The Public Spot
ಅಪರಾಧ

Dharmasthala SIT Investigation: ಧರ್ಮಸ್ಥಳ ಕೇಸ್​ ಬಗ್ಗೆ ಮಾಸ್ಕ್​ ಮ್ಯಾನ್​ ಸುಳ್ಳು ಹೇಳ್ತಿರೋದ್ಯಾಕೆ..?

ಮಂಗಳೂರು: ಧರ್ಮಸ್ಥಳ ವಿಚಾರ ತನಿಖೆ ನಡೆಸುತ್ತಿರುವ SIT ಟೀಂ ಶನಿವಾರ ಬೆಂಗಳೂರಿನಲ್ಲಿರುವ ಜಯಂತ್​ ಟಿ ಅವರ ಮನೆಗೆ ಮಾಸ್ಕ್​ ಮ್ಯಾನ್​ ಜೊತೆಗೆ ಬಂದು ಮಹಜರು ಪ್ರಕ್ರಿಯೆ ನಡೆಸಿತ್ತು. ಈ ಬಗ್ಗೆ RTI ಕಾರ್ಯಕರ್ತ ಜಯಂತ್ ಟಿ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ ಐ ಟಿ ಅಧಿಕಾರಿಗಳು ನಮ್ಮ ಮನೆಯಲ್ಲಿ ಮಹಜರು ಮಾಡಿದ್ದು ಸಂತೋಷದ ವಿಷಯ. ಇದು ಸಣ್ಣ ಹೋರಾಟವಲ್ಲ, ವಿಶ್ವವೇ ನೋಡುತ್ತಿರುವ ಹೋರಾಟ ಎಂದಿದ್ದಾರೆ.

ಧರ್ಮಸ್ಥಳ ದೇವಸ್ಥಾನದ ವಿರುದ್ಧ ಕುತಂತ್ರ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಸತ್ಯ ಹೊರಗೆ ಬರಲು ಇಂತಹ ದಾಳಿಯಾಗಬೇಕು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಸೌಜನ್ಯ ಹೋರಾಟ ಮಾಡಲು ಶ್ರಮಿಸಿದ್ದೇವೆ. ಅತ್ಯಾಚಾರ ಕೊಲೆ ತನಿಖೆಗೆ ಒತ್ತಾಯಿಸಿದ್ದೇವೆ. ಧರ್ಮಸ್ಥಳದ ಎಲ್ಲಾ ಆಗು ಹೋಗುಗಳೂ ನನಗೆ ಗೊತ್ತು. ಧರ್ಮ ಉಳಿಯಬೇಕು, ಮಹೇಶಣ್ಣನ ಹೋರಾಟದ ಜೊತೆ ಕೈಜೋಡಿಸಿದ್ದೇನೆ ಎಂದಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಜೈಲಿಗೆ ಹಾಕಿದ ಹಾಗೆ ನಮ್ಮನ್ನು ಜೈಲಿಗೆ ಹಾಕಲು ಪ್ರಯತ್ನಿಸಿದರು. ನನ್ನನ್ನು ಕೂಡ ಬಂಧನ ಮಾಡಲು ಪ್ರಯತ್ನಿಸಿದರು. ಎಸ್ ಐ ಟಿ ದಾಳಿ ಮಾಡುತ್ತಿದೆ, ಒಳ್ಳೆಯ ವಿಚಾರ. ಭೀಮ ನಮ್ಮ ಮನೆಗೆ ಬಂದು ಹೋದ ಬಗ್ಗೆ ಕೇಳಿದ್ದಾರೆ. ಮನೆಯವರಿಗೆ ಎಲ್ಲವನ್ನೂ ಸತ್ಯ ಹೇಳಲು ತಿಳಿಸಿದ್ದೆ. ಎಸ್​ಐಟಿ ಟೀಂ ನಮ್ಮ ಮನೆಗೆ ಬಂದರು. ನನ್ನ ಮಗ ಮನೆಗೆ ಹೋಗಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾನೆ. ಮಗಳಿಗೂ ಎಲ್ಲಾ ವಿಚಾರ ತಿಳಿಸಲು ಹೇಳಿದ್ದೇನೆ. ಸಂಜೆ ನನ್ನ ಪತ್ನಿ ಹೋಗಿ ಮತ್ತಷ್ಟು ವಿಚಾರ ತಿಳಿಸಿದ್ದಾರೆ. ತನಿಖೆ ಮಾಡುವುದು ಎಸ್ಐಟಿಯ ಕೆಲಸ ಅದನ್ನು ಮಾಡಿದ್ದಾರೆ ಎಂದಿದ್ದಾರೆ.

