The Public Spot
ಅಪರಾಧ

Dharmasthala Twist; ಬುರುಡೆ ಹಿಂದೆ ಹೊರಟ SIT ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​..

ಧರ್ಮಸ್ಥಳ ಬುರುಡೆ ಕೇಸ್​ನಲ್ಲಿ ತಮಿಳುನಾಡು ಸಂಸದ, ಕರ್ನಾಟಕ ಕೇಡಾರ್​ನ ಮಾಜಿ ಐಎಎಸ್​ ಅಧಿಕಾರಿ ಸಸಿಕಾಂತ್​ ಸೆಂಥಿಲ್​ ಮೇಲೆ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಆರೋಪ ಮಾಡಿದ್ದರು. ಆದರೆ ಸಸಿಕಾಂತ್​ ಸೆಂಥಿಲ್​, ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಲಾಗಿದೆ. ನನಗೂ ಈ ಕೇಸ್​ಗೂ ಸಂಬಂಧವೇ ಇಲ್ಲ. ಎಂದು ಆರೋಪ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಸಸಿಕಾಂತ್ ಸೆಂಥಿಲ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸೆಪ್ಟೆಂಬರ್ 11ರಂದು 42ನೇ ಎಸಿಎಂಎಂ ಕೋರ್ಟ್​ನಲ್ಲಿ ವಿಚಾರಣೆಗೆ ನಿಗದಿಯಾಗಿದೆ.

ಜನಾರ್ದನ ರೆಡ್ಡಿ ಕರ್ನಾಟಕದ ಪ್ರಾಪರ್ಟಿಯನ್ನ ಲೂಟಿ ಮಾಡಿದ ವ್ಯಕ್ತಿ. ಈಗಾಗಲೇ 7 ವರ್ಷ ಜೈಲು ಶಿಕ್ಷೆಗೆ ಒಳಗಾಗಿ, ಶಿಕ್ಷೆಗೆ ತಡೆಯಾಜ್ಞೆ ಪಡೆದು ಹೊರಗಿದ್ದಾರೆ. ಅಂಥಹ ವ್ಯಕ್ತಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ನನಗೆ ಬುರುಡೆ ಬಗ್ಗೆ ಗೊತ್ತಿಲ್ಲ. ನನ್ನನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಹೇಳಿದ್ದಾರೆ. ಆದರೆ ಜನಾರ್ದನ ರೆಡ್ಡಿ ಮಾತ್ರ ಸಸಿಕಾಂತ್​ ಸೆಂಥಿಲ್​ ಮೇಲೆ ಎಸ್​ಐಟಿ ವಿಚಾರಣೆ ಮಾಡ್ಬೇಕು ಎಂದು ಆಗ್ರಹ ಮಾಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರದ ಇರುವ ಕಾರಣಕ್ಕೆ ಸಸಿಕಾಂತ್​ ಸೆಂಥಿಲ್​ ವಿಚಾರಣೆ ಕಷ್ಟ ಸಾಧ್ಯ. ಹೀಗಾಗಿ ಈ ಪ್ರಕರಣವನ್ನು ಎನ್​ಐಎ ಅಥವಾ ಸಿಬಿಐ ತನಿಖೆ ಮಾಡುವುದು ಸೂಕ್ತ ಎಂದು ಒತ್ತಾಯ ಮಾಡಿದ್ದಾರೆ.

ಸೌಜನ್ಯ ಮಾವ ವಿಠಲ್​ ಗೌಡ ಚಿನ್ನಯ್ಯನೇ ಬುರುಡೆಯನ್ನು ತಂದಿದ್ದು ಎಂದು ಎಸ್​ಐಟಿ ಎದುರು ಒಪ್ಪಿಕೊಂಡಿದ್ದಾರೆ. ಆದರೆ ಆ ಬುರುಡೆ ತರುವಾಗ ಚಿನ್ನಯ್ಯನ ಜೊತೆಗೆ ನಾನಿದ್ದೆ ಎಂದಿರುವ ಕಾರಣಕ್ಕೆ ವಿಠಲ್​ ಗೌಡರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಎಲ್ಲಾ ಮಾಡಲಾಗಿದೆ. ತಲೆ ಬುರುಡೆ ತಂದಾಗ ದೇಹದ ಉಳಿದ ಭಾಗ ಎಲ್ಲಿದೆ..? ಅಸಲಿಗೆ ಆ ತಲೆ ಬುರುಡೆ ಯಾರದ್ದು..? ಅನ್ನೋ ಬಗ್ಗೆ ಎಸ್​ಐಟಿ ಟೀಂ ತನಿಖೆ ಮಾಡುತ್ತಿದೆ. ಈ ನಡುವೆ ಮಧ್ಯರಾತ್ರಿ ಆದರೂ SIT ಮತ್ತೆ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ಮುಂದುವರಿಸಿದೆ. ವಿಠಲ್​ ಗೌಡನ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಸಂಗ್ರಹ ಆದರೆ ಬಂಧನ ಮಾಡಿದರೂ ಅಚ್ಚರಿಯೇನಿಲ್ಲ ಎನ್ನಲಾಗ್ತಿದೆ.

Related posts

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot

ನಗೆಯ ಪ್ರೀತಿಗೆ ಬಲಿಕೊಟ್ಟ ಪ್ರಿಯಕರ.. ಹುಡುಗಿ ಮಾಡಿದ್ದು ಒಂದೇ ತಪ್ಪು..

Publicspot

Minors delivery: ಹೊಟ್ಟೆ ನೋವು ಎಂದ ಶಾಲಾ ಬಾಲಕಿಗೆ ಮಗು ಹುಟ್ಟಿದ್ದೇಗೆ..?

Publicspot

ಕುರುಬ ಸಮುದಾಯದ ನೌಕರನ ಮೇಲೆ ಕೈ ಮಾಡಿದ ಸವಧಿ.. ಆಕ್ರೋಶ

Publicspot

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

Publicspot