The Public Spot
ಅಪರಾಧ

9 ಜನರ ಹಿಂದೆ ಒಬ್ಬನೇ ಮಗ.. ಕಾಡಿ ಬೇಡಿ ಕರೆತಂದ ತಾಯಿ.. ಕೊಂದೇ ಬಿಟ್ಟ ಮಗ

ತಾಯಿ ಅಂದ್ರೆ ಕಣ್ಣಿಗೆ ಕಾಣುವ ದೇವರು ಅನ್ನೋದು ಎಲ್ಲರ ಮಾತು. ಆದರೆ ಇಲ್ಲೊಬ್ಬ ಕುಲಪುರುಸ 9 ಜನ ಹೆಣ್ಣು ಮಕ್ಕಳ ಬಳಿಕ ಹುಟ್ಟಿದ ಏಕೈಕ ಗಂಡು ಮಗ ತನ್ನ ತಾಯಿಯನ್ನೇ ಕೊಂದು ಮುಗಿಸಿದ್ದಾನೆ. ಹತ್ತಾರು ಹರಕೆ ಹೊತ್ತು ಮಗನನ್ನು ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಗೆ ಈತ ಚಟ್ಟ ಕಟ್ಟಿದ್ದಾನೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹರಕನಾಳ ಗ್ರಾಮದ ನಿವಾಸಿ ಬುಳ್ಳಮ್ಮ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದ ಮಗಳ ಮನೆಯಲ್ಲಿ ವಾಸ ಆಗಿದ್ರು. ಒಬ್ಬನೇ ಮಗ ಅಂತಾ ತುಂಬಾ ಪ್ರೀತಿಯಿಂದ ಸಾಕಿದ್ದರು. ತಮ್ಮ ಕಷ್ಟ ಏನಿದ್ರೂ ನಮಗೆ ಸಾಕು ಮಗನಿಗೆ ಬೇಡ ಅಂತಾ ಕಷ್ಟವನ್ನೇ ತೋರಿಸಿರ್ಲಿಲ್ಲ. ದಾರಿ ತಪ್ಪಿದ್ದ ಮಗ, ಕಿಡಿಗೇಡಿಯಾಗಿ ಬದಲಾಗಿದ್ದ.

ಕುಡಿತದ ದಾಸನಾಗಿದ್ದ ಹನುಮಂತ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಕೊಲೆ ಕೇಸ್‌ ಒಂದರಲ್ಲಿ ಸಿಕ್ಕಿಕೊಂಡಿದ್ದವನು ಕಳೆದ 7 ವರ್ಷದಿಂದ ಜೈಲಲ್ಲೇ ಕಣ್ಣೀರಿಡ್ತಿದ್ದ. ಇದ್ದ ಒಬ್ಬ ಮಗ ಜೈಲು ಸೇರ್ತಿದ್ದಂತೆ ಹೆತ್ತ ಕರಳು ಚುರ್​ ಅಂದಿತ್ತು. ಮಗನ ನೆನಪಲ್ಲೇ ದಿನ ದೂಡುತ್ತಿದ್ದ ಬುಳ್ಳಮ್ಮ, ಮಗನನ್ನ ಜಾಮೀನಿನ ಮೇಲೆ ಕರ್ಕೊಂಡು ಬರ್ಬೇಕು ಅಂತಾ ಏಳೆಂಟು ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಹೀಗಾಗಿ ಮೂರು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಹನುಮಂತ. ಮನೆ ಮಗ ಮನೆಗೆ ವಾಪಸ್‌ ಬಂದ ಅಂದುಕೊಂಡಿದ್ದ ತಾಯಿಗೆ ಈತನೇ ಯಮನಾಗಿದ್ದಾನೆ.

