The Public Spot
ಅಪರಾಧ

ನಟ ದರ್ಶನ್​ಗೆ ಅನುಕೂಲ ಆಗುವಂತೆ ಸಾಕ್ಷಿ ಹೇಳಿದ್ರಾ ರೇಣುಕಾಸ್ವಾಮಿ ತಾಯಿ..!?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಸೇರಿದಂತೆ ಸಾಕಷ್ಟು ಆರೋಪಿಗಳು ಈಗಾಗಲೇ ಅರೆಸ್ಟ್​ ಆಗಿ ಜೈಲಿನಲ್ಲಿದ್ದಾರೆ. ಕೆಲವರು ಬೇಲ್​ ಪಡೆದು ಹೊರಗಿದ್ದರೂ ಕೋರ್ಟ್​ನಲ್ಲಿ ಟ್ರಯಲ್ ಸ್ಟಾರ್ಟ್​​ ಆಗಿರುವ ಕಾರಣಕ್ಕೆ ಢವಢವ ಶುರುವಾಗಿದೆ. ಈಗಾಗಲೇ ರೇಣುಕಾಸ್ವಾಮಿ ತಂದೆ ತಾಯಿಯನ್ನು ವಿಚಾರಣೆಗೆ ಕರೆಸಲಾಗಿತ್ತು. ಕೋರ್ಟ್​ನಲ್ಲಿ ರೇಣುಕಾಸ್ವಾಮಿ ತಾಯಿ ನೀಡಿರುವ ಹೇಳಿಕೆ ಸರ್ಕಾರದ ಪರವಾದ ವಕೀಲರ ವಾದಕ್ಕೆ ಹಿನ್ನಡೆ ಉಂಟು ಮಾಡುವಂತೆ ಇದೆ ಎನ್ನಲಾಗ್ತಿದೆ.

ಕೋರ್ಟ್​ ವಿಚಾರಣೆ ವೇಳೆ ಮಹತ್ವದ ಬೆಳವಣಿಗೆ ನಡೆದಿದ್ದು, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನ ಹಾಸ್ಟೈಲ್​ ವಿಟ್ನೆಸ್​ Hostile witness ಎಂದು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ SPP ಆಗಿರುವ ಪ್ರಸನ್ನಕುಮಾರ್ ಅವರು ಕೋರ್ಟ್​ಗೆ ಮನವಿ ಮಾಡಿದ್ದು, ಪ್ರಾಸಿಕ್ಯೂಷನ್​ಗೆ ಪ್ರತಿಕೂಲವಾದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಸ್​ಪಿಪಿ ಕೋರ್ಟ್​ಗೆ ಮನವಿ ಮಾಡಿದ್ದಾರೆ. ಸ್ಪೆಷಲ್​ ಪಬ್ಲಿಕ್​ ಪ್ರಾಸಿಕ್ಯೂಟರ್​ (SPP) ಅವರ ಮನವಿ ಬಗ್ಗೆ ಮುಂದಿನ ಸೋಮವಾರ ನಿರ್ಧಾರ ಮಾಡಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

ಡಿಸೆಂಬರ್​ 30 ರಂದು ಕೋರ್ಟ್​ಗೆ ಹಾಜರಾಗಿದ್ದ ರೇಣುಕಾಸ್ವಾಮಿ ತಂದೆ ತಾಯಿ ಜಡ್ಜ್ ಎದುರು ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ, ಹೇಳಿಕೆ ಪ್ರಾಷಿಕ್ಯೂಷನ್​ಗೆ ಹಿನ್ನಡೆ ಆಗುವಂತಿವೆ ಎನ್ನಲಾಗಿದೆ. ಹೀಗಾಗಿ ಮತ್ತೊಮ್ಮೆ ಕ್ರಾಸ್ ಎಕ್ಸಾಮಿನ್ ಮಾಡಲೂ ಮನವಿ ಮಾಡಲಾಗಿದೆ. ಎಸ್​ಪಿಪಿ ಕ್ರಾಸ್ ಎಕ್ಸಾಮಿನ್ ಮಾಡಲು ಕೋರ್ಟ್​ಗೆ ಮನವಿ ಮಾಡಿದ್ದಾರೆ. ಬಹುತೇಕ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವಿಟ್ನೆಸ್​ಗಳಿಗೆ ಎಸ್​ಪಿಪಿ ಕ್ರಾಸ್ ಎಕ್ಸಾಮಿನ್ ಮಾಡಲ್ಲ. ಆದರೆ ಗೊಂದಲ ಹೇಳಿಕೆ ಬಂದಾಗ ಅರ್ಜಿ ಹಾಕಿ ಮನವಿ ಮಾಡಲು ಅವಕಾಶವಿದೆ.

