The Public Spot
ರಾಜಕೀಯ

D.K Shivakumar Mistake: ಸದನವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್​.. ಸಂವಿಧಾನಕ್ಕೂ ಗೌರವ ಇಲ್ಲವೇ..?

ಕರ್ನಾಟಕ ರಾಜ್ಯ ವಿಧಾನಸಭಾ ಅಧಿವೇಶನ ನಡೆಯುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್​, ಬಿಜೆಪಿ ನಾಯಕರನ್ನು ಉದ್ದೇಶಿಸಿ ಒಂದೆರಡು ಸಾಲುಗಳನ್ನು ಉಲ್ಲೇಖಿಸಿದ್ರು. ನಮಸ್ತೇ ಸದಾ ವತ್ಸಲೇ ಮಾತೃಭೂಮೆ, ಇದು RSS (Rastriya swayam Sevak Sangha) ಪ್ರಾರ್ಥನೆಯಾಗಿ ಬಳಕೆ ಮಾಡುತ್ತದೆ. ನನಗೂ RSS ಗೊತ್ತು ಎಂದಾಗ, ಆ ಮಾತನ್ನು ಸಮರ್ಥಿಸಲು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಈ ಪ್ರಾರ್ಥನಾ ಗೀತೆಯನ್ನು ಒಂದೆರಡು ಸಾಲು ಹಾಡಿದ್ದೇ ತಡ, ಕಾಂಗ್ರೆಸ್​ ನಾಯಕರು ಹಾಗೂ ಹೈಕಮಾಂಡ್​ ನಾಯಕರು ಮುಗಿಬಿದ್ದ ಪರಿಣಾಮ ಕ್ಷಮೆಯನ್ನು ಕೋರುವಂತಾಗಿದೆ. ಆದರೆ ಹಾಡು ಹೇಳಿದ್ದೇ ತಪ್ಪು ಎನ್ನುವುದು ಸರಿಯೇ ಅನ್ನೋ ಪ್ರಶ್ನೆ ಕೂಡ ಕೇಳಿ ಬರುತ್ತಿದೆ.

AICC ಅಧ್ಯಕ್ಷರೂ ಹೇಳಿದ್ದೇನು ಗೊತ್ತಾ..?

RSS ಗೀತೆಯನ್ನು ಸದನದಲ್ಲಿ ಹಾಡಿದ್ದ ಡಿ.ಕೆ ಶಿವಕುಮಾರ್‌ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್‌ ಹಾಗೆ ಹೇಳಬಾರದಿತ್ತು, ಆದರೂ RSS ಗೀತೆ ಹೇಳಿದ್ದಾರೆ. ಆ ಬಳಿಕ ತಮ್ಮ ಮಾತಿಗೆ ಕ್ಷಮೆಯನ್ನೂ ಕೇಳಿದ್ದಾರೆ. ಕ್ಷಮೆ ಕೇಳಿದ ಮೇಲೆ ಆ ವಿಚಾರ ಅಲ್ಲಿಗೆ ಮುಗೀತು ಎಂದಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ RSS ಪ್ರಾರ್ಥನೆ ಬಗ್ಗೆ ಉಲ್ಲೇಖಿಸಿದ್ದ ಡಿ.ಕೆ ಶಿವಕುಮಾರ್​ ಬಗ್ಗೆ ಈ ಪ್ರತಿಕ್ರಿಯೆ ಕೊಟ್ಟ ಬಳಿಕ ಕಾಂಗ್ರೆಸ್​ ಹೈಕಮಾಂಡ್​ ಒತ್ತಡದಿಂದಲೇ ಡಿ.ಕೆ ಶಿವಕುಮಾರ್​ ಕ್ಷಮೆಯಾಚನೆ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗ್ತಿದೆ. ಆದರೆ ಸದಾ ಸಂವಿಧಾನವನ್ನೇ ತೋರಿಸುತ್ತಾ ಮಾತನಾಡುವ ರಾಹುಲ್​ ಗಾಂಧಿ, ಸಂವಿಧಾನಕ್ಕೂ ಬೆಲೆ ಕೊಡುತ್ತಿಲ್ಲವೇ..? ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ.

ಸದನದ ಮಾತನ್ನ ಪ್ರಶ್ನೆ ಮಾಡುವಂತಿಲ್ಲ..!!

