The Public Spot
ರಾಜಕೀಯ

CONG VS CONG : ಕಾಂಗ್ರೆಸ್ ಶಾಸಕರ ಮೇಲೆ ​ ಸಚಿವರ ಸೇಡು.. ದಲಿತ ಅಂತಾ ಟಾರ್ಗೆಟ್..?

ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಆಗುತ್ತಾ ಬಂದಿದೆ. ಸರ್ಕಾರದಲ್ಲಿ ತುಂಬಾ ಆ್ಯಕ್ಟೀವ್​ ಸಚಿವರು ಅಂದರೆ ಅದು ಕಂದಾಯ ಸಚಿವ ಕೃಷ್ಣಬೈರೇಗೌಡ. ಇದೀಗ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೇಲೆಯೇ ಕಾಂಗ್ರೆಸ್ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸಭೆಯಲ್ಲಿ ಆರೋಪ ಮಾಡಿರುವ ಬಂಗಾರಪೇಟೆ ನಾರಾಯಣಸ್ವಾಮಿ, ಸಚಿವರ ಮೇಲೆ ಕೇಸ್ ಹಾಕುವಂತೆ ಒತ್ತಾಯ ಮಾಡಿದ್ದಾರೆ.

ದಲಿತ ಶಾಸಕರನ್ನು ಸಚಿವ ಕೃಷ್ಣಬೈರೇಗೌಡ ಟಾರ್ಗೆಟ್ ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿರುವ ನಾರಾಯಣಸ್ವಾಮಿ, ವಿಧಾನಸಭಾ ಕಲಾಪದಲ್ಲಿ ಕಂದಾಯ ಸಚಿವರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಬಂಗಾರಪೇಟೆ ತಾಲೂಕು ಕಸಬಾ ಹೊಬಳಿ ವಗ್ಗಯ್ಯನದಿಣ್ಣಿ ಗ್ರಾಮದ ಜಮೀನು ವಿಚಾರದಲ್ಲಿ ಖಾಸಗಿ ಜಮೀನನ್ನು ಕರಾಬ್ ಎಂದು ನಮೂದಿಸಿದ್ದಾರೆ. ದಲಿತ ಶಾಸಕ ಅನ್ನೋ ಕಾರಣಕ್ಕೆ ನನ್ನ ಜಮೀನನನ್ನು ಕರಾಬು ಅಂತ ನಮೂದು ಮಾಡಲಾಗಿದೆ ಎಂದು ದೂರಿದ್ದಾರೆ.

ಕೋಲಾರ ಜಿಲ್ಲಾಧಿಕಾರಿ ಮತ್ತು ಎಸಿ ಮೂಲಕ ಪದೇ ಪದೇ ನನ್ನ ಜಮೀನು ಸರ್ವೆ ಮಾಡಿಸಿದ್ದಾರೆ. 7 ಎಕರೆ ಜಮೀನನ್ನು ದುರುದ್ದೇಶದಿಂದ ಕರಾಬು ಅಂತ ನಮೂದು ಮಾಡಲಾಗಿದೆ. ಕಳೆದ 154 ವರ್ಷಗಳಿಂದ ಕಾನೂನು ಬದ್ಧವಾಗಿ ನಮ್ಮ ಹಿರಿಯರಿಂದ ಹಸ್ತಾಂತರಗೊಂಡಿರುವ ಜಮೀನು ಅದು. ಈ ಬಗ್ಗೆ ಸೂಕ್ತ ದಾಖಲೆ ಇದ್ದರೂ ಅನಗತ್ಯ ತೊಂದರೆ ನೀಡಲಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರದರ್ಶಿ ಕಠಾರಿಯಾ ಅವರು ಡಿಸಿ ಬಳಸಿಕೊಂಡಿದ್ದಾರೆ. ಉದ್ದುದ್ದ ಭಾಷಣ ಮಾಡುವ ಕಂದಾಯ ಸಚಿವರಿಂದ ನನಗೆ ತೊಂದರೆ ಆಗಿದೆ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ.

