The Public Spot
ಅಪರಾಧ

Bus Driver Ask Kiss for mobile charging: ಬಸ್​ ಡ್ರೈವರ್​ಗೆ ಬಿತ್ತು ಬೇಜಾನ್​ ಗೂಸಾ..

ಬೆಂಗಳೂರಿನಲ್ಲಿ ಮೊಬೈಲ್​ ಚಾರ್ಜ್​ ಮಾಡಿಕೊಡಿ ಅಂದಿದ್ದಕ್ಕೆ ನಾನು ಮೊಬೈಲ್​ ಜಾರ್ಜ್​ ಮಾಡೋಕೆ ಒಂದು ಮುತ್ತನ್ನು ಚಾರ್ಜ್​ ಮಾಡ್ತೀನಿ ಅಂದ ಬಸ್​ ಡ್ರೈವರ್​ಗೆ ಬೇಜಾನ್​ ಗೂಸಾ ಕೊಟ್ಟಿರುವ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರ್ತಿದ್ದ ಅಪ್ರಾಪ್ತ ಬಾಲಕಿ ಕ್ರಾಸ್ ಇಂಡಿಯಾ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಪ್ರಯಾಣ ಮಾಡ್ತಿದ್ಲು. ಅರ್ಧ ದಾರಿಗೆ ಬರ್ತಿದ್ದಂತೆ ಹಾಗೆ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಡ್ರೈವರ್ ಬಳಿ ಮೊಬೈಲ್ ಚಾರ್ಜ್‌ ಹಾಕೋದಕ್ಕೆ ಮೊಬೈಲ್​ ಕೊಟ್ಟಿದ್ದಳು.

ಮೊಬೈಕ್​ ಚಾರ್ಜ್​ಗೆ ಕೊಟ್ಟಿದ್ದ ಬಾಲಕಿ ಕೆಲವು ಸಮಯದ ನಂತರ ನನ್ನ ಮೊಬೈಲ್​ ಕೊಡಿ ಅಂತಾ ಕೇಳಿದ್ದಾಳೆ. ಸ್ಪೇರ್ ಡ್ರೈವರ್ ಆಗಿ ಬಂದಿದ್ದ ಆರಿಫ್​ ಮೊಬೈಕ್​ ಕೊಡಬೇಕಿತ್ತು. ಆದರೆ ಮೊಬೈಲ್​ ಚಾರ್ಜ್​ ಮಾಡಿದ್ದಕ್ಕೆ ಚಾರ್ಜ್​ ಕೊಡು ಅಂದಿದ್ದಾನೆ. ಹಣ ಕೇಳ್ತಾ ಇರ್ಬೇಕು ಅಂತಾ ಈ ಹೆಣ್ಣು ಮಗಳು ಅಂದುಕೊಂಡ್ರೆ, ಈ ಪೋಲಿ ಡ್ರೈವರ್​​ ಮೊಬೈಲ್‌ ಕೊಡದೆ ಮುತ್ತು ಕೊಡು ಅಂತಾ ಸತಾಯಿಸಿದ್ದಾನೆ. ಒಂದು ಕಿಸ್ ಕೊಟ್ರೆ ಮಾತ್ರ ಫೋನ್ ವಾಪಸ್ ಕೊಡ್ತೀನಿ ಅಂತಾ ಕಿರಿಕ್‌ ಮಾಡಿದ್ದಾನೆ. ಕಾಡಿ ಬೇಡಿದ ಅಪ್ರಾಪ್ತ ಬಾಲಕಿ ಮೊಬೈಲ್​ ಫೋನ್ ಈಸ್ಕೊಂಡು ಬಂದಿದ್ದಾಳೆ.

