The Public Spot
ರಾಜಕೀಯ

ಕಾಂಗ್ರೆಸ್​ ಕೆಣಕಿದ ಮೋದಿಗೆ ಉತ್ತರ ಏನು..? ಪುಟಿದೇಳುತ್ತಾ ಕಾಂಗ್ರೆಸ್​..?

ವಿಧಾನ ಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಸೋಲುಂಡಿದೆ. ಬಿಜೆಪಿ 3 ಹಾಗೂ ಜೆಡಿಎಸ್​ 1 ಸ್ಥಾನಗಳನ್ನು ಜಯಿಸಿದ್ದು, ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಅಂತಾನೇ ಹೇಳಬಹುದು. ಈ ನಡುವೆ ಎಕ್ಸ್ ಪೋಸ್ಟ್ ಹಾಕಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದ್ದಾರೆ. ದೇಶದ ನಾಲ್ಕು ಪ್ರಮುಖ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಉತ್ತರ ಪ್ರದೇಶ, ಬಿಹಾರದಲ್ಲಿ ವಿಧಾನಪರಿಷತ್​​ ಚುನಾವಣೆ ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. 28 MLC ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದಿದ್ದು ಎಷ್ಟು ಊಹೆ ಮಾಡಿ ಎಂದು ಕುಹಕ ಆಡಿದ್ದಾರೆ.

ರಾಜ್ಯದಲ್ಲಿ 2 ಶಿಕ್ಷಕರ ಮತಕ್ಷೇತ್ರ ಹಾಗೂ 2 ಪದವೀಧರರ ಕ್ಷೇತ್ರ ಸೇರಿದಂತೆ ಒಟ್ಟು 28 ಸ್ಥಾನಗಳಿಗೆ ನಡೆದ ಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್​​ ಖಾತೆ ತೆರೆಯುವಲ್ಲಿ ವಿಫಲ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಕುಹಕಕ್ಕೆ ಕಾರಣ ಆಗಿದೆ. ಅದೂ ಅಲ್ಲದೆ EVM ನಿಂದಲೇ ಬಿಜೆಪಿ ಗೆಲ್ಲುತ್ತಿದೆ. ಬ್ಯಾಲೆಟ್​ ಪೇಪರ್​ ಚುನಾವಣೆ ಆದರೆ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರೋದಿಲ್ಲ ಅನ್ನೋ ಮಾತುಗಳು ಕೇಲಿ ಬಂದಿದ್ದವು. ಆದರೆ ಇದೀಗ ನಡೆದ ಪರಿಷತ್​ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ನಡೆದಿದೆ. ಈಗ ಕಾಂಗ್ರೆಸ್​ಗೆ ಎಷ್ಟು ಸ್ಥಾನಗಳು ಸಿಕ್ಕಿದೆ..? ಗೆಸ್ ಮಾಡಿ ಎಂದು ಪ್ರಧಾನಿ ಮೋದಿ ಪೋಸ್ಟ್ ಹಾಕಿದ್ದಾರೆ.

ಬಿಜೆಪಿ ವಿರುದ್ಧವೂ ಜನಾಭಿಪ್ರಾಯ ಇರಬಹುದು. ಕೇಂದ್ರ ಸರ್ಕಾರವೂ ಒಂದಷ್ಟು ತಪ್ಪುಗಳನ್ನು ಮಾಡಿರಬಹುದು. ಆದರೆ ಕಾಂಗ್ರೆಸ್​ ಪಕ್ಷ NDA ಸರ್ಕಾರದ ತಪ್ಪುಗಳನ್ನು ಜನರ ಬಳಿಗೆ ಕೊಂಡೊಯ್ದು ಜನಾಭಿಪ್ರಾಯ ಮೂಡಿಸುವಲ್ಲಿ ಸೋತಿದೆ ಎನ್ನಬಹುದು. ಈಗಾಗಲೇ ಮೂರನೇ ಅವಧಿಗೆ ಮೋದಿ ಆಡಳಿತ ನಡೆಯುತ್ತಿದ್ದು, ಪ್ರಬಲ ವಿರೋಧ ಪಕ್ಷವಾಗಿ ಕಾಂಗ್ರೆಸ್​ ಸೇರಿದಂತೆ INDIA ಒಕ್ಕೂಟ ಕೆಲಸ ಮಾಡಿದ್ದರೆ, ಇಷ್ಟೊತ್ತಿಗೆ ಆಗಲೇ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಬೇಕಿತ್ತು. ಕಾಂಗ್ರೆಸ್​ ಸ್ವತಃ ಮಾಡಿಕೊಳ್ಳುವ ಸಣ್ಣಪುಟ್ಟ ಎಡವಟ್ಟುಗಳೂ ಕಾಂಗ್ರೆಸ್​ ಮೇಲಿನ ವಿಶ್ವಾಸ ವೃದ್ಧಿಯಾಗದಂತೆ ತಡೆಯುತ್ತಿದೆ.