ಉದ್ಯೋಗ ಸೃಷ್ಟಿ ಮಾಡಬೇಕು ಅನ್ನೋ ಕಾರಣಕ್ಕೆ ಬಂಡವಾಳ ಹೂಡಲು ಮುಂದಾಗಿದ್ದೆ. ಆದರೆ ದುರುದ್ದೇಶದಿಂದ ನಮಗೆ ತೊಂದರೆ ಕೊಟ್ಟಿದ್ದಾರೆ ಎಂದ ಆಕ್ರೋಶ ಹೊರ ಹಾಕಿದ ನಾರಾಯಣಸ್ವಾಮಿ, ಸಿಎಂ ಸಿದ್ಧರಾಮಯ್ಯಗೆ ಕಂದಾಯ ಸಚಿವ ಕೆಟ್ಟ ಹೆಸರು ತರುತ್ತಿದ್ದಾರೆ. ನನಗೆ ಯಾವುದೇ ಭಯವಿಲ್ಲ. ಯಾವ ಸ್ವಾರ್ಥ ಇಲ್ಲ. ನನಗೆ ತೊಂದರೆ ಕೊಟ್ಟ ಕಂದಾಯ ಸಚಿವರ ಮೇಲೆ ಕ್ರಮ ಆಗಬೇಕು ಅಷ್ಟೆ, ಕಂದಾಯ ಇಲಾಖೆ ಪ್ರಧಾನ ಕಾರದರ್ಶಿ ಕಠಾರಿಯಾ ಮೇಲೆ ಕೇಸ್ ಆಗಬೇಕು. ತಮ್ಮ ಸ್ವಂತ ಜಮೀನು ಕರಾಬು ಅಂತ ನಮೂದು ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ದೂರು ಸಹ ಕೊಟ್ಟಿದ್ದನ್ನು ಸದನದಲ್ಲಿ ಪ್ರಸ್ತಾಪಿಸಿರುವ ಶಾಸಕ ನಾರಾಯಣಸ್ವಾಮಿ, ಕಠಾರಿಯಾ ವರ್ಗಾವಣೆಗೆ ಸಹಿ ಹಾಕಿ ಕೊಟ್ಟಿದ್ದ 50 ಶಾಸಕರೂ ಹೆದರುವಂತಾಗಿದೆ. ಕಠಾರಿಯಾ ಶಾಸಕರಿಗೆ ಆ ರೀತಿಯ ತೊಂದರೆ ಕೊಡುತ್ತಿದ್ದಾರೆ. ಕ್ರಮ ಕೈಗೊಳ್ಳುವವರೆಗೆ ಹೋರಾಟ ಮಾಡೇ ಮಾಡ್ತೀನಿ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೇರಿ ಅಧಿಕಾರಿ ವಿರುದ್ಧವೂ ಕ್ರಮ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಶಾಸಕರೇ ಸಚಿವರ ವಿರುದ್ಧ ವಾಗ್ದಾಳಿ ಮಾಡಿದ್ದು, ಸದನದಲ್ಲಿ ವಿಶೇಷ ಘಟನೆಯೇ ನಡೆದಿದೆ ಎನ್ನಬಹುದು.

Related posts

RSS ಗಣವೇಶಧಾರಿಯನ್ನು ಕರಿ ಟೋಪಿ MLA ಅಂದಿದ್ದಕ್ಕೆ ಕೋಪವೋ..? ನಿರ್ಲಕ್ಷ್ಯದ ಕಿಡಿಯೋ..?

Publicspot

ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ: ಬಸವರಾಜ ಬೊಮ್ಮಾಯಿ

admin

ದಿಲ್ಲಿ ತಲುಪಿದ ಖಾತೆ ಕ್ಯಾತೆ.. ನಾಳೆ ದಿಲ್ಲಿಯತ್ತ ಡಿ.ಕೆ ಶಿವಕುಮಾರ್..!

Publicspot

ದಾವಣಗೆರೆಯಲ್ಲಿ ಕುಟುಂಬ ರಾಜಕಾರಣ ಸೋಲಿಸಿ ಅಂದ್ರಾ ಸಿಎಂ ಸಿದ್ದರಾಮಯ್ಯ ..?

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ಅಪ್ಪನ ಕ್ಷೇತ್ರದಲ್ಲಿ ಮಗನ ಅಬ್ಬರ.. ಕುರುಬರು ಕಾಂಗ್ರೆಸ್‌ಗೆ ಮೀಸಲಲ್ಲ – HDK

Publicspot