ಇರಾನ್, ಅಮೆರಿಕ – ಇಸ್ರೇಲ್ ಯುದ್ಧ ಶುರುವಾಗಿ 35 ದಿನಗಳು ಆಗಿವೆ. ಆದರೆ ಯುದ್ಧಯಿಂದ ಹೊರ ಬರುವ ಮಾರ್ಗ ಮಾತ್ರ ಅಮೆರಿಕ ಪಾಲಿಗೆ ಕಾಣಿಸುತ್ತಿಲ್ಲ. ಅಮರಿಕ ಏಕಾಏಕಿ ಯುದ್ಧದಿಂದ ಹೊರಬಂದರೆ ಸೋಲುಂಡಂತೆ ಅನ್ನೋದು ನಿಶ್ಚಿತ. ಅದೇ ಕಾರಣಕ್ಕಾಗಿ ಅಮೆರಿಕ ಇರಾನ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡ್ತಿದೆ. ಇರಾನ್ ಸೋಲು ಒಪ್ಪಿಕೊಳ್ಳಬೇಕು, ಆಗ ನಾವು ನಿಮ್ಮ ಜೊತೆಗೆ ಒಳ್ಳೆಯ ವ್ಯಾಪ-ಆರ ಒಪ್ಪಂದಗಳನ್ನು ಮಾಡಿಕೊಳ್ತೇವೆ ಎಂದು ಆಮೀಷ ಒಡ್ಡುವ ಪ್ರಯತ್ನ ಮಾಡ್ತಿದೆ. ಈ ನಡುವೆ ಇರಾನ್ ಮಾತ್ರ ಮಾಡು ಇಲ್ಲವೇ ಮಡಿ, ನಾವು ಪ್ರತೀಕಾರ ತೆಗೆದುಕೊಳ್ಳದೆ ಯುದ್ಧವನ್ನು ನಿಲ್ಲಿಸುವ ಯಾವುದೇ ಆಲೋಚನೆ ಇಲ್ಲ ಎಂದಿದೆ. ಇದ್ರ ಬೆನ್ನಲ್ಲೇ ಅಮೆರಿಕ F -35 ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದೆ.

ಅಮೆರಿಕದ F-35 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್ ಸೇನೆ, ಅಮೆರಿಕಕ್ಕೆ ಬಹುದೊಡ್ಡ ಶಾಕ್ ಕೊಟ್ಟಿದೆ. ಅಮೆರಿಕ ದಾಳಿ ಬಳಿಕ ಪೈಲಟ್‌ಗಳು ಕಾಣೆಯಾಗಿದ್ದರು. ಇದೀಗ ಇರಾನ್‌ನಲ್ಲಿ ಅಮೆರಿಕದ ಓರ್ವ ಪೈಲಟ್ ರಕ್ಷಣೆ ಮಾಡಲಾಗಿದೆ. ಪೈಲಟ್ ರಕ್ಷಿಸಿರುವ ಬಗ್ಗೆ ಇಸ್ರೇಲ್ ಸರ್ಕಾರ ಮಾಹಿತಿ ನೀಡಿದೆ. ಕಾಣೆಯಾದ ಮತ್ತೊಬ್ಬ ಪೈಲಟ್‌ಗಾಗಿ ಹುಡುಕಾಟ ನಡೆಸಲಾಗ್ತಿದೆ. ದಾಳಿ ಬಳಿಕ ಕಾಣೆಯಾಗಿರುವ ಫೈಟರ್ ಜೆಟ್ ಪೈಲಟ್ ಹುಡುಕಿಕೊಟ್ಟರೆ ಬಹುಮಾನ ಕೊಡುವುದಾಗಿ ಇರಾನ್ ಸರ್ಕಾರ ಘೋಷಣೆ ಮಾಡಿದೆ. ಆದರೆ ಅಮೆರಿಕ ಅಂದುಕೊಂಡಂತೆ ಯುದ್ಧ ಮುಕ್ತಾಯದ ಹಂತಕ್ಕೆ ಬಾರದೆ ಯುದ್ಧದ ತೀವ್ರತೆ ಹೆಚ್ಚುತ್ತಿರುವುದು ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಕ್ಕೆ ನುಂಗಲಾರದ ಬಿಸಿ ತುಪ್ಪ ಆಗಿದೆ.

F-35 ವಿಶೇಷತೆ ಏನು ಅನ್ನೋದನ್ನು ನೋಡೋದಾದರೆ ಇಡೀ ವಿಶ್ವದಲ್ಲಿ F-35 ಫೈಟರ್ ಜೆಟ್ಟನ್ನು ಅಮೆರಿಕ ವಾಯುಸೇನೆಯ ‘ಬೆನ್ನೆಲುಬು’ ಎನ್ನಲಾಗುತ್ತದೆ. 100 ಮಿಲಿಯನ್ ಡಾಲರ್ ಬೆಲೆಯ ಅತ್ಯಾಧುನಿಕ ಯುದ್ಧ ವಿಮಾನ ಇದಾಗಿದ್ದು, ಜಾಗತಿಕವಾಗಿ 19 ರಾಷ್ಟ್ರಗಳು F-35 ಫೈಟರ್ ಜೆಟ್ ಖರೀದಿಸಿವೆ. F-35 5ನೇ ತಲೆಮಾರಿನ ಅತಿ ಹೆಚ್ಚು ಬಳಕೆಯಲ್ಲಿರುವ ಯುದ್ಧ ವಿಮಾನ ಆಗಿದೆ. ಈ ವಿಮಾನ ರಹಸ್ಯ ಕಾರ್ಯಾಚರಣೆ ಮಾಡಲು ಅಡ್ವಾನ್ಸ್ ಸೆನ್ಸಾರ್ ವ್ಯವಸ್ಥೆ ಹೊಂದಿದೆ. ಎದುರಾಳಿ ದೇಶದ ರಾಡರ್ ಕಣ್ಣು ತಪ್ಪಿಸಿ ಮುನ್ನುಗ್ಗಿ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದೆ. ಯುದ್ಧ ಸಾಮಗ್ರಿ ತುಂಬಿಕೊಂಡು ನಿಖರವಾಗಿ ಶಸ್ತ್ರ ಸಜ್ಜಿತ ದಾಳಿ ಮಾಡುವ ಸಾಮರ್ಥ್ಯವಿದೆ. ಶತ್ರುಗಳ ಏರ್ ಡಿಫೆನ್ಸ್ ಟ್ರ್ಯಾಕ್‌ನ ಕಣ್ತಪ್ಪಿಸುವ ರೀತಿಯಲ್ಲಿ ಈ ಫೈಟರ್ ಜೆಟ್ ಡಿಸೈನ್ ಮಾಡಲಾಗಿದೆ.
