The Public Spot
ಅಪರಾಧ

Online Game Murder; ಜೂಜಿನ ಚಟಕ್ಕೆ ಬಿದ್ದವನು ಕೊಲೆಗಾರನಾಗ ಕಥೆ.. ಬಾಡಿಗೆ ಮನೆ ದುರಂತ..

ಆನ್​ಲೈನ್ ಜೂಜಿನ ಚಟಕ್ಕೆ ಬಿದ್ದು ಕೈ ತುಂಬಾ ಸಾಲ ಮಾಡ್ಕೊಂಡಿದ್ದ ವ್ಯಕ್ತಿ ವೃದ್ಧೆಯ ಮೈಮೇಲಿನ ಬಂಗಾರಕ್ಕೆ ಆಸೆ ಪಟ್ಟು ಜೀವ ತೆಗೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಉತ್ತರಹಳ್ಳಿಯಲ್ಲಿ ಬಾಡಿಗೆಗೆ ಮನೆ ಪಡೆದು ಜೀವನ ಮಾಡ್ತಿದ್ದ ವ್ಯಕ್ತಿ ಅದೇ ಮನೆ ಮಾಲೀಕರ ಕುತ್ತಿಗೆಯಲ್ಲಿದ್ದ ಚಿನ್ನಕ್ಕೆ ಆಸೆಪಟ್ಟು ಕೊಲೆ ಮಾಡುವ ಸಂಚು ರೂಪಿಸಿ ಯಶಸ್ವಿಯಾಗಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವೃದ್ಧೆ ಶ್ರೀಲಕ್ಷ್ಮಿ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಮನೆಯಲ್ಲಿ ಬಾಡಿಗೆಗಿದ್ದ ದಂಪತಿಯನ್ನು ಅರೆಸ್ಟ್​​ ಮಾಡಿದ್ದಾರೆ.

2025ರ ಫೆಬ್ರವರಿ 4ರಂದು ಪತಿ ಕೆಲಸಕ್ಕೆ ಹೋಗಿದ್ದರಿಂದ ವೃದ್ಧೆ ಶ್ರೀಲಕ್ಷ್ಮಿ ಮನೆಯಲ್ಲಿ ಒಬ್ಬರೇ ಇದ್ದರು. ಮಧ್ಯಾಹ್ನದ ವೇಳೆ ಕುಟುಂಬಸ್ಥರು ಅಜ್ಜಿಗೆ ಫೋನ್ ಮಾಡಿದರೂ ಅಜ್ಜಿ ಫೋನ್ ರಿಸಿವ್ ಮಾಡಿರಲಿಲ್ಲ. ಹೀಗಾಗಿ ಬಾಡಿಗೆದಾರರ ಮೊಬೈಲ್​ ನಂಬರ್​ಗೆ ಶ್ರೀಲಕ್ಷ್ಮಿ ಅವರ ಗಂಡ ಫೋನ್​ ಮಾಡಿದಾಗ ಕೊಲೆ ವಿಷಯ ಗೊತ್ತಾಗಿತ್ತು. ಆರೋಪಿ ಪ್ರಸಾದ್ ಹಾಗೂ ಆತನ ಹೆಂಡತಿ ಹೊಂಚು ಹಾಕಿ ವೃದ್ಧೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದರು. ಅಷ್ಟೇ ಅಲ್ಲದೆ ಅಜ್ಜಿಯ ಕೊರಳಲ್ಲಿದ್ದ 52 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೈನಲ್ಲಿದ್ದ ಎರಡು ಬಂಗಾರದ ಬಳೆಗಳನ್ನು ಕದ್ದೊಯ್ದಿದ್ದರು.

