The Public Spot
ಅಪರಾಧ

ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ, ಕೇರಳದ ಚೇಟ ಬಂಧನ..

ಸೀರಿಯಲ್‌ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೇಸ್‌ಬುಕ್‌ನಲ್ಲಿ ಗುಪ್ತಾಂಗದ ವಿಡಿಯೊ‌ ಕಳಿಸಿ ಟಾರ್ಚರ್ ಕೊಟ್ಟ ಆರೋಪ ಕೇಳಿ ಬಂದಿದೆ. ತೆಲುಗು ಮತ್ತು ಕನ್ನಡ ಧಾರವಾಹಿಗಳಲ್ಲಿ ನಟನೆಯಲ್ಲಿ ತೊಡಗಿರುವ ನಟಿ ರಂಜಿನಿಗೆ ಸೋಷಿಯಲ್‌ ಮೀಡಿಯಾದಲ್ಲಿ ಟಾರ್ಚರ್‌ ಕೊಟ್ಟಿದ್ದಾನೆ ಎನ್ನಲಾಗಿದೆ. ಕಳೆದ 3 ತಿಂಗಳಿಂದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೂರು ನೀಡಲಾಗಿದೆ/ NAVEENZ ಎಂಬ ಫೇಸ್‌ಬುಕ್ ಐಡಿ ಮೂಲಕ ಕಿರುಕುಳ ಕೊಡಲಾಗಿದೆ ಎಂದು ನಟಿ ರಂಜಿನಿ ದೂರು ನೀಡಿದ್ದಾರೆ.

ನಟಿ ರಂಜಿನಿಗೆ ಮೊದಲು ರಿಕ್ವೆಸ್ಟ್ ಕಳುಹಿಸಿದ್ದ ನವೀನ್‌, ಆದರೆ ರಿಕ್ವೆಸ್ಟ್ ನಟಿ ರಿಕ್ವೆಸ್ಟ್‌ ಸ್ವೀಕರಿಸಿರಲಿಲ್ಲ. ಆದರೆ ಮೆಸೆಂಜರ್‌ನಲ್ಲಿ‌ ಅಶ್ಲೀಲ ಮೆಸೆಜ್ ಮಾಡಿ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಆಗಲೂ ನಟಿ ರಂಜಿನಿ ಮಾಡದಂತೆ ಎಚ್ಚರಿಕೆ ನೀಡಿದ್ರಂತೆ. ಆದರೂ ಬೇರೆ ಬೇರೆ ಐಡಿಯಿಂದ ಅಶ್ಲೀಲ ಹಾಗೂ ಗುಪ್ತಾಂಗದ ಫೋಟೊ ಕಳಿಸಿ ವಿಕೃತಿ ಮೆರೆದಿದ್ನಂತೆ. ಕಿರುಕುಳ ನೀಡುವುದು ಹೆಚ್ಚಾದ ಬಳಿಕ ಭೇಟಿಯಾಗಿ ಬುದ್ಧಿ ಕೂಡ ಹೇಳಿದ್ರಂತೆ. ನವೆಂಬರ್ 1ರಂದು ನಾಗರಭಾವಿ ಬಳಿ ಆರೋಪಿ ನವೀನ್‌ನನ್ನು ಭೇಟಿ ಮಾಡಿದ್ದ ನಟಿ ರಂಜಿನಿ, ಈ ರೀತಿ ಮೆಸೇಜ್‌ ಎಲ್ಲಾ ಮಾಡಬೇಡ ಎಂದಿದ್ರಂತೆ.

ಬೆಳಗ್ಗೆ 11.30ಕ್ಕೆ ನಂದನ್ ಪ್ಯಾಲೆಸ್ ಬಳಿ ನೇರವಾಗಿ ಭೇಟಿ ಆಗಿದ್ದ ನಟಿ ರಂಜಿನಿ ಹಾಗೂ ನವೀನ್‌ ಮಾತುಕತೆ ನಡೆಸಿದ್ರು. ಈ ರೀತಿ ಮೆಸೇಜ್ ಮಾಡೋದು ಬೇಡ ಎಂದಿದ್ದರಂತೆ. ಆದರೆ ಮತ್ತೆ ಅದೇ ರೀತಿ ಕಿರುಕುಳ ಕೊಡಲು ಶುರು ಮಾಡಿದ್ನಂತೆ ಆರೋಪಿ. ಅಂತಿಮವಾಗಿ ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಅಶ್ಲೀಲ ಮೆಸೇಜ್ ಮಾಡಿದ ಆರೋಪದ ಮೇಲೆ ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ನವೀನ್‌ ಕೇರಳ ಮೂಲದವನಾಗಿದ್ದು, ವೈಟ್ ಫೀಲ್ಡ್ ನಿವಾಸಿ ಎನ್ನಲಾಗಿದೆ.

ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಈ ಬಗ್ಗೆ ಮಾತನಾಡಿ, ಕಿರುತೆರೆ ನಟಿಯೊಬ್ಬರಿಗೆ ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಸೋಷಿಯಲ್ ಮೀಡಿಯಾ ಮೂಲಕ ಇಬ್ಬರ ಪರಿಚಯವಾಗಿತ್ತು. ಆ ನಂತರ ಆ ವ್ಯಕ್ತಿ ತನ್ನ ಖಾಸಗಿ ಅಂಗದ ಪೋಟೋವನ್ನ ಅಕೆಗೆ ಕಳುಹಿಸಿದ್ದ. ಈ ಹಿನ್ನೆಲೆಯಲ್ಲಿ ನಟಿ ದೂರು ನೀಡಿದ್ರು. ವಿಚಾರಣೆ ವೇಳೆ ಆತ ಹಲವರ ಜೊತೆಗೆ ಚಾಟ್ ಮಾಡಿರೋದು ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಆದರೂ ಸೋಷಿಯಲ್‌ ಮೀಡಿಯಾದಲ್ಲಿ ನಾನು ರಿಕ್ವೆಸ್ಟ್‌ ಒಪ್ಪಿಕೊಂಡಿರಲಿಲ್ಲ ಎಂದು ನಟಿ ರಂಜಿನಿ ಹೇಳಿದ್ದಾರೆ. ಆದರೆ ರಿಕ್ವೆಸ್ಟ್‌ ಅನ್ನೇ ಒಪ್ಪದೇ ಇದ್ದರೂ ನೇರಾನೇರಾ ಭೇಟಿ ಮಾಡಿದ್ದು ಯಾಕೆ..? ಅನ್ನೋ ಪ್ರಶ್ನೆ ಎದುರಾಗಿದೆ. ಅಷ್ಟು ಮಾತ್ರವಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಪರಿಚಯ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇವರಿಬ್ಬರಿಗೂ ಪರಿಚಯ ಇತ್ತಾ..? ಆ ನಂತರ ಇಬ್ಬರ ನಡುವೆ ಸಂಘರ್ಷ ಏರ್ಪಟ್ಟು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತುವಂತಾಯ್ತಾ..? ಅನ್ನೋ ಬಗ್ಗೆ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.

Related posts

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

Publicspot

ಪ್ರೀತಿಯಲ್ಲಿ ಮುಳುಗಿದ್ದವಳು ಮದುವೆ ಆಗಿ ಮಾಡಿದ ಎಡವಟ್ಟು.. ಎರಡು ಸಾವು

Publicspot

ಬಂಗಾರ ಮನೆಯಲ್ಲಿ ಇದ್ದರೆ ಸಂಪತ್ತು.. ಮೈಮೇಲಿದ್ದರೆ ಆಪತ್ತು..

Publicspot

ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕನ ಸಾವಿಗೆ ಕಾರಣ ಏನು..? ಅದೂ ಕೂಡ ಈ ರೀತಿ ಸಾವಾ..?

Publicspot

Court Order bring Happy & Sad: ಕೋರ್ಟ್‌ ಆದೇಶದಿಂದ ಸಂತೋಷ ಜೊತೆಗೆ ದುಃಖ

Publicspot

ಹೊಲಕ್ಕೆ ಹೊದವರನ್ನು ಗುಂಡಿಟ್ಟು ಕೊಂದಿದ್ಯಾಕೆ ಅರಣ್ಯ ಸಿಬ್ಬಂದಿ..?

Publicspot