ಎದುರಾಳಿ ಶತ್ರುಗಳ ದಾಳಿ ಬಗ್ಗೆ ಪೈಲಟ್‌ಗೆ ಮೊದಲೇ ಖಚಿತ ಮಾಹಿತಿ ರವಾನೆ ಮಾಡುವ ಸಿಸ್ಟಂ ಹೊಂದಿದೆ. ಈ ಯುದ್ಧ ವಿಮಾನ ಎದುರಾಳಿಗಳ ಮೇಲಿನ ದಾಳಿ ಅಷ್ಟೇ ಅಲ್ಲದೆ ವಾರ್ ಫೈಟಿಂಗ್ ನೆಟ್‌ವರ್ಕ್ ರೀತಿ ಕೆಲಸ ಮಾಡುತ್ತದೆ. ಶತ್ರುಗಳ ಬಗ್ಗೆ ಭೂಸೇನೆ, ನೌಕಾಸೇನೆಗೂ ಮಾಹಿತಿ ರವಾನೆ ಮಾಡುತ್ತದೆ. ಇದೀಗ ಇರಾನ್ F-35 ಮೇಲೆ ದಾಳಿ ಮಾಡಿರೋದ್ರಿಂದ ಅಮೆರಿಕದ ಬೆನ್ನೆಲುಬು ಮುರಿದಂತಾಗಿದೆ. ಇಡೀ ವಿಶ್ವದ ಎದುರು ಅಮೆರಿಕ ಸೇನಾ ಶಕ್ತಿ ಪ್ರದರ್ಶನ ಆಗಿದ್ದು, ಇನ್ಮುಂದೆ ಅಮೆರಿಕವನ್ನು ಯಾರು ಬೇಕಿದ್ದರೂ ಎದುರಿಸಬಹುದು ಅನ್ನೋ ರೀತಿ ಆಗಿದೆ. ಇನ್ನಷ್ಟು ದಿನಗಳು ಯುದ್ಧ ಮುಂದುವರಿದರೆ ಅಮೆರಿಕದ ಮತ್ತಷ್ಟು ಅಸಲಿ ಕಹಾನಿಗಳು ಜಗತ್ತಿಗೆ ಪರಿಚಯ ಆಗುವ ಸಾಧ್ಯತೆಯೂ ಇದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರೋ ಮಹಾಯುದ್ಧ 35ನೇ ದಿನ ಆದರೂ ತಣ್ಣಗಾಗ್ತಿಲ್ಲ. ಅಮೆರಿಕಾ ಹಾಗೂ ಇಸ್ರೇಲ್ ಇರಾನ್ ಮೇಲೆ ಮುಗಿಬಿದ್ದಿದ್ದು, ಇರಾನ್ನ ಕರಾಜ್ನಲ್ಲಿರುವ ಬಿ1 ಸೇತುವೆಯನ್ನೇ ಧ್ವಂಸ ಮಾಡಿದ್ದಾರೆ. ಕ್ಷಿಪಣಿ ಹಾಗೂ ಡ್ರೋಣ್ ದಾಳಿಯ ಪರಿಣಾಮ ಬೃಹತ್ ಸೇತುವೆ ಸಂಪೂರ್ಣ ಹಾಣಿಯಾಗಿದೆ. ಬಿ-1 ಸೇತುವೆ ಸರ್ವನಾಶ ಆಗ್ತಿದ್ದ ಹಾಗೆ ಇರಾನಿಗರು ಅಕ್ಷರಶಃ ಕೆರಳಿ ಕೆಂಡವಾಗಿದ್ದಾರೆ. ಏಟಿಗೆ ಏಟು ಅಂತಾ ಗಲ್ಫ್ ರಾಷ್ಟ್ರಗಳ ಸೇತುವೆ ಮೇಲೆ ಕಣ್ಣಿಟ್ಟಿದ್ದಾರೆ. ಕೊಲ್ಲಿ ರಾಷ್ಟ್ರಗಳ 8 ಪ್ರಮುಖ ಸೇತುವೆಯನ್ನು ಇರಾನ್ ಟಾರ್ಗೆಟ್ ಮಾಡಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಬೆಂಕಿ ಮಳೆ ಅಪ್ಪಳಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಒಟ್ಟಾರೆ ಯುದ್ಧದ ತೀವ್ರತೆ ಹೆಚ್ಚಾಗ್ತಿದ್ದು, ಅನಾಹುತ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆಯಿದೆ.


