The Public Spot
ರಾಜ್ಯ

ಒಳ ಮೀಸಲಾತಿ ನಡುವೆ ಸುಪ್ರೀಂನಲ್ಲಿ ಆದಾಯ ಆಧಾರಿತ ಮೀಸಲಾತಿ ಸದ್ದು..!

ರಾಜ್ಯದಲ್ಲಿ ಒಳ ಮೀಸಲಾತಿ ವಿಚಾರ ಭಾರೀ ತಲ್ಲಣ ಶುರುವಾಗಿದೆ. ಕಾಂಗ್ರೆಸ್‌ ಸರ್ಕಾರ ಒಳ ಮೀಸಲಾತಿ ಕೊಡುವ ಉದ್ದೇಶದಿಂದ ಸಮೀಕ್ಷೆಯನ್ನೂ ಮಾಡಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿಯಿಂದ ವರದಿಯನ್ನೂ ಪಡೆದುಕೊಂಡಿದೆ. ಆದರೆ ಈಗಾಗಲೇ ಕ್ಯಾಬಿನೆಟ್‌ನಲ್ಲಿ ಮಂಡನೆ ಮಾಡಲಾಗಿದೆ. ಆದರೆ ಕಾಂಗ್ರೆಸ್‌ನ ದಲಿತ ಸಮುದಾಯದ ಸಚಿವರಲ್ಲೇ ಅಪಸ್ವರ ಕೇಳಿ ಬಂದಿದೆ ಎನ್ನುವ ಮಾತುಗಳ ನಡುವೆ ಆಗಸ್ಟ್‌ 16ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ನಡುವೆ ವರದಿ ಅವೈಜ್ಞಾನಿಕ ಎಂದು ಭೋವಿ ಸಮುದಾಯದ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮೀಸಲಾತಿ ವಿಚಾರದಲ್ಲೂ ಅಪಸ್ವರ ಕೇಳಿ ಬಂದಿದೆ. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡುವುದು ಅನಿಶ್ಚಿತತೆಯಿಂದ ಕೂಡಿದೆ. ಈ ನಡುವೆ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿ ವಿಚಾರವಾಗಿ PIL ಒಂದು ಸಲ್ಲಿಕೆ ಆಗಿದೆ.

SC, ST ಮೀಸಲಾತಿ ನೀಡುವುದಕ್ಕೆ ಆದಾಯವನ್ನು ಪರಿಗಣಿಸಬೇಕು ಎಂದು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆ ಆಗಿದೆ. ಆದಾಯ ಆಧಾರಿತ ಮೀಸಲಾತಿ ವ್ಯವಸ್ಥೆ ಜಾರಿ ಮಾಡಲು ಸರ್ಕಾರಕ್ಕೆ ಸೂಚನೆ ಕೊಡಬೇಕು ಎಂದು ಸಲ್ಲಿಕೆ ಆಗಿರುವ PIL ಅರ್ಜಿಯನ್ನು ಸ್ವೀಕಾರ ಮಾಡಿರುವ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. PIL ನಲ್ಲಿ ಮಾಡಿರುವ ಮನವಿ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸೂಚನೆ ಕೊಡಲಾಗಿದೆ. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ನೋಟಿಸ್‌ಗೆ ಏನು ಉತ್ತರ ಕೊಡಲಿದೆ ಅನ್ನೋದರ ಆಧಾರದಲ್ಲಿ ಮೀಸಲಾತಿ ನಿರ್ಧಾರ ಆಗುವ ಸಾಧ್ಯತೆಯೂ ಇದೆ. ಆದಾಯ ಆಧಾರಿತ ಮೀಸಲಾತಿ ಕುರಿತು ರಾಮಶಂಕರ್ ಪ್ರಜಾಪತಿ ಮತ್ತು ಯಮುನಾ ಪ್ರಸಾದ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿದೆ.

SC, ST ಸಮುದಾಯದಲ್ಲೂ ಶ್ರೀಮಂತರು ಇದ್ದು, ಅವರಿಗೆ ಮೀಸಲಾತಿ ಅವಶ್ಯಕತೆ ಇಲ್ಲ. SC, ST ಸಮುದಾಯ ಅನ್ನೋ ಕಾರಣಕ್ಕೆ ಮೀಸಲಾತಿ ಸಿಗಬಾರದು ಅನ್ನೋದು ಅರ್ಜಿದಾರರ ವಾದ. ನಿಜವಾಗಲೂ ಈ ರೀತಿಯ ಆದಾಯ ಆಧರಿತ ಮೀಸಲಾತಿ ಭಾರತಕ್ಕೆ ಅತ್ಯವಶ್ಯಕವಾಗಿದೆ. ಕಾರಣವೇನೆಂದರೆ SC, ST ಸಮುದಾಯದ ಜನರಲ್ಲಿ ಶ್ರೀಮಂತರಾದವರೇ ಮೀಸಲಾತಿ ಪಡೆದುಕೊಂಡು ಉನ್ನತ ಹುದ್ದೆಗಳಿಗೆ ಹೋದರೆ ಆ ಸಮುದಾಯಗಳು ಉದ್ದಾರ ಆಗುವುದಿಲ್ಲ. ಯಾರು ತೀರ ಹಿಂದುಳಿದಿರುತ್ತಾರೋ ಅವರಿಗೆ ಮೀಸಲಾತಿಯ ಲಾಭ ಸಿಗಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಮೀಸಲಾತಿ ಹಂಚಿಕೆಯಲ್ಲಿ ಉಳ್ಳವರು ಹಾಗು ಹಿಂದುಳಿದವರನ್ನು ಪತ್ತೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಜಸ್ಟೀಸ್‌ ಸೂರ್ಯಕಾಂತ್‌ ಹಾಗೂ ಜಸ್ಟೀಸ್‌ ಜಾಯ್‌ಮಲ್ಯ ಬಗ್ಚಿ ಅವರ ಪೀಠ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ.

