The Public Spot
ಅಂಕಣ

ಧರ್ಮಸ್ಥಳ ಅಸ್ಥಿ ಶೋಧ.. ಏನೆಲ್ಲಾ ಆಗ್ತಿದೆ..? ಯಾರು ಏನಂದ್ರು..?

ಧರ್ಮಸ್ಥಳದಲ್ಲಿ ಅಸ್ಥಿಪಂಜರ ಆಪರೇಷನ್‌ ಮುಂದುವರಿದಿದೆ. ಪಾಯಿಂಟ್‌​​ ನಂಬರ್​ 13ರಲ್ಲಿ 2 ಹಿಟಾಚಿಗಳ ಮೂಲಕ ಉತ್ಖನನ ಕಾರ್ಯ ಮಾಡಲಾಗ್ತಿದೆ. 15 ಅಡಿಗೂ ಹೆಚ್ಚು ಆಳಕ್ಕೆ ಅಗೆದರೂ ಅಸ್ಥಿಪಂಜರದ ಕುರುಹು ಕೂಡ ಪತ್ತೆ ಆಗಿಲ್ಲ. ಆಳಕ್ಕೆ ಮಣ್ಣು ಅಗೆದಷ್ಟು ನೀರು ಹೆಚ್ಚಾಗುತ್ತಲೇ ಸಾಗಿತ್ತು. ಕಾರ್ಯಾಚರಣೆಗೆ ನೀರು ಅಡ್ಡಿಯಾಯ್ತು ಅನ್ನೋ ಕಾರಣಕ್ಕೆ ಮೋಟಾರ್‌ ಅಳವಡಿಸಿ ಗುಂಡಿಯಲ್ಲಿದ್ದ ನೀರನ್ನು ಹೊರಕ್ಕೆ ತೆಗೆಯಲಾಯ್ತು. ಕೊನೆಗೆ ಏನು ಸಿಗದಿದ್ದಾಗ ಅಗೆದಿದ್ದ ಗುಂಡಿಯನ್ನ ಮುಚ್ಚಲಾಯ್ತು. ಉತ್ಖನನ ಸ್ಥಳಕ್ಕೆ SIT ಮುಖ್ಯಸ್ಥ ಪ್ರಣವ್ ಮೊಹಂತಿ ಆಗಮಿಸಿ ಖುದ್ದು ಪರಿಶೀಲನೆ ನಡೆಸಿದ್ರು. ಪಾಯಿಂಟ್ ನಂಬರ್‌ 13ರಲ್ಲಿ ನಡೀತಿರೊ ಉತ್ಖನನ ಪ್ರಕ್ರಿಯೆಯ ಬಗ್ಗೆ ಎಸ್​​ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮರಿಂದ ವಿವರಣೆ ಪಡೆದುಕೊಂಡ್ರು. GPR ಸ್ಕ್ಯಾನಿಂಗ್ ಬಗ್ಗೆಯೂ ಪ್ರಣವ್ ಮೊಹಂತಿ ಮಾಹಿತಿ ಪಡೆದ್ರು.

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ದೆಹಲಿಯಿಂದ ಆಗಮಿಸಿರೋ NHRC ಕೂಡ ತನಿಖೆ ಮುಂದುವರಿಸಿದೆ. IPS ಅಧಿಕಾರಿ ಯುವರಾಜ್ ನೇತೃತ್ವದಲ್ಲಿ ತನಿಖೆ ನಡೀತಿದ್ದು, ಅನಾಮಿಕನನ್ನ ವಿಚಾರಣೆ ನಡೆಸಲಾಗ್ತಿದೆ. ಸಾಕ್ಷಿಗಳ ವಿಚಾರಣೆ ಸೇರಿದಂತೆ ಅನಾಮಿಕ ತೋರಿಸಿರುವ ಸ್ಥಳ ಪರಿಶೀಲನೆಯನ್ನು ಕೂಡ NHRC ಅಧಿಕಾರಿಗಳು ಮಾಡಿದ್ದಾರೆ. ಈ ನಡುವೆ SIT ತಂಡದಲ್ಲಿರುವ ಐಪಿಎಸ್ ಅಧಿಕಾರಿ ಅನುಚೇತ್, ವಿಧಾನಸೌಧಕ್ಕೆ ಆಗಮಿಸಿ ಗೃಹಸಚಿವ ಪರಮೇಶ್ವರ್ ಅವರನ್ನು​ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಎಸ್​ಐಟಿ ತನಿಖಾ ಪ್ರಗತಿ ಕುರಿತು ಗೃಹ ಸಚಿವರಿಗೆ ವರದಿ ಸಲ್ಲಿಸಿದ್ದಾರೆ. ಆ ನಂತರ ಸಿಎಂ ಸಿದ್ದರಾಮಯ್ಯಗೆ ತನಿಖೆ ಕುರಿತು ಪರಮೇಶ್ವರ್​ ಮಾಹಿತಿ ನೀಡಿದ್ದಾರೆ.