ಮಗಳ ಮನೆಯಲ್ಲಿದ್ರೂ ಬಿಡದ ಪಾಪಿ ಹನುಮಂತ, ಹೆತ್ತವಳ ಜೀವ ಹಿಂಡೋದಕ್ಕೆ ಶುರು ಮಾಡಿದ್ದ. ಕುಡಿಯೋದಕ್ಕೆ ಕಾಸು ಕೊಡು ಅಂತಾ ತಾಯಿಗೆ ತುಂಬಾ ಕಾಟ ಕೊಡ್ತಿದ್ದ. ಮೊನ್ನೆ ಇದೇ ವಿಷ್ಯಕ್ಕೆ ಜಗಳವಾಗ್ತಿತ್ತು. ಸಿಟ್ಟಿಗೆದ್ದ ಮಗ ಮರದ ತುಂಡಿನಿಂದ ತಾಯಿಗೆ ಒಂದೇ ಒಂದು ಏಟು ಕೊಟ್ಟಿದ್ದ. ತಲೆಗೆ ಬಲವಾದ ಹೊಡೆತ ಬೀಳ್ತಿದ್ದಂತೆ ಅಲ್ಲೇ ಬಿದ್ದ ವೃದ್ಧೆ ಬುಳ್ಳಮ್ಮ, ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಯಾವಾಗ ತಾಯಿ ಸಾವನ್ನಪ್ಪಿದ ವಿಚಾರ ಗೊತ್ತಾಯ್ತೋ ಖದೀಮ, ಮೆಲ್ಲನೆ ಅಕ್ಕನ ಬಳಿ ಹೋಗಿ, ಅಮ್ಮ ಸಾವನ್ನಪ್ಪಿದ್ದಾಳೆ. ಆದಷ್ಟು ಬೇಗ ಅಂತ್ಯಕ್ರಿಯೆ ಮಾಡೋಣ ಎಂದಿದ್ದಾನೆ. ಮಗಳು ಮನೆಯೊಳಗೆ ಬಂದು ನೋಡ್ತಿದ್ದಂತೆ ರಕ್ತದ ಕೋಡಿಯೇ ಹರಿದಿರೋದು ಗೊತ್ತಾಗಿದೆ. ತಾಯಿ ಸ್ಥಿತಿ ಕಂಡು ಕಿರುಚಾಡ್ತಿದ್ದಂತೆ ಅಕ್ಕಪಕ್ಕದವ್ರೆಲ್ಲಾ ಬಂದು, ಪಾಪಿ ಮಗನಿಗೆ ಧರ್ಮದೇಟು ಕೊಟ್ಟಿದ್ದಾರೆ.

ತಾಯಿಯನ್ನು ಕೊಲೆ ಮಾಡಿದ ಪಾಪಿ ಮಗನಿಗೆ ಊರಿನ ಜನರೆಲ್ಲಾ ಸೇರ್ಕೊಂಡು ಸರಿಯಾಗಿಯೇ ಬಾರಿಸಿದ್ದಾರೆ. ಪೊಲೀಸ್ರು ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ. ಆದರೆ ಸರಿಯಾಗಿ ಕಜ್ಜಾಯ ತಿಂದಿದ್ನಲ್ಲ ಅಂತಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಷ್ಟೆಲ್ಲಾ ಆದ್ಮೇಲೂ ಕುಡುಕ ಮಗ ಕಾಲ್ಮೇಲೆ ಕಾಲು ಹಾಕೊಂಡು ಮಲಗಿ ಪೋಸ್​ ಕೊಟ್ಟಿದ್ದಾನೆ. ಒಂದು ಕೈಯಲ್ಲಿ ಖಾಕಿ ಕೋಳ, ಇನ್ನೊಂದು ಕೈಗೆ ಡಾಕ್ಟರ್​ ಗ್ಲೂಕೋಸ್‌ ಹಾಕಿದ್ರೂ ಧಿಮಾಕು ಮಾತ್ರ ಕಡಿಮೆ ಆಗಿಲ್ಲ. ಕೊಲೆ ಕೇಸ್​ನಲ್ಲಿ ನನ್ನ ಮಗ ಜೈಲಿನಲ್ಲಿದ್ದ ಅಂತಾ ತಾಯಿ ಲಕ್ಷ ಲಕ್ಷ ಖರ್ಚು ಮಾಡಿ ಕರ್ಕೊಂಡು ಬಂದ್ರೆ ಈತ ತಾಯಿಯನ್ನೇ ಕೊಂದು ಮತ್ತೆ ಜೈಲು ಸೇರಿದ ಅನ್ನಬಹುದು.

Related posts

Darshan Request to Poisoning: ವಿಷ ಕೊಡಲು ಆದೇಶ ಮಾಡಿ.. ನಟ ದರ್ಶನ್ ಮನವಿ

Publicspot

Hassan Death in birthday; ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ ವಿದ್ಯಾರ್ಥಿ.. ಸರ್ಕಾರದಿಂದ ಪರಿಹಾರ ಘೋಷಣೆ..

Publicspot

30 ಲಕ್ಷ ಚಿನ್ನಾಭರಣ ಜೊತೆಗೆ ನಾಪತ್ತೆ.. ಕುಣಿಗಲ್‌ನಲ್ಲಿ ಮಹಿಳೆ ಪತ್ತೆ ಆಗಿದ್ಹೇಗೆ..?

Publicspot

Murder; ಮರ್ಯಾದೆಗಾಗಿ 7 ತಿಂಗಳ ಗರ್ಭಿಣಿ ಮಗಳ ಗರ್ಭ ಸೀಳಿದ ಅಪ್ಪ..!

Publicspot

ಗಣೇಶ ಮೂರ್ತಿಗೆ ಚಪ್ಪಲಿ ಹಾರ.. ಹಿಂದೂ ಸಮಾಜದ ಆಕ್ರೋಶ.. ಮಹಿಳೆ ಬಂಧನ

Publicspot

ವಯಸ್ಸಿನ ಅಂತರ.. ಹೆಂಡತಿ ಪ್ರೇಮದಾಟ.. ಕೊಲೆಗಾರ ಗಂಡ..

Publicspot