೂರ್ತಿಗೆ ಬೆಳಗ್ಗೆ 4 ಗಂಟೆಯಿಂದಲೂ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ.

ಬೆಳಗ್ಗೆ 7.30ಕ್ಕೆ ಉತ್ಸವ ಮೂರ್ತಿ ಮೆರವಣಿಗೆ ಆರಂಭ ಆಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು, ಚಾಮುಂಡಿ ತೇರಿಗೆ ಕೈ ಮುಗಿದು ತಾಯಿಯ ದರ್ಶನ ಪಡೆದಿದ್ದಾರೆ. ಜನರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ತಾಯಿ ಚಾಮುಂಡಿಯ ಉತ್ಸವ ಮೂರ್ತಿ ಕಂಗೊಳಿಸುತ್ತಿದ್ದಾಳೆ.

ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿಗೆ ಅರಮನೆ ಆವರಣದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಅರಮನೆ ಆವರಣದಲ್ಲಿ ಆನೆಗಳಿಗೆ ಅಲಂಕಾರ ಮಾಡಲಾಗ್ತಿದೆ. ಜಂಬೂ ಸವಾರಿ ಆನೆಗಳ ಸಿದ್ಧತೆ ಮಾಡಲಾಗ್ತಿದೆ. ಏಕಲವ್ಯ, ಸುಗ್ರೀವಾ, ಶ್ರೀಕಂಠ ಸೇರಿದಂತೆ ಆನೆಗಳಿಗೆ ಅಲಂಕಾರ ಮಾಡಲಾಗ್ತಿದೆ. ಕಳೆದ 22 ವರ್ಷದ ಬಣ್ಣ ಬಳಿಯುತ್ತಿರುವ ಚಿತ್ತಾರ ಕಲಾವಿದ ಸಿದ್ದಲಿಂಗಪ್ಪ, ಪಾರಂಪರಿಕ ಇತಿಹಾಸ ಸಾರುವ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಆನೆಗಳ ಮೇಲೆ ಗಂಡಭೇರುಂಡ‌ ಸೇರಿದಂತೆ ರಾಜ ವೈಭವ ಚಿತ್ರಗಳು ಇರಲಿವೆ.

ಜಂಬೂ ಸವಾರಿಯಲ್ಲಿ ಮಾಜಿ ಕ್ಯಾಪ್ಟನ್ ಕೂಡ ಭಾಗಿಯಾಗ್ತಿರೋದು ವಿಶೇಷ. ಜನರ ಬೇಡಿಕೆ ಹಿನ್ನೆಲೆ ಜಂಬೂ ಸವಾರಿಯಲ್ಲಿ ಅಭಿಮನ್ಯು ಭಾಗಿ. ಜಂಬೂ ಸವಾರಿಗೆ ಹಸಿರು ನಿಶಾನೆ ಆನೆ ಆಗಿ ಅಭಿಮನ್ಯು ಸಂಚಾರ. ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಅಭಿಮನ್ಯು ಈ ಬಾರಿ ಪ್ರಶಾಂತನಿಗೆ ಸಾಥ್​ ಕೊಟ್ಟು ತನ್ನ ಹೊಣೆಗಾರಿಕೆಯನ್ನು ಹಸ್ತಾಂತರ ಮಾಡಲಿದ್ದಾನೆ. ಹೀಗಾಗಿ ಅಭಿಮನ್ಯುಗೂ ಅಲಂಕಾರ ಮಾಡಲಾಗ್ತಿದೆ.

Related posts

BigBoss Kannada; ಈ ಬಾರಿ ಕನ್ನಡಮಯ ಆಗಿದ್ಯಾಕೆ ಬಿಗ್‌ಬಾಸ್‌..?

Publicspot

PU, SSLC ಪರೀಕ್ಷೆಗೆ ಸಿದ್ಧತೆ ಇರಲಿ, ಭಯ ಬೇಡ.. ಪತ್ರಿಕೆ ಲೀಕ್‌ ಆಗುವ ಭಯ ಬೇಡ..

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

ಬೆಂಗಳೂರಲ್ಲಿ ಒಂದೇ ಒಂದು ದಿನದ ಒಂದು ಗಂಟೆ ಮಳೆಗೆ 10 ಜನರ ಬಲಿ

Publicspot

ಹೋಂ ಮಿನಿಸ್ಟರ್​ ಪ್ರಿಯಾಂಕ್​ ಖರ್ಗೆ ತವರಲ್ಲಿ ಶಂಕಿತ ಉಗ್ರನ ಬಂಧನ..!

Publicspot

ಗಾಯಕ ರಘು ದೀಕ್ಷಿತ್‌ ಮತ್ತೆ ಮದುವೆ.. ಹೊಸ ಬಾಳಿಗೆ ವಾರಿಜಶ್ರೀ ಸಂಗಾತಿ..

Publicspot