The Public Spot
ರಾಜ್ಯ

ಸ್ಟಿಂಗ್​ ಆಪರೇಷನ್​ ಮತ್ತು ಕುಮಾರಸ್ವಾಮಿ ಹೋರಾಟ.. ಸರ್ಕಾರ..!?

ರಾಜ್ಯದಲ್ಲಿ ಸ್ಟಿಂಗ್​ ಆಪರೇಷನ್​ ಹೆಸರಿನ ದಂಧೆ ನಡೆಯುತ್ತಿದೆ ಅನ್ನೋದನ್ನು ರಾಜ್ಯದ ಜನರ ಎದುರು ತೆರೆದು ಇಟ್ಟಿದ್ದಾರೆ ಕುಮಾರಸ್ವಾಮಿ. ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಮಾಡಿದ್ದು ಅಷ್ಟೇ ಅಲ್ಲ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹ ಮಾಡಿದ್ರು. ಅಷ್ಟೇ ಅಲ್ಲ ಸ್ವತಃ ಸಿಎಂ ಡಿ.ಕೆ ಶಿವಕುಮಾರ್​ ಅವರನ್ನು ಟ್ರ್ಯಾಪ್​ ಮಾಡಿದ್ದು, ಅದೇ ಕಾರಣಕ್ಕೆ ಇಡೀ ಸರ್ಕಾರ ಆ ವ್ಯಕ್ತಿಗೆ ಶರಣಾಗಿದೆ. ಆ ವ್ಯಕ್ತಿಯನ್ನು ಕಂಡರೆ ಹೆದರುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರು ಪೊಲೀಸ್​ ಕಮಿಷನರ್​ಗೆ 2 ದಿನಗಳ ಗಡುವು ಕೊಡಲಾಗಿತ್ತು. ಕಮಿಷನರ್​ ಆರೋಪಿಯನ್ನು ಅರೆಸ್ಟ್​ ಮಾಡದ ಕಾರಣಕ್ಕೆ ಡಿಜಿ – ಐಜಿಪಿ ಭೇಟಿ ಮಾಡಿ, ದೂರು ಸಲ್ಲಿಸಿದ್ದರು.

ಬೆಂಗಳೂರಿನ ಜೆಪಿ ಭವನದಿಂದ ಕುಮಾರಸ್ವಾಮಿ ಜೆಡಿಎಸ್​ ಕಾರ್ಯಕರ್ತರ ಜೊತೆಗೆ ಪಾದಯಾತ್ರೆ ಹೊರಟ್ರು. ಆದರೆ ಫ್ರೀಡಂಪಾರ್ಕ್​ ಬಳಿಗೆ ಬರ್ತಿದ್ದ ಹಾಗೆ ಬಿಎಂಟಿಸಿ ಬಸ್​ ಅಡ್ಡ ನಿಲ್ಲಿಸಿದ್ದ ಪೊಲೀಸರು, ಜೆಡಿಎಸ್​ ಕಾರ್ಯಕರ್ತರನ್ನು ಮುಂದೆ ಹೋಗದಂತೆ ತಡೆದ್ರು. ಆ ಬಳಿಕ ಕುಮಾರಸ್ವಾಮಿ ಪಾದಯಾತ್ರೆ ಬಿಟ್ಟು ವಾಹನದಲ್ಲಿ ಡಿಜಿ ಡಾ ಸಲೀಂ ಕಚೇರಿಗೆ ತೆರಳಿ ದೂರು ಸಲ್ಲಿಸಲಾಯ್ತು. ಇದಕ್ಕೂ ಮೊದಲು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಆ ವ್ಯಕ್ತಿ ಕಿಂಗ್ ಪಿನ್‌‌ಗೆ ರಕ್ಷಣೆ ಕೊಟ್ಟಿದೆ ಎಂದು ಆರೋಪಿಸಿದ್ರು.

ನಿಮ್ಮ ಒಬ್ಬರ ವಿಚಾರ ಅಲ್ಲ, ಹಲವಾರು ಮಂತ್ರಿಗಳ ಸ್ಟಿಂಗ್ ಆಗ್ತಿದೆ ಅಂತ ಮುಖ್ಯಮಂತ್ರಿ ಕ್ಯಾಬಿನೆಟ್ ಅಲ್ಲಿ ಹೇಳ್ತಾರೆ. ಇಷ್ಟೆಲ್ಲಾ ಆದ್ರೂ ಗೃಹಮಂತ್ರಿ ರಾಜಾರೋಷವಾಗಿ ಮಾತಾಡ್ತಾರೆ. ಪೊಲೀಸರಿಂದ ನಾವೇನು ನಿರೀಕ್ಷೆ ಮಾಡೋಕೆ ಆಗಲ್ಲ. ಈ ಸರ್ಕಾರ ಆ ವ್ಯಕ್ತಿಯ ಬೂಟ್ ಪಾಲೀಶ್ ಮಾಡ್ತಿದ್ದಾರೆ. ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕಲ್ಲ, ವಿಧಾನಸೌಧ ಮುಂಭಾಗ ಕುರ್ಚಿ ಹಾಕಿ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಬಿಡಿ. ನಿಮ್ಮ ರಾಜ್ಯ ಸರ್ಕಾರದ ಯೋಗ್ಯತೆ ಇಷ್ಟೆ. ಪುನಃ ಹಬ್ಬದ ಬಳಿಕ ರಾಜ್ಯ ಸರ್ಕಾರದ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ ಮಾಡ್ತೀವಿ ಎಂದಿದ್ದಾರೆ.

