The Public Spot
ಸಿನಿಮಾ

ದರ್ಶನ್​ ಬೆನ್ನು ನೋವಿಗೆ ಆಪರೇಷನ್ ಮಾಡಿಸಲಿಲ್ಲ ಯಾಕೆ..?

ರಾಜ್ಯಾದ್ಯಂತ ದರ್ಶನ್‌ ಅಭಿನಯದ ಡೆವಿಲ್ ಚಿತ್ರ ಭರ್ಜರಿಯಾಗಿ ಓಪನಿಂಗ್‌ ಪಡೆದಿದೆ. ದರ್ಶನ್‌ ಜೈಲಿನಲ್ಲಿರುವ ಕಾರಣಕ್ಕೆ ಡೆವಿಲ್‌ ಚಿತ್ರದ ಬಿಡುಗಡೆ ಹಾಗೂ ಪ್ರಚಾರದ ಹೊಣೆ ಹೊತ್ತಿದ್ದ ವಿಜಯಲಕ್ಷ್ಮೀ ದರ್ಶನ್‌ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಮೊದಲ ದಿನ ಮೊದಲ ಶೋನಲ್ಲಿ ಅಭಿಮಾನಿಗಳ ಜೊತೆಗೆ ಕುಳಿತು ನೋಡಿದ್ದ ವಿಜಯಲಕ್ಷ್ಮಿ, ಇದೀಗ ಅಭಿಮಾನಿಗಳ ಎದುರು ಮಾತಾಡಿದ್ದಾರೆ. ದರ್ಶನ್ ಡೆವಿಲ್ ಸಿನಿಮಾ ಮಾತ್ರವಲ್ಲ, ಜೈಲು ಸೇರಿದಾಗ ಆದಂತಹ ಅನುಭವವನ್ನು ಹಂಚಿಕೊಂಡಿದ್ದು, ರಚನಾ ರೈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಡೆವಿಲ್ ಸಿನಿಮಾ ಬಿಡುಗಡೆ ಆದ ದಿನ, ಜೈಲಿನಿಂದ ದರ್ಶನ್ ಪೋನ್ ಮಾಡಿದ್ದರ ಬಗ್ಗೆ ವಿಜಯಲಕ್ಷ್ ದರ್ಶನ್‌‌ ಮಾತನಾಡಿದ್ದಾರೆ. ದರ್ಶನ್ ಜೈಲು ಸೇರಿದಾಗ ಬೆನ್ನು ನೋವಿಲ್ಲ ಸುಳ್ಳು ಎಂದ ಬಗ್ಗೆಯೂ ವಿಜಯಲಕ್ಷ್ಮಿ ಉತ್ತರ ಕೊಟ್ಟಿದ್ದಾರೆ. ದರ್ಶನ್‌ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಆಗಬೇಕಿತ್ತು. ಆದರೆ ಡೆವಿಲ್ ಸಿನಿಮಾ ಮುಗಿಸೋ ಆತುರದಲ್ಲಿ ದರ್ಶನ್ ಇದ್ದರು. ಸರ್ಜರಿ ಇಲ್ಲದಿದ್ದರೆ ಡಾಕ್ಟರ್ 6 ರಿಂದ 8 ತಿಂಗಳು ರೆಸ್ಟ್ ಮಾಡೋಕೆ ಹೇಳಿದ್ದರು. ಅದಾದ ನಂತರ ಸಿಂಗಾಪುರದಲ್ಲಿ ಸರ್ಜರಿ ಮಾಡಿಸಲು ನಾನು ವಿಚಾರಿಸಿದ್ದೆ. ಆದರೆ ದರ್ಶನ್ ಬೆನ್ನು ನೋವು ನಾಟಕ ಅಂದವರ ಮಾತಿನಿಂದ ಬೇಸರ ಆಗುತ್ತದೆ. ಅಂತವರಿಗೆ ಎಲ್ಲವನ್ನೂ ಹೇಳೋಕಾಗಲ್ಲ, ದೇವರಿಗೆ ಎಲ್ಲವು ಗೊತ್ತು ಎಂದಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ದರ್ಶನ್ ಜೈಲು ಸೇರಿದ್ದ ಬಗ್ಗೆ ಮಾತ್ರವಲ್ಲ, ನನ್ನ ಬಗ್ಗೆಯೂ ನೆಗೆಟಿವ್ ಕಮೆಂಟ್ ಮಾಡೋರಿಗೆ ಡೋಂಟ್ ಕೇರ್ ಅಂದಿದ್ದಾರೆ ವಿಜಯಲಕ್ಷ್ಮೀ. ನಮ್ಮನ್ನ ಪ್ರೀತಿ ಮಾಡೋಕೆ 100 ಜನರಲ್ಲಿ ಶೇಕಡ 90 ರಷ್ಟು ಮಂದಿ ಇದ್ದಾರೆ. ನನಗೆ ಆ 90 ಪರ್ಸೆಂಟ್ ಜನರು ಮಾತ್ರ ಮುಖ್ಯ. ಅವರ ಪ್ರೀತಿ ನಮಗೆ ಸಾಕು. ನೆಗೆಟಿವ್ ಕಮೆಂಟ್ ಮಾಡೋರಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಗೆಟಿವ್ ಕಮೆಂಟ್‌ಗಳನ್ನ ನಾನು ನೋಡೋದಿಲ್ಲ, ಓದೋದಿಲ್ಲ ಅಂದಿದ್ದಾರೆ.

Related posts

ಒಡೆಯ ಚಿತ್ರದಲ್ಲಿ ದರ್ಶನ್​ ತಮ್ಮನಾಗಿದ್ದ ನಿರಂಜನ್​ ಮೇಲೆ ಹಲ್ಲೆ..!

Publicspot

ರೇಣುಕಾಸ್ವಾಮಿ ಕೊಲೆ ಆಧಾರಿತ ಚಿತ್ರ ಅಂತಾ BOSS ಚಿತ್ರ ಬಿಡುಗಡೆಗೆ ಬ್ರೇಕ್‌..

Publicspot

ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ಬಂಧನದಿಂದ ಸಿಗುತ್ತಾ ರಿಲೀಫ್‌..!?

Publicspot

ಚಿತ್ರಕಥೆ ಕಳವು ಮಾಡಿದ್ರಾ ಡಾರ್ಲಿಂಗ್ ಕೃಷ್ಣ..? ಲವ್‌ ಮಾಕ್ಟೇಲ್‌ 3 ಚಿತ್ರಕಥೆ ಯಾರದ್ದು..?

Publicspot

Actors Harish Roy Finale ceremony; ಹುಟ್ಟೂರಲ್ಲಿ ಇವತ್ತು ಹರೀಶ್​ ರಾಯ್ ದೇಹಕ್ಕೆ ಅಗ್ನಿ ಸ್ಪರ್ಶ..​

Publicspot

ಅರೆ ನಗ್ನ ಸ್ಥಿತಿಯಲ್ಲಿ ನಟಿಯ ಫೋಟೋ.. ರುಕ್ಮಿಣಿ ವಸಂತ್‌ ಹೇಳಿದ್ದೇನು..?

Publicspot