The Public Spot
ಅಪರಾಧ

ಬಿಕ್ಲು ಶಿವ ಕೊಲೆ ಕೇಸ್‌.. ಬಿಜೆಪಿ ಶಾಸಕ ಬೈರತಿ ಬಸವರಾಜು ಅರೆಸ್ಟ್‌

ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ‌ ಬೈರತಿ ಬಸವರಾಜ್‌ನನ್ನು ಬಂಧಿಸಲಾಗಿದೆ. ಇಷ್ಟು ದಿನಗಳ ಕಾಲ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಬೈರತಿ ಬಸವರಾಜು, ಸುಪ್ರೀಂಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದ್ದರಿಂದ ಅನಿವಾರ್ಯವಾಗಿ ಬೆಂಗಳೂರಿಗೆ ವಾಪಸ್‌ ಆಗಿದ್ದರು. ಗುಜರಾತ್‌ನ ಅಹಮದಾಬಾದ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಸಕ ಬೈರತಿ ಬಸವರಾಜ್‌ನನ್ನು ದೇವನಹಳ್ಳಿ ಎಸಿಪಿ ಹರ್ಷ ನೇತೃತ್ವದಲ್ಲಿ ಬಂಧಿಸಿ ಸಿಐಡಿ ತನಿಖಾಧಿಕಾರಿ ಮುಂದೆ ಹಾಜರು ಮಾಡಲಾಯ್ತು.

ರಾತ್ರಿ ವಶಕ್ಕೆ ಪಡೆದ ಸಿಐಡಿ ಎಸ್‌ಪಿ ಹರ್ಷ ಪ್ರಿಯಂವದ, ಪ್ರಾಥಮಿಕವಾಗಿ ಕೆಲವು ಮಾಹಿತಿ ಪಡೆದಿದೆ. ಕೇಸ್‌ ದಾಖಲು ಆದ ಬಳಿಕ ಯಾವ ಯಾವ ರಾಜ್ಯಗಳಿಗೆ ಹೋಗಿದ್ರಿ, ಯಾವಾಗ ಹೋಗಿದ್ರಿ..? ಅಂತಾ ಮಾಹಿತಿ ಪಡೆದಿದ್ದಾರೆ. ಇಂದು ವೈದ್ಯಕೀಯ ತಪಾಸಣೆ ಬಳಿಕ ಕೋರ್ಟ್‌ಗೆ ಹಾಜರು ಪಡಿಸಲಿರುವ ಸಿಐಡಿ ತಂಡ, ಹೆಚ್ಚಿನ ಚಿಕಿತ್ಸೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾವಾದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಬೈರತಿ ಬಸವರಾಜ್ ಬೆಂಗಳೂರಿಗೆ ವಾಪಸ್ ಆಗುವ ಮೂಲಕ ಬಂಧನಕ್ಕೆ ಒಳಗಾಗಿದ್ದಾರೆ.

ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಆರೋಪಿ ಅಜಿತ್ ಜಾಮೀನು ಅರ್ಜಿಯೂ ವಜಾ ಆಗಿದೆ. ಜಾಮೀನು ಅರ್ಜಿ ವಜಾಗೊಳಿಸಿದ 82ನೇ ಸಿಸಿಹೆಚ್ ಕೋರ್ಟ್ ತಕ್ಷಣ ಶರಣಾಗಲು ಸೂಚನೆ ಕೊಟ್ಟಿದೆ. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಬಳಿಕ CID ಪೊಲೀಸರು ಪ್ರಕರಣದ 20ನೇ ಆರೋಪಿಯಾಗಿದ್ದ ಅಜಿತ್ ಎಂಬಾತನನ್ನು ಅರೆಸ್ಟ್‌ ಮಾಡಿದ್ದಾರೆ. ವಕೀಲ ಅನ್ನೋ ಕಾರಣಕ್ಕೆ ನನ್ನನ್ನು ಬಂಧಿಸಿದ್ದಾ ಎಂದು ವಕೀಲ ಅಜಿತ್ ಆರೋಪಿಸಿದ್ದರು. ಹೀಗಾಗಿ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈಗ ಮಧ್ಯಂತರ ಜಾಮೀನು ತೆರವುಗೊಳಿಸಿ ಶರಣಾಗಲು ಸೂಚನೆ ಕೊಡಲಾಗಿತ್ತು.

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ವಶಕ್ಕೆ ಪಡೆದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್‌‌ ಮಾತನಾಡಿದ್ದು, ಬೈರತಿ ಬಸವರಾಜ್ ಅವರು ಜುಆಮೀನು ಕೋರಿ ಕೋರ್ಟ್‌ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಹಾಕಿದ್ದರು. ಬಸವರಾಜುಗೆ ಎರಡು ಆಯ್ಕೆಗಳು ಇದ್ದವು. ಪೊಲೀಸರು ಬಂಧನ ಮಾಡುವುದು ಅಥವಾ ಬಸವರಾಜು ಅವರೇ ನೇರವಾಗಿ ಬಂದು ಶರಣಾಗತಿ ಆಗುವುದು. ಹೀಗಾಗಿ ಅಹ್ಮದಾಬಾದ್‌ನಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾರೆ. ಮುಂದಿನ ಕ್ರಮ ಕಾನೂನಿನ ಅನ್ವಯ ಆಗಲಿದೆ ಎಂದಿದ್ದಾರೆ.

Related posts

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಾಕಪ್‌ ಡೆತ್‌ ಕೇಸ್‌‌ನಲ್ಲಿ ಪೊಲೀಸರಿಗೆ ಗಲ್ಲು ಶಿಕ್ಷೆ..

Publicspot

Foreign Love ಇಳಕಲ್ ಆಂಟಿಗೂ ನೈಜೀರಿಯಾ ಅಂಕಲ್​ಗೂ ಲವ್‌‌!

Publicspot

ದಾವಣಗೆರೆ SP ಉಮಾ ಪ್ರಶಾಂತ್​​ ಬಗ್ಗೆ ಕೀಳು ಮಾತು.. ಅರೆಸ್ಟ್​ ಆಗ್ತಾರಾ ಶಾಸಕ..?

Publicspot

ಜೀವಾವಧಿ ಶಿಕ್ಷೆಗೆ ಗುರಿಯಾಗ್ತಾರಾ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ..?

Publicspot

DARMASTHALA SIT ವರದಿ ಸಲ್ಲಿಸಿ: ಸದನದಲ್ಲಿ ಇವತ್ತು ಧರ್ಮಸ್ಥಳ ರಿಪೋರ್ಟ್.. ಏನಿದೆ..?

Publicspot

ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕನ ಸಾವಿಗೆ ಕಾರಣ ಏನು..? ಅದೂ ಕೂಡ ಈ ರೀತಿ ಸಾವಾ..?

Publicspot