The Public Spot
ರಾಜ್ಯ

ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ.. ಅಧಿವೇಶನದಲ್ಲಿ ಚರ್ಚೆ.. 4 ದಿನದಲ್ಲಿ ವರದಿ..

ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ಆಗಿದೆ ಅನ್ನೋ ವಿಚಾರವಾಗಿ ಜನರಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪ ಆಗಿದ್ದು, ಶೂನ್ಯವೇಳೆಯಲ್ಲಿ ಪರಿಷತ್​ನಲ್ಲಿ ರಮೇಶ್ ಬಾಬು ವಿಷಯ ಪ್ರಸ್ತಾಪಿಸಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಇದರ ಬಗ್ಗೆ ವರದಿಯಾಗಿದೆ. ಇದರಿಂದ‌ ಕುಕ್ಕುಟೋದ್ಯಮದ ಮೇಲೆ‌ ಪರಿಣಾಮ ಬೀರಿದೆ. ಮೊಟ್ಟೆ ಪೌಷ್ಠಿಕಾಂಶಯುಕ್ತ ಆಹಾರ ಆಗಿದೆ. ಆದರೆ ಈ ವರದಿ ಆತಂಕ‌‌ ಮೂಡಿಸಿದೆ ಎಂದು ವಿಷಯ ಎತ್ತಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಮಾತಿಗೆ ಸ್ಪಷ್ಟನೆ ನೀಡಿದ್ದು, ಯೂಟ್ಯೂಬ್ ಚಾನೆಲ್‌ ಬಗ್ಗೆ ಪೂರ್ತಿ ಮಾಹಿತಿ ನಮ್ಮಲ್ಲಿಲ್ಲ. ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಅಂಶ ಇದೆಯೋ..? ಇಲ್ಲವೋ..? ಅನ್ನೋ ಬಗ್ಗೆ ವರದಿ ಬರಲು ಇನ್ನೂ ನಾಲ್ಕೈದು ದಿನ‌ ಆಗುತ್ತದೆ. ಆದರೆ ಮೊಟ್ಟೆ ವಿಚಾರದಲ್ಲಿ ಸದ್ಯಕ್ಕಂತು ಸಾರ್ವಜನಿಕ ವಲಯದಲ್ಲಿ ಆತಂಕ ಬೇಡ ಎಂದಿದ್ದಾರೆ. ಎಚ್ಚರಿಕೆ ಕ್ರಮ ಹಾಗೂ ತನಿಖೆ ಮಾಡಿಸುವುದು ನಮ್ಮ ಜವಾಬ್ದಾರಿ ಆಗಿದೆ. ಆ‌‌ ಕಂಪನಿಯ ಬಗ್ಗೆಯೂ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ.

ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಅಂಶಗಳು ಪತ್ತೆ ಎಂಬ ವಿಚಾರದ ಬಗ್ಗೆ ರಮೇಶ್​ ಬಾಬು ಆತಂಕ ವ್ಯಕ್ತಪಡಿಸಿದ್ದು, ಮೊಟ್ಟೆ ಪೌಷ್ಟಿಕ ಆಹಾರವಾಗಿದ್ದು ಇಡೀ ದೇಶದಲ್ಲಿ ಮೊಟ್ಟೆಯನ್ನು ಬಳಸಲಾಗುತ್ತಿದೆ. ಆದರೆ ಒಂದು ಖಾಸಗಿ ಸಂಸ್ಥೆ ಮೊಟ್ಟೆ, ಬಳಕೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಯೂಟ್ಯೂಬ್​ನಲ್ಲಿ ಪ್ರಚಾರ ಮಾಡಿರುವುದರಿಂದ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿರುತ್ತದೆ. ದೇಶದಲ್ಲಿ 2024 ಮತ್ತು 25ನೇ ಸಾಲಿನಲ್ಲಿ ಅಂದಾಜು 150 ಬಿಲಿಯನ್ ಮೊಟ್ಟೆ ಉತ್ಪಾದನೆಯನ್ನು ಮಾಡಲಾಗಿದೆ. ಪ್ರಪಂಚದ ಮೊಟ್ಟೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದಿದ್ದಾರೆ.

