The Public Spot
ಸಿನಿಮಾ

ಕಿರಿಕ್‌ ಹುಡುಗಿಗೆ ಇಂದು ಕಲ್ಯಾಣ.. ಈಗಲಾದ್ರೂ ಸಂಸಾರ ಸರಿಯಾಗಲಿ..

ಕನ್ನಡದ ನಟಿ, ಅಲ್ಲಲ್ಲ ಕನ್ನಡ್ ಗೊತ್ತಿಲ್ಲದ ನಟಿ ರಶ್ಮಿಕಾ ಮಂದಣ್ಣಗೆ ಇವತ್ತು ಮದುವೆ ಸಂಭ್ರಮ. ಬಣ್ಣದ ಲೋಕದ ಬಟ್ಟಲು ಕಂಗಳ ಚೆಲುವೆ. ನ್ಯಾಷನಲ್‌ ಕ್ರಷ್‌ ಅನ್ನೋ ಪಟ್ಟ ಪಡ್ಕೊಂಡಿರೋ ನಮ್ಮದೇ ಕೊಡಗಿನ ಕುವರಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ. ಕದ್ದು ಮುಚ್ಚಿ ಓಡಾಡ್ತಿದ್ದ ಜೋಡಿ ಈಗ ಸಪ್ತಪದಿ ತುಳಿಯೋದಕ್ಕೆ ಸಜ್ಜಾಗಿದ್ದಾರೆ. ಇವತ್ತು ಮದುವೆ ಅನ್ನೋ ಬಂಧ ಬೆಸೆದು ಕೊಳ್ತಿದ್ದು, ಮೂರು ಗಂಟಿನ ಸೂತ್ರದ ಹೊಸ ಜೀವನ ಶುರು ಮಾಡ್ತಿದ್ದಾರೆ.. ರಾಜಸ್ಥಾನದ ಜೈಪುರದ ಅರಮನೆ ಅಂಗಳದಲ್ಲಿ ಓಲಗದ ಸದ್ದು ಮೊಳಗಲಿದ್ದು, ಅದ್ಧೂರಿ ಮದುವೆ ತೀರಾ ಆಪ್ತರು ಹಾಗೂ ಚಿತ್ರರಂಗದ ಗಣ್ಯಾತಿಗಣ್ಯರು ಮಾತ್ರ ಸಾಕ್ಷಿಯಾಗಲಿದ್ದಾರೆ..

ನಟಿ ರಶ್ಮಿಕಾ-ವಿಜಯ್‌ ದೇವರಕೊಂಡ ಮದುವೆ ಸ್ವರ್ಗವೇ ಧರೆಗಿಳಿದಂತೆ ಸೆಟ್ ಹಾಕಲಾಗಿದೆ. ತಳಿರು ತೋರಣಗಳು ಕಣ್ಮನ ಸೆಳೆಯುವಂತಿವೆ.. ಇಷ್ಟು ದಿನ ಶ್ರೀವಲ್ಲಿ ಪಾಲಿಗೆ ಪ್ರಣಯ ಸಖನಾಗಿದ್ದ ನಟ ವಿಜಯ್‌ ದೇವರಕೊಂಡ ಈಗ ಪ್ರಾಣಸಖನಾಗ್ತಿರೋದು ವಿಶೇಷ.. ಮದುವೆ ಹೊಸ್ತಿಲಲ್ಲಿರೋ ಜೋಡಿಹಕ್ಕಿಗಳಿಗೆ ಈಗಾಗ್ಲೇ ಹಲವಾರು ಶಾಸ್ತ್ರಗಳನ್ನು ನೆರವೇರಿಸಲಾಗಿದೆ. ಹಳದಿ ಶಾಸ್ತ್ರ ಮೆಹಂದಿ ಶಾಸ್ತ್ರವನ್ನೆಲ್ಲಾ ಮಾಡಿ ಮುಗಿಸಿದ್ದಾರೆ. ಇವತ್ತು ಗುರು ಹಿರಿಯರ ಸಮ್ಮುಖದಲ್ಲಿ ರಶ್ಮಿಕಾ ಹಾಗೂ ದೇವರಕೊಂಡ ಸಪ್ತಪದಿ ತುಳಿದು ಅಧಿಕೃತವಾಗಿ ಗಂಡ ಹೆಂಡತಿ ಆಗಲಿದ್ದಾರೆ.

ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಮದುವೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಪತ್ರ ಬರೆದಿರುವ ಪ್ರಧಾನಿ ಮೋದಿ, ಸುಂದರ ಅಧ್ಯಾಯ ಆರಂಭಿಸ್ತಿರೋ ನಿಮಗೆ ಒಳಿತಾಗಲಿ, ಜೀವನ ಪರ್ಯಂತ ಸ್ನೇಹಿತರಂತೆ ಬದುಕಿನ ಪಯಣ ಮುನ್ನೆಡೆಸಿ ಅಂತಾ ಶುಭಕೋರಿದ್ದಾರೆ. ಈ ನಡುವೆ ನಟಿ ಆಶಿಕಾ ರಂಗನಾಥ್‌ಗೆ ವಿಶೇಷ ಆಹ್ವಾನ ನೀಡಿದ್ದು, ಗೆಳತಿಯ ಮದುವೆಯಲ್ಲಿ ಈಗಾಗಲೇ ಆಶಿಕಾ ರಂಗನಾಥ್‌ ಸಂಭ್ರಮಿಸಿದ್ದಾರೆ. ಇದೇನು ಹಳದಿ ಶಾಸ್ತ್ರವಾ..? ಇಲ್ಲ ಹೋಳಿ ಹಬ್ಬವಾ..? ಅನ್ನೋ ಲೈನ್ ಬರೆದು ಪೋಟೋ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮೂಲತಃ ಕನ್ನಡದ ಹೆಣ್ಣು ಮಗಳು. ಕನ್ನಡದ ಕಿರಿಕ್‌ ಪಾರ್ಟಿ ಮೂಲಕವೇ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದು, ಈ ಮಟ್ಟಕ್ಕೆ ಬೆಳೆದು ನಿಂತಿದ್ದು. ಈಗ ಟಾಲಿವುಡ್‌, ಬಾಲಿವುಡ್‌ನಲ್ಲಿ ಬೇರೂರಿರೋ ರಶ್ಮಿಕಾ, ತೆಲುಗಿ ಇಂಡಸ್ಟ್ರಿಯ ಬಹುತೇಕರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಅಳೆದು ತೂಗಿ 11 ಮಂದಿಗೆ ಮಾತ್ರ ಆಮಂತ್ರಣ ಪತ್ರಿಕೆ ತಲುಪಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್‌ ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕರಾದ ಎ.ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಹಾಗೂ ಆಶಿಕಾ ರಂಗನಾಥ್‌ಗೆ ಆಹ್ವಾನ ಪತ್ರಿಕೆಯನ್ನು ಆಪ್ತರ ಮೂಲಕ ಕಳಿಸಿದ್ದಾರಂತೆ.

ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ಹತ್ತಾರು ಕಥೆಗಳು ಹುಟ್ಕೊಂಡಿದ್ದವು. ಕನ್ನಡ ಸಿನಿಮಾದಿಂದ ದೂರವಾಗಿದ್ದ ಶ್ರೀವಲ್ಲಿ, ತೆಲುಗು, ತಮಿಳು, ಹಿಂದಿಯಲ್ಲೇ ಬ್ಯುಸಿಯಾಗಿದ್ರು. ಶೆಟ್ಟಿ ಬಳಗಕ್ಕೆ ಆಹ್ವಾನ ಬಂದಿದ್ಯಾ..? ಇಲ್ವಾ..? ಅನ್ನೋ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಜೋರಾಗಿ ಚರ್ಚೆ ನಡೀತಿದೆ. ರಶ್ಮಿಕಾ ಇವತ್ತು ದೊಡ್ಡ ಸ್ಟಾರ್‌ ಆಗಿ ಮೆರೆಯುತ್ತಿರಬಹುದು. ಆಕೆಗೆ ಕನ್ನಡಿಗರ ಅಗತ್ಯವೂ ಇಲ್ಲದಿರಬಹುದು. ಆದರೆ ಕನ್ನಡಿಗರು ಮಾತ್ರ ನಮ್ಮ ಮನೆಯ ಹೆಣ್ಣು ಮಗಳ ಬಗ್ಗೆ ಕೆಟ್ಟದ್ದನ್ನು ಬಯಸಲ್ಲ. ಈಗಲಾದರೂ ಕಿರಿಕ್‌ ಹುಡುಗಿ ರಶ್ಮಿಕ ಬದುಕು ಹಳ್ಳ ಹಿಡಿಯದೆ ಸಾಗಲಿ ಅನ್ನೋದು ನಮ್ಮ ಹಾರೈಕೆ. ಏನಂತೀರಾ..?

Related posts

ದರ್ಶನ್​ ಬೆನ್ನು ನೋವಿಗೆ ಆಪರೇಷನ್ ಮಾಡಿಸಲಿಲ್ಲ ಯಾಕೆ..?

Publicspot

ಒಡೆಯ ಚಿತ್ರದಲ್ಲಿ ದರ್ಶನ್​ ತಮ್ಮನಾಗಿದ್ದ ನಿರಂಜನ್​ ಮೇಲೆ ಹಲ್ಲೆ..!

Publicspot

ಅರೆ ನಗ್ನ ಸ್ಥಿತಿಯಲ್ಲಿ ನಟಿಯ ಫೋಟೋ.. ರುಕ್ಮಿಣಿ ವಸಂತ್‌ ಹೇಳಿದ್ದೇನು..?

Publicspot

Actors Harish Roy Finale ceremony; ಹುಟ್ಟೂರಲ್ಲಿ ಇವತ್ತು ಹರೀಶ್​ ರಾಯ್ ದೇಹಕ್ಕೆ ಅಗ್ನಿ ಸ್ಪರ್ಶ..​

Publicspot

ರೇಣುಕಾಸ್ವಾಮಿ ಕೊಲೆ ಆಧಾರಿತ ಚಿತ್ರ ಅಂತಾ BOSS ಚಿತ್ರ ಬಿಡುಗಡೆಗೆ ಬ್ರೇಕ್‌..

Publicspot

ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ಬಂಧನದಿಂದ ಸಿಗುತ್ತಾ ರಿಲೀಫ್‌..!?

Publicspot