ಬೀದರ್​ನಿಂದ ಚಾಮರಾಜನಗರದವರೆಗೆ ನಮ್ಮ ಹೋರಾಟ ಯಾವ ರೀತಿ ಪ್ರಾರಂಭ ಮಾಡ್ತೇವೆ ಎಂದಿರುವ ಕುಮಾರಸ್ವಾಮಿ, ಡಿಜಿಯವರು ಮೌನದಿಂದ ದೂರು ಸ್ವೀಕಾರ ಮಾಡಿದ್ದಾರೆ. ಸರ್ಕಾರ ಕ್ರಮ ತೆಗೆದುಕೊಳ್ಳದೇ ಇದ್ದರೆ ನಮ್ಮ ಹೋರಾಟ ಶುರು ಮಾಡ್ತೀವಿ. ವಿಜಯದಶಮಿ ಹಬ್ಬ ಮುಗಿಸಿ ನಮ್ಮ ಹೋರಾಟ ಶುರು ಮಾಡ್ತೀವಿ. ಅವತ್ತಿನ ನಂತರ ತನಿಖೆ ಏನಾಗಿಲ್ಲ..? ಏನಾಗುತ್ತೆ..? ಮುಂದೆ ನೋಡೋಣ ಎಂದಿದ್ದಾರೆ. ಒಟ್ಟಾರೆ, ಕುಮಾರಸ್ವಾಮಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಇಬ್ಬರ ಪರವಾಗಿಯೂ ಬ್ಯಾಟಿಂಗ್​ ಮಾಡುತ್ತಲೇ ಕಾಗ್ರೆಸ್​ ಸರ್ಕಾರವನ್ನು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಲ್ಲಿಸಿದ್ದಾರೆ.

ಮಾಧ್ಯಮ ಅನ್ನೋ ಹಣೆಪಟ್ಟಿ ಕಟ್ಟಿಕೊಂಡು ಸ್ಟಿಂಗ್​ ಆಪರೇಷನ್​ ಮಾಡುತ್ತಿರುವ ವ್ಯಕ್ತಿಯನ್ನು ಅರೆಸ್ಟ್​ ಮಾಡಬೇಕು ಅನ್ನೋದು ಕುಮಾರಸ್ವಾಮಿ ಅವರ ಆರೋಪ. ಆದರೆ ಪೊಲೀಸರು ಕೂಡ ಆರೋಪಿಯನ್ನು ಬಂಧಿಸಿಲ್ಲ. ಸರ್ಕಾರವೇ ಆ ವ್ಯಕ್ತಿಗೆ ಶರಣಾಗಿದೆ ಅನ್ನೋ ಆರೋಪ ಮಾಡಿದ್ದಾರೆ. ಇದೀಗ ಸರ್ಕಾರ ಏನಾದರೂ ಮಾಡಲೇಬೇಕಿದೆ. ಕಾನೂನು ಕ್ರಮ ತೆಗೆದುಕೊಳ್ಳುತ್ತಾ..? ಅಥವಾ ಸರ್ಕಾರ ತಲೆಬಾಗಿದೆ, ಹೆದರುತ್ತಿದೆ ಅನ್ನೋದನ್ನು ಒಪ್ಪಿಕೊಳ್ಳುತ್ತಾ ಕಾದು ನೋಡ್ಬೇಕು.

Related posts

Caste Census Issue: ಜಾತಿ ಜನಗಣತಿ ಆರಂಭಕ್ಕೂ ಮುನ್ನವೇ ಶುರುವಾಯ್ತು ಗೊಂದಲ

Publicspot

ಇವತ್ತೂ ನಾಳೆ ರಾಜ್ಯದಲ್ಲಿ ಮಳೆಯೋ ಮಳೆ.. ಕರಾವಳಿಗೆ ಮಾತ್ರ ರಜೆ..

Publicspot

SC INTERNAL RESERVATION; ಒಳ ಮೀಸಲಾತಿ ಜಾರಿ ಮಾಡಿದ ರಾಜ್ಯ ಸರ್ಕಾರ, ಯಾರದ್ದು ಮೇಲುಗೈ..?

Publicspot

ಶಿಕ್ಷಕರ ನೇಮಕಾತಿ & ಕಡ್ಡಾಯ ನಿಯಮಗಳು.. BE, BSc, BCA ಗೂ ಚಾನ್ಸ್​​

Publicspot

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin