The Public Spot
ಅಪರಾಧ

ಜಿಮ್ ಟ್ರೈನರ್ ಮಾಡಿದ್ನಾ ಲವ್ ಜಿಹಾದ್..? ಯಾವುದು ಸತ್ಯ..?

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕಿಚ್ಚು ಹೊತ್ತಿಕೊಂಡಿದೆ. ಹಿಂದೂ ಯುವತಿಯರನ್ನೇ ಟಾರ್ಗೆಟ್​ ಮಾಡಿ ಲವ್​ ಜಿಹಾದ್ ಬಲೆ ಬೀಸ್ತಿದ್ದ ಅನ್ನೋ ಆರೋಪ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಯುವತಿಯ ನೀಡಿರುವ ಹೇಳಿಕೆ ಜಿಮ್ ಟ್ರೈನರ್‌ನ ಕರ್ಮಕಾಂಡವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಸಮೀರ್ ಎಂಬಾತ ಮಜಲ್ ಫ್ಯಾಕ್ಟರಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದ. ಹಿಂದೂ ಹೆಣ್ಮಕ್ಕಳನ್ನ ಪುಸಲಾಯಿಸಿ ಮಾತಲ್ಲೇ ಮೋಡಿ ಮಾಡಿದ್ದ ಅನ್ನೋ ಆರೋಪ ಕೇಳಿ ಬಂದಿದೆ. ಮೊದಲು ಸ್ನೇಹದ ಹೆಸರಲ್ಲಿ ಸಲುಗೆ ಬೆಳೆಸಿಕೊಳ್ಳೋದು, ಆ ಬಳಿಕ ಮನೆಗೆ ಕರೆಸಿಕೊಂಡು ಮಾಡಬಾರದ್ದು ಮಾಡಿ, ಖಾಸಗಿ ಕ್ಷಣಗಳನ್ನ ವಿಡಿಯೋ ಮಾಡ್ಕೊಳ್ಳೋದು. ಕೊನೆಗೆ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಾ ಯುವತಿಯರ ಬದುಕನ್ನೇ ಹಾಳು ಮಾಡೋದನ್ನೇ ಕಾಯಕ ಮಾಡ್ಕೊಂಡಿದ್ದಾನೆ ಅಂತಾ ಸಂಸತ್ರಸ್ತ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಜಿಮ್‌ ಟ್ರೈನರ್‌ ಸಮೀರ್‌ನ ಕಾಮ ಕಹಾನಿ ಬಯಲಾಗ್ತಿದ್ದ ಹಾಗೆ ಶ್ರೀರಾಮಸೇನೆ ಹಾಗೂ ಭಜರಂಗದಳ ಕಾರ್ಯಕರ್ತರು ರೊಚ್ಚಿಗೆದ್ದು ಸಮೀರ್ ಮನೆಗೆ ನುಗ್ಗಿದ್ದಾರೆ. ಸಮೀರ್‌ಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಸಮೀರ್‌ ಮೆಲೆ ಹಲ್ಲೆ ಆಗ್ತಿದ್ದಂತೆ ಅತ್ತ ಸಮೀರ್ ಕುಟುಂಬಸ್ಥರೂ ಕೂಡ ಸಂತ್ರಸ್ತ ಯುವತಿ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಸಮೀರ್‌ನ ಕಾಮ ಪುರಾಣ ಬಿಚ್ಚಿಕೊಳ್ತಿದ್ದಂತೆ, ಸಮೀರ್ ಕುಟುಂಬಸ್ಥರು ಬೇರೆಯದ್ದೇ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಮೀರ್‌ ಹಾಗೂ ಸಂತ್ರಸ್ತ ಯುವತಿ ಕಳೆದ 3 ವರ್ಷಗಳಿಂದ ರಿಲೇಶನ್​ಶಿಪ್​ನಲ್ಲಿದ್ರು. ಅವರ ಮನೆಯವರೂ ನಮ್ಮ​ ಜೊತೆ ಅನ್ಯೋನ್ಯವಾಗಿದ್ರು. ನಾವೆಲ್ಲಾ ಒಟ್ಟಿಗೆ ಟೂರ್ ಸಹ ಹೋಗಿದ್ದೀವಿ. ಆದರೆ ಈಗ ಲವ್ ಜಿಹಾದ್ ಅನ್ನೋ ಹಣೆಪಟ್ಟಿ ಕಟ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ.

