The Public Spot
ಅಪರಾಧ

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಪರ ವಕೀಲರ ಪ್ಲಾನ್ ಏನು..? ​

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿದ್ದು, ಜಾಮೀನು ಸಿಗುವ ಯಾವುದೇ ಸಾಧ್ಯತೆಗಳೂ ಇಲ್ಲದೆ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದಾರೆ. ಈ ನಡುವೆ ದರ್ಶನ್​ ಪರ ವಕೀಲರು ಪ್ರತಿ ದಿನ ಟ್ರಯಲ್ ಮಾಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಲೆ ಎಸ್​ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದು, ಪ್ರತಿದಿನ ವಿಚಾರಣೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ನ ಅಭಿಪ್ರಾಯದ ಬಗ್ಗೆ ಮಾಹಿತಿ ನೀಡಿದರು.

ಇದೇ ಕೋರ್ಟ್​ನಲ್ಲಿ 977 ಕೇಸ್​ಗಳ ಟ್ರಯಲ್ ನಡೆಯುತ್ತಿದೆ. ಎಲ್ಲಾ ಕೇಸ್​ಗಳನ್ನ ಬಿಟ್ಟು ಈ ಪ್ರಕರಣವನ್ನೇ ಯಾಕೆ ಪ್ರತಿದಿನ ವಿಚಾರಣೆ ಮಾಡಬೇಕು..? ಎಂದು SPP ಪ್ರಸನ್ನ ಕುಮಾರ್​ ವಾದಿಸಿದ್ದಾರೆ. ಈಗಾಗಲೇ ವಾರಕ್ಕೆ 2 ದಿನ ಟ್ರಯಲ್ ನಡೆಯುತ್ತಿರುವಂತೆ ಮುಂದೆಯೂ ಮುಂದುವರಿಯಲಿ. ಪ್ರತಿದಿನ ಟ್ರಯಲ್​​ಗೆ ಅವಕಾಶ ನೀಡದಂತೆ ಎಸ್​ಪಿಪಿ ಮನವಿ ಮಾಡಿದ್ದಾರೆ. ಇನ್ನು ಮಹಜರ್ ವೇಳೆ ಸುಳ್ಳು ಸಾಕ್ಷಿ ಸೃಷ್ಟಿಸಿದ್ದಾರೆ ಎಂದು ಆರೋಪಿ ನಂಬರ್​ 3ರ ಪವನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಕೋರ್ಟ್​ಗೆ ವರದಿ ಸಲ್ಲಿಕೆ ಮಾಡಿದ್ದಾರೆ.

ಕಾಮಾಕ್ಷಿಪಾಳ್ಯದ ಠಾಣೆಯ ನೆಲ ಮಹಡಿಯಲ್ಲೋ..? ಮೊದಲ ಮಹಡಿಯಲ್ಲೋ ತೆಗೆಯಲಾಗಿದೆಯೋ..? ತನಿಖಾಧಿಕಾರಿ ಬಾಕ್ಸ್​ನಲ್ಲಿ ಸಾಕ್ಷಿ ಹೇಳಲು ಬಂದಾಗ ಕೇಳಬಹುದು. ಆ ಪೋಟೋಗಳಲ್ಲಿ ಮೊಬೈಲ್ ಸೀಜ್ ಮಾಡಿರುವುದು ಮುಖ್ಯ ವಿಚಾರ. ಮೊಬೈಲ್​ಗಳು ಆರೋಪಿಗಳದ್ದೇ. ಆ ಮೊಬೈಲ್​ಗಳಿಂದ ಡಿಜಿಟಲ್ ಸಾಕ್ಷ್ಯ ಸಂಗ್ರಹಿಸಲಾಗಿದೆ. ಈ ರೀತಿಯ ಅರ್ಜಿಗಳಿಗೆ ಮಾನ್ಯತೆ ನೀಡದಂತೆ ಎಸ್​ಪಿಪಿ ಪ್ರಸನ್ನ ಕುಮಾರ್​ ಕೋರ್ಟ್​ಗೆ ಮನವಿ ಮಾಡಿದರು. ಕೇವಲ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಈ ರೀತಿಯ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು SPP ಪ್ರಸನ್ನ ಕುಮಾರ್​ ಆರೋಪಿಸಿದ್ರು.

