The Public Spot
ದೇಶ-ವಿದೇಶ

ಚಿನ್ನ, ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯ.. ಯಾಕೆ ಗೊತ್ತಾ..?

ಬಂಗಾರ ಖರೀದಿ ಮಾಡಬೇಕು ಅನ್ನೋದು ಹೆಣ್ಣು ಮಕ್ಕಳ ಕನಸು. ಅದರಲ್ಲೂ ಈಗ ಬಂಗಾರ ಖರೀದಿ ಮಾಡೋದು ಸುಲಭದ ಮಾತಲ್ಲ. ಬಂಗಾರ ಬಲುಭಾರ ಅನ್ನೋ ರೀತಿ ಆಗಿದೆ. ಒಂದು ಗ್ರಾಂ ಚಿನ್ನ ಖರೀದಿ ಮಾಡಲು 15-20 ಸಾವಿರ ವೆಚ್ಚ ಆಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳ ಈಚೆಗೆ ಚಿನ್ನದ ದರ ದುಪ್ಪಟ್ಟು ಆಗಿದೆ. ಆದರೆ ಇದೀಗ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಗುಡ್​ ನ್ಯೂಸ್​ ಸಿಕ್ಕಿದೆ.

ಬಂಡವಾಳ ಹೂಡಿಕೆ ಮಾಡಲು ಚಿನ್ನ, ಬೆಳ್ಳಿ ಉತ್ತಮ ಆಯ್ಕೆ ಎನ್ನುತ್ತಿದ್ದ ಶ್ರೀಮಂತರ ಅಡ್ಡ ಅಲುಗಾಡಲು ಶುರುವಾಗಿದೆ. ಚಿನ್ನ ಕೊಳ್ಳುವ ಗ್ರಾಹಕರಿಗೆ ಶುಭ ಶುಕ್ರವಾರದಿಂದ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಆಗ್ತಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 4,347 ರೂಪಾಯಿ ಕುಸಿತ ಆಗಿದ್ರೆ, 1 ಕೆಜಿ ಬೆಳ್ಳಿ ದರ ಸುಮಾರು 10,577 ರೂಪಾಯಿ ಕುಸಿತ ಕಂಡಿದೆ. ಚಿನ್ನದ ಮೇಲೆ ಬಂಡವಾಳ ಹೂಡಿಕೆ ಮಾಡಿದ್ರೂ ಕಷ್ಟ ಕಷ್ಟ ಎನ್ನುವಂತಾಗಿದೆ.

ಹಳದಿ ಲೋಹದ ಬೆಲೆ ಇಳಿಕೆ ಆಗಿರುವುದರಿಂದ ಈ ವರ್ಷದಲ್ಲೇ ಅತ್ಯಂತ ಕಡಿಮೆ ದರಕ್ಕೆ ಚಿನ್ನದ ಮಾರಾಟ ಆಗ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಇಂಧನ ಬೆಲೆಯಲ್ಲಿ ಭಾರೀ ಏರಿಕೆ ಆಗುತ್ತಿರುವುದರಿಂದ ಚಿನ್ನ, ಬೆಳ್ಳಿ ದರ ಇಳಿಕೆ ಆಗುತ್ತಿದೆ. ಅಷ್ಟೇ ಅಲ್ಲದೆ US ಫೆಡರಲ್​ ರಿಸರ್ವ್​ ಮಾಡಿ ವ್ಯಂಗ್ಯ ಚಿನ್ನ, ಬೆಳ್ಳಿ ದರದ ಮೇಲೆ ಪರಿಣಾಮ ಬೀರಿದೆ ಅನ್ನೋ ವಿಶ್ಲೇಷಣೆ ವ್ಯಕ್ತವಾಗ್ತಿದೆ.