ಸದನದಲ್ಲಿ ಮಾತನಾಡುವ ಮಾತುಗಳನ್ನು ಯಾರೊಬ್ಬರೂ ಪ್ರಶ್ನೆ ಮಾಡುವಂತಿಲ್ಲ. ಶಾಸಕ ಅಥವಾ ಸಂಸದನಿಗೆ ಇರುವ ಸಾಂವಿಧಾನಿಕ ಹಕ್ಕು. ಹೇಳಿಕೆ ತಪ್ಪಾಗಿದ್ದರೆ ಸ್ಪಷ್ಟೀಕರಣ ಕೊಡುವುದಕ್ಕೆ ಅವಕಾಶವಿದೆ. ಆದರೆ ಶಾಸಕ ಅಥವಾ ಸಂಸದ ಸದನದಲ್ಲಿ ನೀಡಿದ ಹೇಳಿಕೆ ಮೇಲೆ ಪೊಲೀಸ್​ ಠಾಣೆ ಅಥವಾ ಕೋರ್ಟ್​ ನಲ್ಲಿ ಪ್ರಶ್ನೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಸದನದಲ್ಲಿ ಹೇಳಿದ ಹೇಳಿಕೆಗೆ ಹೊರಗೆ ಬಂದ ಮೇಲೆ ಸ್ಪಷ್ಟೀಕರಣ ನೀಡಬೇಕು ಅನ್ನೋದೂ ಇಲ್ಲ. ಆದರೆ ಕಾಂಗ್ರೆಸ್​ ನಾಯಕರು ಹಾಗೂ ಹೈಕಮಾಂಡ್​ ನಾಯಕರು ಡಿ.ಕೆ ಶಿವಕುಮಾರ್​ ಹೇಳಿದ್ದು ತಪ್ಪು ಅನ್ನೋ ಅರ್ಥದಲ್ಲಿ ಮಾತನಾಡಿದ್ದೂ ಅಲ್ಲದೆ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಮಾಡಿದ್ದು, ಸಂವಿಧಾನವೇ ಕೊಟ್ಟಿರುವ ಹಕ್ಕನ್ನು ಮೊಟಕುಗೊಳಿಸಿದಂತೆ ಆಗಿದೆ ಎನ್ನಬಹುದು.

RSS ಗೀತೆಯಾಗಿ ಬಳಸಿದ್ದೇ ತಪ್ಪಾ..?

RSS ಕಾರ್ಯಕರ್ತರು ನಮಸ್ತೇ ಸದಾ ವತ್ಸಲೇ ಮಾತೃಭೂಮೆ ಅನ್ನೋ ಗೀತೆಯನ್ನು ಪ್ರಾರ್ಥನೆಯಾಗಿ ಬಳಸಿಕೊಳ್ತಾರೆ ಅನ್ನೋ ಕಾರಣಕ್ಕೆ ವಿರೋಧ ಮಾಡಿದ್ದಾರೆ. ಆದರೆ RSS ಕಾರ್ಯಕರ್ತರು ಖಾಕಿ ಪ್ಯಾಂಟ್​ ಧರಿಸ್ತಾರೆ, ಕಾಂಗ್ರೆಸ್​ ಆಡಳಿತದಲ್ಲಿ ಇರುವ ರಾಜ್ಯದಲ್ಲಿ ಪೊಲೀಸರ ಪ್ಯಾಂಟ್​ ಬದಲಾವಣೆ ಮಾಡಿಬಿಡಿ. ಇನ್ನು RSS ಕಾರ್ಯಕರ್ತರು ದಂಡವನ್ನೂ ಉಪಯೋಗಿಸ್ತಾರೆ. ಪೊಲೀಸರ ಕೈಲಿರುವ ಲಾಠಿಯನ್ನು ತೆಗೆದುಬಿಡಿ ಎಂದರೆ ಸಾಧ್ಯವೇ..? RSS ಗೀತೆ ಎಂದರೆ ಬೇರೆ ಯಾರೊಬ್ಬರೂ ಹಾಡುವಂತೆಯೇ ಇಲ್ವಾ..? ಇದೇನಾ ಕಾಂಗ್ರೆಸ್​ ಪಕ್ಷದ ಒಳಗಿನ ಪ್ರಜಾಪ್ರಭುತ್ವ ವ್ಯವಸ್ಥೆ..? ಸದನದಲ್ಲಿ ಮಾತನಾಡಿದ್ದಕ್ಕೂ ಪಕ್ಷಕ್ಕೂ ಯಾವ ಸಂಬಂಧ..? ಡಿಸಿಎಂ ಡಿ.ಕೆ ಶಿವಕುಮಾರ್​ ಮಾತನಾಡಿದ್ದರಲ್ಲಿ ತಪ್ಪೇನಿದೆ. ಭೂಮಿ ತಾಯಿ ನಿನಗೆ ನನ್ನ ನಮಸ್ಕಾರ ಅನ್ನೋದ್ರಲ್ಲಿ ಬೇರೆ ಯಾವ ಅರ್ಥವಿದೆ..? ರಾಜ್ಯದ ನಾಯಕರೇನೋ ಮಾತನಾಡಿದರು. ಆದರೆ ಹೈಕಮಾಂಡ್​ ಗೂ ಬುದ್ಧಿ ಇಲ್ಲವೇ..?

