The Public Spot
ರಾಜಕೀಯರಾಜ್ಯ

ದಲಿತ ಸಚಿವರನ್ನು ಮುಂದಿಟ್ಟು ಡಬಲ್​ ಗೇಮ್​ ಆಡಿದ್ರಾ ಸಿಎಂ..?

ಮೈಸೂರು ದಸರಾ ವೇಳೆ ಸಿಎಂ ಡಿಕೆ ಶಿವಕುಮಾರ್​ ಜೊತೆ ದಲಿತ ಸಚಿವರನ್ನ ನಂದಿಧ್ವಜ ಪೂಜೆಗೆ ಒಳಗೆ ಬಿಡದೆ ತಡೆದ ವಿಚಾರ ಭಾರೀ ಚರ್ಚೆ ಆಗ್ತಿದೆ. ದಲಿತರು ಅನ್ನೋ ಕಾರಣಕ್ಕೆ ತಡೆಯಲಾಯ್ತು ಅನ್ನೋ ಮಾತುಗಳೂ ಕೇಳಿಬಂದಿವೆ. ಈ ನಡುವೆ ಬಾಗಲಕೋಟೆಯಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಒಬ್ಬ ಅಧಿಕಾರಿ ಮೇಲೆ ಆರೋಪ ಮಾಡುವುದು ಸುಲಭ. ಆದರೆ ಅವರ ಕೆಲಸ ಅವರು ಮಾಡಿದ್ದಾರೆ. ಅಲ್ಲಿ ಕೆಲವಷ್ಟು ಪ್ರೋಟೋಕಾಲ್ ಇರುತ್ತದೆ. ಸಿಎಂ ಜೊತೆಗೆ ಯಾರು ಹೋಗಬೇಕು, ಅನ್ನೋದು ಇರುತ್ತದೆ. ಈಗ ಪ್ರಧಾನಿ ಇಲ್ಲಿಗೆ ಬರ್ತಾರೆ, ಅಲ್ಲಿ SPG ಇರ್ತಾರೆ. ಮಂತ್ರಿಗಳನ್ನು ಬಿಡಲ್ಲ, ಮುಖ್ಯಮಂತ್ರಿಗಳನ್ನು ಬಿಡಲ್ಲ. ಆ ಪರಿಸ್ಥಿತಿ ಏನು ಅಂತೀರಿ..? ಅನ್ನೋ ಮೂಲಕ ಸಿಎಂ ಡಿ.ಕೆ ಶಿವಕುಮಾರ್​ ಪ್ರಧಾನಿ ಮೋದುನ್ನು ಫಾಲೋ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನೂ ಮೈಸೂರು ದಸರಾ‌ ನಂದಿಪೂಜೆ ವೇಳೆ ಸಚಿವರನ್ನ ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿದ ಎಸ್​ಪಿ‌ ರಿಷ್ಯಂತ್, ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್​ ಅವರನ್ನು ಭೇಟಿಯಾಗಿ ವಿವರಣೆ ನೀಡಿದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೂ ಭೇಟಿ ಮಾಡಿದ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ನಂದಿಧ್ವಜ ಪೂಜೆ ಬಳಿ ಏನೆಲ್ಲಾ ಘಟನೆ ನಡೀತು ಅನ್ನೋ ಬಗ್ಗೆ ವಿವರಣೆ ನೀಡಿದ್ದಾರೆ. ಆದರೆ ಸಿಎಂ ಡಿ.ಕೆ ಶಿವಕುಮಾರ್​ ಏಕಾಂಗಿಯಾಗಿ ನಂದಿಧ್ವಜ ಪೂಜೆ ಮಾಡಲು ಇಚ್ಛಿಸಿದ್ದರು. ಆದರೆ ಆ ಕ್ಷಣದಲ್ಲಿ ಸಚಿವರು ಬೆನ್ನಿಗೆ ಅಂಟಿಕೊಂಡು ಸಾಗಿದ್ರಿಂದ ಯೋಜನೆ ತಲೆಕೆಳಗಾಯ್ತು ಅನ್ನೋ ಚರ್ಚೆಗಳು ನಡೆದಿವೆ.

