The Public Spot
Uncategorized

ಸುಪ್ರೀಂಕೋರ್ಟ್​ನಲ್ಲಿ PIL ಅರ್ಜಿ ವಜಾ ಮತ್ತು ಮಾಧ್ಯಮಗಳಲ್ಲಿ ಬಂದ ಅಸತ್ಯ..!

ಧರ್ಮಸ್ಥಳ ವಿಚಾರವಾಗಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಬುರುಡೆ ಗ್ಯಾಂಗ್​ ಅಲಿಯಾಸ್​​ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ದುಷ್ಕೃತ್ಯಗಳನ್ನ ವಿರೋಧಿಸಿಕೊಂಡು ಬರುತ್ತಿರುವ ಜನರು ಸಲ್ಲಿಸಿದ್ದ PIL ಅರ್ಜಿ ವಜಾ ಆಗಿತ್ತು. ಆ ಪಿಐಎಲ್​ ವಿಚಾರವನ್ನು ಮುಚ್ಚಿಟ್ಟು ರಾಜ್ಯದಲ್ಲಿ ಎಸ್​ಐಟಿ ರಚನೆ ಆಗುವಂತೆ ಈ ತಂಡ ನೋಡಿಕೊಂಡಿದೆ ಎನ್ನುವ ಬಗ್ಗೆ ರಾಜಕೀಯ ವಾಗ್ದಾಳಿಗಳು ನಡೆದವು. ರಾಜಕಾರಣಿಗಳೂ ಸಹ ಈ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದರು. ಮಾಧ್ಯಮಗಳಲ್ಲೂ ದೊಡ್ಡ ಮಟ್ಟದ ಸುದ್ದಿಯಾಗಿ ಬಂದಿತ್ತು. ಸುಪ್ರೀಂಕೋರ್ಟ್​ ವಕೀಲ ಕೆವಿ ಧನಂಜಯ್​ ಬಗ್ಗೆಯೂ ಕೆಲವರು ಜಾಲತಾಣದಲ್ಲಿ ಕಿಡಿಕಾರಿದ್ದರು. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ರು. ಸರ್ಕಾರದ ನಿರ್ಧಾರದಿಂದ ನನ್ನ ಹೊಳಪು ಉಳಿದುಕೊಂಡಿದೆ ಎಂದರು.

