The Public Spot
ರಾಜ್ಯ

ನಾಳೆ, ನಾಡಿದ್ದು CET ಪರೀಕ್ಷೆ.. ಈ ವರ್ಷ ಮಹತ್ವದ ಬದಲಾವಣೆ..

ನಾಳೆ ಮತ್ತು ನಾಡಿದ್ದು CET ಪರೀಕ್ಷೆ ನಡೆಯಲಿದೆ. ಇವತ್ತು ಕನ್ನಡ ಪರೀಕ್ಷೆ ನಡೆಯುತ್ತಿದೆ. ನಾಳೆ ಮತ್ತು ನಾಡಿದ್ದು ನಾಲ್ಕು ವಿಷಯಗಳಿಗೆ ಪರೀಕ್ಷೆ ಬರೆಯುತ್ತಾರೆ ಎಂದು KEA ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಹೇಳಿದ್ದಾರೆ. 20 ಸಾವಿರ ಸಿಬ್ಬಂದಿ ಬೇರೆ ಬೇರೆ ಹಂತದಲ್ಲಿ ನಿಯೋಜನೆ ಆಗಿದೆ. ಪರೀಕ್ಷಾ ಕೇಂದ್ರದಲ್ಲಿ CCTV ಕ್ಯಾಮೆರಾ ಕಣ್ಗಾವಲು ಇರಲಿದೆ. ಬೆಂಗಳೂರಿನಲ್ಲಿರೋ ಪರೀಕ್ಷಾ ಕೇಂದ್ರದ ಲೈವ್ ಸ್ಟ್ರೀಮಿಂಗ್ KEA ಮಾಡುತ್ತದೆ. ವಿದ್ಯಾರ್ಥಿಗಳು ಸ್ವಲ್ಪ ಬೇಗ ಬಂದ್ರೆ ಸಮಸ್ಯೆ ಇರಲ್ಲ. ಅರ್ಜಿ ಹಾಕಿರುವ ಸಂದರ್ಭ ಅಪ್ಲೋಡ್ ಆಗಿರುವ ಫೋಟೋ ಆಧರಿಸಿ, ಮೊಬೈಲ್ ಆ್ಯಪ್ ಮೂಲಕ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಕೆಲವು ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಗುರುತಿಸಿರುವ KEA ಜಾಮರ್ ಅಳವಡಿಸಿದೆ. ಈ ಹಿಂದೆ ನಡೆದಿದ್ದ ಘಟನೆಗಳ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಪರೀಕ್ಷಾ ಕೇಂದ್ರ ಯಾವುದು ಅಂತ ಬಹಿರಂಗ ಮಾಡಲ್ಲ ಎಂದಿದ್ದಾರೆ. ಈ ಬಾರಿ ಹಾಲ್ ಟಿಕೆಟ್ ಜೊತೆಗೆ OMR ಶೀಟ್‌ ಕೂಡ ಕೊಟ್ಟಿದ್ದೇವೆ. ಅದನ್ನು ಪ್ರಾಕ್ಟಿಸ್ ಮಾಡಿ ಪರೀಕ್ಷೆ ಬರೆಯಿರಿ, OMR ಬಬಲ್ ಮಾಡುವಾಗ ತಪ್ಪಾಗಿ ನಮೂದು ಮಾಡಬಾರದು ಎಂದಿದ್ದಾರೆ. ಈ ಬಾರಿ ಪರೀಕ್ಷೆ ಬರೆಯಲು 3 ಲಕ್ಷದ 34 ಸಾವಿರದ 400 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ ಫಲಿತಾಂಶವನ್ನೂ ನಾವು ಪರಿಗಣನೆ ಮಾಡುತ್ತೇವೆ. ಯಾವುದು ಗರಿಷ್ಠ ಅಂಕ ಇರುತ್ತೋ ಅದನ್ನು ಪರಿಗಣನೆ ಮಾಡುತ್ತೇವೆ ಎಂದಿದ್ದಾರೆ.

ಕಳೆದ ವರ್ಷ ಜನಿವಾರ ಬಿಚ್ಚಿಸಿರುವ ವಿಚಾರದಲ್ಲಿ ಧಾರ್ಮಿಕ ಭಾವಕ್ಕೆ ಧಕ್ಕೆ ಆಗಿದೆ. ಡ್ರೆಸ್ ಕೋಡ್ ವಿಚಾರವಾಗಿ ವಿಶೇಷವಾಗಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ವಸ್ತ್ರ ಸಂಹಿತೆ ಅಧಿಕಾರಿ ನೇಮಕ ಮಾಡಿದ್ದು, 2 ಬಾರಿ ಈಗಾಗಲೇ ತರಬೇತಿ ಕೊಟ್ಟಿದ್ದೇವೆ. ವಸ್ತ್ರ ಸಂಹಿತೆ ಎಂದರೇನು..? ಈ ಎಲ್ಲಾ ವಿಚಾರದ ಬಗ್ಗೆ ಮಾಹಿತಿ & ತರಬೇತಿ ಕೊಟ್ಟಿದ್ದೇವೆ. ಧಾರ್ಮಿಕವಾಗಿ ಕೆಲವು ಡ್ರೆಸ್ ಹಾಕಲೇಬೇಕು ಅಂದರೆ, ಪರೀಕ್ಷಾ ಕೇಂದ್ರಕ್ಕೆ 2 ಗಂಟೆ ಮೊದಲು ಸಂಸ್ಥೆಗೆ ರಿಪೋರ್ಟ್ ಮಾಡಬೇಕು. ತಮ್ಮ ಸಂಪೂರ್ಣ ತಪಾಸಣೆ ಮಾಡಿದ ಬಳಿಕ ಪರೀಕ್ಷಾ ಕೇಂದ್ರಕ್ಕೆ ಬರ್ತಾರೆ. ಸಿಖ್ ಇದ್ದೀನಿ ಪೇಟ ತೆಗೆಯಲು ಬರಲ್ಲ ಅಂದ್ರೆ ಅಂತವರು 2 ಗಂಟೆ ಮುಂಚೆ ಬರಬೇಕು. ಪರಿಶೀಲನೆ ಮಾಡದೆ ಪರೀಕ್ಷೆಗೆ ಹೋಗಲು ಅವಕಾಶ ಇಲ್ಲ ಎಂದಿದ್ದಾರೆ.