ಲವ್ ಜಿಹಾದ್ ಕಿಚ್ಚು ಹೊತ್ತಿಕೊಂಡಿದೆ. ನಾವು ಫ್ಯಾಮಿಲಿ ಫ್ರೆಂಡ್‌ ಆಗಿದ್ದೆವು ಅನ್ನೋದನ್ನು ಸಂತ್ರಸ್ತ ಯುವತಿ ಕೂಡ ಒಪ್ಪಿಕೊಂಡಿದ್ದಾಳೆ. ಆದರೆ ಸಮೀರ್‌ನ ಮೊಬೈಲ್‌‌ನಲ್ಲಿ ಸಂತ್ರಸ್ತೆ ಹಾಗೂ ಸಮೀರ್ ಜೊತೆ ಈತನ ಸಹೋದರಿ ಡ್ಯಾನ್ಸ್​ ಮಾಡೋ ವಿಡಿಯೋ ಕೂಡ ಪತ್ತೆಯಾಗಿದೆ. ಸಮೀರ್‌‌ನ ಸಹೋದರಿಯೇ ಹೆಣ್ಮಕ್ಕಳನ್ನ ಕರ್ಕೊಂಡು ಹೋಗಿ ಸಮೀರ್‌‌ಗೆ ಪರಿಚಯ ಮಾಡಿಸ್ತಿದ್ಲು ಅನ್ನೋ ಆರೋಪವೂ ಕೇಳಿಬಂದಿದೆ. ಸಮೀರ್​ ಫೋನ್​ನಲ್ಲಿ ಹಲವು ಫೋಟೋ​, ವಿಡಿಯೋ ಜೊತೆಗೆ ಗರ್ಭಧಾರಣೆ ಟ್ಯಾಬ್ಲೆಟ್ ಫೋಟೋ ಹಾಗೂ ಗರ್ಭಧಾರಣೆಯ ಸ್ಕ್ಯಾನಿಂಗ್ ರಿಪೋರ್ಟ್​ ಕೂಡ ಪತ್ತೆಯಾಗಿದೆ. ಪೊಲೀಸ್ರು ಈ ವಿಚಾರದಲ್ಲಿ ಕೂಲಂಕಷವಾಗಿ ತನಿಖೆ ನಡೆಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಅಂತಾ ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಯುವತಿಯ ಆರೋಪಕ್ಕೆ ಯುವಕ ಸಮೀರ್‌ ಸ್ಪಷ್ಟನೆ ನೀಡಿದ್ದು, ನಾನು ಪ್ರಜ್ಞೆ ಕಳೆದುಕೊಂಡಿದ್ದೆ, ನಾನು ಈಗ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ. ನಾನು ಮಾತ್ರೆ ಕೊಟ್ಟಿದ್ದೆ ಅಂತ ಯುವತಿ ಹೇಳಿದ್ದಾಳೆ . ವಿಡಿಯೋ ಮಾಡಿದ್ದು ಮಾತ್ರ ನಿಜ, ಆದರೆ ವಿಡಿಯೋ ಯಾರ ಮೊಬೈಲ್‌ನಲ್ಲಿ ಮಾಡಿದ್ದು ಅನ್ನೋದನ್ನು ಚೆಕ್ ಮಾಡಿ. ನನ್ನ ಮೊಬೈಲ್ SSK ಸಮಾಜದವರ ಬಳಿ ಇದೆ. ನನ್ನ ಮೊಬೈಲನ್ನು ತರಿಸಿ ಅದನ್ನ ಚೆಕ್ ಮಾಡಿ. ಆಕೆಯ ಮೊಬೈಲ್‌ನಲ್ಲಿ ಚೆಕ್ ಮಾಡಿ. ನನ್ನ ಮೊಬೈಲ್‌ನಲ್ಲಿ ಒಂದೇ ಒಂದು ವಿಡಿಯೋ ಸಿಗೋದಿಲ್ಲ. ಆಕೆಯೇ ವಿಡಿಯೋ ಮಾಡಿದ್ದು, ನಾನು ಮಾತ್ರೆ ಕೊಟ್ಟು ಪ್ರಜ್ಞಾ ಹೀನಳನ್ನಾಗಿ ಮಾಡಿದ್ದೇನೆ ಅಂದ್ರೆ ಪ್ರಜ್ಞೆ ತಪ್ಪಿ ಮಲಗಿಕೊಳ್ಳಬೇಕಾದವರು ಯಾರು..? ಆಕೆ ಪ್ರಜ್ಞೆ ತಪ್ಪಿಲ್ಲ, ನಾನು ಪ್ರಜ್ಞೆ ತಪ್ಪಿದ್ದೆ. ವಿಡಿಯೋ ಆಕೆ ಮಾಡಿದ್ದಾಳೆ. ಇದರಲ್ಲಿ ಯಾರ ತಪ್ಪಿದೆ ಅಂತಾ ಪ್ರಶ್ನೆ ಮಾಡಿದ್ದಾನೆ. ಆಕೆ ಬಹಳ ಒಳ್ಳೆಯ ಹುಡುಗಿ, ಆದರೆ ಆಕೆಯ ತಂದೆ-ತಾಯಿ, ಸಮಾಜದವರ ಒತ್ತಡದಿಂದ ಹೀಗೆ ಹೇಳ್ತಾ ಇದ್ದಾಳೆ ಎಂದು ದೂರಿದ್ದಾನೆ.

Related posts

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot

PG, Sexual Assult: ಮಹಿಳಾ ಪಿಜಿಗೆ ಕಳ್ಳತನಕ್ಕೆ ಬಂದವನಿಂದ ಲೈಂಗಿಕ ದೌರ್ಜನ್ಯ..

Publicspot

Darshan Bail Order: ನಟ ದರ್ಶನ್ ಮತ್ತು ಪವಿತ್ರ ಗೌಡ ಬೇಲ್ ರದ್ದಾಗುತ್ತಾ..?

ಯಶವಂತಿ

ಹೆಂಡತಿ ಜೊತೆಗೆ ಸ್ನೇಹಿತನ ಸಲುಗೆ.. ಪ್ರಶ್ನೆ ಮಾಡಿದ್ದಕ್ಕೆ ನಡೀತಾ ಮರ್ಡರ್..?​

ಯಶವಂತಿ

Dam Death; ಮಾರ್ಕೋನಹಳ್ಳಿ ಡ್ಯಾಂನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ..

Publicspot

Drashan Jail Shift: ದರ್ಶನ್​ ಜೈಲು ಶಿಫ್ಟ್​ ಮಾಡೋದು ಪಕ್ಕಾನಾ..?

Publicspot