ಮಾಸ್ಕ್​ ಮ್ಯಾನ್​ ಚಿನ್ನಯ್ಯನಿಗೆ ಬುರುಡೆಯನ್ನು ನಾನು ತಂದು ಕೊಟ್ಟಿಲ್ಲ ಎಂದಿರುವ ಜಯಂತ್​ ಟಿ, ದೂರುದಾರನೇ 164 ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ವಿಚಾರಣೆ ವೇಳೆ ಸುಳ್ಳು ಹೇಳಿದ್ದಾನಾ ಗೊತ್ತಿಲ್ಲ..? ಅವನಿಗೆ ದುಡ್ಡು ಕೊಟ್ಟು ಕರೆದುಕೊಂಡು ಬಂದಿರುವುದು ಎನ್ನುತ್ತಾರೆ. ಆದರೆ ನಾವು ಯಾವುದೇ ದುಡ್ಡು ಕೊಟ್ಟಿಲ್ಲ.. ಇದು ಸತ್ಯ ಪರ ಹೋರಾಟ. ಮಹೇಶಣ್ಣನ ಮನೆಯಲ್ಲಿ ಅವನಿಗೆ ಆಶ್ರಯ ನೀಡಲಾಗಿತ್ತು. ದೂರುದಾರ ಈಗ ಯಾಕೆ ಆರೋಪಿಯಾಗಿದ್ದಾನೆ ಅನ್ನೋದು ನಮಗೆ ಗೊತ್ತಿಲ್ಲ. ದೂರುದಾರನ ಬಳಿ ಸತ್ಯ ಇಲ್ಲ. ಯಾಕೆ ಸುಳ್ಳು ಹೇಳುತ್ತಿದ್ದಾನೆ ಅನ್ನೋದು ಗೊತ್ತಾಗಬೇಕು. ಸರಿಯಾಗಿ ಹುಡುಕಿದರೆ ಕಳೇಬರ ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ.

ಗಿರೀಶ್ ಮಟ್ಟಣ್ಣವರ್​ ಈಗಾಗಲೇ ಈ ವಿಚಾರ ತಿಳಿಸಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಅವರಿಗೆ ಚಿನ್ನಯ್ಯ ಮೊದಲೇ ಹೋಗಿ ತೋರಿಸಿದ್ದ. ಆತ ತೋರಿಸಿದ ಜಾಗದಲ್ಲಿ ಮೂಳೆಗಳು ಸಿಗಲೇಬೇಕು. ಒಬ್ಬ ಹಿರಿಯ ಸ್ವಾಮೀಜಿಯ ಸಂಪರ್ಕ ಮಾಡಿದ್ದಾರೆ. ಧರ್ಮಸ್ಥಳದ ರಕ್ಷಣೆ ಯಾರು ಮಾಡುವ ಅಗತ್ಯ ಇಲ್ಲ. ಎಲ್ಲರೂ ಆ ಸ್ವಾಮೀಜಿಯ ಬಳಿ ಹೋಗಿ ಕೇಳಿ. ಆ ಸ್ವಾಮೀಜಿ ಮಟ್ಟಣ್ಣವರ್, ಮಹೇಶ್ ಅಣ್ಣ ಹೋಗಿದ್ದಾರೆ. ಸ್ವಾಮೀಜಿಯ ಮುಂದೆ ಎಲ್ಲವನ್ನು ಹೇಳಿದ್ದಾರೆ. ಯಾವುದೇ ರೀತಿಯ ವಿಚಾರಣೆ ಎದುರಿಸಲು ನಾನು ಸಿದ್ಧ. ಬುರುಡೆಯನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದು ಹೌದು. ನಾನು ಮಾತ್ರ ಅಲ್ಲ ಕೆಲವಾರು ಜನ ಇದ್ದರು. ಸರ್ವೋಚ್ಚ ನ್ಯಾಯಾಲಯದ ಮೂಲಕ ಸಹಾಯ ಪಡೆಯಲು ತೆಗೆದುಕೊಂಡು ಹೋಗಲಾಗಿತ್ತು. ಶವಗಳನ್ನು ಹೂತ ವಿಚಾರ ಹಿಡಿದುಕೊಂಡು ಚೆನ್ನಯ್ಯನ ಬಂದಿರೋದು. ಇದರಲ್ಲಿ ತಂತ್ರ ಕುತಂತ್ರ ಏನೂ ಇಲ್ಲ ಎಂದಿದ್ದಾರೆ.

Related posts

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

Publicspot

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

Publicspot

ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ..! 29 ಸ್ಥಳ.. 1909 ಮಂದಿ..

Publicspot

ಬೆಂಗಳೂರಿನ ಮಂತ್ರಿ ಮಾಲ್‌ ಪಕ್ಕದಲ್ಲೇ ಪ್ರೇಯಸಿಯ ಕತ್ತು ಸೀಳಿ ಮರ್ಡರ್‌..!

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot