The Public Spot
ಅಪರಾಧ

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿಟ್ಟಿದ್ದೇನೆ ಎಂದಿದ್ದ ಪ್ರಕರಣದಲ್ಲಿ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸಿ ಕೋರ್ಟ್​ಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಹೋರಾಟಗಾರ ಗಿರಿಶ್ ಮಟ್ಟಣ್ಣವರ್ ಮಾತನಾಡಿದ್ದು, ಧರ್ಮಸ್ಥಳ ಪ್ರಕರಣ ಕುರಿತು ಒಂದು ವರದಿ ನೀಡಿದ್ದಾರೆ‌. ಈ ಕುರಿತು ಗೌಪ್ಯತೆ ಕಾಪಾಡಬೇಕು ಎಂದು ತಿಳಿಸಿದ್ದಾರೆ‌. ನಮ್ಮ ಮೇಲೆ ಏನಾದರು ಆರೋಪ ಇದ್ದರೆ ನಮಗೆ ಗೊತ್ತಾಗಬೇಕಲ್ಲಾ..? ಹೀಗಾಗಿ ವಕೀಲರಾದ ದೊರೆರಾಜು ಸರ್ ಬಂದು ಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಒಟ್ಟು ನಾಲ್ಕು ಸಾವಿರ ಪುಟ ವರದಿ ಬರಬೇಕಿದೆ‌. ವರದಿಯನ್ನ ಇನ್ನೆರೆಡು ದಿನಗಳಲ್ಲಿ ನಮಗೆ ಕೊಡಲಿದ್ದಾರೆ‌ ಎಂದಿದ್ದಾರೆ.

ಮಾಸ್ಕ್​ ಮ್ಯಾನ್​ ಚಿನ್ನಯ್ಯ ಹೆಣ ಹೂತಿಟ್ಟಿದ್ದಾಗ ಹೇಳಿ, ಆ ಬಳಿಕ ಸುಳ್ಳು ಎಂದು ಸಾಬೀತಾಗಿ ಬಂಧನಕ್ಕೆ ಒಳಗಾದ ಬಗ್ಗೆ ಕೇಳಿದಾಗ ಚಿನ್ನಯ್ಯ ಹೋರಾಟಗಾರ ಅಲ್ಲ. ಅವನು ಒಬ್ಬ ಪೌರ ಕಾರ್ಮಿಕ. ಅವನು ಏನು ಹೇಳಿಕೆ ಕೊಟ್ಟ, ಅದು ನಮಗೆ ಗೊತ್ತಾಗಬೇಕಿದೆ. ಬರುಡೆ ಕೇಸ್ ಎಂದು ಎಲ್ಲೂ ರಿಜಿಸ್ಟರ್ ಆಗಿಲ್ಲ. ಧರ್ಮಸ್ಥಳ ಪ್ರಕರಣ ಎಂದು ರಿಜಿಸ್ಟರ್ ಆಗಿರುವುದು. ಮಿಸ್ಸಿಂಗ್ ದೂರು ಸುಮಾರು ಆಗಿದೆ. ಅದರ ಬಗ್ಗೆ ತನಿಖೆ ನಡೆಯುತ್ತಿದ್ದೆ‌ ಎಂದಿರುವ ಮಟ್ಟಣ್ಣವರ್​, ಚಿನ್ನಯ್ಯ ಬುರುಡೆ ತಂದು ಕೊಟ್ಟಿರುವುದು ಒಂದು ಪ್ರಕರಣ‌. ನಾನು ಇಷ್ಟು ನೋಡಿದ್ದೇನೆ, ಇಷ್ಟು ಹೂತು ಹಾಕಿದ್ದೇನೆ ಎಂದಿದ್ದ. ಆದರೆ ಮಿಸ್ಸಿಂಗ್ ಕೇಸ್ ಬಹಳ ಆಗಿದೆ‌ ಎಂದಿದ್ದಾರೆ.