ವಿಧಾನಸಭೆ ಕಾರ್ಯ ಕಲಾಪದ ಶೂನ್ಯ ವೇಳೆಯಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಬಿಜೆಪಿ ಶಾಸಕ ಸುನೀಲ್ ಕುಮಾರ್ ಈ ಬಗ್ಗೆ​ ಮಾತನಾಡಿ, ಎಸ್​ಐಟಿ ತನಿಖೆ ಮಾಡಲಿ, ನಮ್ಮದೇನು ಅಭ್ಯಂತರವಿಲ್ಲ. ಆದರೆ ಧರ್ಮಸ್ಥಳ ಧಾರ್ಮಿಕ ಸಂಸ್ಥೆ ಅದನ್ನ ಟಾರ್ಗೆಟ್​ ಮಾಡೋದು ಸರಿಯಲ್ಲ. ಇಷ್ಟು ದಿನ ಎಷ್ಟು ಗುಂಡಿಗಳನ್ನ ತೆಗೆದಿದ್ದೀರಿ..? ಎಷ್ಟು ಮೂಳೆಗಳು ಸಿಕ್ಕಿದೆ ಅನ್ನೋದನ್ನು ತಿಳಿಸಿ ಅಂತ ಒತ್ತಾಯಿಸಿದ್ದಾರೆ.. ಈ ವೇಳೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಎಸ್ಐಟಿ ವರದಿ ಬರುವವರೆಗೂ ಏನು ಚರ್ಚೆ ಮಾಡೋಕೆ ಸಾಧ್ಯ ಇಲ್ಲ ಎಂದಿದ್ದಾರೆ. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ನಾವು ಯಾರ ಪರವೂ ಇಲ್ಲ, ನಿಷ್ಪಕ್ಷಪಾತವಾದ ತನಿಖೆ ಮಾಡ್ತಿದ್ದೇವೆ. ಸತ್ಯ ಹೊರಗಡೆ ಬರಬೇಕು, ನಾವು ನ್ಯಾಯದ ಪರ ಇದ್ದೇವೆ ಎಂದು ಉತ್ತರಿಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಬಗ್ಗೆ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡ್ತಿರೋರ ವಿರುದ್ಧ ದೂರು ದಾಖಲಾಗಿದೆ. ಧರ್ಮಸ್ಥಳದ ಬಗ್ಗೆ ಸೋಷಿಯಲ್ ಮೀಡಿಯಾ ಪೇಜ್​ಗಳಲ್ಲಿ ಅವಹೇಳನ ಮಾಡಲಾಗ್ತಿದೆ ಎಂದು ಆರೋಪಿಸಿ, ಹಿಂದೂ ಸಂಘಟನೆ ಕಾರ್ಯಕರ್ತರು ಡಿಜಿಪಿಗೆ ದೂರು ಸಲ್ಲಿಸಿದ್ದಾರೆ. ಅವಹೇಳನಕಾರಿ ಹೇಳಿಕೆ ನೀಡ್ತಿರೋ ಪೇಜ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗ್ತಿದೆ. ಇದರಿಂದ ಲಕ್ಷಾಂತರ ಭಕ್ತರಿಗೆ ಮನಸ್ಸಿಗೆ ನೋವುಂಟಾಗ್ತಿದೆ. ಎಸ್ಐಟಿ ತನಿಖೆ ಬಗ್ಗೆ ತರಹೇವಾರಿ ಸುದ್ದಿಗಳನ್ನ ಬಿತ್ತರಿಸಲಾಗ್ತಿದೆ. ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ FIR ದಾಖಲಿಸುವಂತೆ ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

Related posts

ಗ್ಯಾರಂಟಿ ಕೊಡಲು ಸಾಧ್ಯವಾಗ್ತಿಲ್ವಾ..? ಇನ್ಮುಂದೆ ಗ್ಯಾರಂಟಿ ನಿಂತೇ ಹೋಗುತ್ತಾ..?

Publicspot

ಅಕ್ಕನ ಗಂಡನನ್ನೇ ಬುಟ್ಟಿಗೆ ಹಾಕೊಂಡ ತಂಗಿ.. ಅಕ್ಕನ ಕೊಂದಿದ್ಯಾರು..?

Publicspot

Bigg Boss Reopen; ಸರ್ಕಾರದ ಮಟ್ಟದಲ್ಲೇ ಭಾರೀ ಗೊಂದಲ.. ಯಾರಿಗೆ ಪವರ್‌ ಜಾಸ್ತಿ.. ?

Publicspot

Legends talks about S.L Byarappa; ಬಾನು ಮುಷ್ತಾಕ್‌ ಮನೆಯಲ್ಲಿ ವಾರ ಕಳೆದಿದ್ರಂತೆ S.L ಭೈರಪ್ಪ..

Publicspot

ಎರಡೂವರೆ ವರ್ಷ ಆಯ್ತು.. ಊಟಕ್ಕೆ ಕರೆದಿರೋ ಸಿಎಂ.. ಬದಲಾವಣೆ ಫಿಕ್ಸಾ..?

Publicspot

ಧರ್ಮಸ್ಥಳ ರಹಸ್ಯ ಮತ್ತುಆಡಳಿತ ಮಂಡಳಿ ಆಕ್ರೋಶ.. ರಾಜಕಾರಣದ ನೆರಳು..

Publicspot