ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಮೊಬೈಲ್ ಹಸ್ತಾಂತರ ಆಗಿದೆ. ವಿಡಿಯೋ ಲಿಂಕ್ ಶೇರ್ ಮಾಡಲು ಅಲ್ಲೇ ಸೂಚನೆ ಸಿಕ್ಕಿತ್ತು ಅನ್ನೋದು ಬೆಂಗಳೂರು ಪೊಲೀಸ್ ಆಯುಕ್ತರ ಮಾಹಿತಿ. ಇದೇ ಮಾತನ್ನು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪುನರುಚ್ಛಾರ ಮಾಡಿದ್ದರು. ಆ ಬಳಿಕ ಕುಮಾರಸ್ವಾಮಿ ಇಬ್ಬರಿಗೂ ತಿರುಗೇಟು ನೀಡುವ ಕೆಲಸ ಮಾಡಿದ್ರು. ಇದೆಲ್ಲಾ ರಾಜಕೀಯ ಮೇಲಾಟ, ರಾಜಕೀಯ ಚರ್ಚೆ ಅನ್ನಬಹುದು. ಆದರೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಕೂಡ ಕುಮಾರಸ್ವಾಮಿ ಮಾತನ್ನೇ ಪುನುರುಚ್ಚರಿಸಿದ್ದಾರೆ.
ದೆಹಲಿಯಲ್ಲಿ ಸ್ಟಿಂಗ್ ವಿಚಾರವಾಗಿ ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಕುಮಾರಸ್ವಾಮಿ ದೆಹಲಿ ಮನೆಯಲ್ಲಿ ವಿಡಿಯೋ ಲಿಂಕ್ ಶೇರ್ ಆಗಿದೆ. ಆದರೆ ನಮ್ಮ ಪ್ರಶ್ನೆ ಇರುವುದು ಯಾರದ್ದು ಲಿಂಕ್ ಇದ್ಯೋ ಇಲ್ವೋ ಅನ್ನೋದು ಪ್ರಶ್ನೆ ಅಲ್ಲ. ನನ್ನ ಪ್ರಶ್ನೆ ಇಷ್ಟೇ. ಅಸಹ್ಯವಾದ ಕೆಲಸ ಸ್ಟಿಂಗ್ ಮಾಡಿದ್ದು ಯಾರು ಅಂಥ..? ಸೂತ್ರದಾರರು ಯಾರು ಅನ್ನೋದು..? ಪಾತ್ರಧಾರಿಗಳು ಬಹಳ ಜನ ಇರ್ತಾರೆ. ಆದರೆ ಸೂತ್ರದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅನ್ನೋದು ನನ್ನ ಒತ್ತಾಯ ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದೂ ಇದೇ ಒತ್ತಾಯ ಆಗಿರುತ್ತದೆ. ವಿಡಿಯೋ ಶೇರ್ ಮಾಡಿದ್ಯಾರು..? ಅನ್ನೋದು ಮುಖ್ಯ ಅಲ್ಲವೇ ಅಲ್ಲ. ಸಿದ್ದರಾಮಯ್ಯ ಮಾನ ಹರಾಜು ಹಾಕಿದ್ರು ಅಂತಾ ಕೆಲವರು ಹೇಳಬಹುದು. ಆದರೆ ಅದಕ್ಕಿಂತಲೂ ಮುಖ್ಯವಾಗಿ ವಿಡಿಯೋ ಮಾಡಿದ ಉದ್ದೇಶವೇನು..? ವಿಡಿಯೋ ಮಾಡಿದ್ಯಾಕೆ..? ಅನ್ನೋದನ್ನು ಪತ್ತೆ ಮಾಡಬೇಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದವರೇ ವಿಡಿಯೋ ಮಾಡಿದ್ದು ಅಂತಾ ಬಹಿರಂಗವಾಗಿ ಹೇಳಿದ ಬಳಿಕ ಪಕ್ಷದಿಂದ ಮಹಿಳಾ ನಾಯಕಿಯ ಉಚ್ಛಾಟನೆ ಮಾಡಲಾಗಿದೆ. ಅದಕ್ಕೂ ಮೊದಲು ಆ ಬಗ್ಗೆ ಚಕಾರ ಎತ್ತಿರಲಿಲ್ಲ.

ಇನ್ನೂ ವಿಡಿಯೋ ಅಪ್ ಲೋಡ್ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯಗೆ ಅನುಕೂಲವೇ ಆಗಿದೆ. ಅದೊಂದು ವಿಡಿಯೋ ಇಟ್ಕೊಂಡು ಮುಂದೆಯೂ ಬೆದರಿಸುವ ಕೆಲಸ ಮಾಡುವ ಸಾಧ್ಯತೆ ಇತ್ತು. ಇದೀಗ ವಿಡಿಯೋ ರಿಲೀಸ್ ಆಗಿದೆ. ಆ ವಿಡಿಯೋ ಮಾಡಿದ್ಯಾಕೆ..? ಮಾಡಿಸಿದ್ಯಾರು..? ವಿಡಿಯೋ ಹಿಂದಿರುವ ಮಾಸ್ಟರ್ ಮೈಂಡ್ ಯಾರು..? ಅನ್ನೋ ಬಗ್ಗೆ ತನಿಖೆ ಮಾಡಿಸುವ ಅಗತ್ಯವಿದೆ. ವಿಡಿಯೋ ಮಾಡಿದ್ಯಾರು ಅನ್ನೋದನ್ನು ಬಿಟ್ಟು ವಿಡಿಯೋ ಅಪ್ಲೋಡ್ ಮಾಡಿದ್ಯಾರು..? ಅಂತಾ ಹುಡುಕೋದ್ರಲ್ಲಿ ಅರ್ಥವೇ ಇಲ್ಲದಂತಾಗಿದೆ. ಮರದ ಬುಡವನ್ನು ಬಿಟ್ಟು ತುದಿಯಿಂದ ನಾವು ಹುಡುಕ್ತೇವೆ ಅಂದ್ರೆ ಏನರ್ಥ ಅಲ್ವಾ..? ಇದೇ ಪ್ರಶ್ನೆಯನ್ನು ಕುಮಾರಸ್ವಾಮಿ ಕೇಳಿದ್ದು, ಅದೇ ಪ್ರಶ್ನೆಯನ್ನು ಕೆಪಿಸಿಸಿ ಅಧ್ಯಕ್ಷರೂ ಕೇಳ್ತಿರೋದು.


