The Public Spot
ರಾಜ್ಯ

Heavy Rain All Over India: ರಾಜ್ಯ ಮತ್ತು ದೇಶದಲ್ಲಿ ಹೇಗಿದೆ ಮಳೆ ಅಬ್ಬರ.. ಎಲ್ಲೆಲ್ಲಿ ರಜೆ..?

ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಆಗ್ತಿದ್ದುಮ, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ‌ ಘೋಷಣೆ ಮಾಡಲಾಗಿದೆ. ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, NR ಪುರ ತಾಲೂಕುಗಳಲ್ಲಿ ರಜೆ ಘೋಷಣೆ ಆಗಿದೆ. ಅಷ್ಟೇ ಅಲ್ಲದೆ ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆಲ್ದೂರು, ಕಸಬಾ, ಅಂಬಳೆ, ವಸ್ತಾರೆ, ಆವತಿ ಹೋಬಳಿ ಹಾಗೂ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ ಹೋಬಳಿಗಳಿಗೆ ರಜೆ ಘೋಷಣೆ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಮಲೆನಾಡು ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಜೊತೆಗೆ ಕರಾವಳಿ ಭಾಗದಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇವತ್ತು ಉತ್ತರ ಕನ್ನಡ ಜಿಲ್ಲೆಯ‌ ಹೊನ್ನಾವರ ತಾಲ್ಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಹಿನ್ನೆಲೆಯಲ್ಲಿ ರಜೆ‌ ಘೋಷಣೆ ಮಾಡಿದೆ ತಾಲೂಕು ಆಡಳಿತ. ಹೊನ್ನಾವರ ಭಾಗದಲ್ಲಿ ಅತೀ ಹೆಚ್ಚು ಮಳೆ ಆಗ್ತಿರೋ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಉತ್ತರಾಖಂಡ್‌ನಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದೆ. ರುದ್ರಪ್ರಯಾಗ, ಚಮೋಲಿ ಜಿಲ್ಲೆಗಳಲ್ಲಿ ನಡೆದ ದುರಂತದಲ್ಲಿ ಐವರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಅಲಕನಂದಾ, ಮಂದಾಕಿನಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಹನುಮಾನ್ ದೇಗುಲ ಮುಳುಗಡೆಯಾಗಿದೆ.

ಹಿಮಾಚಲ ಪ್ರದೇಶದಲ್ಲೂ ಮಳೆ ಅಬ್ಬರಿಸುತ್ತಿದ್ದು, ಭಾರೀ ಪ್ರವಾಹ ಸೃಷ್ಟಿಯಾಗಿದೆ. ಭರ್ಮೌರ್‌ನಲ್ಲಿ ಉಂಟಾಗಿರುವ ಭೂಕುಸಿತದಲ್ಲಿ 3 ಸಾವಿರ ಜನ ಸಿಲುಕಿದ್ದಾರೆ. NDRF ಮತ್ತು ಸೇನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 363 ಕಡೆ ರಸ್ತೆಗಳೇ ಕುಸಿದು ಹೋಗಿವೆ. ಇನ್ನು ಮುಂಬೈ, ದೆಹಲಿಯಲ್ಲೂ ವರುಣ ಅಬ್ಬರಿಸ್ತಿದ್ದಾನೆ. ಉತ್ತರ ಭಾರತದ ಪ್ರಮುಖ ನದಿಗಳಾದ ಗಂಗಾ, ಯಮುನಾ, ಭ್ರಹ್ಮಪುತ್ರ ಸೇರಿದಂತೆ ಹತ್ತಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಉಂಟಾಗಿರೋ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆ ನಡೆಸ್ತಿದೆ. ತೀವ್ರವಾಗಿ ಹಾನಿಗೊಳಗಾದ ಜಮ್ಮು ಕಾಶ್ಮೀರ, ಪಂಜಾಬ್​ ನಲ್ಲಿ (IAF) ಇಂಡಿಯನ್​ ಏರ್​ ಫೋರ್ಸ್​ ನ MI 17, ಚಿನೂಕ್ ಸೇರಿದಂತೆ ಹಲವು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ನಡೆಸ್ತಿವೆ. ಅಲ್ಲದೆ ಸಿ-130 ಸಾರಿಗೆ ವಿಮಾನಗಳನ್ನು ನಿಯೋಜಿಸಲಾಗಿದೆ. ನಿರಾಶ್ರಿತರ ಕೇಂದ್ರಗಳಿಗೆ ಜನರನ್ನು ಕರೆತರುವುದೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಜನರು ನೀರಿನಲ್ಲಿ ಸಿಲುಕಿಕೊಳ್ತಿದ್ದಾರೆ. ಒಟ್ಟಾರೆ ವರುಣಾರ್ಭಟ ದಕ್ಷಿಣ ಭಾರತಕ್ಕಿಂತಲೂ ಉತ್ತರ ಭಾರತದಲ್ಲಿ ರಣತಾಂಡವ ಆಡ್ತಿದೆ.

Related posts

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಸಮ್ಮತಿ.. ಯಾರು ಏನೇನು ಹೇಳಿದ್ರು..?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

Veerashaiva Lingayat; ಲಿಂಗಾಯತ ಬೇರೆ ಅಲ್ಲ.. ವೀರಶೈವ ಬೇರೆ ಅಲ್ಲ.. ನಾವಿಬ್ಬರೂ ಒಂದೇ.. ಮತ್ತೆ ಗೊಂದಲ

Publicspot

ನಾಳೆ, ನಾಡಿದ್ದು CET ಪರೀಕ್ಷೆ.. ಈ ವರ್ಷ ಮಹತ್ವದ ಬದಲಾವಣೆ..

Publicspot

RSSಗೆ ಅಂಕುಶ ಯತ್ನ.. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆ..!

Publicspot

No Namma Metro, Basava Metro; ನಮ್ಮ ಮೆಟ್ರೋ ಬದಲಿಸ್ತೇನೆ.. ಲಿಂಗಾಯತ ಸಮಾವೇಶದಲ್ಲಿ ಸಿಎಂ ದಾಳ..

Publicspot