ನ್ಯಾಯಮೂರ್ತಿಗಳು ಅರ್ಜಿ ಸ್ವೀಕಾರ ಮಾಡಿ ಕೇಂದ್ರಕ್ಕೆ ನೋಟಿಸ್‌ ನೀಡಿದ ಬಳಿಕ ಸಾಕಷ್ಟು ವಿರೋಧ ಎದುರಿಸಲು ಸಜ್ಜಾಗುವಂತೆ ಅರ್ಜಿದಾರರ ಪರ ವಕೀಲರಿಗೆ ತಿಳಿಸಿದ್ದಾರೆ. ಈ ವೇಳೆ ಮಾತನಾಡಿರುವ ಅರ್ಜಿದಾರರ ಪರ ವಕೀಲರಾದ ರೀನಾ ಎಸ್‌ ಸಿಂಗ್‌, ನಾವು ಮೀಸಲಾತಿಯಲ್ಲಿ ಪರ್ಸಂಟೇಜ್‌ ಸೇರಿದಂತೆ ಯಾವುದನ್ನೂ ಡಿಸ್ಟರ್ಬ್‌ ಮಾಡುತ್ತಿಲ್ಲ. ಬದಲಿಗೆ ಆದಾಯದ ಆಧಾರದಲ್ಲಿ ಮೀಸಲಾತಿ ಸೌಲಭ್ಯ ಸಿಗುವಂತೆ ಆಗಬೇಕು ಎಂದು ಮನವಿ ಮಾಡಿದ್ದೇವೆ ಅಷ್ಟೆ ಎಂದಿದ್ದಾರೆ. ಇನ್ನು ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮೀಸಲಾತಿ ಕೇವಲ ಉಳ್ಳವರ ಪಾಲಾಗುತ್ತಿದೆ. ಸಿಗಬೇಕಾದ ಜನಸಾಮಾನ್ಯರಿಗೆ ಮೀಸಲಾತಿಯ ಲಾಭ ಸಿಗ್ತಿಲ್ಲ. ಯಾವಾಗ ಆದಾಯದ ಆಧಾರದಲ್ಲಿ ಮೀಸಲಾತಿ ನೀಡಿದಾಗ ತಳಮಟ್ಟದಲ್ಲಿ ಇರುವ SC, ST ಸಮುದಾಯದ ಜನರಿಗೆ ಮೀಸಲಾತಿ ಸಿಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಕೇಂದ್ರ ಸರ್ಕಾರದ ನಿರ್ಧಾರ ಏನು ಅನ್ನೋ ಬಗ್ಗೆ ಉತ್ತರ ಕೊಟ್ಟ ಬಳಿಕ ಕೋರ್ಟ್‌ ತನ್ನ ನಿಲುವು ಏನು ಅನ್ನೋ ಬಗ್ಗೆ ಉತ್ತರ ನೀಡಲಿದೆ.

Related posts

No Rain Only Flood; ಉತ್ತರ ಕರ್ನಾಟಕದಲ್ಲಿ ಮಳೆಯಿಲ್ಲ.. ಪ್ರವಾಹ ಮಾತ್ರ.. ಕಾರಣ ನಮ್ಮದೇ ಸರ್ಕಾರ..!!

Publicspot

RSSಗೆ ಅಂಕುಶ ಯತ್ನ.. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆ..!

Publicspot

ಹಾಸನಾಂಬೆ ದರ್ಶನಕ್ಕೆ ಹೋಗುವ ಮುನ್ನ ಹುಷಾರು.. ಜನಸಂಖ್ಯೆ ನಿಯಂತ್ರಣಕ್ಕೆ ಪರದಾಟ..!

Publicspot

ಕಾಡು ಪ್ರಾಣಿಗಳು – ಮಾನವ ಸಂಘರ್ಷ ಹೆಚ್ಚಳ.. ಸರ್ಕಾರದ ಮುಂದಿನ ನಡೆ ಏನು..?

Publicspot

ಹಿರಿಯ ಕಾರ್ಮಿಕ ಹೋರಾಟಗಾರ ಅನಂತ್‌ ಸುಬ್ಬರಾವ್‌ ಇನ್ನಿಲ್ಲ.. ದೇಹವೂ ದಾನ..

Publicspot

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ.. ಯಾವ ಯಾವ ಜಿಲ್ಲೆಯಲ್ಲಿ ಹೆಚ್ಚು..?

Publicspot