The Public Spot
ರಾಜಕೀಯ

ಒಂದು ರಾತ್ರಿ ನಿದ್ರೆ ಕೆಡಿಸಿದ ಕುಮಾರಸ್ವಾಮಿ..? ಬೆಳಗ್ಗೆ 11 ಗಂಟೆ..

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್​ ವಿಡಿಯೋ ಅಪ್​ಲೋಡ್​ ಆಗಿದ್ದು, ಕುಮಾರಸ್ವಾಮಿ ಆಪ್ತನಿಂದ ಅನ್ನೋದು ಕರ್ನಾಟಕ ಸರ್ಕಾರದ ತನಿಖೆಯಲ್ಲಿ ಬಯಲಾಗಿರುವ ಸ್ಫೋಟಕ ಸಂಗತಿ. ಆದರೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ವಿಡಿಯೋ ಅಪ್​ಲೋಡ್​ ಮಾಡಿದವರ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ಸ್ಟಿಂಗ್​ ಮಾಡಿದ್ದು ಯಾಕೆ..? ಸ್ಟಿಂಗ್​ ಮಾಡಿಸಿದ್ದು ಯಾರು ಅನ್ನೋ ಬಗ್ಗೆ ತನಿಖೆ ನಡೆಯುತ್ತದೆ ಅನ್ನೋ ನಂಬಿಕೆ ಯಾರಲ್ಲೂ ಕಾಣ್ತಿಲ್ಲ. ಆದರೆ ಕಮಿಷನರ್​ ಹೇಳಿಕೆ ವಿಚಾರವಾಗಿ ರಾಜಕೀಯ ಚರ್ಚೆ ಜೋರಾಗಿದೆ. ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅಧಿಕಾರಿಗಳು ತನಿಖೆ ಮಾಡಬೇಕು, ಮಾಡಲಿ. ಕುಮಾರಸ್ವಾಮಿ ಮನೆಯಲ್ಲೇ ಆಗಿತ್ತು ಅನ್ನೋದು ತಪ್ಪು. ವಿಡಿಯೋ ಹಿಂದೆ ಇರೋರ ಬಗ್ಗೆ ಹೇಳಿ ಅಂತ ಜೋಶಿ ಒತ್ತಾಯ.

ಜಾಲತಾಣಕ್ಕೆ ಸ್ಟಿಂಗ್ ಅಪ್​ಲೋಡ್​ ಮಾಡಿದ್ಯಾರು..? ಅನ್ನೋ ಬಗ್ಗೆಯೂ ತನಿಖೆ ಆಗಬೇಕು ಅನ್ನೋದು ಸತ್ಯ. ಆದರೆ ಅದಕ್ಕೂ ಮೊದಲು ಸ್ಟಿಂಗ್​ ಮಾಡಿಸಿದ್ಯಾಕೆ..? ಆ ಸ್ಟಿಂಗ್​ ಮಾಡಿದ್ರ ಉದ್ದೇಶ ಏನು..? ಸ್ಟಿಂಗ್​ ಮಾಡಿಸಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ಕೈಲಿ ಅಕ್ರಮ ಕೆಲಸಗಳನ್ನು ಏನಾದರೂ ಮಾಡಿಸಿದ್ದಾರಾ..? ಅನ್ನೋ ಬಗ್ಗೆ ತನಿಖೆ ನಡೆಯಬೇಕು. ಆರೋಪಿಗಳು ಮಾಹಿತಿ ಕೊಟ್ಟ ನಂತರ ಜಾಲತಾಣದಲ್ಲಿ ಅಪ್​ಲೋಡ್​​ ಮಾಡಿದ ಉದ್ದೇಶ ಏನು..? ಹಣಕ್ಕಾಗಿ ಏನಾದ್ರೂ ಬ್ಲ್ಯಾಕ್​ ಮೇಲ್​ ಮಾಡಿದ್ರಾ ಅನ್ನೋ ಬಗ್ಗೆಯೂ ತನಿಖೆ ನಡೆದರೆ ಕರ್ನಾಟಕ ಪೊಲೀಸರ ಬಗ್ಗೆ ಹೆಮ್ಮೆ ಆಗ್ತಿತ್ತು. ಆದರೆ ಪೊಲೀಸ್ರು ಮಾತ್ರ ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಮಾಡ್ತಿದ್ದಾರೆ. ​