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವತಃ ಪ್ರಧಾನಿ ಬಗ್ಗೆ ಕೀಳು ಮಟ್ಟದ ಮಾತನಾಡ್ತಾರೆ. ಮೋದಿನೂ ಹೋಗ್ಬೇಕು ಅವರಪ್ಪನೂ ಹೋಗ್ಬೇಕು ಅಂತಾರೆ. ಅದೇ ರೀತಿ ಖರ್ಗೆ ಭಾಗಿಯಾದ ಬಳಿಕ ಗೋಮೂತ್ರ ಹಾಕಿ ಶುದ್ಧತರೆ ಕಾರ್ಯ ಮಾಡಲಾಗುತ್ತದೆ. ಇದು ಸರಿ ಎನ್ನುವುದಕ್ಕೂ ಆಗಲ್ಲ. ಆದರೆ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾಡಿದ ಕಮೆಂಟ್​ ಬಗ್ಗೆ ಹೆಚ್ಚು ಪ್ರಚಾರ ಆಗುತ್ತದೆ. ಬಿಜೆಪಿ ಕಾರ್ಯಕರ್ತರು, ನಾಯಕರು ಪ್ರಬಲವಾಗಿ ವಿರೋಧ ಮಾಡ್ತಾರೆ. ಆದರೆ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ನಾಯಕರು ಖರ್ಗೆಯನ್ನು ಬೆಂಬಲಿಸಿ ಬೀದಿಗೆ ಇಳಿಯುವಲ್ಲಿ ಹಿಂದೆ ಮುಂದೆ ನೋಡ್ತಾರೆ. ಹೀಗಾಗಿಯೇ ಕೇಂದ್ರದಲ್ಲಿ ಬಿಜೆಪಿ ನಿರಂತರವಾಗಿ ರಾಜ್ಯಭಾರ ಮಾಡಲು ಸಾಧ್ಯವಾಗಿದೆ. 28ಕ್ಕೆ 28 ಸ್ಥಾನಗಳಲ್ಲೂ ಸೋತಿರುವುದು ಕಾಂಗ್ರೆಸ್​ಗೆ ಹೀನಾಯ ಸೋಲು ನೆಲಕಚ್ಚುವಂತೆ ಮಾಡಿದೆ.

Related posts

ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ?

admin

ಸಿಎಂ ಡಿನ್ನರ್‌ ಮೀಟ್‌.. ಸಚಿವರ ಸಭೆ.. ಡಿಕೆಶಿ ಸಿಎಂ ಆಗ್ತಾರೆ.. ಆಗ್ಬೇಕು..!!

Publicspot

JDS ಪಾದಯಾತ್ರೆ ಅರ್ಧಕ್ಕೆ ತಡೆದ ಪೊಲೀಸರು.. 18ಕ್ಕೆ ಬೃಹತ್​ ಹೋರಾಟ

Publicspot

ಕಾಂಗ್ರೆಸ್‌ನಲ್ಲಿ ನಿಲ್ತಿಲ್ಲ ಮಿಡ್‌ನೈಟ್‌ ಪಾರ್ಟಿ.. ಮೀಟಿಂಗ್‌..

Publicspot

ಕೇರಳಂ ವಿಚಾರ ಅಂದ್ರೆ ಕಾಂಗ್ರೆಸ್​ ತಲೆ ಮೇಲೆ ಹೊತ್ತು ಮಾಡೋದ್ಯಾಕೆ..?

Publicspot

Cabinet List; ಸಂಪುಟ ಪುನಾರಚನೆ ಚರ್ಚೆ.. ದೆಹಲಿಯಲ್ಲಿ ಸಿಎಂ ಕಸರತ್ತು.. ಯಾರು ಔಟ್‌..? ಯಾರು ಇನ್..?

Publicspot