September 30, 2026
The Public Spot
ರಾಜಕೀಯ

ದಾವಣಗೆರೆಯಲ್ಲಿ ಕುಟುಂಬ ರಾಜಕಾರಣ ಸೋಲಿಸಿ ಅಂದ್ರಾ ಸಿಎಂ ಸಿದ್ದರಾಮಯ್ಯ ..?

ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​ ಮುಸ್ಲಿಂ ಸಮುದಾಯಕ್ಕೆ ಕೊಡಬೇಕು ಅನ್ನೋದು ಸಿಎಂ ಸಿದ್ದರಾಮಯ್ಯ ನಿರ್ಧಾರ ಆಗಿತ್ತು. ಅದೇ ಕಾರಣಕ್ಕೆ ಜಮೀರ್​ ಅಹ್ಮದ್​ ಮೂಲಕ ಹೈಕಮಾಂಡ್​ ಮಟ್ಟದಲ್ಲೂ ಟಿಕೆಟ್​ಗೆ ಆಗ್ರಹ ಕೇಳಿ ಬಂದಿತ್ತು. ಆ ಬಳಿಕ ಸಿಎಂ ಬಣಕ್ಕೆ ಹಿನ್ನಡೆ ಆಗಿ ಡಿ.ಕೆ ಶಿವಕುಮಾರ್​ ಬಣದ ಸಚಿವ ಎಸ್​.ಎಸ್​ ಮಲ್ಲಿಕಾರ್ಜುನ್​ ಪುತ್ರ ಸಮರ್ಥ್​ ಶಾಮನೂರಿಗೆ ಟಿಕೆಟ್​ ಘೋಷಣೆ ಆಗಿದ್ದು, ಅಂತಿಮ ದಿನವಾದ ಇಂದು ಸಾವಿರಾರು ಜನರ ಮೆರವಣಿಗೆ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ನ ಜೊತೆಗೂಡಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಈ ನಡುವೆ 20ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ.

ದಾವಣಗೆರೆಯಲ್ಲಿ ಕಾಂಗ್ರೆಸ್​ಗೆ ಬಂಡಾಯ ಎದುರಾಗಿರುವ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್ಲರನ್ನೂ ಸಮಾಧಾನ ಮಾಡಲು ಪ್ರಯತ್ನಿಸುತ್ತೇವೆ. ಅಲ್ಪಸಂಖ್ಯಾತ ನಾಯಕರು ಎಲ್ಲರೂ ಸೇರಿ‌ ಒಮ್ಮತದ ನಿರ್ಧಾರ ಮಾಡಿದ್ದೇವೆ. ಸಾದಿಕ್ ಪೈಲ್ವಾನ್ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇವೆ. ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತೇವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಅಸಮಾಧಾನ ಆಗಿರುವವರನ್ನು ಮನವೊಲಿಸುತ್ತೇವೆ. ನಾವು ಖಂಡಿತ ಗೆದ್ದೇ ಗೆಲ್ಲುತ್ತೇವೆ. ಬಸವರಾಜ ಬೊಮ್ಮಾಯಿ ಮಗ, ಕುಮಾರಸ್ವಾಮಿ ಮಗ ಅವರನ್ನೇ ಸೋಲಿಸಿಲ್ವ..? ಎನ್ನುವ ಮೂಲಕ ಕುಟುಂಬ ರಾಜಕಾರಣದ ವಿರುದ್ಧ ಎನ್ನುವಂತೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ನಾವು ನುಡಿದಂತೆ ನಡೆದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ದಲಿತರು, ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರು ಎಲ್ಲರೂ ನಮ್ಮ ಪರವಾಗಿದ್ದಾರೆ. ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಗೆಲ್ಲೋದೇ ಇಲ್ಲ, ಏನ್ ದಿಕ್ಸೂಚಿ ಮಾಡ್ತಾರೆ ಎಂದಿದ್ದಾರೆ. ನಾವು ಅಧಿಕಾರದಲ್ಲಿ ಇದ್ದೀವಿ, ಮೂರು ಉಪಚುನಾವಣೆ ಗೆದ್ದಿದೀವಿ. ಈ ಉಪಚುನಾವಣೆ ಸಹ ಗೆಲ್ತೀವಿ ಎಂಬ ಸಂಪೂರ್ಣ ವಿಶ್ವಾಸ ಇದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕಡೆಯೂ ಸೋಲುತ್ತೆ ಎಂದಿದ್ದಾರೆ. ಆದರೆ ಜಮೀರ್​ ಅಹ್ಮದ್​ ಖಾನ್​ ನಾಮಪತ್ರ ಸಲ್ಲಿಕೆಗೆ ಗೈರು ಹಾಜರಾದ ಬಗ್ಗೆ ಸಿಎಂ ಉತ್ತರಿಸಿಲ್ಲ.

ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್​ ಬೆಂಗಳೂರಲ್ಲಿ ಮಾತನಾಡಿ, ನಾನು ನಾಮಪತ್ರ ಸಲ್ಲಿಕೆಗೆ ಹೋಗಬೇಕಿತ್ತು. ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು. ಆದರೆ ಸದನದಲ್ಲಿ ಪ್ರಶ್ನೋತ್ತರ ಕಲಾಪವಿತ್ತು. ಇದು ಮುಂಚೆಯೇ ಇತ್ತು, ಹೀಗಾಗಿ ಹೋಗಲು ಸಾಧ್ಯವಾಗಿಲ್ಲ. ಪ್ರಚಾರಕ್ಕೆ ನಾವು ಹೋಗುತ್ತೇವೆ. ಹೋಗಿ ಗೆಲ್ಲಿಸಿಕೊಂಡು ಬರುತ್ತೇವೆ. ನಾವೇ ಗೆಲ್ಲುತ್ತೇವೆ ಎಂದಿದ್ದಾರೆ. ಸ್ಥಳೀಯವಾಗಿ ಅಲ್ಪಸಂಖ್ಯಾತ ಮುಖಂಡರ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅಜ್ಜನವರು ನಿಧನ ಆದ ಮೇಲೆ ಟಿಕೆಟ್ ಕೇಳಿದ್ದು ನಿಜ, 85 ಸಾವಿರ ಅಲ್ಪಸಂಖ್ಯಾತರ ಮತಗಳಿವೆ. ಟಿಕೆಟ್ ಕೊಡಿ ಎಂದು ಕೇಳಿದ್ದೇವು. ಆದರೆ ಮೊದಲಿಂದಲೂ ಯಾರು ನಿಧನ ಆಗಿದ್ದಾರೆ ಅವರ ಕುಟುಂಬಕ್ಕೆ ಟಿಕೆಟ್ ಕೊಡುವ ಪದ್ದತಿಯಿದೆ. ಮುಂದಿನ ಜನರಲ್ ಎಲೆಕ್ಷನ್​ನಲ್ಲಿ ಪರಿಗಣಿಸುವ ಎಂದು ಹೇಳಿದ್ದಾರೆ ಎಂದಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಪರಿಶೀಲಿಸೋಣ ಎಂದಿದ್ದಾರೆ ಎಂದು ಸಚಿವ ಜಮೀರ್​ ಹೇಳಿದ್ದಾರೆ. ಆದರೆ ಸಮರ್ಥ್​​ ಗೆದ್ದು ವಿಧಾನಸಭೆಗೆ ಬಂದರೆ ಮುಂದಿನ 40 ರಿಂದ 50 ವರ್ಷಗಳ ಕಾಲ ಯಾರೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ ಅನ್ನೋದು ಕಾಂಗ್ರೆಸ್​ ನಾಯಕರು, ಮುಸ್ಲಿಂ ನಾಯಕರಿಗೂ ಗೊತ್ತಿರುವ ಸಂಗತಿ. ಈ ನಡುವೆ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಸೋಲಿಸಿಲ್ಲವೇ ಎನ್ನುವ ಮೂಲಕ ಕುಟುಂಬ ರಾಜಕಾರಣದ ವಿರುದ್ಧ ಹೇಳಿಕೆ ನೀಡಿದ್ದಾರೆ. ಈಗ ಜಮೀರ್​ ಪ್ರಚಾರಕ್ಕೆ ಹೋಗುವುದು ಸಮರ್ಥ್​​ ಗೆಲ್ಲಿಸಿಕೊಂಡು ಬರೋದಕ್ಕಾ..? ಅಥವಾ ಅಲ್ಲೇ ಉಳಿಸಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಪಡೆಯಲು ವ್ಯವಸ್ಥೆ ಮಾಡುವುದಕ್ಕಾ..? ಅನ್ನೋದು ಖಚಿತ ಆಗ್ಬೇಕಿದೆ.

Related posts

November Action; ದೆಹಲಿಯಿಂದ ಬಂದ ಸತೀಶ್​ ಜಾರಕಿಹೊಳಿ ಹೇಳಿದ್ದೇನು..?

Publicspot

Yathnal Talk War; ಯತ್ನಾಳ್ ಟೀಕೆಗೆ ತಿರುಗೇಟು ಕೊಟ್ಟ ಸಚಿವ ಎಂ.ಬಿ ಪಾಟೀಲ್‌..!

Publicspot

CM Finally; ಸಿಎಂ ಆಗಲು ಪಟ್ಟು ಹಿಡಿದು ಕುಳಿತ ಡಿ.ಕೆ ಶಿವಕುಮಾರ್​.. ಶಕ್ತಿ ವೃದ್ಧಿಗೆ ಸರ್ಕಸ್​..

Publicspot

ಕಾಂಗ್ರೆಸ್‌ ನಾಯಕರು ಏನೇ ಹೇಳಿದ್ರೂ ಅದು ನನಗೆ ಪ್ರಸಾದ..

Publicspot

ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲ್ಲ ಅಂದಿದ್ದ ಸಚಿವರ ನಿರ್ಧಾರ ಏನು..?

Publicspot

ತ್ರಿಭಾಷಾ ಸೂತ್ರ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಏನು..? ಹಿಂದಿ ಬೇಡ.. ಉರ್ದು ಬೇಕಾ..?

Publicspot