The Public Spot
Uncategorized

New Law In Loksabha: ಪ್ರಧಾನಿ, ಸಿಎಂ, ಮಂತ್ರಿಗಳಿಗೂ ಬರ್ತಿದೆ ಹೊಸ ಕಾನೂನು..!

ದೇಶದಲ್ಲಿ ಯಾವುದೇ ಕಾನೂನು ಬದಲಾವಣೆ ಆಗಬೇಕು ಅಂದರೂ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಬೇಕು. ಜನಪ್ರತಿನಿಧಿಗಳು ನೂತನ ಕಾನೂನು ಮತ್ತು ಅದರಿಂದ ಆಗಬಹುದಾದ ಸಾಧಕ – ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿ ಆ ಕಾನೂನು ಅಗತ್ಯವೇ..? ಅದರಿಂದ ಅನುಕೂಲಗಳು ಹೇಗೆ ಆಗುತ್ತವೆ. ಅನಾನುಕೂಲ ಏನಾದರೂ ಇದೆ. ಸರ್ಕಾರ ಮಂಡಿಸಿದ ಕಾನೂನಿನಲ್ಲಿ ಏನು ಬದಲಾವಣೆ ಮಾಡಬೇಕು ಅನ್ನೋ ಬಗ್ಗೆ ಸಲಹೆ ಸೂಚನೆಗಳನ್ನು ಆಲಿಸಿ ಅಂತಿಮವಾಗಿ ಲೋಕಸಭೆಯಲ್ಲಿ ವಿಧೇಯಕವನ್ನು ಪಾಸ್​ ಮಾಡಿ ರಾಜ್ಯ ಸಭೆಗೆ ಕಳುಹಿಸಲಾಗುತ್ತದೆ. ಆ ಬಳಿಕ ರಾಜ್ಯಸಭೆಯಲ್ಲೂ ಸಮಗ್ರವಾಗಿ ಚರ್ಚೆ ನಡೆಸಿದ ಬಳಿಕ ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ. ಅದೇ ರೀತಿ ನಿನ್ನೆ ಲೋಕಸಭೆಯಲ್ಲಿ ಹೊಸ ಬಿಲ್​ ಒಂದನ್ನು ಕೇಂದ್ರದ ಗೃಹ ಸಚಿವ ಅಮಿತ್​ ಷಾ ಮಂಡನೆ ಮಾಡಿದ್ದಾರೆ. ಆ ವಿದೇಯಕ ನೋಡ್ತಿದ್ದ ಹಾಗೆ ಕಾಂಗ್ರೆಸ್​​ ಸೇರಿದಂತೆ INDIA ಒಕ್ಕೂಟ ಸಿಡಿಮಿಡಿಗೊಂಡಿದೆ.

ಲೋಕಸಭೆಯಲ್ಲಿ ಪದಚ್ಯುತಿ ಬಿಲ್‌ ಮಂಡನೆ ಆಗ್ತಿದ್ದ ಹಾಗೆ ಕೋಲಾಹಲ ಸೃಷ್ಟಿಯಾಗಿತ್ತು. ಗಲಾಟೆ ನಡುವೆಯೂ ಅಮಿತ್​ ಷಾ PM, CM, ಸಚಿವರ ಪದಚ್ಯುತಿ ಮಾಡಬಹುದಾದ ಬಿಲ್‌‌ ಮಂಡನೆ ಮಾಡಿದ್ರು. ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ್ರು. ಅಮಿತ್‌ ‌ಷಾ ಅವರು ಮಂಡಿಸಿದ ಪದಚ್ಯುತಿ ಮಸೂದೆ ಪ್ರತಿಗಳನ್ನ ಹರಿದು ಎಸೆದು ಹಂಗಾಮವನ್ನೇ ಸೃಷ್ಟಿಸಿದ್ರು. ವಿಪಕ್ಷದ ಸದಸ್ಯರು ಎಷ್ಟೇ ವಿರೋಧಿಸಿದ್ರೂ ಕ್ಯಾರೆ ಅನ್ನ ಸ್ಪೀಕರ್‌ ಓಂ ಬಿರ್ಲಾ ಮಸೂದೆ ಮಂಡನೆ ಆಗ್ತಿದ್ದಂತೆ ಮತದಾನಕ್ಕೂ ಹಾಕಿದ್ರು.