ಕಾಂಗ್ರೆಸ್​ ಪಾಲಿಗೆ ಭಯ ಹುಟ್ಟಿಸಿದ್ದೇನು..?

ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಕಾರಣಕ್ಕೆ ಕಾಂಗ್ರೆಸ್​ ನಾಯಕರು ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಕಾಂಗ್ರೆಸ್​ ನಾಯಕರು RSS ಬಗ್ಗೆ, ಬಿಜೆಪಿ ಬಗ್ಗೆ ಟೀಕೆ ಮಾಡಿದಾಗ ನಿಮ್ಮದೇ ಪಕ್ಷದ ನಾಯಕ RSS ಪ್ರಾರ್ಥನೆಯನ್ನು ಹಾಡ್ತಾರೆ, ನೀವು RSS ಟೀಕೆ ಮಾಡ್ತೀರಿ ಅನ್ನೋ ಪ್ರಶ್ನೆ ಉದ್ಬವ ಆಗುತ್ತದೆ ಅನ್ನೋ ಕಾರಣಕ್ಕೆ ಕ್ಷಮೆ ಕೇಳಿಸಿದ್ದಾರೆ. ಆದರೆ ಕ್ಷಮೆ ಕೇಳಿದ ಮಾತ್ರಕ್ಕೆ ವಿಧಾನಸಭೆಯ ಕಡತದಿಂದ ತೆಗೆದು ಹಾಕಲಾಗುತ್ತಾ..? ಒಮ್ಮೆ ಕಡತಕ್ಕೆ ಹೋದ ಬಳಿಕ ಅದು ಇತಿಹಾಸದ ಪುಟ ಸೇರುತ್ತದೆ ಅನ್ನೋ ಜ್ಞಾನವೂ ಕಾಂಗ್ರೆಸ್​ ನಾಯಕರಿಗೆ ಇಲ್ಲವಾಯಿತೇ..? RSS ಗೀತೆ ಹೇಳಿದ ಕಾರಣಕ್ಕೆ ಮುಸ್ಲಿಮರು ಮತ ಹಾಕುವುದಿಲ್ಲ ಅನ್ನೋ ಭಯವೂ ಕಾಡಿರಬಹುದೇ..? ಅನ್ನೋ ಬಗ್ಗೆಯೂ ಗುಸುಗುಸು ಮಾತುಗಳು ನಡೆಯುತ್ತಿವೆ. ಆದರೂ ಭೂಮಿ ತಾಯಿಗೆ ನಮಸ್ತೇ ಎಂದಿದ್ದಕ್ಕೆ ಕ್ಷಮೆ ಕೇಳಿದ್ದೂ ಬಾಲಿಷ ಎನ್ನುವಂತಾಗಿದೆ.

Related posts

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಹೆಕಮಾಂಡ್‌ಗೆ ಡೈನಾಮೇಟ್‌..

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?

Publicspot

ಸಚಿವ ಸಂಪುಟ ವಿಸ್ತರಣೆ ಫಿಕ್ಸ್​.. ದೆಹಲಿಗೆ ಡಿಸಿಎಂ ಡಿಕೆಶಿ.. ಸಿಎಂ ಪಟ್ಟ ಯಾರಿಗೆ..?

Publicspot