ಷೇರು ಮಾರುಕಟ್ಟೆಯಲ್ಲಿ ಸೋಲು ಅನುಭವಿಸಿದ ಹೂಡಿಕೆದಾರರು, ಚಿನ್ನದ ಮೇಲಿನ ಬಂಡವಾಳ ವಾಪಸ್​ ಪಡೆದು ಹಣ ಮಾಡಿಕೊಳ್ತಿರೋದ್ರಿಂದ ಚಿನ್ನ ಮತ್ತು ಬೆಳ್ಳಿ ದರ ಕುಸಿಯುವುದಕ್ಕೆ ಕಾರಣ ಅನ್ನೋ ವಿಶ್ಲೇಷಣೆಯೂ ಹೊರಬಿದ್ದಿದೆ. ಇದೀಗ ಚಿನ್ನ, ಬೆಳ್ಳಿ ದರ ಇಳಿಮುಖವಾಗಿದ್ದು, ಮುಂದಿನ ಕೆಲವು ದಿನಗಳ ತನಕ ಇದೇ ಸ್ಥಿತಿ ಮುಂದುವರಿಯಲಿದೆ. ಒಂದು ವೇಳೆ ಚಿನ್ನ ಖರೀದಿ ಮಾಡುವ ದೇಶಗಳಲ್ಲಿ ಪ್ರಮುಖ ಆಗಿರುವ ಭಾರತದಲ್ಲಿ ಹಬ್ಬ ಹಾಗೂ ಮದುವೆ ಸೀಸನ್​ ಶುರುವಾದ ಬಳಿಕ ಚಿನ್ನದ ಮಾರುಕಟ್ಟೆ ತುಸು ಚೇತರಿಕೆ ಕಾಣಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಇವತ್ತಿನ ಚಿನ್ನದ ದರ ಕುಸಿತದ ನಡುವೆ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 13,888 ಆಗಿದ್ದು, 10 ಗ್ರಾಂ 22 ಕ್ಯಾರೆಟ್​ ಚಿನ್ನ 12,730 ರೂಪಾಯಿ ಆಗಿದೆ. ಅದೇ ರೀತಿ 10 ಗ್ರಾಂ 18 ಕ್ಯಾರೆಟ್​ ಚಿನ್ನದ ಬೆಲೆ 10,416 ರೂಪಾಯಿ ಆಗಿದೆ. ಬೆಳ್ಳಿ ದರ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿದೆ. ಒಂದು ಗ್ರಾಂ ಬೆಳ್ಳಿ ದರ 400 ರೂಪಾಯಿ ಸಮೀಪ ಇದ್ದಿದ್ದು, ಇದೀಗ ಒಂದು ಗ್ರಾಂ ಬೆಳ್ಳಿ ದರ 183 ರೂಪಾಯಿ ಆಗಿದೆ.

ಚಿನ್ನ ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯ ಆಗಿದೆ. ಆದರೆ ಮುಂದಿನ ಕೆಲವು ದಿನಗಳಲ್ಲಿ ಮತ್ತಷ್ಟು ಇಳಿಕೆ ಆಗುವ ಆಗುವ ಸಾಧ್ಯತೆಗಳೂ ಇರೋದ್ರಿಂದ ಸ್ವಲ್ಪ ನಿಧಾನಿಸಿ, ಮಾರುಕಟ್ಟೆ ಏರಿಳಿತ ನೋಡಿಕೊಂಡು ಚಿನ್ನ, ಬೆಳ್ಳಿ ಖದೀರಿ ಮಾಡಿ. ಬಂಗಾರ ನಿಮ್ಮ ಮನೆಯನ್ನೂ ತುಂಬಿಕೊಳ್ಳಲ್ಲಿ. ಅಮ್ಮನಿಗೋ.. ಹೆಂಡತಿಗೋ.. ಮಗಳಿಗೋ ಒಂದು ಚಿನ್ನ ಖರೀದಿ ಮಾಡಿಕೊಟ್ಟು ಮೊಗದಲ್ಲಿ ಸಂತಸ ಕಾಣಿ.

Related posts

ಕ್ಯಾನ್ಸರ್ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ..

Publicspot

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot

LPG ತುಂಬಿದ 2 ಹಡಗು ತೆರಳಲು ಬಿಟ್ಟ ಭಾರತದ ಗೆಳಯ ಇರಾನ್‌..!

Publicspot

ಅಮೆರಿಕದ ಮತ್ತೊಂದು F35 ಯುದ್ಧ ವಿಮಾನ ಹೊಡೆದ ಇರಾನ್.. ಯುದ್ಧ ತೀವ್ರ..

Publicspot

ಅಗ್ರಿಗೋಲ್ಡ್​ ಗ್ರಾಹಕರಿಗೆ ಗುಡ್​ ನ್ಯೂಸ್​.. ಹಣ ಬರುತ್ತೆ.. ಹೇಗೆ..?

Publicspot

VICE PRESIDENT ELECTION: NDA ಉಪರಾಷ್ಟ್ರಪತಿ ಅಭ್ಯರ್ಥಿ ಯಾರು ಗೊತ್ತಾ..?

Publicspot