ಈ ಬಾರಿ ವಸ್ತ್ರ ಸಂಹಿತೆ ಪ್ರಕಾರ ಉದ್ದ ತೋಳುಗಳ ಡ್ರೆಸ್ ಧರಿಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ. ಕಿವಿ, ತಲೆ ಮುಚ್ಚುವಂತಹ ಯಾವುದೇ ಉಡುಪುಗಳನ್ನ ಧರಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬರಬಾರದು. ಮಂಗಳ ಸೂತ್ರ ಹೊರತುಪಡಿಸಿ, ಯಾವುದೇ ಆಭರಣ, ಲೋಹದ ವಸ್ತುಗಳನ್ನ ಧರಿಸಬಾರದು. ಶೂ ಹಾಕಿಕೊಂಡು ಬರುವಂತಿಲ್ಲ. ಚಪ್ಪಲಿ, ಕಡಿಮೆ‌ ಹಿಮ್ಮಡಿ ಇರುವ ಸ್ಯಾಂಡ್‌‌ಗಳನ್ನ ಹಾಕಬಹುದು. ಧಾರ್ಮಿಕ ಉಡುಪು ಧರಿಸಿ ಬರಲು ಇಚ್ಛಿಸುವವರು, ಪರೀಕ್ಷೆ ನಡೆಯುವ 2 ಗಂಟೆ ಮೊದಲು ಬರಬೇಕು. ಆ ರೀತಿ ಬಂದವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

ಪರೀಕ್ಷಾ ಕೇಂದ್ರದಿಂದ OMR ಶೀಟ್ ತಂದಾಗ ವೆಬ್‌‌ಸೈಟ್ ಅಲ್ಲಿ ಅಪ್ಲೋಡ್ ಆಗುತ್ತದೆ. ಈ ವರ್ಷ ವಿದ್ಯಾರ್ಥಿಗಳ OMR ಶೀಟ್ KEA ವೆಬ್ ಸೈಟ್‌ಗೆ ಅಪ್ಲೋಡ್ ಮಾಡುವ ನಿರ್ಧಾರ ಮಾಡಿದ್ದು, CET ಪರೀಕ್ಷೆ ಮುಗಿದ ಅರ್ಧ ಗಂಟೆ ಒಳಗಡೆ OMR ಶೀಟ್ ಅಪ್ಲೋಡ್ ಮಾಡುವ ಮೂಲಕ ಪಾರದರ್ಶಕತೆ ತರುವ ಉದ್ದೇಶದಿಂದ KEA ಈ ನಿರ್ಧಾರ ಮಾಡಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ OMR ಶೀಟ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ಸಹಿತ ಎಲ್ಲಾ ಮಾಹಿತಿ ಲಭ್ಯ.

Related posts

ಬೆಂಗಳೂರಲ್ಲಿ ಒಂದೇ ಒಂದು ದಿನದ ಒಂದು ಗಂಟೆ ಮಳೆಗೆ 10 ಜನರ ಬಲಿ

Publicspot

Banu Musthaq Angree: ಸಾಹಿತಿ ಬಾನು ಮುಷ್ತಾಕ್​ ಕಿಡಿಕಾರಿದ್ದು ಯಾಕೆ..?

Publicspot

Caste Census Doubt; ಜಾತಿ ಜನಗಣತಿಗೆ ಸರ್ಕಾರದಲ್ಲೇ ವಿರೋಧ.. ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ಡೌಟ್..

Publicspot

ಹೈಕೋರ್ಟ್‌ ಆದೇಶಕ್ಕೆ ಮಣಿದ ಸರ್ಕಾರ.. ನಾಳೆಯೇ SSLC ರಿಸಲ್ಟ್‌

Publicspot

ರಾಜ್ಯದಲ್ಲಿ ಬೇಸಿಗೆ ಮಳೆ.. ಸಿಡಿಲಬ್ಬರಕ್ಕೆ ಜೀವ ಬಲಿ, ಮರ, ವಿಂಡ್‌ ಫ್ಯಾನ್‌‌ ಭಸ್ಮ..

Publicspot

ಕಾಂಗ್ರೆಸ್ ಶಾಸಕ H.Y ಮೇಟಿ ನಿಧನರಾಗಿದ್ದು, ಬಾಗಲಕೋಟೆಯಲ್ಲಿ ಅಂತಿಮ ವಿಧಿವಿಧಾನ..

Publicspot