ಕಳೆದ 20 ವರ್ಷದ ಹಿಂದೆ ಮಿಸ್ಸಿಂಗ್ ಆಗಿದೆ, ಅದೂ ಕೂಡ ಕೇಸ್ ಆಗಿದೆ. 76 ಅನಾಥ ಶವಗಳ ದಾಖಲೆಯೂ ಸಂಶಯಕ್ಕೆ ಎಡೆ‌ ಮಾಡಿಕೊಟ್ಟಿದೆ. ತನಿಖೆ ಆಗಲಿ ಎಂಬುದೇ ನಮ್ಮ ಉದ್ದೇಶ. ಅಭಿಷೇಕ್ ಹಾಕಿದ್ದ ರಿಟ್ ಪಿಟಿಷನ್ ವಾಪಸ್ ತೆಗೆದುಕೊಂಡಿದ್ದಾರೆ. ಎಸ್ಐಟಿ ಪುನರ್ ರಚನೆ ಆಗಬೇಕು. ಎಸ್ಐಟಿಯ ಕೆಳ ಹಂತದ ಅಧಿಕಾರಿಗಳ ಮೇಲೆ ಸಾಕಷ್ಟು ಆರೋಪವಿದೆ‌ ಎಂದಿರುವ ಗಿರೀಶ್​ ಮಟ್ಟಣ್ಣವರ್​, ಚಿನ್ನಯ್ಯನಿಗೆ ಬೇಲ್ ಕೊಡಿಸುವ ವಿಚಾರದ ಬಗ್ಗೆ ಮಾತನಾಡಿ, ಅವನು ನಿರಂತರವಾಗಿ ಬೇರೆ ಬೇರೆ ಹೇಳಿಕೆ ನೀಡಿದ್ದ. ಚಿನ್ನಯ್ಯನಿಗೆ ಬೇಲ್ ಕೊಡಿಸಲು ಸಾಕಷ್ಟು ಜನರ ಬಳಿ ಶ್ಯೂರಿಟಿ ಕೇಳಿದ್ದೇವೆ‌. ನಾಳೆ ಅವನು ಸಿಗಲಿಲ್ಲ ಅಂದರೆ ಹೇಗೆ..? ಎಂದು ಯೋಚಿಸುತ್ತಿದ್ದಾರೆ ಎಂದಿದ್ದಾರೆ.

ನಾನು ಬೆಳ್ತಂಗಡಿ, ಶಿವಮೊಗ್ಗದವನು ಆಗಿದ್ದರೆ ನಾನೇ ಶ್ಯೂರಿಟಿ ಕೊಡುತ್ತಿದೆ‌. ಆದರೆ ಅವರ ಕುಟುಂಬಸ್ಥರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಅವರು ದುಡಿದು ತಿನ್ನುವವರು. ಹೊರಗಡೆ ಕರೆಸುವ ಪ್ರಯತ್ನ ಮಾಡುತ್ತಿದ್ದೇವೆ. ಎಸ್​ಐಟಿ ಮರು ತನಿಖೆ ಆಗಬೇಕು. ತನಿಖೆ ವೇಳೆ ಪ್ರತಿ ರಾತ್ರಿ ಚಿನ್ನಯ್ಯ ನನಗೆ ಹೇಳುತ್ತಿದ್ದ. ಯಾವ ಸ್ಥಳ ಹೇಳುತ್ತೇನೆ, ಅಲ್ಲಿ ಅಸ್ತಿ ಪಂಜರ ಸಿಕ್ಕರೆ ಗಲ್ಲಿಗೆ ಏರಿಸುತ್ತೇನೆ ಎಂದು ಹೆದರಿಸುತ್ತಿದ್ದರು. ಹಾಗಾಗಿ ಅವನು ಹೆದರಿಕೊಂಡಿದ್ದಾನೆ. ಅಂತಹ ಅಧಿಕಾರಿಗಳನ್ನು ಇಟ್ಟುಕೊಂಡು ತನಿಖೆ ಮುಂದೆ ತೆಗೆದುಕೊಂಡು ಹೋಗಲು ಆಗಲ್ಲ. ಹಾಗಾಗಿಯೇ ಎಸ್ಐಟಿ ತನಿಖೆ ನಡೆಯಬೇಕು. ಮೊದಲು ಅಸ್ಥಿ ತಂದು ತೋರಿಸಿದ್ದೇ ನನ್ನ ಬಳಿ ಎಂದಿದ್ದಾರೆ.

