The Public Spot
Uncategorized

Bihara Result; ಕಾಂಗ್ರೆಸ್‌ ಸೋಲಿಗೆ ಕಾರಣ ಏನು..? EVM ತಿರುಚಲಾಗಿದ್ಯಾ..?

ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ರಾತ್ರಿ8 10 ಗಂಟೆ ತನಕವೂ ಅಂತಿಮ ಫಲಿತಾಂಶ ಹೊರಬಿದ್ದಿರಲಿಲ್ಲ. ಅಂತಿಮವಾಗಿ BJP 89, JDU 85, LJPRV (ಲೋಕಜನಶಕ್ತಿ ಪಾರ್ಟಿ) 19, HAMS 6, RLM 6 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ NDA ಮೈತ್ರಿಕೂಟ 202 ಸ್ಥಾನಗಳಲ್ಲಿ ಭರ್ಜರಿ ಜಯ ದಾಖಲಿಸಿದೆ. 243 ವಿಧಾಸಭಾ ಕ್ಷೇತ್ರಗಳ ಪೈಕಿ 122 ಸ್ಥಾನಗಳ ಸರಳ ಬಹುಮತ ಪಡೆಯಬೇಕಿದ್ದ ಮೈತ್ರಿಕೂಟ ಭರ್ಜರಿಯಾಗಿ ಜಯ ದಾಖಲಿಸಿದೆ. ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿರೋದ್ರಿಂದ ಸಹಜವಾಗಿ ಬಿಜೆಪಿ ಹಿರಿಹಿರಿ ಹಿಗ್ಗುತ್ತಿದೆ.

ಬಿಹಾರದಲ್ಲಿ ಈ ಬಾರಿ ಗೆದ್ದೇ ಗೆಲ್ಲಬೇಕು ಅನ್ನೋ ಹಠದಲ್ಲೇ ಬಿಜೆಪಿ ವಿರುದ್ಧ ಅಬ್ಬರಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ RJD ನಾಯಕ ತೇಜ್‌ಪ್ರತಾಪ್‌ ಯಾದವ್‌, ಮುಗ್ಗರಿಸಿದ್ದು, ಜನರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್‌ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, RJD 25 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನುಳಿದಂತೆ ಎಡ ಪಕ್ಷಗಳು ಸೇರಿ I.N.D.I ಒಕ್ಕೂಟ 35 ಸ್ಥಾನಗಳಿಗೆ ಕುಸಿದಿದೆ. ಬಿಹಾರ ಚುನಾವಣೆಗೂ ಮುನ್ನ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವೋಟ್‌ ಚೋರಿ (ಮತಗಳ್ಳತನ) ಆಗಿದೆ ಅನ್ನೋ ಆರೋಪ ಮಾಡಿದ್ದ ರಾಹುಲ್‌ ಗಾಂಧಿ, ವೋಟ್‌ ಚೋರಿ ತಪ್ಪಿಸುವುದಕ್ಕಾಗಿ ಪಾದಯಾತ್ರೆಯನ್ನೂ ಮಾಡಿದ್ದರು. ಆದರೂ ಯಾವುದೂ ಕೈ ಹಿಡಿದಿಲ್ಲ. ಬಿಹಾರದ ಮತದಾರ INDI ಒಕ್ಕೂಟವನ್ನು ತಿರಸ್ಕಾರ ಮಾಡಿದ್ದಾರೆ.

243 ಕ್ಷೇತ್ರಗಳ ಬಿಹಾರದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಜೆಡಿಯು 2ನೇ ಸ್ಥಾನದಲ್ಲಿದೆ. ನರೇಂದ್ರ ಮೋದಿ ಹಾಗೂ ನಿತೀಶ್‌ ಕುಮಾರ್‌ ನಾಯಕತ್ವವನ್ನು ಜನರು ಸ್ವಾಗತ ಮಾಡಿದ್ದಾರೆ. ಸಮೀಕ್ಷೆಗಳ ಲೆಕ್ಕಾಚಾರವನ್ನು ಮೀರಿ ಫಲಿತಾಂಶ ಹೊರಬಿದ್ದಿದ್ದು, ಕೇಸರಿ ಪಾಳಯವನ್ನು ಸಂಭ್ರಮದ ಹೊನಲಲ್ಲಿ ತೇಲುವಂತೆ ಮಾಡಿದೆ. ಕಾಂಗ್ರೆಸ್‌ ಎರಡಂಕಿಯನ್ನೂ ಮುಟ್ಟುವುದಕ್ಕೆ ಸಾಧ್ಯವಾಗಿಲ್ಲ. NDA ಮೈತ್ರಿಕೂಟ ಭರ್ಜರಿ ಜಯ ದಾಖಲಿಸುವ ಮೂಲಕ ಲೋಕಸಭಾ ಚುನಾವಣೆ ಬಳಿಕವೂ ಜನಪ್ರಿಯತೆ ಕುಗ್ಗಿಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದ ಹಾಗೆ ಪ್ರಧಾನಿ ಮೋದಿಗೆ ಬೃಹತ್‌ ಹೂವಿನ ಹಾರ ಹಾಕಲಾಯ್ತು. ಬಿಜೆಪಿ ಕಚೇರಿಯಲ್ಲಿ ನಿಂತು ಬಿಹಾರದ ಮತದಾರರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಜನ ದಾಖಲೆಯ ಮತ ನೀಡಿ ಸಮೃದ್ಧ ಬಿಹಾರಕ್ಕಾಗಿ ನಮ್ಮನ್ನು ಗೆಲ್ಲಿಸಿದ್ದಾರೆ. ಬಿಹಾರದಲ್ಲಿ ಇದು ನಿಜವಾದ ದೀಪಾವಳಿ ಎಂದಿದ್ದಾರೆ. ಚುನಾವಣಾ ಆಯೋಗ ಸಮರ್ಥವಾಗಿ ಕೆಲಸ ಮಾಡಿದೆ. ಮತಗಳ್ಳತನ ಅನ್ನೋದು ಕಾಂಗ್ರೆಸ್‌ನ ನಕಲಿ ವಾದ, ಕಾಂಗ್ರೆಸ್‌ನ ನಕಾರಾತ್ಮಕ ನಿಲುವಿಗೆ ಜನ ಪಾಠ ಕಲಿಸಿದ್ದಾರೆ. ಕಾಂಗ್ರೆಸಿಗರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕರು ಅದೇ ರಾಗ ಅದೇ ತಾಳ ಎನ್ನುವಂತೆ ಮತ್ತೆ ಮತಗಳವು, EVM ತಿರುಚಿದ್ದಾರೆ ಅನ್ನೋ ಹಳಸಲು ಮಾತುಗಳನ್ನು ಹೇಳುತ್ತಲೇ ಇದ್ದಾರೆ. ಪದೇ ಪದೇ ಸೋಲುತ್ತಲೇ ಇದ್ದಾರೆ. ಆದರೆ ಬಿಹಾರ ಜನರು ಕರ್ನಾಟಕದ ಜನರಂತೆಯೇ ಸ್ಪಷ್ಟ ಬಹುಮತ ನೀಡಿದ್ದಾರೆ. ಬಿಹಾರದಲ್ಲಿ EVM ತಿರುಚಲು ಸಾಧ್ಯವಾಗಿದ್ದರೆ, ಕರ್ನಾಟಕದಲ್ಲಿ EVM ತಿರುಚಲು ಯಾಕೆ ಸಾಧ್ಯವಾಗಲಿಲ್ಲ ಅನ್ನೋ ಬಿಜೆಪಿ ಪ್ರಶ್ನೆಗೆ ಉತ್ತರ ಕಾಂಗ್ರೆಸ್‌ ನಾಯಕರ ಬಳಿ ಇಲ್ಲ. ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಅಭಿವೃದ್ಧಿ ಆಗುತ್ತೆ ಅನ್ನೋ ಕಾರಣಕ್ಕೆ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎನ್ನುವುದು ಬಿಜೆಪಿ ಅಭಿಪ್ರಾಯ. ಬಿಜೆಪಿ ಕೊಟ್ಟ ಭರವಸೆಗಳನ್ನು ಜನರು ನಂಬಿದ್ದಾರೆ. ಕಾಂಗ್ರೆಸ್‌ ಮಾತನ್ನು ನಂಬಿಲ್ಲ ಎನ್ನುವುದು ಕೂಡ ಸತ್ಯ.

Related posts

Storms in S Naraayan Family: ಎಸ್​ ನಾರಾಯಣ್​ ದಂಪತಿ ಸೇರಿದಂತೆ ಪುತ್ರನಿಗೆ ಸಂಕಷ್ಟ..

Publicspot

American Presidents Target India: ಭಾರತವನ್ನು ಟಾರ್ಗೆಟ್​ ಮಾಡಿದ್ಯಾ ಅಮೆರಿಕ..?

Publicspot

ಏನಿದು ತಮಿಳುನಾಡು ಕಾರ್ತಿಕ ದೀಪೋತ್ಸವ.. ನ್ಯಾಯಾಧೀಶರಿಗೇ ವಾಗ್ದಂಡನೆ ಪ್ರಕ್ರಿಯೆ..?

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

New Law In Loksabha: ಪ್ರಧಾನಿ, ಸಿಎಂ, ಮಂತ್ರಿಗಳಿಗೂ ಬರ್ತಿದೆ ಹೊಸ ಕಾನೂನು..!

Publicspot

Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್​ ಆಗ್ತಿದೆ..

ಯಶವಂತಿ