ವಾರ್ಷಿಕವಾಗಿ ಮೊಟ್ಟೆ ಉತ್ಪಾದನೆಯಲ್ಲಿ ಮೇಲುಗೈ ಸಾಧಿಸುತ್ತಿರುವ ಭಾರತ, ಮೊಟ್ಟೆ ಬಳಕೆಗೆ ಉತ್ತೇಜನ ನೀಡುತ್ತಿದೆ. ದೇಶದ ಮೊಟ್ಟೆ ಉತ್ಪಾದನೆಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ದೇಶದಲ್ಲಿ ಒಟ್ಟಾರೆಯಾಗಿ ಪೌಲ್ಟ್ರಿ ಮುಖಾಂತರ ಒಟ್ಟು ಉತ್ಪಾದನೆಯಲ್ಲಿ ಶೇಕಡ 84 ರಷ್ಟು ಮೊಟ್ಟೆಗಳನ್ನು ಪಡೆಯಲಾಗುತ್ತಿದೆ. ಉಳಿದಂತೆ ಶೇಕಡಾ 16ರಷ್ಟು ಮೊಟ್ಟೆ ಸ್ಥಳೀಯವಾಗಿ ದೊರೆಯುತ್ತದೆ. ವೈದ್ಯಕೀಯವಾಗಿ ಪೌಷ್ಟಿಕಾಂಶದ ಬಳಕೆಯ ಹಿನ್ನೆಲೆಯಲ್ಲಿ ಮೊಟ್ಟೆ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೂ ಸಹ ಮೊಟ್ಟೆ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೊಟ್ಟೆ ಬಳಕೆಯಿಂದ ಕ್ಯಾನ್ಸರ್ ಬರುತ್ತಿದೆ ಎಂದು EGGOZ ಕಂಪನಿ ಅಪಪ್ರಚಾರ ಮಾಡುವ ಪ್ರಯತ್ನ ಮಾಡಿದೆ. ಇದರ ಉದ್ದೇಶ ರಾಜ್ಯದ ಮತ್ತು ದೇಶದ ಮೊಟ್ಟೆ ಉತ್ಪಾದನೆಗೆ ತೊಂದರೆಯನ್ನು ಮಾಡುವ ದುರುದ್ದೇಶದಿಂದ ಕೂಡಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಇಂತಹ ಅಪಪ್ರಚಾರ ಮಾಡುವ ನಕಲಿ ಕಂಪನಿಗಳ ವಿರುದ್ಧ ನೇರವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ದೇಶದಲ್ಲಿ ಮೊಟ್ಟೆ ಉದ್ಯಮವನ್ನು ಕೋಳಿ ಉದ್ಯಮವನ್ನು ಗುರಿಯಾಗಿಸಿಕೊಂಡು ಈ ರೀತಿಯ ಅಪಪ್ರಚಾರವನ್ನು ಮಾಡಲಾಗಿದೆ. ಜನರಲ್ಲಿ ತಪ್ಪು ಭಾವನೆ ಉಂಟು ಮಾಡುವ ಉದ್ದೇಶ ಮತ್ತು ಕುಕ್ಕಟೋದ್ಯಮ ಹಾಳು ಮಾಡುವ ದುರುದ್ದೇಶವಿದೆ ಎಂದಿದ್ದಾರೆ. ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಕೂಡಲೇ EGGOZ ಸಂಸ್ಥೆ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

Related posts

High Court Dismissed PIL ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಇನ್ನಿಲ್ಲ ತಡೆ..

Publicspot

ಇಂದು ನಾಳೆ ಭಾರೀ ಮಳೆ ಆಗುವ ಬಗ್ಗೆ ಅಲರ್ಟ್​.. ಬೆಂಗಳೂರಿಗೆ ಸಂಕಷ್ಟ!!

Publicspot

CAG REPORT; ಜನರಿಗೆ ಗ್ಯಾರಂಟಿ ಕೊಡಲು ಸಾಲ ಮಾಡಿದ್ದಾರೆ ಸಿದ್ದರಾಮಯ್ಯ..!!

Publicspot

ಈ ವರ್ಷ ಹಿಂದಿಗೆ ಅಂಕಗಳನ್ನೇ ನೀಡಿ.. ಸರ್ಕಾರಕ್ಕೆ ಮುಖಭಂಗ

Publicspot

ಕಾಡು ಪ್ರಾಣಿಗಳು – ಮಾನವ ಸಂಘರ್ಷ ಹೆಚ್ಚಳ.. ಸರ್ಕಾರದ ಮುಂದಿನ ನಡೆ ಏನು..?

Publicspot

Ration Card Cancel; ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.. ರಾಜ್ಯ ಸರ್ಕಾರ ಪ್ಲ್ಯಾನಿಂಗ್..

Publicspot