ಹೂತು ಹಾಕಿದ್ದ ಅಸ್ಥಿಪಂಜರ ತಂದಿದ್ದರೆ ಚಿನ್ನಯ್ಯನದ್ದು ತಪ್ಪು ಆಗುತ್ತಿತ್ತು. ಕಾನೂನಿನ ಸಹಾಯ ಮಾಡಿದ್ದೇವೆ ಅಷ್ಟೇ. ಎಸ್ಐಟಿ ಮತ್ತೆ ಜಾಗ ತೋರಿಸಲು ಅವಕಾಶ ಕೊಟ್ಟರೆ ಖಂಡಿತ ತೋರಿಸುತ್ತೇವೆ‌. ನಾನು ಒಬ್ಬನೇ ಅಲ್ಲ, ಊರಿನವರೆಲ್ಲಾ ತೋರಿಸಲು ರೆಡಿ ಇದ್ದಾರೆ‌. ಹೀಗಾಗಿ ತನಿಖೆ ನಿಲ್ಲಬಾರದು ಮುಂದುವರಿಯಬೇಕು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ ಇನ್ನಡೆರಡು ದಿನದಲ್ಲಿ ಎಸ್​ಐಟಿ ಅಧಿಕಾರಿಗಳು ಮಾಡಿರುವ ತನಿಖಾ ವರದಿ ಮಟ್ಟಣ್ಣವರ್​ ಪರವಾಗಿ ವಾದಿಸುತ್ತಿರುವ ವಕೀಲ ಬಾಲ್​ರಾಜ್​ ಅವರ ಕೈಸೇರಲಿದ್ದು, ಕೆಲವೇ ದಿನಗಳಲ್ಲಿ ವರದಿ ಬಹಿರಂಗ ಆಗುವ ಸಾಧ್ಯತೆಯಿದೆ.

Related posts

Bus Driver Ask Kiss for mobile charging: ಬಸ್​ ಡ್ರೈವರ್​ಗೆ ಬಿತ್ತು ಬೇಜಾನ್​ ಗೂಸಾ..

Publicspot

Hassan Ganesha Tragedy: ಹಾಸನದಲ್ಲಿ ಗಣೇಶ ಮೆರವಣಿಗೆ ದುರಂತ.. 9 ಸಾವು.. 20ಕ್ಕೂ ಹೆಚ್ಚು ಗಾಯ..

Publicspot

Murder; ಮರ್ಯಾದೆಗಾಗಿ 7 ತಿಂಗಳ ಗರ್ಭಿಣಿ ಮಗಳ ಗರ್ಭ ಸೀಳಿದ ಅಪ್ಪ..!

Publicspot

Darshan-Pavithra ಮದುವೆ ಫೋಟೋ ವೈರಲ್‌.. ಕೋರ್ಟ್‌ನಲ್ಲಿ ಕಟ್ಟ ಕಡೇ ಎಚ್ಚರಿಕೆ

Publicspot

ಜಿಮ್ ಟ್ರೈನರ್ ಮಾಡಿದ್ನಾ ಲವ್ ಜಿಹಾದ್..? ಯಾವುದು ಸತ್ಯ..?

Publicspot

Minors delivery: ಹೊಟ್ಟೆ ನೋವು ಎಂದ ಶಾಲಾ ಬಾಲಕಿಗೆ ಮಗು ಹುಟ್ಟಿದ್ದೇಗೆ..?

Publicspot