ಇದೀಗ ಒಂದು ವೇಳೆ ಕೋರ್ಟ್ ಅನುಮತಿ ನೀಡಿದ್ರೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ಮತ್ತೊಮ್ಮೆ ಕ್ರಾಸ್ ಎಕ್ಸಾಮಿನ್ ಮಾಡಲಾಗುತ್ತದೆ. ರೇಣುಕಾಸ್ವಾಮಿ ಸಿಮ್, ಮೊಬೈಲ್ ಹಾಗೂ ಕಾಲ್​ಗಳ ಬಗ್ಗೆ ದ್ವಂದ್ವ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ತನ್ನ ಮಗನ ಮೊಬೈಲ್ ನಂಬರ್ ಗೊತ್ತಿಲ್ಲ ಎಂದಿದ್ದಾರೆ ರತ್ನಪ್ರಭಾ. ಆದರೆ ಪೊಲೀಸರ ತನಿಖೆ ವೇಳೆ ಮೊಬೈಲ್​ನಲ್ಲಿ ಸೇವ್ ಆಗಿದೆ ಅಂತ ಹೇಳಿಕೆ ನೀಡಿದ್ದರು. ಮೊಬೈಲ್​ನಲ್ಲಿ ನಂಬರ್ ನೋಡಿ ಇದೇ ಅಂತ ಕನ್ಫರ್ಮ್ ಕೂಡ ಮಾಡಿದ್ದರು. ಕ್ರಾಸ್​ ಎಕ್ಸಾಮಿನ್​ ಮಾಡುವಾಗ ನನಗೆ ಮೊಬೈಲ್ ಗೊತ್ತಿಲ್ಲ ಅನ್ನೋ ಉತ್ತರ ನೀಡಿದ್ದಾರೆ. ಹೀಗಾಗಿ ಈ ಸಾಕ್ಷಿಯನ್ನು ಪರಿಗಣಿಸಬೇಡಿ ಅಂತ ಅರ್ಜಿ ಹಾಕಿದ್ದಾರೆ ಎಸ್​ಪಿಪಿ ಪ್ರಸನ್ನ ಕುಮಾರ್​. ಈ ಬಗ್ಗೆ ಕೋರ್ಟ್​ ನಿರ್ಧಾರ ಮಾಡಬೇಕಿದೆ.

Related posts

Darshan Court; ಇವತ್ತು ದರ್ಶನ್‌ಗೆ ಸಿಗುತ್ತಾ ಜೈಲು ರಿಲೀಫ್‌.. ಪತ್ನಿ ವಿಜಯಲಕ್ಷ್ಮೀ ಸೈಲೆಂಟ್‌ ಆಗಿದ್ಯಾಕೆ..?

Publicspot

ಆನ್‌ಲೈನ್‌ ಗೇಮ್‌ಗೆ ಇಡೀ ಕುಟುಂಬವೇ ಸರ್ವನಾಶ..! ಪೋಷಕರೇ ಎಚ್ಚರ..

Publicspot

ಧರ್ಮಸ್ಥಳಕ್ಕೆ ಇಂದು Car Rally : ಜೈನರನ್ನು ಟೀಕಿಸಿದ್ದಕ್ಕೆ ಅರೆಸ್ಟ್…!

Publicspot

ದಾವಣಗೆರೆ SP ಉಮಾ ಪ್ರಶಾಂತ್​​ ಬಗ್ಗೆ ಕೀಳು ಮಾತು.. ಅರೆಸ್ಟ್​ ಆಗ್ತಾರಾ ಶಾಸಕ..?

Publicspot

ED RAID: ಕಾಂಗ್ರೆಸ್​ ಶಾಸಕನ ಮನೆ ಮೇಲೆ ED ರೇಡ್​.. ಸಿಕ್ಕಿಂನಲ್ಲಿ ಲಾಕ್​ ಆದ ವೀರೇಂದ್ರ ಪಪ್ಪಿ..

Publicspot

Insta Love: ಏಕಾಂತದ ಸರಸಕ್ಕೆ ಅಡ್ಡಿ ಅಂತಾ ಮಲ-ಮಗಳನ್ನೇ ಕೊಂದ ತಂದೆ ಅರೆಸ್ಟ್‌!

Publicspot