ಅಷ್ಟರಲ್ಲೇ ಮುಗಿಸಿದ್ದರೆ ಬಿಸಿಬಿಸಿ ಗೂಸಾ ಬೀಳ್ತಾನೆ ಇರಲಿಲ್ಲ. ಈ ಕಾಮುಕ ಡ್ರೈವರ್ ಆರಿಫ್​, ಬಸ್‌ನಲ್ಲಿ ಕಿರುಕುಳ ಕೊಡೋದಕ್ಕೆ ಶುರು ಮಾಡಿದ್ದಾನೆ. ಯುವತಿ ಮಲಗಿದ್ದ ಸೀಟ್‌ ಬಳಿ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ಇದ್ರಿಂದ ಭಯಗೊಂಡ ಅಪ್ರಾಪ್ತ ಹೆಣ್ಣುಮಗಳು, ಬೆಂಗಳೂರಿನಲ್ಲಿರೋ ತನ್ನ ತಾಯಿ ಹಾಗೂ ಅಣ್ಣನಿಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾಳೆ. ಹೀಗಾಗಿ ಬೆಳ್ಳಂಬೆಳಗ್ಗೆಯೇ ಚಾಲುಕ್ಯ ಸರ್ಕಲ್ ಬಳಿ ಬಂದು ನಿಂತಿದ್ದ ತಾಯಿ ಹಾಗೂ ಅಣ್ಣ, ಬಸ್‌ ಬರ್ತಿದ್ದಂತೆ ಡ್ರೈವರ್ ಆರಿಫ್‌ಗೆ ಚಳಿ ಬಿಡಿಸಿದ್ದಾರೆ. ನಡುರಸ್ತೆಯಲ್ಲಿ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ಬೇಜಾನ್​ ಕಜ್ಜಾಯ ಬೀಳ್ತಿದ್ದ ಹಾಗೆ ಕಾಮುಕ ಆರೀಫ್ ಕಂಗಾಲಾಗಿದ್ದಾನೆ. ನನ್ನದು ತಪ್ಪಾಯ್ತು ಬಿಟ್ಬಿಡಿ ಅಂತಾ ಬೇಡಿಕೊಂಡಿದ್ದಾನೆ. ಆದ್ರೆ, ಎತ್ತಾಕೊಂಡು ಹೋದ ಪೊಲೀಸ್ರು ಆರೋಪಿ ವಿರುದ್ಧ ಫೋಕ್ಸೋ ಕೇಸ್ ದಾಖಲಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಆರೋಪಿ ಮೊಹಮ್ಮದ್ ಆರೀಫ್ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಹೈಗ್ರೌಂಡ್ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ಪರಪ್ಪನ ಅಗ್ರಹಾರಕ್ಕೆ‌ ಕಳುಹಿಸಿದ್ದಾರೆ.. ಹೈದರಾಬಾದ್ ಮೂಲದ ಆರೀಫ್‌, ಖಾಸಗಿ ಬಸ್‌ನಲ್ಲಿ‌ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಬ್ಯಾಡರಹಳ್ಳಿಯ ನಿವಾಸಿಯಾಗಿರುವ ಬಾಲಕಿ ಹೈದರಾಬಾಸ್‌ನ ತನ್ನ ಅಕ್ಕನ ಮನೆಗೆ ಹೋಗಿದ್ದಳು. ಮರಳಿ ವಾಪಸ್​ ಬೆಂಗಳೂರಿಗೆ ಬರುವಾಗ ಲೈಂಗಿಕ‌ ಕಿರುಕುಳ ಕೊಡಲಾಗಿತ್ತು.

Related posts

Aunty Rape: ಚಿಕ್ಕಮ್ಮನ ಜೊತೆಗೇ ಕಾಮ ಕೇಳಿ.. 10 ವರ್ಷದ ಬಳಿಕ ಅತ್ಯಾಚಾರ ಎಂದ ಆಂಟಿ..

Publicspot

ಅಮ್ಮನ ಹುಟ್ಟು ಹಬ್ಬದ ದಿನವೇ ಮಗಳ ಕೊಲೆ.. ಅಮ್ಮ ನೀನೆಷ್ಟು ಕ್ರೂರಿ..!!

Publicspot

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

Publicspot

Kashmir ಕಾಶ್ಮೀರದಲ್ಲಿ ಫೋಟೋ ಶೂಟ್​.. ವಾರ್ಷಿಕೋತ್ಸವಕ್ಕೂ ಮುನ್ನ ಮಾಸ್ಟರ್ ಪ್ಲ್ಯಾನ್

Publicspot

ATM ವಾಹನದಲ್ಲಿ 7.11 ಕೋಟಿ ಕಳವು.. ಬೆಂಗಳೂರು ಪೊಲೀಸ ಬಲೆಗೆ ಬಿದ್ದ 6 ಜನ..

Publicspot

ಬ್ಯಾಂಕ್ ಮ್ಯಾನೇಜರ್‌ನ ಮರ್ಡರ್ ಮಾಡಿದ್ಯಾಕೆ ಗಂಡ.. ಇಬ್ಬರು ಇಲ್ಲ ಇಬ್ಬರೂ ಅನಾಥ..

Publicspot