ಸರ್ಕಾರದ ಎಸ್​ಐಟಿ ಮಾಡಿದ್ದು ಸರಿ ಎಂದು ಸ್ವತಃ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಸ್ವಾಗತ ಮಾಡ್ತಿದ್ದಾರೆ. ಆದರೆ ಕೆಲವರು ಎಸ್​ಐಟಿ ತನಿಖೆಯನ್ನು ಏನಾದರೂ ಆಗಲಿ ನಿಲ್ಲಿಸಬೇಕು ಅನ್ನೋ ಕುತಂತ್ರದ ರಾಜಕಾರಣವೂ ನಡೆಯುತ್ತಿದೆ. ಈ ನಡುವೆ ಇತ್ತೀಚಿಗೆ ಶುರುವಾದ ಸುಪ್ರೀಂಕೋರ್ಟ್​ ಪಿಐಎಲ್​ ವಿಚಾರವೂ ರಾಜಕಾರಣದ ತಿರುವು ಪಡೆದುಕೊಳ್ತು. ಎಲ್ಲದ್ದಕ್ಕೂ ಸ್ವತಃ ಸುಪ್ರೀಂಕೋರ್ಟ್‌ನಲ್ಲಿ ಪಿಎಎಲ್ ಅರ್ಜಿ ವಜಾ ಆಗಿರುವ ವಿಚಾರವಾಗಿ ಹಿರಿಯ ವಕೀಲ ಕೆ.ವಿ ಧನಂಜಯ್ ಸ್ಪಷ್ಟನೆ ನೀಡಿದ್ದು, ದೂರುದಾರರು ಸುಪ್ರೀಂಕೋರ್ಟ್‌ನ ಹಸ್ತಕ್ಷೇಪ ಕೋರಿದ್ದರು. ಯಾವುದೇ FIR ದಾಖಲಾಗಿಲ್ಲ. ತಡವಾಗಿ ಅರ್ಜಿ ಸಲ್ಲಿಸಿದ್ದರಿಂದ ಸುಪ್ರೀಂಕೋರ್ಟ್‌ ವಜಾ ಮಾಡಿತ್ತು ಎಂದಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ ವಕೀಲ ಕೆ ವಿ ಧನಂಜಯ್, ದೂರುದಾರರು ಸುಪ್ರೀಂಕೋರ್ಟ್‌ನ ಹಸ್ತಕ್ಷೇಪ ಕೋರಿದ್ದರು. ಪ್ರಕರಣದ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಸುಪ್ರೀಂಕೋರ್ಟ್​ಗೆ ತಡವಾಗಿ ಅರ್ಜಿ ಸಲ್ಲಿಸಿದ್ದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡ್ತು. ಆ ವೇಳೆ ಸುಪ್ರೀಂಕೋರ್ಟ್ ಆರೋಪಗಳ ಮೇಲಿನ ಅರ್ಹತೆಗಳನ್ನ ಪರಿಶೀಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ರಿಟ್ ಅರ್ಜಿ ಸಲ್ಲಿಕೆ ವಿಳಂಬ ಮಾಡಿದ್ದರ ಆಧಾರದ ಮೇಲೆ ಅರ್ಜಿಯನ್ನು ವಜಾಗೊಳಿಲಾಗಿದೆ. ಯಾವುದೇ ಪ್ರತಿವಾದಿಗಳಿಗೆ ಅಥವಾ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್ ನೀಡಲಿಲ್ಲ. ಸುಪ್ರೀಂಕೋರ್ಟ್ ಪ್ರಕರಣದ ಅರ್ಹತೆಯ ಬಗ್ಗೆ ಹೇಳಲು ಏನೂ ಇರಲಿಲ್ಲ. ಅರ್ಹತೆಯ ಆಧಾರದ ಮೇಲೆ ಅರ್ಜಿಯನ್ನು ವಜಾ ಮಾಡಿರಲಿಲ್ಲ ಎಂದಿದ್ದಾರೆ.

ಸುಪ್ರೀಂಕೋರ್ಟ್ ಹೇಳಿಕೆಯು ಪ್ರಕರಣದ ಮೆರಿಟ್ಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಮೆರಿಟ್ ಪರಿಶೀಲಿಸದೆ ಸುಪ್ರೀಂಕೋರ್ಟ್ ಪಿಐಎಲ್ ಅನ್ನು ವಜಾಗೊಳಿದೆ. ಹೀಗಾಗಿ ಯಾವುದೇ ಪ್ರಸ್ತುತತೆ ಅಥವಾ ಪರಿಣಾಮ ಬೀರುವುದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 03 ರಂದು ದೂರು ನೀಡಲಾಯಿತು. ದೂರಿನ ಮೇಲೆ FIR ಆಯ್ತು ಹಾಗೂ ರಾಜ್ಯ ಸರ್ಕಾರ SIT ರಚನೆ ಮಾಡಿತು. ಈ ಕ್ರಮಗಳು ಕಾನೂನಿನ ಪ್ರಕಾರ ಆಗಿದೆ. ಕಾನೂನಿನ ಅಡಿ ಪೊಲೀಸರು ಗುರುತಿಸಬಹುದಾದ ಅಪರಾಧ, ತನಿಖೆ ಮಾಡುವ ಶಾಸನಬದ್ಧ ಕರ್ತವ್ಯವನ್ನು ಹೊಂದಿದ್ದಾರೆ. ಸಾಂವಿಧಾನಿಕ ಕಾನೂನಿನ ಅಡಿಯಲ್ಲಿ, ರಾಜ್ಯ ಸರ್ಕಾರವು SIT ರಚಿಸುವ ಮತ್ತು ತನಿಖೆಗಳನ್ನು ಅದಕ್ಕೆ ವಹಿಸುವ ಅಧಿಕಾರ ಹೊಂದಿದೆ. ಇದರಲ್ಲಿ ಸುಪ್ರೀಂಕೋರ್ಟ್ PIL ವಜಾಗೊಳಿಸಿದ್ದಕ್ಕೆ ಸಂಬಂಧವಿಲ್ಲ ಎಂದಿದ್ದಾರೆ.

ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿದೆ ಎಂದು ನಾವು ಮೊದಲೇ ಹೇಳಿದ್ದರೆ ತನಿಖೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು. ಕೋರ್ಟ್ ಅರ್ಹತೆ ನಮೂದಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಆದೇಶ ದಾಖಲಿಸಿದೆ. ಸುಪ್ರೀಂಕೋರ್ಟ್​ ಆದೇಶದಲ್ಲಿ ಎಫ್‌ಐಆರ್ ಮಾಡುವ ಹಾಗೂ ಎಸ್ಐಟಿ ರಚನೆ ತಡೆಯುವಂತಹ ಯಾವುದೇ ಅಂಶವಿಲ್ಲ. ಅಷ್ಟಕ್ಕೂ ದೂರುದಾರ ಮಾಡಿದ ಆರೋಪಗಳು ಮೇಲ್ನೋಟಕ್ಕೆ ಗಂಭೀರವಾಗಿದ್ದವು. ಸರಳವಾಗಿ ಗುರುತಿಸಬಹುದಾದ ಅಪರಾಧ ಬಹಿರಂಗ ಮಾಡಿದ್ದರಿಂದ ಎಸ್‌ಐಟಿ ರಚಿಸಲಾಗಿದೆ. ವಕೀಲರಾಗಿ ನನ್ನ ಪಾತ್ರ ದೂರಿನ ಮೇಲೆ ತನಿಖೆ ಪ್ರಾರಂಭ ಖಚಿತ ಮಾಡಿಕೊಳ್ಳುವುದಾಗಿತ್ತು. ಈ ಪ್ರಕರಣವು ಪ್ರಾಥಮಿಕವಾಗಿ ದೂರುದಾರರ ಹೇಳಿಕೆಗಳ ಮೇಲೆ ನಿಂತಿದೆ. ಅವರ ಯಾವುದೇ ಹೇಳಿಕೆ ಸುಳ್ಳು ಎಂದು ಕಂಡು ಬಂದರೆ ಕೇಸ್ ಆಗುತ್ತದೆ ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Related posts

Delhi Car Blast; ರೆಡ್​ಪೋರ್ಟ್​ ಬಳಿಕ ಕಾರು ಸ್ಫೋಟ.. 10ಕ್ಕೂ ಹೆಚ್ಚು ಸಾವು.. ಪುಲ್ವಾಮಾ ಲಿಂಕ್..!?

Publicspot

Darshan Jail Case; ದರ್ಶನ್‌ ಕೊಲೆಗಾರ ಅಷ್ಟೆ.. ಸೆಲೆಬ್ರಿಟಿ ಅಲ್ಲ.. ಕೋರ್ಟ್‌ನಲ್ಲಿ ಸರ್ಕಾರದ ಸ್ಪಷ್ಟನೆ..!

Publicspot

JDS ಪಾಲಿಗೆ GT ದೇವೇಗೌಡರದ್ದೇ ಚಿಂತೆ.. ಅತ್ಮ ಸಾಕ್ಷಿ ಅಂದ್ರೆ ಏನು..?

Publicspot

Mask Man Arrest: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದಿದ್ದವನೇ ಅರೆಸ್ಟ್​ ಆಗಿದ್ಯಾಕೆ..?

Publicspot

ಬೆಂಗಳೂರಲ್ಲಿ ಮಳೆಯ ರೌದ್ರನರ್ತನ..!

Publicspot

BigBoss Kannada; ಈ ಬಾರಿ ಕನ್ನಡಮಯ ಆಗಿದ್ಯಾಕೆ ಬಿಗ್‌ಬಾಸ್‌..?

Publicspot