ಈ ಮಸೂದೆಯಲ್ಲಿ ಪ್ರಧಾನಿ, ಸಿಎಂ ಹಾಗೂ ಸಚಿವರು ಯಾವುದಾದರೂ ಕೇಸ್​ನಲ್ಲಿ ಬಂಧನವಾಗಿ ಜೈಲು ಸೇರಿದ್ರೆ, 30 ದಿನಗಳ ಕಾಲ ಜೈಲು ಅಥವಾ ಪೊಲೀಸ್​ ಕಸ್ಟಡಿಯಲ್ಲಿ ಇದ್ದರೆ ಅಂತಹ ನಾಯಕರನ್ನು ಪದಚ್ಯುತಿ ಮಾಡುವ ಅವಕಾಶ ಇರುತ್ತದೆ. ಆದರೆ ಇದನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತದೆ ಅನ್ನೋದು ವಿರೋಧ ಪಕ್ಷಗಳ ಆಕ್ರೋಶ. ಈ ಮಸೂದೆ ವಿಪಕ್ಷಗಳು ಆಡಳಿತ ನಡೆಸ್ತಿರೋ ರಾಜ್ಯಗಳನ್ನ ಟಾರ್ಗೆಟ್‌ ಮಾಡಿದ್ದಾರೆ ಅಂತಾ ಅಸಾದುದ್ದೀನ್‌ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ರು. ಪದಚ್ಯುತಿ ಮಸೂದೆಯೇ ಕ್ರೂರ ವಿಚಾರ ಅಂತ ಪ್ರಿಯಾಂಕಾ ವಾದ್ರಾ ಟೀಕಿಸಿದ್ರು. ಇನ್ಮುಂದೆ ಮಹಾರಾಜ ತನ್ನಿಚ್ಛೆಯಂತೆ ಯಾರನ್ನಾದರೂ ತೆಗೆಯಬೇಕಿದ್ರೂ ED ಅಧಿಕಾರಿಗಳನ್ನ ಕಳುಹಿಸಿ ಬಂಧಿಸ್ತಾರೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌‌ಗಾಂಧಿ ವ್ಯಂಗ್ಯವಾಡಿದ್ರು.