ಆನ್​​ಲೈನ್ ಗೇಮ್ಸ್ ಚಟಕ್ಕೆ ಬಿದ್ದು ವೃದ್ಧೆಯನ್ನು ಕೊಂದು ಚಿನ್ನವನ್ನು ಕೊಳ್ಳೆಯೊಡೆಯುವ ದುರುದ್ದೇಶದಿಂದ ಈ ಕೊಲೆ ನಡೆದಿತ್ತು. ಆದರೆ ಪೊಲೀಸರು ಮಾಂಗಲ್ಯ ಸರ, ಬಂಗಾರದ ಬಳೆ ದೋಚಿ ಪರಾರಿಯಾಗಿದ್ದ ದಂಪತಿಯನ್ನು ಬಂಧಿಸಿ ಕೈಗೆ ಕೋಳ ಹಾಕಿ ಕರೆತಂದಿದ್ದಾರೆ. ಅಜ್ಜಿಯನ್ನು ಕೊಂದ ಆರೋಪಿ ಕೊಲೆಗೆ ನಿಖರ ಕಾರಣ ಏನು ಅನ್ನೋದನ್ನು ಬಾಯ್ಬಿಟ್ಟಿದ್ದಾನೆ. ಪ್ರಸಾದ್​​ ಹಾಗೂ ಪತ್ನಿ ಸಾಕ್ಷಿ ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿಗಳಾಗಿದ್ದು, ಆನ್​ಲೈನ್ ಜೂಜಿನ ಚಟಕ್ಕೆ ಬಿದ್ದಿದ್ದ ಪ್ರಸಾದ್ ಬರೋಬ್ಬರಿ​​​​ 26 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟದಿಂದ ಬೇಸತ್ತು ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಕೊಲೆಗಾರ ಪ್ರಸಾದ್​ ಕಟ್ಟಡದಲ್ಲಿ​ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ರೆ, ಪತ್ನಿ ಸಾಕ್ಷಿ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಾಲಗಾರರ ಕಾಟ ಮತ್ತೆ ಜಾಸ್ತಿಯಾಗ್ತಿದ್ದಂತೆ ದಂಪತಿ ಅಜ್ಜಿ ಶ್ರೀಲಕ್ಷ್ಮಿ ಕೊಲೆಗೆ ಸಂಚು ರೂಪಿಸಿದ್ದರು. ಅಜ್ಜಿಯನ್ನು ಕೊಲೆ ಮಾಡಿದ ಒಂದೇ ಒಂದು ಗಂಟೆಯೊಳಗೆ ಪ್ರಸಾದ್, ಅಜ್ಜಿಯ ಕುತ್ತಿಗೆಯಿಂದ ಕಳವು ಮಾಡಿದ್ದ 52 ಗ್ರಾಂ ಚಿನ್ನದ ಸರವನ್ನು ಖಾಸಗಿ ಫೈನಾನ್ಸ್​ನಲ್ಲಿ 3 ಲಕ್ಷಕ್ಕೆ ಅಡವಿಟ್ಟಿದ್ದನು. ಅದೇ ಹಣದಲ್ಲಿ 20 ಸಾವಿರವನ್ನು ತನ್ನ ಸ್ನೇಹಿತನಿಂದ ಪಡೆದಿದ್ದ ಸಾಲ ವಾಪಸ್​ ಮಾಡಿದ್ದ. ಮತ್ತೊಬ್ಬ ಸ್ನೇಹಿತನನ್ನು ಕರೆಸಿ ಬಾರ್‌ನಲ್ಲಿ ಎಣ್ಣೆ ಪಾರ್ಟಿ ಕೂಡ ಮಾಡಿದ್ದ. ಆ ಬಳಿಕ ಅನುಮಾನಗೊಂಡ ಪೊಲೀಸರು, ಪ್ರಸಾದ್​​​ನನ್ನು ವಶಕ್ಕೆ ಪಡೆದು ಪೊಲೀಸ್​ ಸ್ಟೈಲ್​ನಲ್ಲಿ ಟ್ರೀಟ್​​ಮೆಂಟ್​​ ಕೊಟ್ಟು ಕೇಳಿದಾಗ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ.

Related posts

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot

ಒಂದಲ್ಲ.. ಎರಡಲ್ಲ.. ಆಂಟಿ ಮೂರನೇ ಮದುವೆ.. ಬುಲೆಟ್‌ ರೈಡ್‌ಗಾಗಿ ಜೂಟ್‌..

Publicspot

ಡಾಕ್ಟರ್​ ಕೊಲೆಗಾರ ಆಗಿದ್ದು ಸತ್ಯನಾ..? 12 ವರ್ಷ ನರಳಿದ ನತದೃಷ್ಟ ಹೆಣ್ಣು

Publicspot

Lover Good Husband Bad; ಆನೇಕಲ್​ ಆಂಟಿ ವಾಪಸ್​ ಬಂದು ಗೊಳೋ ಅಂತಿರೋದ್ಯಾಕೆ..?

Publicspot

PU ಫಲಿತಾಂಶ ನೆಪದಲ್ಲಿ ಮಗಳನ್ನು ಕೊಂದಳಾ ಹೆತ್ತಮ್ಮ..? ತನುಶ್ರೀ ಸಾವಿಗೆ ಕಾರಣ ಏನು..?

Publicspot

Hassan Tragedy most of the Students Deaths: ಹಾಸನ‌ ದುರಂತದಲ್ಲಿ ಸತ್ತವರೆಲ್ಲಾ ಸ್ಟೂಡೆಂಟ್ಸ್​.. ಯಾಕೆ..?

Publicspot