ವಿಧಾನಸೌಧದಲ್ಲಿ ಜೆಡಿಎಸ್ ಎಂಎಲ್‌ಸಿ ಎಸ್.ಎಲ್.ಭೋಜೆಗೌಡ ಮಾತನಾಡಿ, ಮೈಸೂರು ದಸರಾಗೆ ಅನಾದಿ ಕಾಲದಿಂದಲೂ ಖ್ಯಾತಿ ಇದೆ. ಇಷ್ಟೇ ಜನಸಂಖ್ಯೆ ಸೇರುತ್ತದೆ ಅಂತ ಸರ್ಕಾರಕ್ಕೆ ಮಾಹಿತಿ ಇರುತ್ತದೆ. ಆ ಮಾಹಿತಿ ಆಧಾರದ ಮೇಲೆ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಜನ ನಾಡಹಬ್ಬ ದಸರಾ ನೋಡೋಕೆ ಬರೋದು ಸಹಜ. ಗೋಲ್ಡ್ ಪಾಸ್ ಒಂದೇ ದಿನ ಬಿಟ್ಟು ಕ್ಲೋಸ್ ಮಾಡಿಬಿಟ್ರು. ಒಬ್ಬ ಕಾನ್ಸ್‌ಟೇಬಲ್‌ಗೂ ಗೊತ್ತಿರುತ್ತದೆ. ಇವರು ಮಂತ್ರಿಗಳು, ಇವರು ಅಧಿಕಾರಿಗಳು ಅಂತ. ಸಚಿವರಿಗೆ ಅವಮರ್ಯಾದೆ ಆಯ್ತಲ್ಲ. ತಾಕತ್ತಿದ್ದರೆ ಹೇಳಲಿ ಯಾರು ಸೂಚನೆ ಕೊಟ್ಟಿದ್ರು ಅಂತ..? ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಹೋಗೋದು ಸರ್ಕಾರಕ್ಕೆ ಶೋಭೆ ತರಲ್ಲ. ಚೀಫ್ ಸೆಕ್ರೆಟರಿ ಅಥವಾ ಸಿಎಂ ಡಿಕೆ ಶಿವಕುಮಾರ್​ ಇದರ ಹೊಣೆ ಹೊರಬೇಕು ಎಂದು ಆಗ್ರಹ ಮಾಡಿದ್ದಾರೆ.

ಸರ್ಕಾರದ ಭಾಗವಾಗಿರುವ ಸಚಿವರಿಗೆ ಈ ರೀತಿ ಅವಮಾನ ಆಗಿದೆ. ಎಷ್ಟೇ ದೊಡ್ಡ ಅಧಿಕಾರಿ ಆದರೂ ವಿತ್‌ಔಟ್ ಡೈರೆಕ್ಷನ್ ಮಂತ್ರಿಗಳನ್ನ ತಡೆಯಲು ಆಗಲ್ಲ ಎನ್ನುವ ಮೂಲಕ ಭೋಜೇಗೌಡರು ಸಿಎಂ ಕಚೇರಿಯ ಸೂಚನೆಯಂತೆ ಅಧಿಕಾರಿ ನಡೆದುಕೊಂಡಿದ್ದಾರೆ ಅನ್ನೋದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇದೀಗ ಸಿಎಂ ಡಿ.ಕೆ ಶಿವಕುಮಾರ್​ ಮಾತ್ರ ಈ ವಿಚಾರವಾಗಿ ತನಿಖೆಗೆ ಆದೇಶ ಮಾಡಿದ್ದೇನೆ ಎಂದಿದ್ದಾರೆ. ಸಿಎಸ್​ ಕೂಡ ಕ್ರಮದ ಮುನ್ಸೂಚನೆ ನೀಡಿದ್ದಾರೆ. ಡಿಜಿ -ಐಜಿಪಿ ಎಸ್​ಪಿ ರಿಷ್ಯಂತ್​ ವಿರುದ್ಧ ಕ್ರಮಕ್ಕೆ ಮುಂದಾಗ್ತಾರಾ..? ಅಥವಾ ಸಿಎಂ ಡಿಕೆ ಶಿವಕುಮಾರ್​ ತನಿಖೆಗೆ ಸೂಚನೆ ಅಂತಾ ಕಾಲ ತಳ್ಳುವ ಮೂಲಕ ದಲಿತ ಸಚಿವರಿಗೆ ಆದ ಅವಮಾನವನ್ನು ಮರೆಮಾಚುತ್ತಾರಾ..? ಕಾದು ನೋಡ್ಬೇಕು.

Related posts

Lingayath not cast: ಜಾತಿಗಣತಿ ವೇಳೆ ಲಿಂಗಾಯತ ಧರ್ಮ ಎಂದೇ ಬರೆಸಿ.. ಬಸವಣ್ಣನಷ್ಟೇ ಪೂಜಿಸಿ..

Publicspot

ಚಾಮರಾಜನಗರದಲ್ಲಿ ಪ್ರಾಣಿ ಕೊಂದಿದ್ದಕ್ಕೆ ಮೂವರ ಹತ್ಯೆ..! ಇದ್ಯಾವ ಕಾನೂನು..?

Publicspot

RAIN DAMAGES IN KARNATAKA: ಕರ್ನಾಟಕದಲ್ಲಿ ಮಳೆ ಅಬ್ಬರದ ಎಫೆಕ್ಟ್‌ ಹೇಗಿದೆ..?

Publicspot

ಕೇಂದ್ರದ ವಿರುದ್ಧ ಸಿಡಿದೆದ್ದ ರೈತರು.. ಮಧ್ಯರಾತ್ರಿ ಸರ್ಕಸ್​ ಸಕ್ಸಸ್​ ಆದ್ರೆ..

Publicspot

ಅರಸು ದಾಖಲೆ ಮುಟ್ಟಿದ ಸಿಎಂ ಸಿದ್ದರಾಮಯ್ಯ.. ನಾಳೆ ದೀರ್ಘಾವಧಿ ಸಿಎಂ ಅನ್ನೋ ಪಟ್ಟ..

Publicspot

ಕಸ ಗುಡಿಸುವ ವಾಹನ ಖರೀದಿ ಓಕೆ.. ಬಾಡಿಗೆಗೆ ಕೊಡೋದು ಯಾಕೆ..? JDS ಆಕ್ರೋಶ..

Publicspot