ತನಿಖಾಧಿಕಾರಿ ಗಿರೀಶ್​ ನಾಯ್ಕ್​ ಅವರನ್ನು 18ನೇ ಆರೋಪಿ ಮಾಡುವಂತೆ ಕೋರಿ ಎ3 ಪರ ವಕೀಲರ ಅರ್ಜಿ ವಿಚಾರಣೆ ವೇಳೆ ತನಿಖಾಧಿಕಾರಿ ಅಪರಾಧದಲ್ಲಿ ಭಾಗಿದ್ದರೆ ಮಾತ್ರ CrPC 319 ಅನ್ವಯ ಆರೋಪಿ ಮಾಡಲು ಸಾಧ್ಯ. ಇದರಲ್ಲಿ ಯಾವ ಕಾರಣಕ್ಕೆ ತನಿಖಾಧಿಕಾರಿ ಆರೋಪಿ ಮಾಡಲು ಹೇಗೆ ಸಾಧ್ಯ.? ಎಂದು ಎಸ್​ಪಿಪಿ ಪ್ರಶ್ನಿಸಿದರು. ಕಾಮಾಕ್ಷಿಪಾಳ್ಯ ಠಾಣೆಗೆ ಭೇಟಿಗೆ ವಕೀಲ ಸುದನ್ವ ಅವಕಾಶ ಕೋರಿದ್ದ ವಿಚಾರವಾಗಿ ವಾದ ಮಂಡಿಸಿ ವಕೀಲರ ಭೇಟಿಯಿಂದ ಕಲೆ ಹಾಕುವ ಸಾಕ್ಷ್ಯಕ್ಕೆ ಯಾವ ಮಾನ್ಯತೆ ಇದೆ..‌? ಠಾಣೆಯಲ್ಲಿ ಸೆನ್ಸಿಟೀವ್ ಕೇಸ್​ಗಳ ತನಿಖೆ ನಡೆಯುತ್ತಿರುತ್ತವೆ. ಅತ್ಯಾಚಾರ, ಪೋಕ್ಸೋ ಪ್ರಕರಣದ ಆರೋಪಿಗಳು ಠಾಣೆಯಲ್ಲಿ ಇರ್ತಾರೆ. ಇಂತಹ ಸಂದರ್ಭದಲ್ಲಿ ವಕೀಲರ ತಂಡಕ್ಕೆ ಠಾಣೆಗೆ ಭೇಟಿ ನೀಡಲು ಅವಕಾಶ ನೀಡಲು ಹೇಗೆ ಸಾಧ್ಯ? ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇನ್ ಕ್ಯಾಮರಾ ಪ್ರೊಸಿಡಿಂಗ್ಸ್​ಗೆ ಆರೋಪಿಗಳ ಪರ ವಕೀಲರ ಮನವಿ ವಿಚಾರವಾಗಿ ಆರೋಪಿಗಳ ವಕೀಲರು ಕೋರ್ಟ್​ನಲ್ಲಿ ಇನ್ ಕ್ಯಾಮರಾ ಪ್ರೊಸಿಡಿಂಗ್ಸ್​​ಗೆ ಮನವಿ ಮಾಡ್ತಾರೆ. ಕೋರ್ಟ್​ನಿಂದ ಹೊರಗೆ ಹೋಗಿ ಮಾಧ್ಯಮಗಳಿಗೆ ಹೇಳಿಕೆ ನೀಡ್ತಾರೆ. ಹೀಗಿದ್ದಾಗ ಯಾಕೆ ಇನ್ ಕ್ಯಾಮರಾ ಪ್ರೊಸಿಡಿಂಗ್ಸ್​ ನಡೆಸಬೇಕು..? ಎಂದಿದ್ದಾರೆ ಪ್ರಸನ್ನ ಕುಮಾರ್​. ಈ ಪ್ರಕರಣ ಅತ್ಯಾಚಾರ ಪ್ರಕರಣ ಅಲ್ಲ.. ಪೋಕ್ಸೋ ಪ್ರಕರಣ ಅಲ್ಲ ಎಂದು ವಾದಿಸಿದ್ದಾರೆ. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಮಾರ್ಚ್ 9ಕ್ಕೆ ಕೋರ್ಟ್ ಮುಂದೂಡಿಕೆ ಮಾಡಿದ್ದು, ಮಾರ್ಚ್ 9ಕ್ಕೆ ಎಲ್ಲಾ ಅರ್ಜಿಗಳ ಸಂಬಂಧ ಕೋರ್ಟ್ ಅದೇಶ ಮಾಡಲಿದೆ.

Related posts

Kolar malur MLA Case; ಕಾಂಗ್ರೆಸ್‌ ಶಾಸಕನ ಸ್ಥಾನ ಅನರ್ಹ.. ಸುಪ್ರೀಂಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್..?

Publicspot

Dharmasthala SIT Investigation: ಧರ್ಮಸ್ಥಳ ಕೇಸ್​ ಬಗ್ಗೆ ಮಾಸ್ಕ್​ ಮ್ಯಾನ್​ ಸುಳ್ಳು ಹೇಳ್ತಿರೋದ್ಯಾಕೆ..?

Publicspot

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

Publicspot

ಸ್ಕ್ಯಾನಿಂಗ್​ಗೆ ಹೋದಾಗ ಬೆರಳಿಟ್ಟು ವಿಕೃತಿ.. ಲೈಂಗಿಕ ಕಿರುಕುಳ ಬಾಯ್ಬಿಡದಂತೆ ಧಮ್ಕಿ..

Publicspot

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

Minors delivery: ಹೊಟ್ಟೆ ನೋವು ಎಂದ ಶಾಲಾ ಬಾಲಕಿಗೆ ಮಗು ಹುಟ್ಟಿದ್ದೇಗೆ..?

Publicspot