The Public Spot
ರಾಜ್ಯ

ಹಿಂಗಾರು ಮಳೆಗೆ ತತ್ತರಿಸಿದ ಹಾಸನ.. ಸಿಡಿಲು ಗುಡುಗು ಅಬ್ಬರ..

ಹಾಸನ ಜಿಲ್ಲೆಯ ವಿವಿಧೆಡೆ ಮಿಂಚು, ಗುಡುಗು ಸಹಿತ ಧಾರಾಕಾರ ಮಳೆ ಆಗಿದೆ. ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಆಗಿದೆ. ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು ತಾಲ್ಲೂಕುಗಳ ವಿವಿಧೆಡೆ ಅಬ್ಬರದ ಮಳೆ ಆಗಿದೆ. ಅರಸೀಕೆರೆಯಲ್ಲಿ ಸಿಡಿಲು ಸಹಿತ ಮಳೆಯ ಅಬ್ಬರದಲ್ಲಿ ಸಿಡಿಲು ಬಡಿದು ಹಾಸಿಗೆ ತಯಾರಿಕಾ ಘಟಕ ಹೊತ್ತಿ ಉರಿದಿದೆ. ನೋಡ ನೋಡುತ್ತಲೆ ಧಗಧಗಿಸಿ ಹೊತ್ತಿ ಉರಿದಿವೆ ವಸ್ತುಗಳು.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಚಿಕ್ಕೂರು ಗ್ರಾಮದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಪಕ್ಕದ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮದ ಅಮಿನಾಬಿ ಎಂಬುವವರಿಗೆ ಸೇರಿದ ಹಾಸಿಗೆ ತಯಾರಿಕೆ ಘಟಕದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲು ಆಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಹಾಸಿಗೆ ತಯಾರಿಕೆ ಘಟಕದಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು.

ಹಿಂಗಾರು ಮಳೆಯ ಆರ್ಭಟಕ್ಕೆ ಇಡೀ ಕುಟುಂಬ ನಲುಗಿದೆ. ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರ ಕುಟುಂಬದ ಮನವಿ ಮಾಡಿದೆ. ಅತ್ತ ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಬಯಲು ಸೀಮೆಯ ಭಾಗದಲ್ಲಿ ಮಳೆ ಆಗಿದೆ. ತರೀಕೆರೆ ಪಟ್ಟಣ ಸೇರಿದಂತೆ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಕಳೆದ ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಹಿಂಗಾರು ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Related posts

ಸೋಮಣ್ಣ ಆನೆ ರಂಪಾಟ.. ಹೊಣೆ ನಮ್ಮದು ಅಂದಿದ್ಯಾರು..?

Publicspot

ಹೊಸ ವರ್ಷ 2026ರ ಸ್ವಾಗತಕ್ಕೆ ಹೇಗಿದೆ ಬೆಂಗಳೂರು ಖಾಕಿ ತಯಾರಿ..?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆ

admin

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

ಬೆಂಗಳೂರಲ್ಲಿ ಒಂದೇ ಒಂದು ದಿನದ ಒಂದು ಗಂಟೆ ಮಳೆಗೆ 10 ಜನರ ಬಲಿ

Publicspot