ಪ್ರಧಾನ ಮಂತ್ರಿಯೇ ಆಗಲಿ, ಯಾವುದೇ ರಾಜ್ಯದ ಮುಖ್ಯಮಂತ್ರಿಯೇ ಆಗಲಿ ಅಥವಾ ಯಾವುದೇ ರಾಜ್ಯ, ಕೇಂದ್ರ, ಕೇಂದ್ರಾಡಳಿತ ಪ್ರದೇಶದ ಸಚಿವರುಗಳು ಕ್ರಿಮಿನಲ್‌‌ ಕೇಸ್‌‌‌ ಮೇಲೆ 30 ದಿನ ಜೈಲು ಸೇರಿದ್ರೆ, ಅಂತವರನ್ನು ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. 30 ದಿನ ಜೈಲು ಸೇರಿದ್ರೆ ಸಾಕು ಮರು ದಿನವೇ ತನ್ನ ಸ್ಥಾನ ಕಳೆದುಕೊಳ್ತಾರೆ. ಇಲ್ಲಿವರೆಗೆ ಅಪರಾಧ ಸಾಬೀತಾಗಿಲ್ಲ, ಆರೋಪ ಅಷ್ಟೇ ಅನ್ನೋ ಕಾರಣಕ್ಕೆ ಸ್ಥಾನ ಹಾಗೆ ಇರುವ ಅವಕಾಶ ಇತ್ತು. ಹೀಗಾಗಿ ಸಂವಿಧಾನದ 75, 164, 239AA ವಿಧಿಗೆ ತಿದ್ದುಪಡಿ ತರಲಾಗಿದೆ. ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತದೆ. ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿಸಿ 30 ದಿನಗಳ ಕಾಲ ಬಂಧನದಲ್ಲಿ ಇರುವಂತೆ ಮಾಡಿದರೆ ಅಧಿಕಾರ ಹೋಗುತ್ತದೆ. ಅಲ್ಲಿಗೆ ಕೇಂದ್ರದ ಕೈಗೊಂಬೆ ರೀತಿ ಕೆಲಸ ಮಾಡಬೇಕಾಗುತ್ತದೆ. ಇದು ಸರ್ವಾಧಿಕಾರಿ ಧೋರಣೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಸದ್ಯಕ್ಕೆ ಈ ಬಿಲ್​ ಲೋಕಸಭೆಯಲ್ಲಿ ಮಂಡನೆ ಆಗಿದ್ದು, ಜಂಟಿ ಸಂಸದೀಯ ಸಮಿತಿ ಮುಂದೆ ಹೋಗಿದೆ. ಜಂಟಿ ಸಂಸದೀಯ ಸಮಿತಿಯಲ್ಲಿ ಹಿರಿಯ ನಾಯಕರು, ವಿರೋಧ ಪಕ್ಷದ ಸದಸ್ಯರೂ ಸೇರಿದಂತೆ ಸಾಕಷ್ಟು ಕಾನೂನು ಬಲ್ಲವರು ಇರುತ್ತಾರೆ. ಅಂತಿಮವಾಗಿ ಏನಾದರೂ ಬದಲಾವಣೆ ತರುವ ಅಗತ್ಯವಿದ್ದರೆ ಚರ್ಚಿಸಿ ಬದಲಾವಣೆ ತರಲಾಗುತ್ತದೆ. ವಿರೋಧ ಪಕ್ಷಗಳು ಹೇಳುವ ಸಲಹೆಯನ್ನು ಸೇರ್ಪೆ ಮಾಡಲಾಗುತ್ತದೆ. ಆದರೆ ಅಂತಿಮವಾಗಿ ಇದು ಕಾನೂನು ಆಗಿ ರೂಪುಗೊಳ್ಳುತ್ತದೆ. ಈ ರೀತಿಯ ಕಾನೂನು ಎಂತಹ ಕೇಸ್​ನಲ್ಲಿ ಅವಶ್ಯಕತೆ ಇದೆ ಅನ್ನೋ ಬಗ್ಗೆಯೂ ಚರ್ಚೆ ನಡೆಯಲಿದೆ. ಒಟ್ಟಾರೆ ದೇಶಕ್ಕೆ ಹೊಸ ಕಾನೂನು ಬರುವುದು ನಿಶ್ಚಿತ.

Related posts

Karnataka Rathna Dr Vishnuvardhan: ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ

Publicspot

ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದಾದ ವೇಳೆ ದರ್ಶನ್​ ಮಾಡಿದ್ದೇನು..?

Publicspot

Bihara Laddus; ಗೆದ್ದೇ ಗೆಲ್ಲುವ ವಿಶ್ವಾಸ.. ಸಮೀಕ್ಷೆಗಳೇ ಉಲ್ಟಾ ಆಗುತ್ತಾ..?

Publicspot

Thirupathi; ಮೂರು ನಾಮದ ಒಡೆಯನಿಗೇ ನಾಮ ಹಾಕಿದ ಅತಿಶಯ ಮನುಷ್ಯ..!

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

Heavy Rain North India: ವರುಣದ ಆರ್ಭಟಕ್ಕೆ ಉತ್ತರ ಭಾರತ ತತ್ತರ..

Publicspot