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಇದರ ಬಗ್ಗೆ ಇಂದು ಸಂಪೂರ್ಣ ಮಾಹಿತಿ ಕೊಡ್ತೀನಿ. ಸ್ಟಿಂಗ್ ಆಪರೇಷನ್ ತಿರುಗುಬಾಣ ಯಾರಿಗೆ ಅಂತಾ ಹೇಳ್ತೀನಿ. ಯಾರೂ ಗಾಬರಿ ಆಗಬೇಕಿಲ್ಲ ಎಂದಿದ್ದಾರೆ. ಇನ್ನೂ ಯಾರೀ ಅದು ಕಮಿಷನರ್..? ಎಂದಿರುವ ಕುಮಾರಸ್ವಾಮಿ, ಅವರು ಪೊಲೀಸ್ ಕಮಿಷನರಾ..? ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ. ಜಾಗ ಉಳಿಸಿಕೊಳ್ಳೋಕೆ‌ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಿದೆ. ತಿರುಗುಬಾಣ ಯಾರಿಗೆ ಅಂತಾ ಹೇಳ್ತೀನಿ. ತನಿಖೆ ಯಾವ ಮಟ್ಟಕ್ಕೆ ಹೋಗ್ತಾ ಇದೆ. ಈ ಸರ್ಕಾರದ ಆಡಳಿತ ಯಾವ ರೀತಿ ಇದೆ ಹೇಳ್ತೀನಿ. ಈ‌ ಕುಮಾರಸ್ವಾಮಿಯನ್ನ ಈ‌ ಸರ್ಕಾರ, ಈ ಅಧಿಕಾರಿಗಳು ಟಚ್ ಮಾಡೋಕೆ ಆಗಲ್ಲ. ಕುಮಾರಸ್ವಾಮಿಯನ್ನ ಅಷ್ಟು ಸುಲಭವಾಗಿ ಇವರು ಹೆದುರಿಸಲು ಆಗಲ್ಲ. ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡ್ತಿದೆ ಗೊತ್ತಿದೆ ಎಂದಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ನಮ್ಮ ಪಕ್ಷದವರೆ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಇದು ಟ್ರೈಲರ್ ಮಾತ್ರ ಅಂತಾ ಹೇಳಿದ್ದಾರೆ. ಇದೆಲ್ಲಾ ಯಾವ ಟ್ರೈಲರ್, ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ನಾನು ಡಿಟೈಲ್ ಆಗಿ ಹೇಳ್ತೀನಿ ಎಂದಿದ್ದಾರೆ. ಈ ಹೇಳಿಕೆ ಮೂಲಕ ಸಾಕ್ಷಟು ಜನರ ನಿದ್ರೆಗೆಡಿಸಿದ್ದಾರೆ. ಕುಮಾರಸ್ವಾಮಿ ಮನೆಯಲ್ಲೇ ಮೊಬೈಲ್​ ಬದಲಾವಣೆ ಆಗಿದೆ. ದೆಹಲಿಯ ಸರ್ಕಾರಿ ನಿವಾಸಕ್ಕೆ ಆರೋಪಿಗಳು ಬಂದಿದ್ದರು ಅನ್ನೋ ಮಾಹಿತಿಯನ್ನೂ ಕೊಟ್ಟಿದ್ದಾರೆ. ಆದರೂ ಸೊಪ್ಪು ಹಾಕದ ಕುಮಾರಸ್ವಾಮಿ, ಇವತ್ತು ಬೆಳಗ್ಗೆ 11 ಗಂಟೆಗೆ ಮುಹೂರ್ತ ಫಿಕ್ಸ್​ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಬರ್ತೀನಿ ಅನ್ನುತ್ತಿದ್ದ ಹಾಗೆ ಅದೆಷ್ಟೋ ಜನರ ನಿದ್ರೆ ಹಾಳಾಗಿದೆ. ಇವತ್ತು ಕುಮಾರಸ್ವಾಮಿ ಏನ್​ ಹೇಳ್ತಾರೋ ಅನ್ನೋಈ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.

Related posts

ಉತ್ತರ ಬೇಕಾದವರು ಈ ಪ್ರಶ್ನೆಗಳಿಗೆ ಉತ್ತರಿಸಿ.. ಸಂತೋಷ್​ ಲಾಡ್ ಸವಾಲು..!​​

Publicspot

ದಾವಣಗೆರೆಯಲ್ಲಿ ಕುಟುಂಬ ರಾಜಕಾರಣ ಸೋಲಿಸಿ ಅಂದ್ರಾ ಸಿಎಂ ಸಿದ್ದರಾಮಯ್ಯ ..?

Publicspot

Hello Karge Here; ಬೆಳಗ್ಗೆ ಮನೆಗೆ ಬನ್ನಿ ಮಾತನಾಡ್ಬೇಕು..! ಸಿಎಂ ಮನವೊಲಿಸ್ತಾರಾ ಖರ್ಗೆ..?

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

RSS ನೋಂದಣಿ ಮಾಡಿಸುವ ವಿಚಾರ.. ಹೋಂ ಮಿನಿಸ್ಟರ್‌ ಮಾತಿಗೆ ಆಕ್ರೋಶ..

Publicspot

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot